Homeಮುಖಪುಟತಮಿಳುನಾಡು ಪ್ರವಾಸದಲ್ಲಿ ಪ್ರಧಾನಿ; ‘ಗೋ ಬ್ಯಾಕ್ ಮೋದಿ’ ಟ್ರೆಂಡ್ ಮಾಡಿದ ತಮಿಳಿಗರು

ತಮಿಳುನಾಡು ಪ್ರವಾಸದಲ್ಲಿ ಪ್ರಧಾನಿ; ‘ಗೋ ಬ್ಯಾಕ್ ಮೋದಿ’ ಟ್ರೆಂಡ್ ಮಾಡಿದ ತಮಿಳಿಗರು

- Advertisement -
- Advertisement -

ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎರಡು ದಿನಗಳ ತಮಿಳುನಾಡು ಪ್ರವಾಸ ಕೈಗೊಂಡಿದ್ದಾರೆ. ಆದರೆ, ಸೋಮವಾರ ಸಂಜೆಯಿಂದಲೇ ತಮಿಳಿಗರು ಎಕ್ಸ್‌ನಲ್ಲಿ ‘ಗೋ ಬ್ಯಾಕ್ ಮೋದಿ’ ಮತ್ತು ‘ಗೋ ಫ್ಯಾಸಿಸ್ಟ್ ಮೋದಿ’ ಹ್ಯಾಷ್ಟ್ಯಾಗ್‌ಗಳನ್ನು ಅನ್ನು ಟ್ರೆಂಡ್ ಮಾಡಿದ್ದಾರೆ. ಇದರ ಜತೆಗೆ, ಬಿಜೆಪಿ ಬೆಂಬಲಿಗರು ‘ವಣಕ್ಕಂ ಮೋದಿ’ ಹ್ಯಾಷ್ ಟ್ಯಾಗ್ ಅನ್ನು ಬಳಸಿದ್ದಾರೆ.

ನರೇಂದ್ರ ಮೋದಿ ಇಂದಿನಿಂದ ಎರಡು ದಿನ ತಮಿಳುನಾಡಿನಲ್ಲೆ ಇರಲಿದ್ದು, ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇಂದು ಅವರು ಸುಮಾರು ₹ 20,000 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ತಿರುಚ್ಚಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಅನ್ನು ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಅವರು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಜತೆಗೆ ವೇದಿಕೆ ಹಂಚಿಕೊಂಡರು.

ಜನರನ್ನುದ್ದೇಶಿ ಮಾತನಾಡಿದ ಮೋದಿ, ಡಿಎಂಡಿಕೆ ಪಕ್ಷದ ಸಂಸ್ಥಾಪಕ ಮತ್ತು ಖ್ಯಾತ ನಟ ವಿಜಯಕಾಂತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ‘ಅವರು ಚಿತ್ರರಂಗ ಮಾತ್ರವಲ್ಲದೆ ರಾಜಕೀಯದಲ್ಲೂ ಕ್ಯಾಪ್ಟನ್’ ಆಗಿದ್ದರು ಎಂದು ಹೇಳಿದರು.

‘ಕೆಲವು ದಿನಗಳ ಹಿಂದೆ ತಿರು ವಿಜಯಕಾಂತ್ ಅವರನ್ನು ಕಳೆದುಕೊಂಡಿದ್ದೇವೆ. ಅವರು ಸಿನಿಮಾ ಜಗತ್ತಿನಲ್ಲಿ ಮಾತ್ರವಲ್ಲದೆ ರಾಜಕೀಯದಲ್ಲಿಯೂ ಕ್ಯಾಪ್ಟನ್ ಆಗಿದ್ದರು. ಅವರು ಸಿನಿಮಾದಲ್ಲಿ ತಮ್ಮ ಕೆಲಸದ ಮೂಲಕ ಜನರ ಹೃದಯವನ್ನು ಗೆದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಅವರು ರಾಜಕಾರಣಿಯಾಗಿ ಯಾವಾಗಲೂ ರಾಷ್ಟ್ರೀಯತೆಯನ್ನು ಪ್ರತಿಪಾದಿಸಿದರು. ನಾನು ಅವರಿಗೆ ನನ್ನ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತೇನೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪ ವ್ಯಕ್ತಪಡಿಸುತ್ತೇನೆ’ ಎಂದು ಪ್ರಧಾನಿ ಮೋದಿ ತಿರುಚಿರಾಪಳ್ಳಿಯಲ್ಲಿ ಹೇಳಿದರು.

ದೀರ್ಘ ಕಾಲದ ಅನಾರೋಗ್ಯದಿಂದ ಬಳಲಿ ಡಿಸೆಂಬರ್ 28ರಂದು ನಿಧನರಾದ ವಿಜಯಕಾಂತ್ ಅವರಿಗೆ ಪ್ರಧಾನಿ ಶ್ರದ್ಧಾಂಜಲಿ ಸಲ್ಲಿಸಿದಾಗ ಹರ್ಷೋದ್ಘಾರಗಳು ಮೊಳಗಿದವು. 71 ವರ್ಷ ವಯಸ್ಸಿನ ನಟ, ತಮಿಳುನಾಡು ರಾಜಕೀಯದ ಪ್ರಮುಖ ವ್ಯಕ್ತಿಯಾಗಿದ್ದು, 1991ರ ಚಲನಚಿತ್ರ ಕ್ಯಾಪ್ಟನ್ ಪ್ರಭಾಕರನ್ ಅವರ ಪಾತ್ರಕ್ಕಾಗಿ ‘ಕ್ಯಾಪ್ಟನ್’ ಎಂಬ ಬಿರುದನ್ನು ಪಡೆದರು.

ಇದಕ್ಕೂ ಮುನ್ನ ಅವರು ತಿರುಚಿರಾಪಳ್ಳಿಯಲ್ಲಿರುವ ಭಾರತಿದಾಸನ್ ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಎರಡೂ ಕಾರ್ಯಕ್ರಮಗಳಲ್ಲಿ ಅವರು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರೊಂದಿಗೆ ವೇದಿಕೆ ಹಂಚಿಕೊಂಡರು. ಡಿಎಂಕೆಯನ್ನು ಮುನ್ನಡೆಸುತ್ತಿರುವ ಸ್ಟಾಲಿನ್, ಈ ವರ್ಷದ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಎದುರಿಸಲು ಸಜ್ಜಾಗುತ್ತಿರುವ ‘ಇಂಡಿಯಾ’ ವಿರೋಧ ಪಕ್ಷಗಳ ಪ್ರಮುಖರಾಗಿದ್ದಾರೆ.

ತಮಿಳುನಾಡಿನ ಪ್ರವಾಹದ ಬಗ್ಗೆಯೂ ಮಾತನಾಡಿದ ಪ್ರಧಾನಿ, ‘2023ರ ಕೊನೆಯ ಕೆಲವು ವಾರಗಳು ತಮಿಳುನಾಡಿನ ಅನೇಕ ಜನರಿಗೆ ಕಷ್ಟಕರವಾಗಿತ್ತು. ಭಾರೀ ಮಳೆಯಿಂದಾಗಿ ನಾವು ನಮ್ಮ ಅನೇಕ ಸಹ ನಾಗರಿಕರನ್ನು ಕಳೆದುಕೊಂಡಿದ್ದೇವೆ. ಗಮನಾರ್ಹ ಆಸ್ತಿ ನಷ್ಟವೂ ಸಂಭವಿಸಿದೆ. ಬಿಕ್ಕಟ್ಟಿನ ಸಮಯದಲ್ಲಿ ಕೇಂದ್ರ ಸರ್ಕಾರವು ತಮಿಳುನಾಡಿನ ಜನರೊಂದಿಗೆ ನಿಂತಿದೆ. ನಾವು ರಾಜ್ಯ ಸರ್ಕಾರಕ್ಕೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತಿದ್ದೇವೆ’ ಎಂದು ಅವರು ಹೇಳಿದರು.

ಹಸಿರು ಕ್ರಾಂತಿಯ ಹರಿಕಾರ ಎಂದು ಪರಿಗಣಿಸಲ್ಪಟ್ಟಿರುವ ಕೃಷಿ ವಿಜ್ಞಾನಿ ಡಾ.ಎಂ.ಎಸ್.ಸ್ವಾಮಿನಾಥನ್ ಅವರಿಗೆ ಗೌರವ ಸಲ್ಲಿಸಿದ ಮೋದಿ, ‘ತಮಿಳುನಾಡಿನ ಇನ್ನೊಬ್ಬ ಪುತ್ರ ಡಾ.ಎಂ.ಎಸ್.ಸ್ವಾಮಿನಾಥನ್ ಅವರನ್ನೂ ನಾನು ನೆನಪಿಸಿಕೊಳ್ಳುತ್ತೇನೆ. ಅವರು ನಮ್ಮ ದೇಶಕ್ಕೆ ಆಹಾರ ಭದ್ರತೆಯನ್ನು ಖಾತರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಳೆದ ವರ್ಷ ನಾವು ಅವರನ್ನೂ ಕಳೆದುಕೊಂಡಿದ್ದೇವೆ’ ಎಂದು ಪ್ರಧಾನಿ ಹೇಳಿದರು.

ಇದನ್ನೂ ಓದಿ; ಇವಿಎಂ ಕುರಿತ ನಮ್ಮ ನಿರ್ದಿಷ್ಟ ಕಳವಳಗಳನ್ನು ಆಯೋಗ ಪರಿಹರಿಸಲಿಲ್ಲ: ಜೈರಾಂ ರಮೇಶ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋಲ್ಕತ್ತಾ: ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಸಂಸದನ ಮೃತದೇಹ ತುಂಡರಿಸಿದ ಸ್ಥಿತಿಯಲ್ಲಿ ಪತ್ತೆ

0
ಬಾಂಗ್ಲಾದೇಶದ ಜೆನೈದಾ-4 ಕ್ಷೇತ್ರದ ಸಂಸದ ಅನ್ವರುಲ್ ಅಝೀಂ ಅನಾರ್ ಭಾರತದಲ್ಲಿ ನಾಪತ್ತೆಯಾದ ಎಂಟು ದಿನಗಳ ನಂತರ ಕೊಲ್ಕತ್ತಾ ಪೊಲೀಸರು ಅವರ ಚಿದ್ರಗೊಂಡ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ. ಕೋಲ್ಕತ್ತಾ ಪೊಲೀಸರು ಹತ್ಯೆಯು ಪೂರ್ವ ನಿಯೋಜಿತ ಎಂದು ಹೇಳಿಕೊಂಡಿದ್ದಾರೆ....