Homeಮುಖಪುಟಬಿಜೆಪಿ ಸೇರುವ ಊಹಾಪೋಹಕ್ಕೆ ತೆರೆ; ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಕಮಲ್ ನಾಥ್ ಭಾಗಿ

ಬಿಜೆಪಿ ಸೇರುವ ಊಹಾಪೋಹಕ್ಕೆ ತೆರೆ; ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಕಮಲ್ ನಾಥ್ ಭಾಗಿ

- Advertisement -
- Advertisement -

ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯ ಮಧ್ಯಪ್ರದೇಶದ ಲೆಗ್‌ನಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಕಮಲ್ ನಾಥ್ ಭಾಗವಹಿಸಲಿದ್ದಾರೆ ಎಂದು ಪಕ್ಷದ ಪದಾಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಕಮಲ್ ನಾಥ್ ಅವರು ಮಾರ್ಚ್ 2ರಂದು ಗ್ವಾಲಿಯರ್ ತಲುಪಲಿದ್ದು, ಮಾರ್ಚ್ 6 ರವರೆಗೆ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ.

ಯಾತ್ರೆಯು ಮಾರ್ಚ್ 2ರಂದು ನೆರೆಯ ರಾಜಸ್ಥಾನದಿಂದ ಮೊರೆನಾವನ್ನು ಪ್ರವೇಶಿಸುತ್ತದೆ; ಮಾರ್ಚ್ 6 ರಂದು ರಾಜಸ್ಥಾನಕ್ಕೆ ಮರು-ಪ್ರವೇಶಿಸುವ ಮೊದಲು ಗ್ವಾಲಿಯರ್, ಶಿವಪುರಿ, ಗುನಾ, ರಾಜ್‌ಗಢ, ಶಾಜಾಪುರ, ಉಜ್ಜಯಿನಿ, ಧಾರ್ ಮತ್ತು ರತ್ಲಂಗಳನ್ನು ಒಳಗೊಂಡಿದೆ.

ಕಮಲ್ ನಾಥ್ ಅವರು ಮತ್ತು ಅವರ ಚಿಂದ್ವಾರ ಸಂಸದ ಪುತ್ರ ನಕುಲ್ ನಾಥ್ ಅವರು ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು ಸೇರಲು ಯೋಜಿಸುತ್ತಿದ್ದಾರೆ ಎಂಬ ಊಹಾಪೋಹಗಳು ಜೋರಾಗಿ ಸದ್ದು ಮಾಡಿತ್ತು. ಈ ನಡುವೆ, ಕಮಲ್ ನಾಥ್ ಅವರ ಭದ್ರಕೋಟೆಯಾದ ಛಿಂದ್ವಾರಾದ ಹಲವಾರು ಕಾಂಗ್ರೆಸ್ ಸದಸ್ಯರು ಬುಧವಾರ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಯಾದವ್, ಅನೇಕರು ಆತಂಕದಲ್ಲಿದ್ದಾರೆ ಮತ್ತು ಅಂತಿಮವಾಗಿ ಬಿಜೆಪಿ ಸೇರುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ; ದೆಹಲಿ ಚಲೋ ಮೆರವಣಿಗೆ: ಹಿಸಾರ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಪೊಲೀಸರಿಂದ ಲಾಠಿ ಚಾರ್ಜ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ 20,000 ನಾಗರಿಕರಿಂದ ಚುನಾವಣಾ ಆಯೋಗಕ್ಕೆ ಪತ್ರ

0
ರಾಜಸ್ಥಾನದ ಬನ್ಸ್ವಾರಾದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣಗೈದಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಸುಮಾರು 20,000 ಮಂದಿ ಚುನಾವಣಾ ಆಯೋಗಕ್ಕೆ ಎರಡು ಪ್ರತ್ಯೇಕ ಪತ್ರಗಳನ್ನು...