Homeಮುಖಪುಟರಾಮ ಈಗ ಇದ್ದಿದ್ದರೆ ಆತನಿಗೂ ಪಕ್ಷ ಸೇರುವಂತೆ ಇಡಿ-ಸಿಬಿಐ ಅನ್ನು ಬಿಜೆಪಿ ಕಳುಹಿಸುತ್ತಿತ್ತು: ಕೇಜ್ರಿವಾಲ್

ರಾಮ ಈಗ ಇದ್ದಿದ್ದರೆ ಆತನಿಗೂ ಪಕ್ಷ ಸೇರುವಂತೆ ಇಡಿ-ಸಿಬಿಐ ಅನ್ನು ಬಿಜೆಪಿ ಕಳುಹಿಸುತ್ತಿತ್ತು: ಕೇಜ್ರಿವಾಲ್

- Advertisement -
- Advertisement -

‘ಈ ಯುಗದಲ್ಲಿ ರಾಮನು ಇದ್ದಿದ್ದರೆ, ಕೇಸರಿ ಪಕ್ಷಕ್ಕೆ ಸೇರಲು ಅಥವಾ ಜೈಲಿಗೆ ಹೋಗುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರವು ಶ್ರೀರಾಮನಿಗೂ ಜಾರಿ ನಿರ್ದೇಶನಾಲಯ (ಇಡಿ) ನಂತಹ ಕೇಂದ್ರೀಯ ಸಂಸ್ಥೆಗಳನ್ನು ಕಳುಹಿಸುತ್ತಿತ್ತು’ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಭಗವಾನ್ ರಾಮನು ಇಂದು ಈ ಯುಗದಲ್ಲಿದ್ದರೆ, ಅವರು (ಬಿಜೆಪಿ) ಇಡಿ ಮತ್ತು ಸಿಬಿಐ ಅನ್ನು ಅವರ ಮನೆಗೆ ಕಳುಹಿಸುತ್ತಿದ್ದರು. ನೀವು ಬಿಜೆಪಿಗೆ ಬರುತ್ತೀರಾ ಅಥವಾ ನೀವು ಜೈಲಿಗೆ ಹೋಗುತ್ತೀರಾ? ಎಂದು ಬಂದೂಕುಗಳನ್ನು ಇಟ್ಟುಕೊಂಡು ಕೇಳುತ್ತಿದ್ದರು’ ಎಂದು  ಕೇಜ್ರಿವಾಲ್ ಶನಿವಾರ ದೆಹಲಿ ವಿಧಾನಸಭೆಯಲ್ಲಿ ಮಾತನಾಡುತ್ತಾ ಹೇಳಿದರು.

ಕೇಜ್ರಿವಾಲ್ ಮತ್ತು ಜಾರಿ ನಿರ್ದೇಶನಾಲಯದ ನಡುವಿನ ಹಗ್ಗಜಗ್ಗಾಟ ಮುಂದುವರಿದಿರುವಂತೆಯೇ ಆಮ್ ಆದ್ಮಿ ಪಕ್ಷದ ವರಿಷ್ಠರ ಹೇಳಿಕೆಗಳು ಬಂದಿದ್ದು, ದೆಹಲಿ ಮುಖ್ಯಮಂತ್ರಿಗೆ ಕೇಂದ್ರ ತನಿಖಾ ಸಂಸ್ಥೆಗಳು ಸಮನ್ಸ್‌ ನೀಡುವುದನ್ನು ಮುಂದುವರೆಸಿದ್ದಾರೆ.

“ಸರ್ಕಾರಿ ಸಂಸ್ಥೆಗಳನ್ನು ಹೆಚ್ಚಿಸಲು, ಅಗತ್ಯ ಸೇವೆಗಳನ್ನು ಒದಗಿಸಲು ಮತ್ತು ವೃದ್ಧರಿಗೆ ತೀರ್ಥಯಾತ್ರೆಗಳಿಗೆ ಅನುಕೂಲವಾಗುವಂತೆ ಎಎಪಿ ಉಪಕ್ರಮಗಳನ್ನು ಮುನ್ನಡೆಸುತ್ತಿದ್ದರೆ, ಬಿಜೆಪಿಯ ವಿಧಾನವು ಇಡಿ ಮತ್ತು ಸಿಬಿಐನಂತಹ ಸಂಸ್ಥೆಗಳ ಮೂಲಕ ವಿರೋಧ ಸರ್ಕಾರಗಳ ಪ್ರಯತ್ನಗಳಿಗೆ ಅಡ್ಡಿಯುಂಟುಮಾಡುತ್ತದೆ” ಎಂದು ಕೇಜ್ರಿವಾಲ್ ಅವರು ಹೇಳಿದರು.

ವಿಧಾನಸಭೆಯಲ್ಲಿ ಬಜೆಟ್ ಕುರಿತು ಚರ್ಚೆ ನಡೆಸುತ್ತಿರುವಾಗಲೇ, ಅಬಕಾರಿ ನೀತಿಯ ಪ್ರಕರಣದಲ್ಲಿ ಪ್ರಸ್ತುತ ಜೈಲು ಪಾಲಾಗಿರುವ ಮಾಜಿ ಹಣಕಾಸು ಸಚಿವ ಮನೀಶ್ ಸಿಸೋಡಿಯಾ ಅವರನ್ನು ಕೇಜ್ರಿವಾಲ್ ನೆನಪಿಸಿಕೊಂಡರು. ಸಿಸೋಡಿಯಾ ಅವರು ಮುಂದಿನ ವರ್ಷದ ಬಜೆಟ್ ಅನ್ನು ಮಂಡಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

“ನಾವು ಬಜೆಟ್ ಅನ್ನು ಚರ್ಚಿಸುತ್ತಿದ್ದೇವೆ ಮತ್ತು ಇಂದು ಹತ್ತನೇ ಬಜೆಟ್‌ನಲ್ಲಿ ನಾವು ಮನೀಶ್ ಸಿಸೋಡಿಯಾ ಅವರನ್ನು ನೆನಪಿಸಿಕೊಳ್ಳುತ್ತೇವೆ. ಇದಕ್ಕೂ ಮುನ್ನ ಮನೀಶ್ ಸಿಸೋಡಿಯಾ ಅವರು ವಿಧಾನಸಭೆಯಲ್ಲಿ 9 ಬಜೆಟ್ ಮಂಡಿಸಿದ್ದು, ಮುಂದಿನ ವರ್ಷದ ಬಜೆಟ್ ಮಂಡಿಸುತ್ತಾರೆ’ ಎಂದು ಆಶಿಸುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.

ಈ ನಡುವೆ, ರಾಜಕೀಯ ಕಾರಣಗಳಿಗಾಗಿ ಭಗವಾನ್ ರಾಮನ ಹೆಸರನ್ನು ಕೇಜ್ರಿವಾಲ್ ತೆಗೆದುಕೊಂಡಿದ್ದಾರೆ ಎಂದು ಟೀಕಿಸುವ ಮೂಲಕ ಬಿಜೆಪಿ ತಿರುಗೇಟು ನೀಡಿದೆ. ಇದು ಕೋಟ್ಯಂತರ ಭಕ್ತರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಹೇಳಿದೆ. ‘ಸಹಾನುಭೂತಿ ಪಡೆಯಲು ಎಎಪಿ ನಾಯಕರು ಪದೇ ಪದೇ ರಾಮನ ಹೆಸರನ್ನು ಬಳಸುತ್ತಿರುವುದು ವಿಷಾದನೀಯ’ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಹೇಳಿದ್ದಾರೆ.

“ರಾಜಕೀಯ ಕಾರಣಗಳಿಗಾಗಿ ಭಗವಾನ್ ರಾಮನ ಹೆಸರನ್ನು ಪ್ರತಿ ಬಾರಿ ತೆಗೆದುಕೊಂಡಾಗಲೂ, ಇಡಿ ನೋಟೀಸ್ ಬಗ್ಗೆ ಮಾತನಾಡುವಾಗಲೂ ಅವರು ಶ್ರೀರಾಮನ ಭಕ್ತರಾಗಿರುವ ಕೋಟ್ಯಂತರ ಮತದಾರರ ಭಾವನೆಗಳನ್ನು ನೋಯಿಸುತ್ತಾರೆ ಎಂದು ಕೇಜ್ರಿವಾಲ್ ತಿಳಿದಿರಬೇಕು’ ಎಂದು ಸಚ್‌ದೇವ ಹೇಳಿದರು.

ಇದನ್ನೂ ಓದಿ; ಸಂವಿಧಾನ ನಾಶವೆ ನರೇಂದ್ರ ಮೋದಿ ಮತ್ತು ಬಿಜೆಪಿಯ ಅಂತಿಮ ಗುರಿ: ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...