ಹಣ ವಂಚನೆ ಆರೋಪಿ ನೀರವ್‌ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಿ - ಇಂಗ್ಲೇಂಡ್ ಕೋರ್ಟ್‌ ತೀರ್ಪು
Pic Credit: Getty

14,000 ಕೋಟಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಹಗರಣದ ಆರೋಪಿ, ಆಭರಣ ವ್ಯಾಪಾರಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಇಂಗ್ಲೇಂಡ್ ನ್ಯಾಯಾಧೀಶರು ಗುರುವಾರ ತೀರ್ಪು ನೀಡಿದ್ದಾರೆ. ಸಾಂಕ್ರಾಮಿಕ ರೋಗ ಮತ್ತು ಭಾರತೀಯ ಜೈಲು ಪರಿಸ್ಥಿತಿಗಳಲ್ಲಿ ಅವರ ಮಾನಸಿಕ ಆರೋಗ್ಯವು ಹದಗೆಡುತ್ತಿದೆ ಎಂಬ ಆರೋಪಿಯ ವಾದಗಳನ್ನು ನ್ಯಾಯಾಲಯವು ತಳ್ಳಿಹಾಕಿದೆ.

“ನೀರವ್ ಮೋದಿಯವರನ್ನು ಭಾರತಕ್ಕೆ ಹಸ್ತಾಂತರಿಸುವುದು ಮಾನವ ಹಕ್ಕುಗಳಿಗೆ ಅನುಸಾರವಾಗಿದೆ ಎಂದು ನನಗೆ ತೃಪ್ತಿ ಇದೆ” ಎಂದು ಜಿಲ್ಲಾ ನ್ಯಾಯಾಧೀಶ ಸ್ಯಾಮ್ಯುಯೆಲ್ ಗೂಝೀ ಹೇಳಿದ್ದು, ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 1 ಮಿಲಿಯನ್ ವಂಚನೆ: ನೀರವ್ ಮೋದಿ ಸಹೋದರನ ಮೇಲೆ ಅಮೆರಿಕಾದಲ್ಲಿ ಪ್ರಕರಣ ದಾಖಲು!

ಹಸ್ತಾಂತರಿಸಿದರೆ ನೀರವ್ ಮೋದಿಗೆ ನ್ಯಾಯ ದೊರೆಯುವುದಿಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಧೀಶರು ಭಾರತ ಸರ್ಕಾರದ ಸಲ್ಲಿಕೆಗಳನ್ನು ಒಪ್ಪಿಕೊಂಡಿದ್ದಾರೆ. ಭಾರತದಲ್ಲಿ ನೀರವ್‌ ಮೋದಿಯು ವಿಚಾರಣೆ ಎದುರಿಸಬೇಕಾದ ಪ್ರಕರಣವು ಪ್ರಬಲವಾಗಿದೆ ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ.

“ನೀರವ್ ಮೋದಿ ನ್ಯಾಯಸಮ್ಮತ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆಂದು ನಾನು ಒಪ್ಪುವುದಿಲ್ಲ. ಈ ವ್ಯವಹಾರಗಳಲ್ಲಿ ಅಪ್ರಾಮಾಣಿಕತೆಯ ಪ್ರಕ್ರಿಯೆ ಇದೆ” ಎಂದು ನ್ಯಾಧೀಶರು ಹೇಳಿದ್ದಾರೆ.

49 ವರ್ಷದ ನೀರವ್ ಮೋದಿ, ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ನೈರುತ್ಯ ಲಂಡನ್‌ನ ವಾಂಡ್ಸ್‌ವರ್ತ್ ಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಿದ್ದರು. ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪನ್ನು ಇಂಗ್ಲೇಡ್‌ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರಿಗೆ ಸಹಿ ಹಾಕಲು ಕಳುಹಿಸಲಾಗುವುದು. ತೀರ್ಪಿನ ಫಲಿತಾಂಶವನ್ನು ಅವಲಂಬಿಸಿ ಎರಡೂ ಕಡೆಗಳಲ್ಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ.

ನೀರವ್ ಮೋದಿಯನ್ನು ಹಸ್ತಾಂತರ ವಾರಂಟ್‌ನಲ್ಲಿ ಮಾರ್ಚ್ 19, 2019 ರಂದು ಬಂಧಿಸಲಾಯಿತು.

ಇದನ್ನೂ ಓದಿ: ಉದ್ದಿಮೆದಾರರ 68,607 ಕೋಟಿ ರೂ ಸಾಲ ಮನ್ನಾ: ಮೋದಿ ಸರ್ಕಾರ ಸಂಸತ್ತಿನಿಂದ ಸತ್ಯ ಮರೆಮಾಚಿದೆ – ರಾಹುಲ್

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

1 COMMENT

  1. ಭಾರತಕ್ಕೆ ತರುವುದು ಬೇಡ ಅಲ್ಲೇ ಇರಲಿ.
    ಇಲ್ಲಿಗೆ ತಂದರೆ ಮತ್ತಷ್ಟು ಖರ್ಚು.
    ಅವನ ಇರುವ ಆಸ್ತಿ ಪಾಸ್ತಿ ವಿವರಗಳನ್ನು ಪಡೆದು ಅದನ್ನು ಮುಟ್ಟುಗೋಲು ಹಾಕಲಿ.
    ನಂತರ ಸಾಲ ತೀರಿಸಬಹುದು

LEAVE A REPLY

Please enter your comment!
Please enter your name here