Homeಮುಖಪುಟಉಬರ್‌ ಚಾಲಕನ ನೈತಿಕ ಪೊಲೀಸ್‌ಗಿರಿಯನ್ನು ಶ್ಲಾಘಿಸಿ ಅವಾರ್ಡ್‌ ನೀಡಿದ ಬಿಜೆಪಿ!

ಉಬರ್‌ ಚಾಲಕನ ನೈತಿಕ ಪೊಲೀಸ್‌ಗಿರಿಯನ್ನು ಶ್ಲಾಘಿಸಿ ಅವಾರ್ಡ್‌ ನೀಡಿದ ಬಿಜೆಪಿ!

- Advertisement -
- Advertisement -

ಮುಂಬೈ ಘಟಕದ ಬಿಜೆಪಿ ಅಧ್ಯಕ್ಷ ಮಂಗಲ್ ಪ್ರಭಾತ್ ಲೋಧಾ ಅವರು ಫೆಬ್ರವರಿ 5 ರ ಬುಧವಾರದಂದು  ಪ್ರಯಾಣಿಕ, ಕವಿ ಮತ್ತು ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಪೊಲೀಸ್ ಠಾಣೆಗೆ ಕರೆದೊಯ್ದ ಉಬರ್ ಚಾಲಕನನ್ನು ರೋಹಿತ್‌ ಸಿಂಗ್‌ನನ್ನು ಸನ್ಮಾನಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.

‘ಅಲರ್ಟ್‌ ಸಿಟಿಜನ್‌ ಅವಾರ್ಡ್‌’ ಎಂಬ ಭಿತ್ತಿಪತ್ರವನ್ನು ನೀಡಿರುವ ಬಿಜೆಪಿ ಅಧ್ಯಕ್ಷ ಈತನು ಒಳ್ಳೆಯ ಕೆಲಸ ಮಾಡಿದ್ದಾನೆ ಎಂದು ಹಾಡಿ ಹೊಗಳಿದ್ದಾರೆ.

ಎಎನ್‌ಐ ಜೊತೆ ಮಾತನಾಡಿದ ಚಾಲಕ ರೋಹಿತ್ ಸಿಂಗ್, “ತಾನು ಮಾಡಿದ ಕೆಲಸಕ್ಕೆ ಹೆಮ್ಮೆ ಇದೆ” ಎಂದು ಹೇಳಿದ್ದಾರೆ.

ನಾನು ಇಲ್ಲಿಯವರೆಗೆ 3,000 ಜನರನ್ನು ತಮ್ಮ ಸ್ಥಳಗಳಿಗೆ ತಲುಪಿಸಿದ್ದೇನೆ. ಆತಿನಿಂದ ನಮ್ಮ ದೇಶಕ್ಕೆ ಹಾನಿಯಾಗಲಿದೆ ಎಂದು ನಾನು ಭಾವಿಸಿದ್ದರಿಂದ ಹಾಗೆ ಮಾಡಿದೆ. ನಾನು ಯಾರನ್ನಾದರೂ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿರುವುದು ಇದೇ ಮೊದಲು” ಎಂದು ಅವರು ಹೇಳಿದ್ದಾರೆ.

ರೋಹಿತ್ ಸಿಂಗ್ ಅವರು ಈಗಾಗಲೇ ಉಬರ್‌ಗೆ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಕ್ಯಾಬ್ ಅಗ್ರಿಗೇಟರ್ ಉಬರ್‌ ಅವರನ್ನು ಸುಮಾರು 48 ರಿಂದ 72 ಗಂಟೆಗಳ ಕಾಲ ತಾತ್ಕಾಲಿಕವಾಗಿ ಅಮಾನತುಗೊಳಿಸಿ ತನಿಖೆ ನಡೆಸುತ್ತಿದೆ ಎಂದು ಹೇಳಿಕೊಂಡಿದೆ. ಆದರೆ ಚಾಲಕ ರೋಹಿತ್‌ ಸಿಂಗ್‌ ತಾನು ಆನ್‌ಲೈನ್‌ಗೆ ಹಿಂತಿರುಗಲಿದ್ದೇನೆ ಎಂದು ಹೇಳಿದ್ದಾರೆ.

ಬುಧವಾರದಂದು ಸರ್ಕಾರ್‌ ಎಂಬ ಕವಿ ಮತ್ತು ಸಾಮಾಜಿಕ ಕಾರ್ಯಕರ್ತ ಬುಧವಾರ ರಾತ್ರಿ 10:30ರ ಸುಮಾರಿಗೆ ಜುಹುನಿಂದ ಕುರ್ಲಾಕ್ಕೆ ಉಬರ್ ಕ್ಯಾಬ್ ತೆಗೆದುಕೊಂಡಿದ್ದಾರೆ. ಪ್ರಯಾಣದ ಸಮಯದಲ್ಲಿ ಅವರು ತಮ್ಮ ಸ್ನೇಹಿತರೊಂದಿಗೆ (ಮೊಬೈಲ್ ಫೋನ್‌ನಲ್ಲಿ) ದೆಹಲಿಯ ಶಾಹೀನ್ ಬಾಗ್ ಪ್ರತಿಭಟನೆಯಲ್ಲಿ “ಲಾಲ್ ಸಲಾಮ್” ಘೋಷಣೆಯು ಜನರಿಗೆ ಹೆಚ್ಚು ಒಪ್ಪಿತವಾಗಿಲ್ಲ ಎಂಬ ವಿಷಯದ ಕುರಿತು ಚರ್ಚಿಸುತ್ತಿದ್ದರು.

ಇದನ್ನು ಕೇಳುತ್ತಿದ್ದ ಚಾಲಕ, ಸರ್ಕಾರ್‌ಗೆ ತಾನು ಎಟಿಎಂನಿಂದ ಹಣವನ್ನು ತೆಗೆದುಕೊಳ್ಳುತ್ತೇನೆ ಎಂದು ಕಾರು ನಿಲ್ಲಿಸಿದ್ದಾರೆ. ಆದರೆ ಚಾಲಕ ಇಬ್ಬರು ಪೊಲೀಸರೊಂದಿಗೆ ಹಿಂತಿರುಗಿದ್ದಾನೆ. ಪೊಲೀಸರು ಸರ್ಕಾರ್ ಅವರನ್ನು “ದಫ್ಲಿ” (ತಾಳವಾದ್ಯ) ಏಕೆ ಸಾಗಿಸುತ್ತಿದ್ದೀರಿ ಎಂದು ಕೇಳಿದರು ಮತ್ತು ಅವರ ವಿಳಾಸವನ್ನೂ ಕೇಳಿದ್ದಾರೆ.

ಸರ್ಕಾರ್ ಅವರು ಜೈಪುರದವರು ಮತ್ತು ಸಿಎಎ ವಿರೋಧಿ “ಮುಂಬೈ ಬಾಗ್” ಪ್ರತಿಭಟನೆಗೆ ಭೇಟಿ ನೀಡಿದ್ದರು ಎಂದು ಹೇಳಿದರು. ಅವರು ಪ್ರತಿಭಟನೆಯಲ್ಲಿ ಹಾಡು ಮತ್ತು ಘೋಷಣೆ ಕೂಗಲು ಅವರ ವಾದ್ಯವನ್ನು ಹೊತ್ತೊಯ್ಯುತ್ತಿದ್ದರು ಎಂದು ಅವರು ಹೇಳಿದ್ದಾರೆ..

ಇದನ್ನೂ ಓದಿ: ಉಬರ್‌ ಚಾಲಕನ ನೈತಿಕ ಪೊಲೀಸ್‌ಗಿರಿ : ಸಿಎಎ ಪ್ರತಿಭಟನಾಕಾರ ಮುಂಬೈ ಪೊಲೀಸ್‌ ವಶಕ್ಕೆ

ಹಲವು ಸುತ್ತಿನ ವಿಚಾರಣೆಯ ನಂತರ ಮುಂಜಾನೆ 1 ಗಂಟೆ ಸುಮಾರಿಗೆ ಮತ್ತೊಬ್ಬ ಕಾರ್ಯಕರ್ತ ಎಸ್ ಗೋಹಿಲ್ ಪೊಲೀಸ್ ಠಾಣೆಗೆ ಬಂದ ನಂತರ ಸರ್ಕಾರ್ ಅವರಿಗೆ ಅಲ್ಲಿಂದ ಹೋಗಲು ಅನುಮತಿ ನೀಡಲಾಯಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...