Homeಮುಖಪುಟಬಿಜೆಪಿ ಮುಖಂಡ ಚಿನ್ಮಯಾನಂದ್ ವಿರುದ್ಧ ಅತ್ಯಾಚಾರದ ಆರೋಪ; ದೆಹಲಿಯಲ್ಲಿ ದೂರು ದಾಖಲಿಸಿದ ಯುವತಿ

ಬಿಜೆಪಿ ಮುಖಂಡ ಚಿನ್ಮಯಾನಂದ್ ವಿರುದ್ಧ ಅತ್ಯಾಚಾರದ ಆರೋಪ; ದೆಹಲಿಯಲ್ಲಿ ದೂರು ದಾಖಲಿಸಿದ ಯುವತಿ

- Advertisement -
- Advertisement -

ಬಿಜೆಪಿ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ್ ಅವರ ಮೇಲೆ ಯುವತಿಯೊಬ್ಬಳು ಅತ್ಯಾಚಾರದ ಆರೋಪ ಹೊರಿಸಿದ್ದಾರೆ. ಉತ್ತರ ಪ್ರದೇಶದ ಶಹಜಹಾನ್ಪುರದ ತನ್ನ ಮನೆಯಿಂದ ಒಂದು ವಾರದಿಂದ ನಾಪತ್ತೆಯಾಗಿದ್ದ ಆಕೆ ರಾಜಸ್ಥಾನದಲ್ಲಿ ಪತ್ತೆಯಾಗಿದ್ದು, ಚಿನ್ಮಯಾನಂದ್ ಅವರು ಒಂದು ವರ್ಷದಿಂದ ಅತ್ಯಾಚಾರ ಮತ್ತು ಶೋಷಣೆ ನಡೆಸಿದ್ದರು ಎಂದು ಆ ಕಾನೂನು ವಿದ್ಯಾರ್ಥಿನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮೂರು ಬಾರಿ ಸಂಸದ ಚಿನ್ಮಯಾನಂದ್ ನೇತೃತ್ವದ ಮಂಡಳಿಯು ನಡೆಸುವ ಕಾನೂನು ಕಾಲೇಜಿನಲ್ಲಿ 23 ವರ್ಷದ ಸಂತ್ರಸ್ತೆ ಕಾನೂನು ವಿದ್ಯಾರ್ಥಿಯಾಗಿದ್ದಳು. ಉತ್ತರ ಪ್ರದೇಶ ಪೊಲೀಸರು ದೂರು ದಾಖಲು ನಿರಾಕರಿಸಿದ್ದರಿಂದ ತಾನು ದೆಹಲಿಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಆಕೆ ಆರೋಪಿಸಿದ್ದಾಳೆ.

“ಸ್ವಾಮಿ ಚಿನ್ಮಯಾನಂದ್ ಒಂದು ವರ್ಷ ನನ್ನನ್ನು ಅತ್ಯಾಚಾರ ಎಸಗಿದರು ಮತ್ತು ದೈಹಿಕವಾಗಿ ಶೋಷಿಸಿದ್ದಾರೆ” ಎಂದು ಅವರು ಮುಖಕ್ಕೆ ಕಪ್ಪು ಬಣ್ಣದ ಬಟ್ಟೆ ಕಟ್ಟಿಕೊಂಡು ಮಾಧ್ಯಮಗಳ ಮುಂದೆ ಆರೋಪ ಮಾಡಿದ್ದಾರೆ.

“ದೆಹಲಿ ಪೊಲೀಸರು ಈ ದೂರನ್ನು ಲೋಧಿ ರಸ್ತೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ ಮತ್ತು ಅದನ್ನು ಶಹಜಹಾನಪುರ ಪೊಲೀಸರಿಗೆ ಕಳುಹಿಸಿದ್ದಾರೆ, ಅಲ್ಲಿ ಅವರು ಅತ್ಯಾಚಾರ ಪ್ರಕರಣವನ್ನು ದಾಖಲಿಸಿರಲಿಲ್ಲ” ಎಂದು ಆಕೆ ಹೇಳಿದ್ದಾಳೆ.

ಗೌಪ್ಯ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಈಕೆಯ ದೂರನ್ನು ಆಲಿಸಿತ್ತು ಮತ್ತು ಆರೋಪಗಳ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ಆದೇಶಿಸಿತ್ತು. “ಭಾನುವಾರ, ಎಸ್ಐಟಿ ಸುಮಾರು 11 ಗಂಟೆಗಳ ಕಾಲ ನನ್ನನ್ನು ಪ್ರಶ್ನಿಸಿದೆ. ಅತ್ಯಾಚಾರದ ಬಗ್ಗೆ ನಾನು ಅವರಿಗೆ ಹೇಳಿದ್ದೇನೆ. ನಾನು ಅವರಿಗೆ ಎಲ್ಲವನ್ನೂ ಹೇಳಿದ ನಂತರವೂ ಅವರು ಚಿನ್ಮಯಾನಂದ್ ಅವರನ್ನು ಇನ್ನೂ ಬಂಧಿಸಿಲ್ಲ” ಎಂದು ಸಂತ್ರಸ್ತೆ ಹೇಳಿದ್ದಾಳೆ.

“ಸಂತ ಸಮಾಜದ ದೊಡ್ಡ ನಾಯಕ” ಇತರ ಅನೇಕ ಹುಡುಗಿಯರ ಜೀವನವನ್ನು ನಾಶಪಡಿಸಿದ್ದಾನೆ ಮತ್ತು ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ” ಎಂದು ತನ್ನ ಫೇಸ್ಬುಕ್ ಪೋಸ್ಟ್ ನಲ್ಲಿ ಬರೆದು ಆಕೆ ಕಣ್ಮರೆಯಾಗಿದ್ದಳು. ಒಂದು ವಾರದ ನಂತರ ಆಗಸ್ಟ್ 30 ರಂದು ಆಕೆಯನ್ನು ರಾಜಸ್ಥಾನದಲ್ಲಿ ಪತ್ತೆಹಚ್ಚಲಾಗಿತ್ತು. ಇದೇ ಸಂದರ್ಭದಲ್ಲಿ ಆಕೆ ತನಗೆ ಸಹಾಯ ಮಾಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಿದ್ದರು.

ಈ ಮುಂಚೆ ಅವಳು ಚಿನ್ಮಯಾನಂದ್ ಹೆಸರೇಳದಿದ್ದರೂ, ಆಕೆಯ ತಂದೆ ಮಾತ್ರ ಪ್ರಭಾವಿ ರಾಜಕಾರಣಿ ಎಂದಿದ್ದರು ಮತ್ತು ಪೊಲೀಸರಿಗೆ ನೀಡಿದ ದೂರಿನಲ್ಲಿ ಅವನನ್ನು ಹೆಸರಿಸಿದ್ದಾರೆ. ಈ ಪ್ರಕರಣ ಸಾರ್ವಜನಿಕವಾಗುತ್ತಿದ್ದಂತೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರವಾದ ನಂತರವಷ್ಟೇ ಬಿಜೆಪಿಯ ಮಾಜಿ ಸಂಸದನ ಮೇಲೆ ಯುಪಿ ಪೊಲೀಸರು ಅಪಹರಣ ಮತ್ತು ಬೆದರಿಕೆಯ ಪ್ರಕರಣ ದಾಖಲಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...