Homeಮುಖಪುಟರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿಲುಕಿಕೊಂಡಿರುವ ಬಿಹಾರದ ಪ್ರವಾಹ ಪೀಡಿತರು!  

ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿಲುಕಿಕೊಂಡಿರುವ ಬಿಹಾರದ ಪ್ರವಾಹ ಪೀಡಿತರು!  

ಕುಟುಂಬಗಳೊಂದಿಗೆ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಆಶ್ರಯ ಪಡೆಯುತ್ತಿದ್ದೇವೆ, ಆದರೆ ಇಲ್ಲಿ ಶೌಚಾಲಯ ಸೌಲಭ್ಯ ಅಥವಾ ಸುರಕ್ಷಿತ ಕುಡಿಯುವ ನೀರು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -
- Advertisement -

ಗೋಪಾಲಗಂಜ್ ಜಿಲ್ಲೆಯ ದೇವ್ಪುರ ಗ್ರಾಮದ ನಿವಾಸಿ ಮುಖೇಶ್ ಕುಮಾರ್ ಅವರ ಮನೆ ಪ್ರವಾಹಕ್ಕೆ ಸಿಲುಕಿ ಕುಸಿದು, ನಿರಾಶ್ರಿತರಾಗಿದ್ದಾರೆ. ಅವರ ಕುಟುಂಬ ಈಗ ರತನ್ಸ್ ರೈಲ್ವೆ ನಿಲ್ದಾಣದ ಪ್ಲಾಟ್‌‌‌ಫಾರ್ಮ್‌‌ನಲ್ಲಿ ಆಶ್ರಯ ಪಡೆದಿದೆ.

ಥಾನಾ ರಸ್ತೆ ನಿವಾಸಿ ಮನೋಜ್ ಗಿರಿ ಅವರ ಮನೆಯ ಒಂದು ಭಾಗ ಈ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದೆ. ಮನೋಜ್ ಈಗ ಬೇರೆಡೆ ಆಶ್ರಯ ಪಡೆದ್ದಾರೆ. ಇಂತಹ ಅನೇಕ ಜನರ ಮನೆಗಳು ಕುಸಿದಿದ್ದು, ಕೆಲವು ಕಡೆ ಇಡೀ ಗ್ರಾಮಗಳೇ ಮುಳುಗಿವೆ. ಅವರು ಸರ್ಕಾರಿ ಕಟ್ಟಡಗಳಲ್ಲಿ ಅಥವಾ ರೈಲ್ವೆ ನಿಲ್ದಾಣಗಳಲ್ಲಿ ಆಶ್ರಯ ಪಡೆದಿದ್ದಾರೆ.

ಪ್ಯಾರೆಪುರ, ಸಿಸಾಯ್, ನವಾಡಾ, ಬಾರೌಲಿ ಬ್ಲಾಕ್‌ನ ದೇವಪುರ ಸೇರಿದಂತೆ ಹಲವು ಗ್ರಾಮಗಳು ಪ್ರವಾಹದಿಂದ ಮುಳುಗಿವೆ. ಅನೇಕ ಪ್ರವಾಹ ಪೀಡಿತರು ತಮ್ಮ ಮುರಿದ ಮತ್ತು ಹಾನಿಗೊಳಗಾದ ಮನೆಗಳನ್ನು ಪುನರ್ನಿರ್ಮಿಸುವ ಬಗ್ಗೆ ಚಿಂತಿತರಾಗಿದ್ದರೆ, ಕೆಲವರು ತಮ್ಮ ಜೀವನವನ್ನು ಮತ್ತೆ ಪ್ರಾರಂಭಿಸುವ ಬಗ್ಗೆ ಚಿಂತಿತರಾಗಿದ್ದಾರೆ.

ಪ್ರವಾಹ ಪೀಡಿತ ಗ್ರಾಮಗಳು ಮತ್ತು ಸ್ಥಳಾಂತರಗೊಂಡ ಕುಟುಂಬಗಳು ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿವೆ. ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ವಾಸಿಸುವ ಪ್ರವಾಹ ಪೀಡಿತರು ಶೌಚಾಲಯ, ಕುಡಿಯುವ ನೀರು ಮತ್ತು ಆಹಾರದ ಕೊರತೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಬಾರೌಲಿ ಬ್ಲಾಕ್‌ನ ಸಿಸಾಯ್ ಗ್ರಾಮದ ನಿವಾಸಿ ಶಿವ್ಜಿ ಠಾಕೂರ್, “ನಾವು ನಮ್ಮ ಕುಟುಂಬಗಳೊಂದಿಗೆ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಆಶ್ರಯ ಪಡೆಯುತ್ತಿದ್ದೇವೆ, ಆದರೆ ಶೌಚಾಲಯ ಸೌಲಭ್ಯ ಅಥವಾ ಸುರಕ್ಷಿತ ಕುಡಿಯುವ ನೀರು ಇಲ್ಲ” ಎಂದು ಹೇಳಿದ್ದಾರೆ.

ಪ್ರವಾಹ ಪೀಡಿತರು ಛಾವಣಿಯ ಮೇಲೆ ಟಾರ್ಪಾಲಿನ್ ಹಾಕಿ ಸಣ್ಣ ಗುಡಿಸಲುಗಳನ್ನು ನಿರ್ಮಿಸಿದ್ದಾರೆ ಎಂದು ಹೇಳುತ್ತಾರೆ. ಸ್ಥಳೀಯ ಆಡಳಿತವು ಅವರಿಗೆ ಟಾರ್ಪಾಲಿನ್‌ಗಳನ್ನು ಸಹ ಒದಗಿಸಲಿಲ್ಲ ಎಂದು ಆರೋಪಿಸಲಾಗಿದೆ.

ಪಾಲಿಥಿನ್ ನೀಡುವಂತೆ ಸರ್ಕಾರವನ್ನು ಕೋರಲಾಗಿದೆ ಎಂದು ಗೋಪಾಲ್‌ಗಂಜ್ ವಿಪತ್ತು ವಿಭಾಗದ ಉಸ್ತುವಾರಿ ಶಮ್ಸ್ ಜಾವೇದ್ ಹೇಳಿದ್ದಾರೆ. ಪ್ರವಾಹ ಪೀಡಿತರಿಗಾಗಿ ಸಮುದಾಯ ಅಡಿಗೆಮನೆಗಳನ್ನು ತೆರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ಈ ವಾರದಲ್ಲಿ SSLC ಫಲಿತಾಂಶ ಪ್ರಕಟ ಸಾಧ್ಯತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...