Homeಕರ್ನಾಟಕಒಕ್ಕೂಟ ಸಚಿವರನ್ನು ‘ಬಂದೂಕು ಸಿಡಿಸಿ’ ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರು!

ಒಕ್ಕೂಟ ಸಚಿವರನ್ನು ‘ಬಂದೂಕು ಸಿಡಿಸಿ’ ಸ್ವಾಗತಿಸಿದ ಬಿಜೆಪಿ ಕಾರ್ಯಕರ್ತರು!

- Advertisement -
- Advertisement -

ಒಕ್ಕೂಟ ಸರ್ಕಾರದ ಸಚಿವ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾದ ರಾಜ್ಯದ ಸಚಿವರನ್ನು ಜನತೆಗೆ ಪರಿಚಯಿಸಲು ಬಿಜೆಪಿ ಜನಾಶೀರ್ವಾದ ಯಾತ್ರೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಯಾತ್ರೆಗಾಗಿ ಯಾದಗಿರಿಗೆ ಆಗಮಿಸಿದ್ದ ಸಚಿವ ಖೂಬಾ ಅವರ ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರು ಗಾಳಿಯಲ್ಲಿ ಗುಂಡು ಹಾರಿಸಿದ್ದು ಬುಧವಾರ ವರದಿಯಾಗಿದೆ.

ಖೂಬಾ ಅವರ ಸ್ವಾಗತಕ್ಕೆ ಯರಗೋಳ ಗ್ರಾಮದ ಸ್ಥಳೀಯ ಬಿಜೆಪಿ ಕಾರ್ಯಕರ್ತರು ನಾಡ ಬಂದೂಕು ಸಿಡಿಸಿ ಸ್ವಾಗತ ಮಾಡಿದ್ದಾರೆ. ವಿಡಿಯೊ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕನಿಷ್ಠ ನಾಲ್ವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬೇಗೂರು ಕೆರೆ ವಿವಾದ ಕೋಮುವಾದಿಕರಣ: ಬಿಜೆಪಿ ಬೆಂಬಲಿಗ ಪುನಿತ್‌ ಕೆರೆಹಳ್ಳಿ ಸಹಿತ ಹಲವರ ಮೇಲೆ FIR

ಈ ಮಧ್ಯೆ ಕೊರೊನಾ ನಿಯಮಗಳನ್ನು ಮೀರಿ ನೂರಾರು ಜನ ಸಚಿವರ ಸ್ವಾಗತಕ್ಕೆ ಸೇರಿದ್ದು ಕೂಡಾ ಜನಾಕ್ರೋಶಕ್ಕೆ ಗುರಿಯಾಗಿದೆ. ಕಲಬುರ್ಗಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಖೂಬಾ ಅವರ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದಾರೆಂದು  ನಗರದ ಬ್ರಹ್ಮಪುರ ಠಾಣೆ ಪೊಲೀಸರು ಬಿಜೆಪಿ ಜಿಲ್ಲಾ ಮುಖಂಡರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಯಾದಗಿರಿಯ ಜನಾಶೀರ್ವಾದ ಕಾರ್ಯಕ್ರಮಕ್ಕೆ ಭಾಗವಹಿಸಲು ಆಗಮಿಸಿದ ಸಚಿವ ಖೂಬಾ ಅವರನ್ನು ಸ್ವಾಗತಿಸಲು ಮಾಜಿ ಸಚಿವ ಬಾಬೂರಾವ್ ಚಿಂಚನಸೂರು, ಶಾಸಕರಾದ ರಾಜೂಗೌಡ, ವೆಂಕಟರೆಡ್ಡಿ ಮುದ್ನಾಳ ಭಾಗವಹಿಸಿದ್ದರು.

ಬಂದೂಕಿನ ಬಗ್ಗೆ ಪ್ರಶ್ನೆಗೆ ಉತ್ತರಿಸಿದ್ದ ಚಿಂಚನಸೂರು, “ಅದು ಕಾಡು ಪ್ರಾಣಿ ಓಡಿಸಲು ಇಟ್ಟಿದ್ದ ಬಂದೂಕು” ಎಂದು ಉಡಾಫೆಯಿಂದ ಮಾತನಾಡಿದ್ದಾರೆ ಎಂದೂ ವರದಿಯಾಗಿದೆ.

ಇದನ್ನೂ ಓದಿ: ಸಿಎಂ ಯೋಗಿ ಆದಿತ್ಯನಾಥ್‌ರನ್ನು ಬಿಜೆಪಿ ನಾಯಕರು ಅತಿಯಾಗಿ ಪ್ರಶಂಸಿಸುತ್ತಿರುವುದಕ್ಕೆ ಕಾರಣ ಇದು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...