Homeಕರ್ನಾಟಕಕಾಶಿ ಮತ್ತು ಮಥುರಾದಲ್ಲಿ ಇನ್ನೂ ಎರಡು ಉಳಿದಿವೆ ಅವುಗಳನ್ನು ಅಳಿಸಿಹಾಕಬೇಕು: ಕೆ. ಎಸ್. ಈಶ್ವರಪ್ಪ

ಕಾಶಿ ಮತ್ತು ಮಥುರಾದಲ್ಲಿ ಇನ್ನೂ ಎರಡು ಉಳಿದಿವೆ ಅವುಗಳನ್ನು ಅಳಿಸಿಹಾಕಬೇಕು: ಕೆ. ಎಸ್. ಈಶ್ವರಪ್ಪ

ಬಲಿಷ್ಠ ಭಾರತ ನಿರ್ಮಿಸಲು ಗುಲಾಮಗಿರಿಯ ಇತರ ಗುರುತುಗಳನ್ನು ಅಳಿಸಿಹಾಕಲು ಎಲ್ಲಾ ಪ್ರಯತ್ನಗಳನ್ನು ಕೈಗೊಳ್ಳಬೇಕು ಎಂದಿದ್ದಾರೆ.

- Advertisement -
- Advertisement -

ಅಯೋಧ್ಯೆಯ ರಾಮನ ದೇವಾಲಯದ ಭೂಮಿ ಪೂಜಾ ಸಮಾರಂಭ ಮಗಿದ ನಂತರ, ʼಕಾಶಿ ಮತ್ತು ಮಥುರಾವನ್ನು ವಿಮೋಚನೆʼ ಮಾಡುವುದರತ್ತ ಗಮನ ಹರಿಸುವುದಾಗಿ ರಾಜ್ಯ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.

ಸಚಿವ ಈಶ್ವರಪ್ಪ, ಅಯೋಧ್ಯೆಯಲ್ಲಿ ನಡೆಯುವ ಭೂಮಿ ಪೂಜೆಯ ಸಲುವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಪೂಜೆ ಮತ್ತು ಹವನಗಳನ್ನು ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಈ ಮಾತನ್ನು ಹೇಳಿದ್ದಾರೆ.

ಗುಲಾಮಗಿರಿಯ ಗುರುತು ಅಳಿಸಲಾಗಿದೆ. ಕಾಶಿ ಮತ್ತು ಮಥುರಾ ಇನ್ನೂ ಎರಡು ಉಳಿದಿವೆ. ಅವುಗಳನ್ನು ಅಳಿಸಿಹಾಕಬೇಕು ಮತ್ತು ಮಸೀದಿಗಳು ಮಂದಿರಗಳಿಗೆ ದಾರಿ ಮಾಡಿಕೊಡಬೇಕು ಎಂದರು.

ಬಿಜೆಪಿಯ ಕರ್ನಾಟಕ ಘಟಕದ ಮಾಜಿ ಅಧ್ಯಕ್ಷರೂ ಆಗಿರುವ ಸಚಿವರು, ಬಲಿಷ್ಠ ಭಾರತವನ್ನು ನಿರ್ಮಿಸಲು ಗುಲಾಮಗಿರಿಯ ಇತರ ಗುರುತುಗಳನ್ನು ಅಳಿಸಿಹಾಕಲು ಎಲ್ಲಾ ಪ್ರಯತ್ನಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಕಾಂಗ್ರೆಸ್ ವಕ್ತಾರ ಬಿ. ಎಲ್. ಶಂಕರ್, ಈಶ್ವರಪ್ಪ ಅವರ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿ, ಇದು ಪಕ್ಷವಾಗಿ ಬಿಜೆಪಿಯ ಅಧಿಕೃತ ನಿಲುವೋ ಅಥವಾ ಈಶ್ವರಪ್ಪ ಅವರ ವೈಯಕ್ತಿಕ ನಿಲುವೋ ಎಂದು ನಮಗೆ ತಿಳಿದಿಲ್ಲ. ಈ ಬಗ್ಗೆ ಬಿಜೆಪಿ ನಿಲುವು ತೆಗೆದುಕೊಂಡರೆ, ಆಗ ಮಾತ್ರ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸುತ್ತೇವೆ ಎಂದಿದ್ದಾರೆ.

ಕಾಂಗ್ರೆಸ್, ಅಯೋಧ್ಯೆಯಲ್ಲಿನ ಭೂಮಿ ಪೂಜೆಯನ್ನು ಸ್ವಾಗತಿಸಿದ್ದು, ಈ ವಿಷಯವನ್ನು ಜನರನ್ನು ಒಗ್ಗೂಡಿಸಲು ಬಳಸಬೇಕು ಎಂದು ಹೇಳಿದೆ.

ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಂಗಳವಾರ ಭಗವಾನ್ ರಾಮ ಎಲ್ಲ ಕಾಂಗ್ರೆಸ್ಸಿಗರ ಹೃದಯದಲ್ಲಿದ್ದಾರೆ ಎಂದು  ಹೇಳಿದ್ದರು.


ಇದನ್ನೂ ಓದಿ: ಬೆಂಕಿ ಬರಹ-ಮಂದಿರವಲ್ಲೇ ಕಟ್ಟಿದೆವು…!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...