ಕೊರೊನಾ ಕಾರಣಕ್ಕೆ ಸಿಲುಕಿರುವ ನಾಗರಿಕರನ್ನು ಮರಳಿ ಕರೆತರಲು ಭಾರತವು ಸೌದಿ ಅರೇಬಿಯಾಕ್ಕೆ ಖಾಲಿ ವಿಮಾನಗಳನ್ನು ಕಳುಹಿಸುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ಹೇಳಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳನ್ನು ತಡೆಯುವ ಪ್ರಯತ್ನವಾಗಿ ಭಾರತ ಸೇರಿದಂತೆ 20 ದೇಶಗಳ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಸೌದಿ ಅರೇಬಿಯಾ ಕಳೆದ ತಿಂಗಳು ನಿಷೇಧಿಸಿದ್ದವು.
“ಸೌದಿ ಅರೇಬಿಯಾ ಸೇರಿದಂತೆ ಕೆಲವು ದೇಶಗಳು ಭಾರತೀಯ ನಾಗರಿಕರ ಮೇಲೆ ಪ್ರವೇಶ ನಿರ್ಬಂಧಗಳನ್ನು ವಿಧಿಸಿವೆ. ಆದಾಗ್ಯೂ, ವಂದೇ ಭಾರತ್ ವಿಮಾನಗಳು ಸೌದಿ ಅರೇಬಿಯಾದಿಂದ ಭಾರತೀಯರನ್ನು ಮರಳಿ ಕರೆತರುತ್ತಿವೆ” ಎಂದು ಪುರಿ ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಹಣ ವಂಚನೆ ಆರೋಪಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಿ – ಇಂಗ್ಲೇಂಡ್ ಕೋರ್ಟ್ ತೀರ್ಪು
“ನಮ್ಮ ವಿಮಾನಗಳು ಸೌದಿ ಅರೇಬಿಯಾಕ್ಕೆ ಖಾಲಿಯಾಗಿ ಹಾರುತ್ತಿವೆ ಮತ್ತು ಅಲ್ಲಿ ಸಿಲುಕಿರುವ ನಮ್ಮ ನಾಗರಿಕರನ್ನು ಮರಳಿ ಕರೆತರುತ್ತಿವೆ. ಸೌದಿ ಅರೇಬಿಯಾದಿಂದ ಭಾರತೀಯರ ಪ್ರಯಾಣದ ನಿರ್ಬಂಧವನ್ನು ಸಡಿಲಿಸಿದ ನಂತರ ನಾವು ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವ ಪ್ರಯಾಣಿಕರನ್ನು ಸಾಗಿಸಲು ಸಾಧ್ಯವಾಗುತ್ತದೆ” ಎಂದು ಅವರು ನಂತರದ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
Our planes are flying empty to Saudi Arabia & are bringing back our citizens stranded there.
We will be able to carry Saudi Arabia bound passengers once the travel restrictions on Indians are eased by Saudi Arabia.@IndianEmbRiyadh @MEAIndia @airindiain @FlyWithIX @MoCA_GoI
— Hardeep Singh Puri (@HardeepSPuri) March 2, 2021
ಸೌದಿ ಅರೇಬಿಯಾದ ಆಂತರಿಕ ಸಚಿವಾಲಯವು ಒಂದು ತಿಂಗಳ ಹಿಂದೆ, ಭಾರತದ ವಿಮಾನಗಳಿಗೆ “ತಾತ್ಕಾಲಿಕ ಅಮಾನತು” ಘೋಷಿಸಿತು.
ಭಾರತವನ್ನು ಹೊರತುಪಡಿಸಿ, ಅಮೆರಿಕ, ಈಜಿಪ್ಟ್, ಪಾಕಿಸ್ತಾನ, ಅರ್ಜೆಂಟೀನಾ, ಜರ್ಮನಿ, ಐರ್ಲೆಂಡ್, ಸ್ವಿಟ್ಜರ್ಲೆಂಡ್, ಫ್ರಾನ್ಸ್, ಇಟಲಿ, ಪೋರ್ಚುಗಲ್, ಇಂಡೋನೇಷ್ಯಾ, ಜಪಾನ್, ದಕ್ಷಿಣ ಆಫ್ರಿಕಾ, ಯುನೈಟೆಡ್ ಕಿಂಗ್‌ಡಮ್, ಜರ್ಮನಿ, ಸ್ವೀಡನ್, ಲೆಬನಾನ್, ಯುಎಇ ಮತ್ತು ಟರ್ಕಿಯಿಂದ ವಿಮಾನಗಳನ್ನು ನಿಷೇಧಿಸಲಾಗಿದೆ.
ಕಳೆದ ವರ್ಷ ಡಿಸೆಂಬರ್ ಮತ್ತು ಸೆಪ್ಟೆಂಬರ್‌ನಲ್ಲಿ, ಹೆಚ್ಚುತ್ತಿರುವ ಕೊರೊನಾ ವೈರಸ್ ಸಾಂಕ್ರಮಿಕದ ತಪಾಸಣೆ ನಡೆಸಲು ದೇಶವು ಇದೇ ರೀತಿಯ ಕ್ರಮಗಳನ್ನು ಘೋಷಿಸಿತ್ತು. ಸೌದಿ ಅರೇಬಿಯಾವು ಮಾರ್ಚ್ 31 ರವರೆಗೆ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ನಿಷೇಧಿಸಿದೆ ಎಂದು ದೇಶದ ಸುದ್ದಿ ಸಂಸ್ಥೆ ಎಸ್‌ಪಿಎ ತಿಳಿಸಿದೆ.
ಇದನ್ನೂ ಓದಿ: ಭಾರತದ ಪವರ್‌ಗ್ರಿಡ್‌ಗಳು ಚೀನಾ ಹ್ಯಾಕರ್‌ಗಳ ಟಾರ್ಗೆಟ್!
