ಬಲವಂತವಾಗಿ 68 ಹುಡುಗಿಯರ ಒಳವಸ್ತ್ರ ತೆಗೆಸಿ ಅವಮಾನ ಮಾಡಿದ ಪ್ರಾಂಶುಪಾಲೆ: ಗುಜರಾತಿನ ಕಾಲೇಜಿನಲ್ಲೊಂದು ಆಘಾತಕಾರಿ ಘಟನೆ

ಸಂಸ್ಥೆಯ ಪ್ರಾಂಶುಪಾಲರು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಮತ್ತು ದೂರನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ ಎಂದು ಬಾಲಕಿಯರು ಆರೋಪಿಸಿದ್ದಾಳೆ.

ಗುಜರಾತ್‌ನ ಭುಜ್‌ನ ಶ್ರೀ ಸಹಜಾನಂದ್ ಬಾಲಕಿಯರ ಸಂಸ್ಥೆಯ (ಎಸ್‌ಎಸ್‌ಜಿಐ) ಕನಿಷ್ಠ 68 ಬಾಲಕಿಯರು ಮುಟ್ಟಾಗುತ್ತಿಲ್ಲ ಎಂದು ಸಾಬೀತುಪಡಿಸಲು ಅವರ ಒಳ ಉಡುಪುಗಳನ್ನು ತೆಗೆಯುವಂತೆ ಒತ್ತಾಯಿಸಿರುವ ಆಘಾತಕಾರಿ, ಅವಮಾನಕರ ಘಟನೆ ಜರುಗಿದೆ.

ದೇಶವೇ ತಲೆತಗ್ಗಿಸುವಂತಹ ಈ ಬಲವಂತದ ಕ್ರಮ ಕೈಗೊಂಡಿದ್ದಕ್ಕಾಗಿ ಶಿಕ್ಷಣ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಈಗ ಒತ್ತಾಯಿಸುತ್ತಿದ್ದಾರೆ.

ಮುಟ್ಟಾದ ಹೆಣ್ಣು ಮಕ್ಕಳು ಅಡುಗೆ ಮನೆಗೆ, ದೇವರ ಕೋಣೆಗೆ ಬಂದು ಎಲ್ಲರನ್ನು ಮುಟ್ಟುತ್ತಾರೆ ಎಂದು ಹಾಸ್ಟೆಲ್‌‌ನ ವಾರ್ಡನ್‌ ದೂರು ನೀಡಿದ ನಂತರ ಕಾಲೇಜಿನ ಪ್ರಾಂಶುಪಾಲರು 68 ವಿದ್ಯಾರ್ಥಿನಿಯರನ್ನು ಶೌಚಾಲಯಕ್ಕೆ ಕರೆಸಿ ಅವರ ಒಳವಸ್ತ್ರ ತೆಗೆಯುವಂತೆ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.

ನಾವು ನಮ್ಮ ಸಂಸ್ಥೆಯನ್ನು ಗೌರವಿಸುತ್ತೇವೆ, ಆದರೆ ಅವರು ಮಾಡಿದ್ದು ಸರಿಯಲ್ಲ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಈ ವಿಷಯದ ಬಗ್ಗೆ ಬೆಳಕು ಚೆಲ್ಲುವಂತೆ ನಾವು ಮಾಧ್ಯಮಗಳನ್ನು ಕರೆಯಲು ನಿರ್ಧರಿಸಿದ್ದೇವೆ “ಎಂದು ದೂರುದಾರರೊಬ್ಬರು ಎಎನ್‌ಐಗೆ ತಿಳಿಸಿದ್ದಾರೆ.

ಸಂಸ್ಥೆಯ ಪ್ರಾಂಶುಪಾಲರು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಮತ್ತು ದೂರನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ ಎಂದು ಬಾಲಕಿಯೊಬ್ಬಳು ಆರೋಪಿಸಿದ್ದಾಳೆ.

“ಪ್ರಾಂಶುಪಾಲರು ಮತ್ತು ಇತರರು ನಮ್ಮನ್ನು ಕರೆದು ಭಾವನಾತ್ಮಕವಾಗಿ ಬ್ಲ್ಯಾಕ್ ಮೇಲ್ ಮಾಡಲು ಪ್ರಯತ್ನಿಸಿದ್ದಾರೆ. ಈಗ ಎಲ್ಲವೂ ಉತ್ತಮವಾಗಿದೆ ಎಂದು ಲಿಖಿತವಾಗಿ ನೀಡುವಂತೆ ಅವರು ಹೇಳಿದರು. ನಮಗೆ ಕಾನೂನು ಕ್ರಮ ಬೇಕು ಮತ್ತು ಇದುವರೆಗೂ ಆಡಳಿತದಿಂದ ಕ್ಷಮೆಯಾಚಿಸಿಲ್ಲ” ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಇದುವರೆಗೂ ಈ ವಿಚಾರದ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಆದರೆ ಈ ಬಗ್ಗೆ ಪರಿಶೀಲನೆ ನಡೆಸಲು ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಎಸ್‌ಎಸ್‌ಜಿಐ ಡೀನ್ ದರ್ಶನಾ ಧೋಲಾಕಿಯಾ ಹೇಳಿದ್ದಾರೆ.

“ಈ ವಿಷಯವು ಹಾಸ್ಟೆಲ್‌ಗೆ ಸಂಬಂಧಿಸಿದೆ ಮತ್ತು ಇದು ವಿಶ್ವವಿದ್ಯಾಲಯ ಅಥವಾ ಕಾಲೇಜಿಗೆ ಯಾವುದೇ ಸಂಬಂಧವಿಲ್ಲ. ಹುಡುಗಿಯರ ಅನುಮತಿಯೊಂದಿಗೆ ಎಲ್ಲವೂ ಸಂಭವಿಸಿದೆ ಮತ್ತು ಯಾರನ್ನೂ ಒತ್ತಾಯಿಸಲಿಲ್ಲ. ಯಾರೂ ಅವರನ್ನು ಮುಟ್ಟಲಿಲ್ಲ. ಈ ಬಗ್ಗೆ ತನಿಖೆ ನಡೆಸಲು ತನಿಖಾ ತಂಡವನ್ನು ರಚಿಸಲಾಗಿದೆ” ಎಂದು ಹೇಳಿದ್ದಾರೆ.

ಈ ವಿಷಯದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಗುಜರಾತ್‌ನ ವಡ್ನಾವ್‌ನ ಶಾಸಕ ಜಿಗ್ನೇಶ್‌ ಮೇವಾನಿ “ಮುಖ್ಯಮಂತ್ರಿ ವಿಜಯ್‌ ರೂಪಾಣಿಯವರೆ ಈ ವಿಷಯವನ್ನು ಅರಿವಿನಿಂದ ತೆಗೆದುಕೊಳ್ಳಿ. ತಪ್ಪತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ. ಆದ್ದರಿಂದ ಇಂತಹ ‘ಗುಜರಾತ್ ಮಾದರಿ’ ಎಲ್ಲಿಯೂ ಪುನರಾವರ್ತಿಸಲಾಗುವುದಿಲ್ಲ. ಡ್ಯಾಮ್ ಇಟ್!!” ಎಂದು ಟ್ವೀಟ್‌ ಮಾಡಿದ್ದಾರೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

  1. ಈ ಅಮಾನವೀಯ ಕ್ರಮಕ್ಕೆ ದಿಕ್ಕಾರ. ನಿಷ್ಪಕ್ಷಪಾತವಾದ ತನಿಖೆ ನಡೆದು, ತಪ್ಪಿತಸ್ಥರೆಲ್ಲರಿಗೂ ಶಿಕ್ಷೆ ಆಗಬೇಕು.

LEAVE A REPLY

Please enter your comment!
Please enter your name here