Homeಮುಖಪುಟಕಾಂಗ್ರೆಸ್‌ ಔತಣಕೂಟದಲ್ಲಿ ಸೋಮಶೇಖರ್, ಹೆಬ್ಬಾರ್ ಭಾಗಿ: ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟನೆ

ಕಾಂಗ್ರೆಸ್‌ ಔತಣಕೂಟದಲ್ಲಿ ಸೋಮಶೇಖರ್, ಹೆಬ್ಬಾರ್ ಭಾಗಿ: ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟನೆ

- Advertisement -
- Advertisement -

“ಬಿಜೆಪಿ ಶಾಸಕರಾದ ಎಸ್.ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರು ನಿನ್ನೆ ರಾತ್ರಿ ಕಾಂಗ್ರೆಸ್ ಪಕ್ಷದ ಸಭೆಗೆ ಬಂದಿಲ್ಲ. ನಾವು ಆಹ್ವಾನ ನೀಡಿದ್ದ ಔತಣಕೂಟಕ್ಕೆ ಬಂದಿದ್ದರು” ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಇಂದು(ಡಿ.14) ಬೆಳಗಾವಿಯ ಸುವರ್ಣಸೌಧದಲ್ಲಿ “ಇತರೆ ಪಕ್ಷದವರು ಕಾಂಗ್ರೆಸ್‌ ಔತಣಕೂಟಕ್ಕೆ  ಬಂದಿದ್ದರೇ? ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಡಿಕೆಶಿ “ಹೌದು, ವಿಶ್ವನಾಥ್ ಸೇರಿದಂತೆ ಅನ್ಯ ಪಕ್ಷದ 10 ಶಾಸಕರು ಉಪಹಾರ ಕೂಟಕ್ಕೆ ಬಂದಿದ್ದರು” ಎಂದಿದ್ದಾರೆ.

ಅನ್ಯ ಪಕ್ಷದ ಶಾಸಕರು ಸಿಎಲ್‌ಪಿ ಸಭೆಗೆ ಬಂದಿದ್ದರೇ ಎಂದು ಕೇಳಿದ್ದಕ್ಕೆ “ಅವರು ನಮ್ಮ ಶಾಸಕಾಂಗ ಪಕ್ಷದ ಸಭೆಗೆ ಯಾಕೆ ಬರುತ್ತಾರೆ?. ಅವರು ನಮ್ಮ ಪಕ್ಷದ ಶಾಸಕರಲ್ಲ. ಹೀಗಾಗಿ ಶಾಸಕಾಂಗ ಪಕ್ಷದ ಸಭೆಗೆ ಬಂದಿಲ್ಲ” ಎಂದು ತಿಳಿಸಿದರು.

ನಿಮ್ಮ ಮೇಲಿರುವ ಸಿಬಿಐ ತನಿಖೆ ಹಿಂಪಡೆದ ವಿಚಾರವನ್ನು ಬಿಜೆಪಿ ಸದನದಲ್ಲಿ ಪ್ರಸ್ತಾವನೆ ಮಾಡಲು ತಯಾರಿ ನಡೆಸಿದೆ ಎಂದು ಕೇಳಿದ್ದಕ್ಕೆ “ಪ್ರಸ್ತಾವನೆ ಮಾಡಲಿ, ಕಾನೂನಿದೆ. ಬೇಡ ಎಂದವರು ಯಾರು? ಎಂದು ಕೇಳಿದರು.

ಎಸ್‌.ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಕಾಂಗ್ರೆಸ್‌ ಔತಣಕೂಟಕ್ಕೆ ತೆರಳಿದ್ದ ಬಗ್ಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕರ ಆರ್‌. ಅಶೋಕ್, ಕಾಂಗ್ರೆಸ್‌ನ ಆಹ್ವಾನದ ಮೇರೆಗೆ ಔತಣ ಕೂಟಕ್ಕೆ ಹೋಗಿದ್ದೇವೆ ಎಂದು ಎಸ್‌.ಟಿ ಸೋಮಶೇಖರ್ ನನ್ನ ಬಳಿ ಹೇಳಿದ್ದಾರೆ. ಅವರು ಪಕ್ಷದ ಯಾವುದೇ ಶಿಸ್ತು ಉಲ್ಲಂಘನೆ ಮಾಡಿಲ್ಲ. ನಿನ್ನೆಯ ಬಿಜೆಪಿ ಧರಣಿಯಲ್ಲೂ ಅವರಿದ್ದರು. ನಾನು ಕರೆದು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅರ್ಹತೆ, ಸಾಮರ್ಥ್ಯಗಳಿಂದ ಬಿಜೆಪಿಯಲ್ಲಿ ಯಾರೂ ಹುದ್ದೆ ಪಡೆಯುವುದಿಲ್ಲ; ಪ್ರತಿಪಕ್ಷ ನಾಯಕರ ಕಾಲೆಳೆದ ಆಡಳಿತ ಪಕ್ಷ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read