Homeಕರ್ನಾಟಕBJP ಶಾಸಕ ಉಮಾನಾಥ್ ಆರೋಪಿಗಳ ಬೆಂಬಲಕ್ಕೆ ನಿಂತಿದ್ದಾರೆ, ಈಗೇನಂತೀರಿ?: ಸಿಎಂಗೆ ಕಾಂಗ್ರೆಸ್ ಪ್ರಶ್ನೆ

BJP ಶಾಸಕ ಉಮಾನಾಥ್ ಆರೋಪಿಗಳ ಬೆಂಬಲಕ್ಕೆ ನಿಂತಿದ್ದಾರೆ, ಈಗೇನಂತೀರಿ?: ಸಿಎಂಗೆ ಕಾಂಗ್ರೆಸ್ ಪ್ರಶ್ನೆ

- Advertisement -
- Advertisement -

ರಾಜ್ಯದಲ್ಲಿ ಅನೈತಿಕ ಪೊಲೀಸ್‌ಗಿರಿ ನಿರಾತಂಕವಾಗಿ ಮುಂದುವರೆದಿದ್ದು, ಬೆಂಗಳೂರಿನ ಘಟನೆಯ ಸಂದರ್ಭದಲ್ಲಿ ‘ಅನೈತಿಕ ಪೊಲೀಸ್‌ಗಿರಿಯನ್ನು ಸಹಿಸುವುದಿಲ್ಲ’ ಎಂದು ಅಬ್ಬರಿಸಿ ಬೊಬ್ಬಿರಿದಿದ್ದ ಸಿಎಂ ಹಾಗೂ ಗೃಹಚಿವರು ಈಗ ಮೌನಕ್ಕೆ ಜಾರಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ನಿಮ್ಮ ಶಾಸಕ ಉಮಾನಾಥ್ ಕೋಟ್ಯಾನ್ ಆರೋಪಿಗಳ ಬೆಂಬಲಕ್ಕೆ ನಿಂತಿದ್ದಾರೆ, ಈಗೇನಂತೀರಿ? ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಕಡೆಗೆ ತೆರಳುತ್ತಿದ್ದ ಮುಸ್ಲಿಂ ವ್ಯಕ್ತಿಯ ಕಾರಿನಲ್ಲಿ ಹಿಂದೂ ಮಹಿಳೆಯರಿಬ್ಬರು ಪ್ರಯಾಣಿಸುತ್ತಿದ್ದರು ಎಂಬ ಕಾರಣಕ್ಕೆ ಬಜರಂಗದಳದ ದುಷ್ಕರ್ಮಿಗಳು ಅವರನ್ನು ತಡೆದು ಹಲ್ಲೆ ನಡೆಸಿದ್ದರು. ಘಟನೆಗೆ ಸಂಬಂಧಿಸಿದಂತೆ ಸಮಿತ್ ರಾಜ್ ಮತ್ತು ಸಂದೀಪ್ ಪೂಜಾರಿ ಎಂಬವರನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ಮಂಗಳೂರು: ಮತ್ತೊಂದು ಅನೈತಿಕ ಪೊಲೀಸ್‌ಗಿರಿ; ಇಬ್ಬರು ಬಜರಂಗದಳ ಕಾರ್ಯಕರ್ತರ ಬಂಧನ

ಇದೀಗ ಪೊಲೀಸ್ ಠಾಣೆಯಲ್ಲಿ ಬಜರಂಗದಳ ಕಾರ್ಯಕರ್ತರ ಜೊತೆಗೆ ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಇರುವ ಚಿತ್ರ ವೈರಲ್ ಆಗಿದೆ. ಈ ಚಿತ್ರವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್ ಅದನ್ನು ಪ್ರಶ್ನಿಸಿದೆ.

 

“ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ರಾತ್ರೋರಾತ್ರಿ ಠಾಣೆ ನುಗ್ಗಿ ಮೂಡುಬಿದಿರೆ ಅನೈತಿಕ ಪೊಲೀಸ್‌ಗಿರಿ ಘಟನೆಯ ಆರೋಪಿಗಳನ್ನು ಕರೆತಂದಿದ್ದೇಕೆ? ಮಹಿಳೆಯರ ಮೇಲೆ ದೌರ್ಜನ್ಯ ಎಸಗುವುದು, ಎಸಗಿದವರ ರಕ್ಷಣೆಗೆ ನಿಲ್ಲುವ ಬಿಜೆಪಿಯ ಹಳೆಯ ಚಾಳಿ. ಕಾನೂನು ಸುವ್ಯವಸ್ಥೆಯ ಕುಸಿತಕ್ಕೆ ಹಾಗೂ ಬಿಜೆಪಿ ಶಾಸಕರ ಈ ವರ್ತನೆಗೆ ಬೊಮ್ಮಾಯಿ ಅವರು ಉತ್ತರಿಸಬೇಕು” ಎಂದು ಕಾಂಗ್ರೆಸ್ ಹೇಳಿದೆ.

ಇದನ್ನೂ ಓದಿ: ಪುತ್ತೂರು-ಸುಳ್ಯದಲ್ಲಿ ಅನೈತಿಕ ಪೊಲೀಸ್‌ಗಿರಿ ಉಪದ್ರವ; ಜಿ.ಪಂ-ತಾ.ಪಂ ಚುನಾಚಣೆಗಾಗಿ ಈ ಆಟ?

“ರಾಜ್ಯದಲ್ಲಿ ಜಾತಿ, ಧರ್ಮಗಳ ಹೆಸರಲ್ಲಿ ಒಡಕು ಮೂಡಿಸುವ, ವಿಭಜಿಸಿ ಆಳುವ ಕೆಲಸ ಮಾಡುತ್ತಿದೆ ಬಿಜೆಪಿ. ಈ ವಿಭಜನಾ ಮನಸ್ಥಿತಿಯ ಬಿಜೆಪಿಯೇ ನಿಜವಾದ ‘ತುಕಡೆ ಗ್ಯಾಂಗ್’. ಅನೈತಿಕ ಪೊಲೀಸ್‌ಗಿರಿ ನಡೆಸುವವರ ಸಹಕಾರಕ್ಕೆ ನಿಂತು ರಾಜ್ಯದಲ್ಲಿ ತಾಲಿಬಾನ್ ಸಂಸ್ಕೃತಿ ಸ್ಥಾಪಿಸುತ್ತಿದೆ ಸರ್ಕಾರ. ಬೊಮ್ಮಾಯಿ ಅವರೇ, ನಿಮ್ಮ ‘ಕಠಿಣ ಕ್ರಮ’ ಎಲ್ಲಿ ಹೋಯ್ತು!?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಸುಮಾರು ಆರರಿಂದ ಎಂಟು ಜನ ಬಜರಂಗದಳದ ದುಷ್ಕರ್ಮಿಗಳು ಬೈಕ್‌ಗಳಲ್ಲಿ ಸಂತ್ರಸ್ತರನ್ನು ಹಿಂಬಾಲಿಸಿ ಕಾರನ್ನು ತಡೆದಿದ್ದಾರೆ. ಹಿಂದೂ ಮಹಿಳೆಯರನ್ನು ಕಾರಿನಿಂದ ಇಳಿಯುವಂತೆ ಕೈಹಿಡಿದು ಹೊರಗೆ ಎಳೆದಿದ್ದು, ಮುಸ್ಲಿಮರ ಕಾರಿನಲ್ಲಿ ಪ್ರಯಾಣಿಸಿದ್ದಕ್ಕಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೈದಿದ್ದಾರೆ ಎಂದು ಮಹಿಳೆಯರು ದೂರಿದ್ದಾರೆ ಎಂದು ವಾರ್ತಾಭಾರತಿ ಪತ್ರಿಕೆ ವರದಿ ಮಾಡಿತ್ತು.

ಜೊತೆಗೆ ಹಿಂದೂ ಮಹಿಳೆಯರನ್ನು ಕಾರಿನಲ್ಲಿ ಕರೆದುಕೊಂಡು ಕೊಂಡುಹೋದ ಮುಸ್ಲಿಂ ದಂಪತಿಗಳಿಗೂ ದುಷ್ಕರ್ಮಿಗಳು ನಿಂದಿಸಿ, ಹಲ್ಲೆಗೈದಿದ್ದಾರೆ ಎಂದು ಪತ್ರಿಕೆ ವರದಿ ಹೇಳಿದೆ. ಘಟನೆಯ ಬಗ್ಗೆ ಮೂಡುಬಿದ್ರಿ ಪೊಲೀಸರು ಐಪಿಸಿ ಸೆಕ್ಷನ್ 354, 153 (ಎ), 504 ಮತ್ತು 506 ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಅಕ್ರಮ, ಅನೈತಿಕ, ಅಶ್ಲೀಲ ಮಾರ್ಗಗಳ ಮೂಲಕ ಸಿಎಎ ಪರ ಮಿಸ್‌ಕಾಲ್‌ ಸಂಗ್ರಹಣೆ: ಬೆಳಿಕಿಗೆ ಬಂದ ಬಿಜೆಪಿ ಕಾರ್ಯಕರ್ತರ ಬಂಡವಾಳ  

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈಗ ತಾವು ಓದುಗರ ಪತ್ರ / ಹೊಗಳಿಕೆ ತೆಗಳಿಕೆ ವಿಭಾಗ ಸಂಪೂರ್ಣ ಬಂದ್ ಮಾಡಿರುವುದು ಖೇದಕರ.
    ತಮ್ಮ ಪತ್ರಿಕೆಯ ಓದುಗರು ಯಾರೂ ಈಗ ತಮಗೆ ಪತ್ರ /ಲೇಖನ ಬರೆಯುತ್ತಿಲ್ಲವೇ?

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದ 2,200ಕ್ಕೂ...

0
ರಾಜಸ್ಥಾನದ ಬನ್ಸ್ವಾರದಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆಗಳನ್ನು ನೀಡಿದ ಬಿಜೆಪಿಯ ಸ್ಟಾರ್ ಪ್ರಚಾರಕ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ 2,200ಕ್ಕೂ ಹೆಚ್ಚು ನಾಗರಿಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದರೆ...