Homeಮುಖಪುಟಮುಸುಕು, ಹಿಜಾಬ್‌, ಬಿಕಿನಿ, ಜೀನ್ಸ್‌ ಆಯ್ಕೆ ಮಹಿಳೆಯ ಹಕ್ಕು: ಪ್ರಿಯಾಂಕಾ

ಮುಸುಕು, ಹಿಜಾಬ್‌, ಬಿಕಿನಿ, ಜೀನ್ಸ್‌ ಆಯ್ಕೆ ಮಹಿಳೆಯ ಹಕ್ಕು: ಪ್ರಿಯಾಂಕಾ

- Advertisement -
- Advertisement -

ನವ ದೆಹಲಿ: ಕರ್ನಾಟಕದಲ್ಲಿ ತರಗತಿಯಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿರುವ ಕಾಲೇಜು ವಿದ್ಯಾರ್ಥಿಗಳನ್ನು ಬೆಂಬಲಿಸಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮಾತನಾಡಿದ್ದು, ಯಾವ ಬಟ್ಟೆಯನ್ನು ಧರಿಸಬೇಕೆಂಬುದರ ಆಯ್ಕೆ ಅವರದು ಮತ್ತು ಈ ಹಕ್ಕನ್ನು ಸಂವಿಧಾನವು ರಕ್ಷಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

“ಅದು ಬಿಕಿನಿಯಾಗಿರಲಿ, ಘೂಂಘಟ್‌ (ತಲೆ ಮೇಲೆ ಸೆರಗು ಮುಚ್ಚುವುದು) ಆಗಿರಲಿ, ಜೀನ್ಸ್ ಆಗಿರಲಿ ಅಥವಾ ಹಿಜಾಬ್ ಆಗಿರಲಿ, ಆಕೆ ಏನು ಧರಿಸಬೇಕೆಂದು ನಿರ್ಧರಿಸುವುದು ಮಹಿಳೆಯ ಹಕ್ಕು. ಈ ಹಕ್ಕು ಭಾರತೀಯ ಸಂವಿಧಾನದ ಮೂಲಕ ಖಾತರಿಪಡಿಸಿದೆ. ಮಹಿಳೆಯರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ” ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದಾರೆ. #ladkihoonladsaktihoon (ಹುಡುಗಿಯಾಗಿದ್ದೇನೆ ಆದರೆ ಹೋರಾಟಬಲ್ಲೆ) ಎಂಬ ಹ್ಯಾಶ್‌ಟ್ಯಾಗ್‌ ಹಾಕಿದ್ದಾರೆ.

ನಾಳೆಯಿಂದ ಆರಂಭವಾಗಲಿರುವ ಏಳು ಹಂತದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬಳಸಿರುವ ಧ್ಯೇಯವಾಕ್ಯ #ladkihoonladsaktihoon. ಕಾಂಗ್ರೆಸ್‌ ಪಕ್ಷವು ಮಹಿಳಾ ಹಕ್ಕುಗಳು ಮತ್ತು ಸಬಲೀಕರಣವನ್ನು ಚುನಾವಣೆಯ ಪ್ರಮುಖ ವಿಷಯಗಳಾಗಿ ಪರಿಗಣಿಸಿದೆ.

ಕಳೆದ ವಾರ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ತರಗತಿಗಳಲ್ಲಿ ಹಿಜಾಬ್ ಧರಿಸುವ ವಿದ್ಯಾರ್ಥಿಗಳ ಹಕ್ಕನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. “ವಿದ್ಯಾರ್ಥಿಗಳ ಹಿಜಾಬನ್ನು ಶಿಕ್ಷಣಕ್ಕೆ ಅಡ್ಡಿಯಾಗುವಂತೆ ಮಾಡಿ ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುತ್ತಿದ್ದೇವೆ. ತಾಯಿ ಸರಸ್ವತಿಯು ಎಲ್ಲರಿಗೂ ಜ್ಞಾನವನ್ನು ನೀಡುತ್ತಾಳೆ. ಅವಳು ಯಾರೊಂದಿಗೂ ಭೇದ ತೋರಿಸುವುದಿಲ್ಲ” ಎಂದು ರಾಹುಲ್ ಟ್ವೀಟ್ ಮಾಡಿದ್ದರು.

ಕಾಲೇಜು ವಿದ್ಯಾರ್ಥಿಗಳು ತರಗತಿಯಲ್ಲಿ ಹಿಜಾಬ್ ಧರಿಸುವ ಹಕ್ಕಿನ ವಿರುದ್ಧ ಕರ್ನಾಟಕದ ಉಡುಪಿ, ಚಿಕ್ಕಮಗಳೂರು ಮತ್ತು ಮಂಡ್ಯ ಜಿಲ್ಲೆಗಳ ಹಲವಾರು ಕಡೆ ಆಘಾತಕಾರಿಯಾಗಿ ಪ್ರತಿಭಟನೆಗಳು ನಡೆಯುತ್ತಿವೆ.

ಮಂಡ್ಯದಲ್ಲಿ ಯುವಕರ ಗುಂಪೊಂದು ಯುವತಿಯೊಬ್ಬಳಿಗೆ ಕೇಸರಿ ಶಾಲುಗಳನ್ನು ಬೀಸುತ್ತಾ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುತ್ತಿರುವಾಗ ಮನಕಲಕುವ ದೃಶ್ಯ ವೈರಲ್‌ ಆಗಿದೆ. ಕೇಸರಿ ಪಡೆಯ ದೌರ್ಜನ್ಯವನ್ನು ಖಂಡಿಸಿದ ಏಕಾಂಗಿ ಹೆಣ್ಣುಮಗಳು ಧಾರ್ಮಿಕ ಹಕ್ಕನ್ನು ಪ್ರತಿಪಾದಿಸಿದ್ದು, ಪ್ರಶಂಸೆಗೆ ಪಾತ್ರವಾಗಿದೆ.

ವಿದ್ಯಾರ್ಥಿನಿ ಮುಸ್ಕಾನ್ ಎನ್‌ಡಿಟಿವಿಯೊಂದಿಗೆ ಮಾತನಾಡುತ್ತಾ, “ನಾನು ಚಿಂತಿಸಲಿಲ್ಲ. ನಾನು ಕಾಲೇಜಿಗೆ ಪ್ರವೇಶಿಸಿದಾಗ ನಾನು ಬುರ್ಖಾ ಧರಿಸಿದ್ದಕ್ಕಾಗಿ ಅವರು ನನಗೆ ಅವಕಾಶ ನೀಡಲಿಲ್ಲ. ಅವರು ನಮ್ಮ ಶಿಕ್ಷಣವನ್ನು ಹಾಳುಮಾಡುತ್ತಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ.

ದಾವಣಗೆರೆ ಜಿಲ್ಲೆಯ ಎರಡು ಪಟ್ಟಣಗಳಲ್ಲಿ ಹಿಜಾಬ್ ಧರಿಸಿದ ಪ್ರತಿಭಟನಾಕಾರರು ಮತ್ತು ಕೇಸರಿ ಶಾಲು ಧರಿಸಿದವರು ಪರಸ್ಪರ ಕಲ್ಲು ತೂರಾಟ ನಡೆಸಿದ ನಂತರ ದೊಡ್ಡ ಸಭೆಗಳನ್ನು ನಿಷೇಧಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೇಸರಿ ಸ್ಕಾರ್ಫ್ ಧರಿಸಿದ್ದ ಹುಡುಗರು ಶಾಲಾ ಆವರಣದಲ್ಲಿ ಕೇಸರಿ ಭಾವುಟ ಹಾರಿಸಿ ವಾತಾವರಣವನ್ನು ಕಲುಷಿತಗೊಳಿಸಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಚಾಕು ಹಿಡಿದುಕೊಂಡಿದ್ದ ಇಬ್ಬರನ್ನು ಸೋಮವಾರ ಕುಂದಾಪುರದಲ್ಲಿ ಬಂಧಿಸಲಾಗಿದೆ.


ಇದನ್ನೂ ಓದಿರಿ: ಬಿಜೆಪಿಯನ್ನು ಸೋಲಿಸಲಿರುವ ಹಿಜಾಬ್: ಆಶ್ಚರ್ಯವಾದರೂ ಸತ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...