Homeಕರೋನಾ ತಲ್ಲಣಭಾರತದಲ್ಲಿ ಸೋಂಕಿತರ ಚೇತರಿಕೆ ಪ್ರಮಾಣ 67.19% ಕ್ಕೆ ಏರಿಕೆ; ಸಾವಿನ ಪ್ರಮಾಣ 2.09% ಕ್ಕೆ ಇಳಿಕೆ 

ಭಾರತದಲ್ಲಿ ಸೋಂಕಿತರ ಚೇತರಿಕೆ ಪ್ರಮಾಣ 67.19% ಕ್ಕೆ ಏರಿಕೆ; ಸಾವಿನ ಪ್ರಮಾಣ 2.09% ಕ್ಕೆ ಇಳಿಕೆ 

- Advertisement -
- Advertisement -

ಭಾರತದಲ್ಲಿ ಕೊರೊನಾದಿಂದ ಒಟ್ಟು 51,706 ರೋಗಿಗಳು 24 ಗಂಟೆಗಳ ಅವಧಿಯಲ್ಲಿ ಚೇತರಿಸಿಕೊಂಡಿದ್ದಾರೆ.

ಒಂದು ದಿನದ ಅತಿ ಹೆಚ್ಚು, ಚೇತರಿಕೆಯ ಪ್ರಮಾಣ ಇಂದು ದಾಖಲಾಗಿದೆ. ಅಂದರೆ, ಶೇಕಡಾ 67.19 ಕ್ಕೆ ಏರಿದೆ. ಸಾವಿನ ಪ್ರಮಾಣವು ಶೇಕಡಾ 2.09 ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಭಾರತದಲ್ಲಿ ಇದುವರೆಗೂ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 12,82,215 ಕ್ಕೆ ಏರಿದೆ.

ದಾಖಲೆಯ ಅತ್ಯಧಿಕ ದೈನಂದಿನ ಚೇತರಿಸಿಕಂಡವರ ಕಾರಣದಿಂದಾಗಿ, ಸಕ್ರಿಯ ಪ್ರಕರಣಗಳು 5,86,244 ಕ್ಕೆ ಇಳಿದಿವೆ.

ಜಾಗತಿಕ ಸನ್ನಿವೇಶಕ್ಕೆ ಹೋಲಿಸಿದರೆ, ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಸರ್ಕಾರಗಳ ಕಾರ್ಯತಂತ್ರದ ಸಮನ್ವಯ ಅನುಷ್ಠಾನದಿಂದ, ಕೊರೊನಾ ಪ್ರಕರಣದ ಸಾವಿನ ಪ್ರಮಾಣ ಕಡಿಮೆಯಾಗಿದೆ ಎಂದು ಸಚಿವಾಲಯ ಹೇಳಿದೆ.

ಇದು ಕಳೆದ 14 ದಿನಗಳಲ್ಲಿ ಶೇಕಡಾ 63 ರಿಂದ 67 ಕ್ಕೆ ಸುಧಾರಿಸಿದೆ ಎಂದು ಸಚಿವಾಲಯದ ಪ್ರಕಟಣೆ ಹೇಳಿದೆ.


ಇದನ್ನೂ ಓದಿ: ಭಾರತದ ಕೊರೊನಾ ಪರೀಕ್ಷಾ ಪ್ರಮಾಣ ಕಡಿಮೆ: WHO

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...