Homeಮುಖಪುಟಭಾರತ್‌ ಜೋಡೋ ನ್ಯಾಯ ಯಾತ್ರೆ: ಬಿಜೆಪಿ-ಆರೆಸ್ಸೆಸ್‌ನಿಂದ ಅಸ್ಸಾಂನ ಭಾಷೆ, ಸಂಸ್ಕೃತಿ ಅಳಿಸಲು ಯತ್ನ; ರಾಹುಲ್‌ ಗಾಂಧಿ...

ಭಾರತ್‌ ಜೋಡೋ ನ್ಯಾಯ ಯಾತ್ರೆ: ಬಿಜೆಪಿ-ಆರೆಸ್ಸೆಸ್‌ನಿಂದ ಅಸ್ಸಾಂನ ಭಾಷೆ, ಸಂಸ್ಕೃತಿ ಅಳಿಸಲು ಯತ್ನ; ರಾಹುಲ್‌ ಗಾಂಧಿ ವಾಗ್ಧಾಳಿ

- Advertisement -
- Advertisement -

ಅಸ್ಸಾಂ ಸರಕಾರದ ತೀವ್ರ ಜಟಾಪಟಿಯ ನಡುವೆ ಅಸ್ಸಾಂನಲ್ಲಿ ಕಾಂಗ್ರೆಸ್‌ನ ಭಾರತ್‌ ಜೋಡೋ ನ್ಯಾಯಯಾತ್ರೆ ಮುಂದುವರಿದಿದ್ದು, ಬಿಲಾಸ್ಪರಾ ಧುಬ್ರಿಗೆ ಯಾತ್ರೆ ತಲುಪಿದೆ. ಧುಭ್ರಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ರಾಹುಲ್‌ ಗಾಂಧಿ ಮಾತನಾಡಲಿದ್ದಾರೆ.

ಇದಕ್ಕೂ ಮೊದಲು ಬಾರ್ಪೇಟಾ ಜಿಲ್ಲೆಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ಅಸ್ಸಾಂ ಸಿಎಂ ದೇಶದ ಅತಿಭ್ರಷ್ಟ ಸಿಎಂ ಎಂದು ಪುನರುಚ್ಚರಿಸಿದ್ದಾರೆ. ಹಿಮಾಂತ ಬಿಸ್ವ ಶರ್ಮಾಗೆ ಕೇಸ್ ಹಾಕುವ ಮೂಲಕ ನನ್ನನ್ನು ಬೆದರಿಸಬಹುದು ಎಂಬ ಆಲೋಚನೆ ಹೇಗೆ ಬಂದಿದೆಯೋ ಗೊತ್ತಿಲ್ಲ. ಅವರು ಎಷ್ಟು ಸಾಧ್ಯವೋ ಅಷ್ಟು ಕೇಸ್‌ ದಾಖಲಿಸಲಿ, ಇನ್ನೂ 25 ಕೇಸ್ ದಾಖಲು ಮಾಡಿ, ಬಿಜೆಪಿ-ಆರೆಸ್ಸೆಸ್‌ಗೆ ನನ್ನನ್ನು ಬೆದರಿಸಲು ಸಾಧ್ಯವಿಲ್ಲ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಬಿಜೆಪಿ-ಆರೆಸ್ಸೆಸ್‌ ಅಸ್ಸಾಂನ ಭಾಷೆ, ಸಂಸ್ಕೃತಿಯನ್ನು ಅಳಿಸಲು ಯತ್ನಸುತ್ತಿದೆ, ಅವರು ಅಸ್ಸಾಂನ್ನು ನಾಗ್ಪುರದಿಂದ ನಡೆಸಲು ಬಯಸುತ್ತಾರೆ, ಆದರೆ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ, ಅಸ್ಸಾಂನ್ನು ಅಸ್ಸಾಂನಿಂದ ಮಾತ್ರವೇ ನಡೆಸಲಾಗುವುದು, ಅವರು 24 ಗಂಟೆಯೂ ಭಯ ಮತ್ತು ದ್ವೇಷವನ್ನು ಹರಡುತ್ತಾರೆ, ಅಸ್ಸಾಂನಲ್ಲಿ ಭಯ ಮತ್ತು ದ್ವೇಷ ಹರಡಿ ನಿಮ್ಮ ಭೂಮಿಯನ್ನು ಕದಿಯುತ್ತಾರೆ. ನಿಮ್ಮ ಬಳಿ ವೀಳ್ಯದೆಲೆ ಇದ್ದರೂ ಸುಪಾರಿ ದಂಧೆ ಇವರದ್ದೇ. ಅವರು ನಿಮ್ಮ ಜೇಬು ಲೂಟಿ ಮಾಡುತ್ತಾರೆ, ಇದು ಅವರ ಕೆಲಸ. ಅವರು ದೇಶದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಎಂದು ಅಸ್ಸಾಂ ಸಿಎಂ ಹಿಮಾಂತ ಬಿಸ್ವ ಶರ್ಮಾ ವಿರುದ್ಧ ರಾಹುಲ್‌ ಗಾಂಧಿ ವಾಗ್ಧಾಳಿ ನಡೆಸಿದ್ದಾರೆ.

ಅವರು ದ್ವೇಷವನ್ನು ಹರಡುತ್ತಾರೆ, ನೀವು ಬೇರೆಡೆ ನೋಡಿದಾಗ ಅವರು ನಿಮ್ಮ ಪಾಕೆಟ್‌ನ್ನು ಲೂಟಿ ಮಾಡುತ್ತಾರೆ. ನೀವು ಮಾದ್ಯಮ ಅಥವಾ ಟಿವಿ ನೋಡಿದಾಗ, ಮುಖ್ಯಮಂತ್ರಿ ಟಿವಿ ಹಿಂದೆ ಇರುತ್ತಾರೆ. ಮಾಧ್ಯಮಗಳು ನಿಮಗೆ ಏನೇ ಹೇಳಿದರೂ ಅಸ್ಸಾಂ ಸಿಎಂ ಅವರಿಗೆ ತಿಳಿಸಿದ್ದನ್ನೇ ಹೇಳಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಅಧಿಕಾರ ಅಮಿತ್ ಶಾ ಕೈಯಲ್ಲಿದೆ. ಹಿಮಂತ ಬಿಸ್ವಾ ಶರ್ಮಾ ಅಮಿತ್ ಶಾ ವಿರುದ್ಧ ಏನಾದರೂ ಹೇಳುವ ಧೈರ್ಯ ಮಾಡಿದರೆ, ಅವರನ್ನು ಎರಡು ನಿಮಿಷಗಳಲ್ಲಿ ಪಕ್ಷದಿಂದ ಹೊರಹಾಕಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಅಸ್ಸಾಂನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆ ಪೊಲೀಸರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಇದಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ಕನ್ಹಯ್ಯಾ ಕುಮಾರ್ ಮತ್ತು ಪಕ್ಷದ ಇತರ ನಾಯಕರು ಮತ್ತು ಕಾರ್ಯಕರ್ತರ ವಿರುದ್ಧ ಹಿಂಸಾಚಾರ, ಪ್ರಚೋದನೆ, ಹಲ್ಲೆ ಕುರಿತು ಪ್ರಕರಣವನ್ನು ದಾಖಲಿಸಲಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ,  ಹಿಂಸಾಚಾರ, ಪ್ರಚೋದನೆ, ಸಾರ್ವಜನಿಕ ಆಸ್ತಿಗೆ ಹಾನಿ ಮತ್ತು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ಕನ್ಹಯ್ಯಾ ಕುಮಾರ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. PDPP ಕಾಯಿದೆಯ 120(B)143/147/188/283/353/ 332/333/427 IPC R/W ಸೆಕ್ಷನ್ 3 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದರು.

ಭಾರತ್‌ ಜೋಡೋ ನ್ಯಾಯ ಯಾತ್ರೆ ಜ.14ರಂದು ಮಣಿಪುರದಿಂದ ಪ್ರಾರಂಭವಾಗಿತ್ತು. ಇದೀಗ ಯಾತ್ರೆಯ ಅಸ್ಸಾಂನಲ್ಲಿ ಮುಂದುವರಿಯುತ್ತಿದೆ. ಜನವರಿ 25ರವರೆಗೆ ಅಸ್ಸಾಂನಲ್ಲಿ ಯಾತ್ರೆ ಮುಂದುವರಿಯಲಿದೆ.

ಇದನ್ನು ಓದಿ: ಬಾಬರಿ ಮಸೀದಿ ಧ್ವಂಸದ ದಿನ ‘ಸಂಭ್ರಮಾಚರಣೆ’ ಮಾಡಿದ್ದ IAS ಅಧಿಕಾರಿಗಳು: ವಿವಾದ ಸೃಷ್ಟಿಸಿದ ಹಿರಿಯ ಅಧಿಕಾರಿಯ ಪೋಸ್ಟ್‌…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...