Homeಕರೋನಾ ತಲ್ಲಣಶಾಲಾ ಮಕ್ಕಳಿಗೆ ಪಡಿತರ ಹಾಗೂ ಹಣ ವರ್ಗಾಯಿಸುವಂತೆ ಬಿಹಾರ ಸರ್ಕಾರದ ಆದೇಶ!

ಶಾಲಾ ಮಕ್ಕಳಿಗೆ ಪಡಿತರ ಹಾಗೂ ಹಣ ವರ್ಗಾಯಿಸುವಂತೆ ಬಿಹಾರ ಸರ್ಕಾರದ ಆದೇಶ!

ಪಾಟ್ನಾ ಹೈಕೋರ್ಟ್ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಸ್ವಯಂಪ್ರೇರಿತ ವಿಚಾರಣೆಯನ್ನು ಕೈಗೆತ್ತಿಕೊಂಡಿರುವುದರ ನಡುವೆ ಈ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ.

- Advertisement -
- Advertisement -

ಮೇ ನಿಂದ ಜುಲೈವರೆಗೆ 80 ಕೆಲಸದ ದಿನಗಳವರೆಗೆ ಶಾಲಾ ಮಕ್ಕಳಿಗೆ ಪಡಿತರ ಮತ್ತು ನೇರ ವರ್ಗಾವಣೆಯ ಮೂಲಕ ಹಣವನ್ನು ಒದಗಿಸಬೇಕು ಎಂದು ಬಿಹಾರ ಸರ್ಕಾರವು ರಾಜ್ಯವ್ಯಾಪಿ ಆದೇಶ ಹೊರಡಿಸಿದೆ.

ಸೋಮವಾರ ದಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿಯನ್ನು ಗಮನಿಸಿದ ಪಾಟ್ನಾ ಹೈಕೋರ್ಟ್ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಸ್ವಯಂಪ್ರೇರಿತ ವಿಚಾರಣೆಯನ್ನು ಕೈಗೆತ್ತಿಕೊಂಡಿರುವುದರ ನಡುವೆ ಈ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ.

ಬಿಹಾರದ ಬ್ಯಾಡ್ಬಿಲ್ಲಾ ಗ್ರಾಮದ ಮುಸಹರಿ ಟೋಲಾದ ಮಕ್ಕಳು ಮಧ್ಯಾನ್ಹದ ಊಟ ಕೊಡುತ್ತಿದ್ದ ಶಾಲೆಗಳು ಕೊರೊನಾ ಕಾರಣಕ್ಕೆ ಮುಚ್ಚಿರುವುದರಿಂದ ಹಸಿವನ್ನು ನೀಗಿಸಲು ಚಿಂದಿ ಆಯುವ ಕೆಲಸಕ್ಕೆ ಹೋಗುತ್ತಿರುವುದನ್ನು ಸೋಮವಾರ ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿತ್ತು. ರಾಜ್ಯದ 115 ಲಕ್ಷಕ್ಕೂ ಹೆಚ್ಚು ಮಕ್ಕಳು ಮಧ್ಯಾಹ್ನದ ಊಟದ ಯೋಜನೆಯ ಪ್ರಯೋಜನ ಪಡೆಯುತ್ತಿದ್ದರು.

ವರದಿಯನ್ನು ಉಲ್ಲೇಖಿಸಿದ ಪಾಟ್ನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್ ನೇತೃತ್ವದ ನ್ಯಾಯಪೀಠವು “ಸುದ್ದಿ ಲೇಖನವು ಸಾರ್ವಜನಿಕ ಪ್ರಾಮುಖ್ಯತೆ ಮತ್ತು ಪ್ರಸ್ತುತತೆಯ ವಿಷಯವನ್ನು ಎತ್ತಿ ತೋರಿಸುತ್ತದೆ. ಇದು ಸಮಾಜದ ತಳಮಟ್ಟದವರು, ಅಂಚಿನಲ್ಲಿರುವವರು, ದೀನ ದಲಿತರ ಬಗ್ಗೆ ಕಾಳಜಿ ವಹಿಸಿದೆ. ರಾಜ್ಯದಾದ್ಯಂತ ಶಾಲೆಗಳ ಮುಚ್ಚುವಿಕೆಯು ಮಕ್ಕಳ ಶಿಕ್ಷಣದ ಹಕ್ಕಿನ ಮೇಲೆ ಮಾತ್ರವಲ್ಲದೆ ಆಹಾರದ ಹಕ್ಕಿನ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತಿದೆ” ಎಂದಿದ್ದಾರೆ.

ಎರಡು ದಿನಗಳಲ್ಲಿ ಅಫಿಡವಿಟ್ ಸಲ್ಲಿಸಲು ಬಿಹಾರ ಸರ್ಕಾರಕ್ಕೆ ಹೇಳಿದ್ದು, “ಮಕ್ಕಳಿಗೆ ಕನಿಷ್ಠ ಪೌಷ್ಠಿಕಾಂಶದ ಅವಶ್ಯಕತೆಗಳನ್ನು ಪೂರೈಸಲು ಆಹಾರವನ್ನು ಒದಗಿಸುವ ಸೀಮಿತ ಉದ್ದೇಶಕ್ಕಾಗಿ ಅಂಗನವಾಡಿ ಕೇಂದ್ರಗಳು ಅಥವಾ ಶಾಲೆಗಳನ್ನು ತೆರೆಯಬಹುದು ” ಎಂದು ಕೋರ್ಟ್ ಸೂಚಿಸಿದೆ.

ಆಹಾರದ ಕೊರತೆಯಿಂದಾಗಿ ಯಾವುದೇ ಮಗು ಚಿಂದಿ ಆಯುವ ಅಥವಾ ಭಿಕ್ಷಾಟನೆಯ ಯಾವುದೇ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು, “ಇದು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯ ವಿಷಯ” ಎಂದು ಹೇಳಿ, ಕೇಂದ್ರ ಎಚ್‌ಆರ್‌ಡಿ ಸಚಿವಾಲಯ ಮತ್ತು ಬಿಹಾರ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಾಲ್ಕು ವಾರಗಳಲ್ಲಿ ಉತ್ತರಗಳನ್ನು ಸಲ್ಲಿಸುವಂತೆ ಕೋರಿ ಸೋಮವಾರ ನೋಟಿಸ್ ನೀಡಿದೆ.


ಓದಿ: ಲಾಕ್‌ಡೌನ್‌ನಿಂದಾಗಿ ಮಕ್ಕಳಿಗೆ ಸಿಗುತ್ತಿಲ್ಲ ಪೌಷ್ಠಿಕ ಆಹಾರ: ಅಂಗನವಾಡಿ, ಬಿಸಿಯೂಟ ನೌಕರರ ಗೋಳು ಕೇಳುವವರಿಲ್ಲ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...