Homeಮುಖಪುಟವಿವಾದಗಳಿಂದ ಸುದ್ದಿಯಾಗಿದ್ದ ಗಂಗೂಬಾಯಿ ಕಾಥಿಯಾವಾಡಿ ಚಿತ್ರ ಬಿಡುಗಡೆ ದಿನಾಂಕ ಫಿಕ್ಸ್

ವಿವಾದಗಳಿಂದ ಸುದ್ದಿಯಾಗಿದ್ದ ಗಂಗೂಬಾಯಿ ಕಾಥಿಯಾವಾಡಿ ಚಿತ್ರ ಬಿಡುಗಡೆ ದಿನಾಂಕ ಫಿಕ್ಸ್

- Advertisement -
- Advertisement -

ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯದ ಮತ್ತು ಚಲನಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಹುನಿರೀಕ್ಷಿತ ಗಂಗೂಬಾಯಿ ಕಾಥಿಯಾವಾಡಿ ಚಲನಚಿತ್ರ ಬಿಡುಗಡೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ.

ವಿವಾದಗಳಿಂದ ಸುದ್ದಿಯಾಗಿದ್ದ ಈ ಚಿತ್ರವು ಮುಂದಿನ ವರ್ಷ ಜನವರಿ 6 ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ ಎಂದು ಚಿತ್ರ ತಂಡ ಘೋಷಿಸಿದೆ.  ಕೊರೊನಾ ಕಾರಣದಿಮದ ಮುಚ್ಚಲ್ಪಟ್ಟಿದ್ದ ಚಿತ್ರಮಂದಿರಗಳು ತೆರೆಯುವ ಘೋಷಣೆಯಾಗುತ್ತಿದಂತೆ ಸಾಲು ಸಾಲು ಚಿತ್ರಗಳು ತೆರೆ ಕಾಣಲು ಸಜ್ಜಾಗಿವೆ.

ಗಂಗೂಬಾಯಿ ಕಾಥಿಯಾವಾಡಿ ಚಿತ್ರ ಈ ವರ್ಷದ ಜುಲೈ 30 ರಂದು ಬಿಡುಗಡೆಯಾಗಬೇಕಿತ್ತು, ಆದರೆ ಮುಂದೂಡಲ್ಪಟ್ಟಿತ್ತು. ಈ ಚಿತ್ರ ಓಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗುವ ವದಂತಿಗಳು ಹರಡಿದ್ದ ಹಿನ್ನೆಲೆ ಸ್ಪಷ್ಟನೆ ನೀಡಿದ್ದ ಚಿತ್ರ ನಿರ್ಮಾಣ ಸಂಸ್ಥೆ ಪಿಇಎನ್ ಇಂಡಿಯಾ ಲಿಮಿಟೆಡ್ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿತ್ತು.

ಇದನ್ನೂ ಓದಿ: ಕನ್ನಡದ ಮೊದಲ ಲೆಸ್ಬಿಯನ್ ಚಿತ್ರ ’ನಾನು ಲೇಡಿಸ್’ ತಸ್ವೀರ್ ದಕ್ಷಿಣ ಏಷ್ಯಾ ಚಿತ್ರೋತ್ಸವಕ್ಕೆ ಆಯ್ಕೆ

ಗಂಗೂಬಾಯಿ ಕಾಥಿಯಾವಾಡಿ ಚಿತ್ರದಲ್ಲಿ ನಟಿ ಆಲಿಯಾ ಭಟ್ ಗಂಗೂಬಾಯಿಯಾಗಿ ಕಾಣಿಸಿಕೊಂಡಿದ್ದಾರೆ. 1960 ರ ಸಮಯದಲ್ಲಿ ಮುಂಬೈನ ಕಾಮಾಟಿಪುರದ ಅತ್ಯಂತ ಶಕ್ತಿಶಾಲಿ, ಪ್ರೀತಿಪಾತ್ರ ಮತ್ತು ಗೌರವಾನ್ವಿತರಲ್ಲಿ ಒಬ್ಬರು ಗಂಗೂಬಾಯಿ ಎನ್ನಲಾಗಿದೆ. ಈ ಚಲನಚಿತ್ರವು ಎಸ್. ಹುಸೇನ್ ಜೈದಿ ಅವರ “ದಿ ಮಾಫಿಯಾ ಕ್ವೀನ್ಸ್ ಆಫ್ ಮುಂಬಯಿ” ಕಾದಂಬರಿಯಿಂದ ಸ್ಫೂರ್ತಿ ಪಡೆದಿದೆ.

ಈ ವರ್ಷದ ಮಾರ್ಚ್‌ನಲ್ಲಿ ಗಂಗೂಬಾಯಿ ಕಾಥಿಯಾವಾಡಿಯವರ ದತ್ತು ಪುತ್ರ ಎಂದು ಹೇಳಿಕೊಳ್ಳುವ ಬಾಬೂಜೀ ಶಾ, ಬಾಲಿವುಡ್ ನಟಿ ಆಲಿಯಾ ಭಟ್, ಚಲನಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಮತ್ತು ಬನ್ಸಾಲಿ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಈ ಚಲನಚಿತ್ರವು “ದಿ ಮಾಫಿಯಾ ಕ್ವೀನ್ಸ್ ಆಫ್ ಮುಂಬಯಿ” ಕಾದಂಬರಿಯಿಂದ ಸ್ಫೂರ್ತಿ ಪಡೆದಿದೆ ಎಂದು ಬಾಬೂಜೀ ಶಾ ಹೇಳಿದ್ದಾರೆ. ಈ ಕಾದಂಬರಿಯ ಕೆಲವು ಭಾಗಗಳು ಮಾನಹಾನಿಕರವಾಗಿದ್ದು, ಗಂಗೂಬಾಯಿ ಕಾಥಿಯಾವಾಡಿಯವರ ಪ್ರತಿಷ್ಠೆಗೆ ಕಳಂಕ ತರುತ್ತವೆ. ಆಕೆಯ ಖಾಸಗಿತನದ ಹಕ್ಕಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿದ್ದರು.

All about 'Matriarch of Kamathipura' Gangubai Kathiawadi, the woman who Alia Bhatt plays in Sanjay Leela Bhansali's film

ವಿಚಾರಣೆಯಲ್ಲಿ ಬನ್ಸಾಲಿ ಮತ್ತು ಆಲಿಯಾ ಭಟ್ ಪರ ಹಾಜರಾಗಿದ್ದ ಹಿರಿಯ ವಕೀಲ ಆಬಾದ್ ಪೊಂಡಾ, ಬಾಬೂಜೀ ಶಾ ಅಸ್ತಿತ್ವದ ಬಗ್ಗೆ ತಮಗೆ ಯಾವುದೇ ಮಾಹಿತಿಯಿಲ್ಲ ಎಂದು ವಾದಿಸಿದ್ದರು. ಇತ್ತ ಮತ್ತೊಂದು ಹೈಕೋರ್ಟ್ ಪೀಠ ಚಲನಚಿತ್ರ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿತ್ತು. ಈಗ ಚಿತ್ರತಂಡ ಬಿಡುಗಡೆ ದಿನಾಂಕ ಘೋಷಿಸಿದೆ.


ಇದನ್ನೂ ಓದಿ: ಗಂಗೂಬಾಯಿ ಕಾಥಿಯಾವಾಡಿ ಚಿತ್ರ ವಿವಾದ: ಆಲಿಯಾ ಭಟ್, ಬನ್ಸಾಲಿ ವಿಚಾರಣೆಗೆ ಮಧ್ಯಂತರ ತಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...