Homeಮುಖಪುಟತನಗೇ ಮತ ಹಾಕುವಂತೆ ಮುಸ್ಲಿಮರಿಗೆ ಧಮ್ಕಿ ಹಾಕಿದ ಬಿಜೆಪಿ ಶಾಸಕ ಪ್ರಿತಂ ಗೌಡ : ವಿಡಿಯೋ...

ತನಗೇ ಮತ ಹಾಕುವಂತೆ ಮುಸ್ಲಿಮರಿಗೆ ಧಮ್ಕಿ ಹಾಕಿದ ಬಿಜೆಪಿ ಶಾಸಕ ಪ್ರಿತಂ ಗೌಡ : ವಿಡಿಯೋ ವೈರಲ್

- Advertisement -
- Advertisement -

ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ಶ್ರೀನಗರದ ಮುಸ್ಲಿಂ ಮತದಾರರಿಗೆ ತನಗೇ ಮತ ಹಾಕುವಂತೆ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕಳೆದ ವಾರ ರಾತ್ರಿ ಪ್ರೀತಂ ಗೌಡ ಶ್ರೀನಗರದ ಸ್ಥಳೀಯ ಮುಸ್ಲಿಂರನ್ನು ಉದ್ದೇಶಿಸಿ ಮಾತನಾಡುವಾಗ, “ದುಡಿದವರಿಗೆ ಮತ ಹಾಕಬೇಕು, ಬಾಯಲ್ಲಿ ಅಣ್ಣಾ ಎಂದು ಹೇಳಿ ಕೊನೆಗೆ ಬಿಜೆಪಿಗೆ ಮತ ಹಾಕುವುದಿಲ್ಲ ಎಂದರೆ ಕೆಲಸ ಮಾಡಿದವರಿಗೆ ಕೋಪ ಬರುತ್ತದೆ” ಎಂದಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನಗೆ ಮತ ಹಾಕದಿದ್ದರೆ ನಿಮ್ಮ ಕೆಲಸ ಏನೂ ಆಗುವುದಿಲ್ಲ.
ಈ ಹಿಂದೆ ವಿಧಾನಸಭೆ, ಲೋಕಸಭೆ ಮತ್ತು ನಗರಸಭೆ ಚುನಾವಣೆಗಳಲ್ಲಿ ನಮಗೆ ಮತ ಹಾಕಿಲ್ಲ. ಮುಸ್ಲಿಂ ಸಮುದಾಯ ಮೂರು ಬಾರಿ ಕೈ ಕೊಟ್ಟಿದ್ದಾರೆ ಎನ್ನುವುದು ವಿಡಿಯೋದಲ್ಲಿ ದಾಖಲಾಗಿದೆ.

ನೀವು ಕೂಲಿಗೆ ಹೋಗುವವರು ಅನ್ನುತ್ತೀರಿ. ಬೆಳಿಗ್ಗೆಯಿಂದ ಕೆಲಸ ಮಾಡಿ ಸಂಜೆ ಕೂಲಿ ಕೊಡದಿದ್ದರೆ ನಿಮಗೆ ಕೋಪ ಬರುತ್ತದೆ ಅಲ್ಲವೇ? ಹಾಗೆಯೇ ನನಗೂ ಸಹ. ಆದರೆ ಕೆಲಸ ಮಾಡಿದ ಸಂದರ್ಭದಲ್ಲಿ ಸಹಾಯ ಮಾಡದಿದ್ದರೆ ಈ ಕಡೆ ತಿರುಗಿ ನೋಡಬಾರದು ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ ಎಂದರು.

ಐದು ವರ್ಷಗಳ ನಂತರ ಮತ್ತೆ ಚುನಾವಣೆ ಬರಲಿದೆ. ನೀವು ನನಗೆ ಕೈ ಕೊಟ್ಟರೆ, ನಾನು ಕೈ, ಕೈಕಾಲು ಕೊಡುತ್ತೀನಿ. ಏಟಿಗೆ ಸಿಗುವುದಿಲ್ಲ. ನನ್ನ ಮನೆಗೆ ಬಂದರೆ ಕಾಫಿ ಕುಡಿಸಿ ಕಳುಹಿಸುತ್ತೇನೆ, ಯಾವುದೇ ಕೆಲಸ ಮಾಡಿಕೊಡುವುದಿಲ್ಲ. ಆ ತೀರ್ಮಾನಕ್ಕೆ ಬರದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

“ರಸ್ತೆ, ಚರಂಡಿ, ನೀರು ಒದಗಿಸುವುದು ನನ್ನ ಕರ್ತವ್ಯ. ಶಾಸಕನಾಗಿ ಅದನ್ನು ನಾನು ಮಾಡುತ್ತೇನೆ. ಬೇರೆ ಯಾವುದೇ ಕೆಲಸಗಳನ್ನು ಪ್ರತ್ಯೇಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಇದರಲ್ಲಿ ಯಾವುದೇ ಮುಲಾಜಿಲ್ಲ. ಇವತ್ತು ನೀವೆಲ್ಲರೂ ಸೇರಿ ಶಾಸಕರಿಗೆ ಒಂದೂವರೆ ಸಾವಿರ ಮತ ಕೊಡುತ್ತೇನೆ ಎಂದರೆ ಇಲ್ಲಿಂದ ಹೋಗುತ್ತೇನೆ
ತೀರ್ಮಾನಿಸಿ” ಎಂದು ಸ್ಥಳಿಯ ಮುಸ್ಲಿಮರಿಗೆ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ನಮ್ಮನ್ನು ಬಂಧಿಸಿ ಬೊಮ್ಮಾಯಿ ತಮ್ಮ ಕಾಲ ಮೇಲೆ ಕಲ್ಲು ಹಾಕಿಕೊಂಡಿದ್ದಾರೆ: ಅಂಬಣ್ಣ ಅರೋಲಿಕರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕುವಂತೆ...

0
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರಿ ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ " ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ...