Homeಕರೋನಾ ತಲ್ಲಣಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊಗೆ ಕೊರೊನಾ ಪಾಸಿಟಿವ್! 

ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊಗೆ ಕೊರೊನಾ ಪಾಸಿಟಿವ್! 

65 ವರ್ಷದ ಅಧ್ಯಕ್ಷರು, ಆರ್ಥಿಕತೆಯನ್ನು ಪುನಃಶ್ಚೇತನಗೊಳಿಸುವ ಅಭಿಯಾನದಲ್ಲಿ ಇದು "ಸಣ್ಣ ಜ್ವರ" ಎಂದಿದ್ದರು. ಜೊತೆಗೆ ಮಾಸ್ಕ್ ಇಲ್ಲದೇ ಜನಸಂದಣಿಯಲ್ಲಿ ಬೆರೆಯುತ್ತಾ, ಜನರಿಗೆ ಹಸ್ತಲಾಘವ ನೀಡುತ್ತಾ ವೈಧ್ಯಕೀಯ ಸಲಹೆಗಳನ್ನು ಕಡೆಗಣಿಸಿದ್ದರು.

- Advertisement -
- Advertisement -

ಲ್ಯಾಟಿನ್ ಅಮೆರಿಕದ ಅತಿದೊಡ್ಡ ಆರ್ಥಿಕತೆಯನ್ನು ಆವರಿಸಿರುವ ಆರೋಗ್ಯ ಬಿಕ್ಕಟ್ಟಿನ ಉಲ್ಬಣದ ನಡುವೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

“ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ” ಎಂದು ಬೋಲ್ಸನಾರೊ CNN ಬ್ರೆಜಿಲ್ ನ ನೇರ ಸಂದರ್ಶನದಲ್ಲಿ ತಮ್ಮ ಪರೀಕ್ಷೆಯ ಫಲಿತಾಂಶವನ್ನು ಘೋಷಿಸಿದ ನಂತರ ಹೇಳಿದ್ದಾರೆ.  ಹೈಡ್ರಾಕ್ಸಿಕ್ಲೋರೋಕ್ವಿನ್ ಎಂಬ ಮಲೇರಿಯಾ ವಿರೋಧಿ ಔಷಧಿಯನ್ನು ತೆಗೆದುಕೊಳ್ಳುತ್ತಿರುವ ಅವರು, ಇದು ವೈರಸ್ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದಿದ್ದಾರೆ. ಆದರೆ ಇದರ ಬಳಕೆಯನ್ನು ಜಾಗತಿಕವಾಗಿ ಹೆಚ್ಚಿನ ಆರೋಗ್ಯ ತಜ್ಞರು ಅಧಿಕೃತಗೊಳಿಸಿಲ್ಲ. ಹಾಗೆಯೇ ಇದು ಅಪಾಯಕಾರಿ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು ಎಂದೂ ಹೇಳಿದ್ದಾರೆ.

65 ವರ್ಷದ ಅಧ್ಯಕ್ಷರು, ಆರ್ಥಿಕತೆಯನ್ನು ಪುನಃಶ್ಚೇತನಗೊಳಿಸುವ ಅಭಿಯಾನದಲ್ಲಿ ಇದು “ಸಣ್ಣ ಜ್ವರ” ಎಂದಿದ್ದರು. ಜೊತೆಗೆ ಮಾಸ್ಕ್ ಇಲ್ಲದೇ ಜನಸಂದಣಿಯಲ್ಲಿ ಬೆರೆಯುತ್ತಾ, ಜನರಿಗೆ ಹಸ್ತಲಾಘವ ನೀಡುತ್ತಾ ವೈಧ್ಯಕೀಯ ಸಲಹೆಗಳನ್ನು ಕಡೆಗಣಿಸಿದ್ದರು ಎಂಬ ಆರೋಪಗಳು ಅವರ ಮೇಲಿವೆ.

ಬೋಲ್ಸನಾರೊ ಸಾಮಾಜಿಕ ಜಾಲತಾಣಗಳಲ್ಲಿ ಗುರುವಾರ ಕಾಣಿಸಿಕೊಂಡ ಸಂದರ್ಭದಲ್ಲಿ ಕೆಮ್ಮುವುದನ್ನು ಕಾಣಬಹುದು. ಅವರ ಪಕ್ಕದಲ್ಲಿ ಕುಳಿತಿದ್ದ ಆರು ಜನರಲ್ಲಿ ಯಾರೂ ಮಾಸ್ಕ್ ಧರಿಸಲಿಲ್ಲ. ಅಲ್ಲಿದ್ದ ಅಧಿಕಾರಿಗಳಲ್ಲಿ ಪ್ರಾದೇಶಿಕ ಅಭಿವೃದ್ಧಿ ಸಚಿವ ರೊಜೆರಿಯೊ ಮರಿನ್ಹೋ, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಕೈಕ್ಸಾ ಎಕನಾಮಿಕಾ ಫೆಡರಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೆಡ್ರೊ ಗುಯಿಮರೇಸ್ ಸೇರಿದ್ದಾರೆ. ಅಂದಿನಿಂದ, ಅವರು ತಮ್ಮ ಆಡಳಿತದ ಸದಸ್ಯರು ಮತ್ತು ಸಾರ್ವಜನಿಕರೊಂದಿಗೆ ಬೆರೆಯುತ್ತಿದ್ದರು. ಜೊತೆಗೆ ಶನಿವಾರ ಬ್ರೆಜಿಲ್‌ನ US ರಾಯಭಾರಿಯೊಂದಿಗೆ ಊಟ ಮಾಡಿದ್ದರು.

ಬೋಲ್ಸನಾರೊರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿರುವುದು ಇದೇ ಮೊದಲಲ್ಲ. ಇದುವರೆಗೂ ಮೂರು ಬಾರಿ ಅವರ ಪರೀಕ್ಷೆ ಫಲಿತಾಂಶ ನೆಗೆಟಿವ್ ಬಂದಿತ್ತು. ಲಕ್ಷಣಗಳು ಕಾಣಿಸಿಕೊಂಡ ನಂತರ ನಾಲ್ಕನೇ ಬಾರಿಯ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ.

ಹೊಂಡುರಾನ್ ಅಧ್ಯಕ್ಷ ಜುವಾನ್ ಒರ್ಲ್ಯಾಂಡೊ ಹೆರ್ನಾಂಡೆಜ್ ಮತ್ತು ಯು.ಕೆ. ಪ್ರಧಾನಿ ಬೋರಿಸ್ ಜಾನ್ಸನ್ ಸೇರಿದಂತೆ ಕೊರೊನಾ ದೃಢಪಟ್ಟಿರುವ ಇತರ ವಿಶ್ವ ನಾಯಕರ ಸಾಲಿಗೆ ಬೋಲ್ಸನಾರೊ ಸೇರಿಕೊಳ್ಳುತ್ತಾರೆ.


ಇದನ್ನೂ ಓದಿ : ಚೀನಾ ಮುಂದಿಟ್ಟ ಎರಡು ಹೆಜ್ಜೆಯಲ್ಲಿ ಒಂದು ಹೆಜ್ಜೆ ಹಿಂದಿಟ್ಟಿದೆ, ಅದು ಹಿನ್ನೆಡೆಯೋ? ಮುನ್ನೆಡೆಯೋ?; ಜಸ್ಟ್‌ ಆಸ್ಕಿಂಗ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...