Homeಮುಖಪುಟರೈತರಿಗೆ 'ಜಾತಿ' ಉಲ್ಲೇಖಿಸಿ ಸಮನ್ಸ್‌ ಪ್ರಕರಣ: 'ED' ಅಧಿಕಾರಿಗಳ ವಿರುದ್ದ ಎಸ್ಸಿ-ಎಸ್ಟಿ ಕಾಯ್ದೆಯಡಿ ಕ್ರಮಕ್ಕೆ ಆಗ್ರಹ

ರೈತರಿಗೆ ‘ಜಾತಿ’ ಉಲ್ಲೇಖಿಸಿ ಸಮನ್ಸ್‌ ಪ್ರಕರಣ: ‘ED’ ಅಧಿಕಾರಿಗಳ ವಿರುದ್ದ ಎಸ್ಸಿ-ಎಸ್ಟಿ ಕಾಯ್ದೆಯಡಿ ಕ್ರಮಕ್ಕೆ ಆಗ್ರಹ

- Advertisement -
- Advertisement -

ತಮಿಳುನಾಡಿನಲ್ಲಿ ಬಿಜೆಪಿ ನಾಯಕನ ವಿರುದ್ಧ ಭೂಕಬಳಿಕೆ ಆರೋಪವನ್ನು ಹೊರಿಸಿದ್ದ ಇಬ್ಬರು ಬಡ ದಲಿತ ರೈತರಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ‘ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ’ ಸಮನ್ಸ್‌ ಪ್ರಕರಣ ಬಯಲಾಗಿತ್ತು. ಪ್ರಕರಣವು ಭಾರೀ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೆ ಸಮನ್ಸ್‌ನಲ್ಲಿ ‘ಇಡಿ’ ಅಧಿಕಾರಿಗಳು ರೈತರ ಜಾತಿಯನ್ನು ಉಲ್ಲೇಖಿಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ವಿದುತಲೈ ಚಿರುತೈಗಲ್ ಕಚ್ಚಿ ಪಕ್ಷದ ಅಧ್ಯಕ್ಷ, ಸಂಸದ ತೊಲ್ ತಿರುಮಾವಳವನ್ ಮತ್ತು ಪುದಿಯಾ ತಮಿಳಗಂ ಮುಖ್ಯಸ್ಥ ಕೆ ಕೃಷ್ಣಸಾಮಿ ಈ ಕುರಿತು ಖಂಡನೆಯನ್ನು ವ್ಯಕ್ತಪಡಿಸಿದ್ದು, ಇಬ್ಬರು ಹಿರಿಯ ರೈತರಾದ ಕನ್ನೈಯನ್ ಮತ್ತು ಅವರ ಸಹೋದರ ಕೃಷ್ಣನ್ ಅವರಿಗೆ ನೀಡಿದ ಸಮನ್ಸ್‌ನಲ್ಲಿ ‘ಹಿಂದೂ ಪಲ್ಲರ್‌ಸ್’ ಎಂದು ಜಾತಿ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಇದು ಆಘಾತಕಾರಿ ಬೆಳವಣಿಗೆಯಾಗಿದೆ. ಜಾರಿ ನಿರ್ದೇಶನಾಲಯದ ಈ ಅತಿರೇಕದ ಕ್ರಮವನ್ನು ಬಲವಾಗಿ ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

ಪುತಿಯಾ ತಮಿಳಗಂ ಮುಖ್ಯಸ್ಥ ಕೆ ಕೃಷ್ಣಸಾಮಿ ಈ ಬಗ್ಗೆ ಮಾತನಾಡಿದ್ದು, ಪತ್ರವನ್ನು ಕಳುಹಿಸುವಾಗ, ಸ್ವೀಕರಿಸುವವರ ಹೆಸರು, ತಂದೆಯ ಹೆಸರು, ಡೋರ್ ನಂಬರ್, ಬೀದಿ, ಗ್ರಾಮದ ಹೆಸರು, ಜಿಲ್ಲೆ ಮತ್ತು ಇತರ ವಿವರಗಳನ್ನು ಮಾತ್ರ ನಮೂದಿಸಲಾಗುತ್ತದೆ. ಆದರೆ ‘ಇಡಿ’ ಇಬ್ಬರು ರೈತರ ಜಾತಿ ಹೆಸರುಗಳನ್ನು ಉಲ್ಲೇಖಿಸಿದೆ  ‘ಪಲ್ಲರ್’ ಎಂಬ ಹೆಸರನ್ನು ದೇವಂದ್ರ ಕುಳ್ಳ ವೆಳ್ಳಾಲರ್ ಎಂದು ಬದಲಿಸಿ ಸುಮಾರು ಎರಡು ವರ್ಷಗಳಾಗಿವೆ. ಇದು ‘ಇಡಿ’ ಗಮನಕ್ಕೆ ಬಂದಿಲ್ಲವೇ?  ಜಾತಿಯ ಹೆಸರನ್ನು ಉಲ್ಲೇಖಿಸುವುದು ಅಪರಾಧ ಮಾತ್ರವಲ್ಲ, ಇದರಲ್ಲಿ ಯಾವುದೋ ದುರುದ್ದೇಶ ಇದ್ದಂತೆ ಕಾಣುತ್ತದೆ. ಇಡಿಯ ಉನ್ನತ ಅಧಿಕಾರಿಗಳು ಸಮನ್ಸ್‌ಗೆ ವಿವರಣೆಯನ್ನು ನೀಡಬೇಕು. ರೈತರ ಜಾತಿ ಗುರುತನ್ನು ಉಲ್ಲೇಖಿಸಿ ಪತ್ರವನ್ನು ಕಳುಹಿಸಿದ ‘ಇಡಿ’  ಅಧಿಕಾರಿಗಳ ವಿರುದ್ಧ ಎಸ್ಸಿ- ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಕೃಷ್ಣಸಾಮಿ ಅವರು ಆಗ್ರಹಿಸಿದ್ದಾರೆ.

70ರ ಹರೆಯದ ಇಬ್ಬರು ಹಿರಿಯ ರೈತರಾದ ಕನ್ನೈಯನ್ ಮತ್ತು ಅವರ ಸಹೋದರ ಕೃಷ್ಣನ್  ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಸ್ವೀಕರಿಸಿದ್ದಾರೆ. 6.5 ಎಕರೆ ಕೃಷಿ ಭೂಮಿ ಹೊಂದಿರುವ ಇಬ್ಬರು ಬಡ ಕಟುಂಬದ ಸಹೋದರರನ್ನು ‘ಇಡಿ’ ವಿಚಾರಣೆಗೆ ಕರೆದಿದೆ. ಇದರ ಬೆನ್ನಲ್ಲಿ ಬಿಜೆಪಿಯ ಸೇಲಂ ಪೂರ್ವ ಜಿಲ್ಲಾ ಕಾರ್ಯದರ್ಶಿ ಗುಣಶೇಖರ್ ವಿರುದ್ಧ ಭೂಕಬಳಿಕೆ ಯತ್ನದ ಆರೋಪ ಮಾಡಿದ್ದಕ್ಕೆ ಬರೀ 1,000 ಮಾಸಿಕ ಪಿಂಚಣಿಯಲ್ಲಿ ಜೀವನ ಸಾಗಿಸುವ ದಲಿತ ರೈತರನ್ನು ‘ಇಡಿ’ ಹಿಂಬಾಲಿಸಿವೆ ಎಂಬ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಮಾತನಾಡಿದ ಕನ್ನಿಯನ್ ಮತ್ತು ಕೃಷ್ಣನ್ ಪರ ವಕೀಲರಾದ ಪರ್ವಿನಾ, ಸಮನ್ಸ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಉಲ್ಲೇಖಿಸಲಾಗಿಲ್ಲ. ಇಬ್ಬರು ಸಹೋದರರಿಗೆ ಪ್ರಕರಣ ಏನೆಂದು ತಿಳಿದಿಲ್ಲ. ಸಮನ್ಸ್‌ನಲ್ಲಿ ಸರಿಯಾದ ದಾಖಲೆಗಳೊಂದಿಗೆ ‘ಇಡಿ’ ಮುಂದೆ ಹಾಜರಾಗುವಂತೆ ಕೇಳುವುದನ್ನು ಹೊರತುಪಡಿಸಿ ಏನನ್ನೂ ಉಲ್ಲೇಖಿಸಲಾಗಿಲ್ಲ. ಭೂ ಕಬಳಿಕೆ ಆರೋಪಕ್ಕೆ ಪ್ರತಿಯಾಗಿ ಈ ಬೆಳವಣಿಗೆ ನಡೆದಿದೆ ಎಂದು ಹೇಳಿದ್ದಾರೆ.

ಕಣ್ಣಿಯಾನ್ ಮತ್ತು ಕೃಷ್ಣನ್ ಅವರು ಸೇಲಂ ಜಿಲ್ಲೆಯ ಅತ್ತೂರು ಬಳಿಯ ರಾಮನಾಯ್ಕನ್‌ಪಾಳ್ಯಂನಲ್ಲಿ 6.5 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ ಮತ್ತು ಅವರು ಬಿಜೆಪಿಯ ಸೇಲಂ ಪೂರ್ವ ಜಿಲ್ಲಾ ಕಾರ್ಯದರ್ಶಿ ಗುಣಶೇಖರ್ ವಿರುದ್ಧ ಭೂಕಬಳಿಕೆ ಯತ್ನ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಕೃಷ್ಣನ್ ಅವರ ದೂರಿನ ಆಧಾರದ ಮೇಲೆ ಗುಣಶೇಖರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಮತ್ತು 2020ರಲ್ಲಿ ಅವರನ್ನು ಬಂಧಿಸಲಾಗಿತ್ತು. ಕೃಷ್ಣನ್ ಮತ್ತು ಗುಣಶೇಖರ್ ನಡುವಿನ ಜಮೀನು ವಿವಾದಕ್ಕೆ ಸಂಬಂಧಿಸಿದ ಸಿವಿಲ್ ಪ್ರಕರಣವು ಅತ್ತೂರು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.

ಈ ಕುರಿತು ತಿರುಮಾವಳವನ್ ಪ್ರತಿಕ್ರಿಯಿಸಿದ್ದು, ಗುಣಶೇಖರ್ ಅವರ ಸೂಚನೆಯ ಮೇರೆಗೆ ಇಡಿ ಕಾರ್ಯನಿರ್ವಹಿಸುತ್ತಿದೆ ಎಂದು ತೋರುತ್ತದೆ. ಇಡಿ ಅಧಿಕಾರಿಗಳು ಮತ್ತು ಬಿಜೆಪಿ ಮುಖಂಡನನ್ನು ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಬಂಧಿಸಿ ತನಿಖೆ ನಡೆಸಬೇಕು ಎಂದು ನಾವು ಒತ್ತಾಯಿಸುತ್ತೇವೆ. ಪೊಲೀಸರು ದಲಿತ ರೈತರಾದ ಕೃಷ್ಣನ್ ಮತ್ತು ಕನ್ನೈಯನ್ ಅವರಿಗೆ ರಕ್ಷಣೆಯನ್ನು ನೀಡಬೇಕು. ತಮ್ಮ ಸ್ವಂತ ಭೂಮಿಯಲ್ಲಿ ತಮ್ಮ ಕೃಷಿ ಚಟುವಟಿಕೆಗಳನ್ನು ನಡೆಸಲು ರೈತರಿಗೆ ಅನುಮತಿಸಬೇಕು. ಪಕ್ಷದ ಹೆಸರನ್ನು ದುರುಪಯೋಗಪಡಿಸಿಕೊಂಡು ಕ್ರಿಮಿನಲ್ ಉದ್ದೇಶದಿಂದ ಬಡ ರೈತರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿರುವ ಗುಣಶೇಖರ್ ಅವರನ್ನು ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.

 

ಇದನ್ನು ಓದಿ: ನೂತನ ಕ್ರಿಮಿನಲ್ ಕಾನೂನುಗಳನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಸಲ್ಲಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...