Homeಮುಖಪುಟಸಂಬಂಧ ಬಹಿರಂಗಪಡಿಸದಿರಲು ನೀಲಿಚಿತ್ರ ನಟಿಗೆ ಹಣ ಪಾವತಿ ಪ್ರಕರಣ: ಡೊನಾಲ್ಡ್ ಟಂಪ್‌ಗೆ ಬಂಧನ ಭೀತಿ

ಸಂಬಂಧ ಬಹಿರಂಗಪಡಿಸದಿರಲು ನೀಲಿಚಿತ್ರ ನಟಿಗೆ ಹಣ ಪಾವತಿ ಪ್ರಕರಣ: ಡೊನಾಲ್ಡ್ ಟಂಪ್‌ಗೆ ಬಂಧನ ಭೀತಿ

- Advertisement -
- Advertisement -

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಲಿಚಿತ್ರ ತಾರೆಯನ್ನು ಮೌನವಾಗಿರಿಸಲು ಹಣ ಪಾವತಿ ಮಾಡಿರುವ ಪ್ರಕರಣದಲ್ಲಿ, ಅವರ ಮೇಲೆ ಮ್ಯಾನ್‌ಹ್ಯಾಟನ್ ಗ್ರ್ಯಾಂಡ್ ಜ್ಯೂರಿ ದೋಷಾರೋಪಣೆ ಸಲ್ಲಿಸಿದೆ.

ಮ್ಯಾನ್‌ಹ್ಯಾಟನ್ ಜಿಲ್ಲಾ ಅಟಾರ್ನಿ ಆಲ್ವಿನ್ ಬ್ರಾಗ್ ಅವರ ಕಚೇರಿಯು ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಗುರುವಾರ ಸಂಜೆ ಟ್ರಂಪ್ ಅವರ ವಕೀಲರನ್ನು ಸಂಪರ್ಕಿಸಿ, ಟ್ರಂಪ್ ಶರಣಾಗತಿಗೆ ಸಹಕರಿಸುವಂತೆ ಸೂಚಿಸಿದ್ದಾರೆ. ಆದರೆ ಟ್ರಂಪ್ ಮಾತ್ರ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದು, ಈ ದೋಷಾರೋಪಣೆಯು ರಾಜಕೀಯ ಕಿರುಕುಳ ಮತ್ತು ಚುನಾವಣಾ ಹಸ್ತಕ್ಷೇಪ ಎಂದು ಖಂಡಿಸಿದ್ದಾರೆ.

2016ರ ಅಧ್ಯಕ್ಷೀಯ ಚುನಾವಣೆ ಪ್ರಚಾರ ಸಂದರ್ಭದಲ್ಲಿ ತಮ್ಮ ಜತೆಗಿನ ಸಂಬಂಧ ಬಹಿರಂಗಪಡಿಸದಿರಲು ನೀಲಿಚಿತ್ರ ತಾರೆಗೆ ಟ್ರಂಪ್ ಹಣ ಸಂದಾಯ ಮಾಡಿದ್ದ ಪ್ರಕರಣ ಇದಾಗಿದೆ.

ಈ ಮೂಲಕ ಅಪರಾಧದ ಆರೋಪ ಹೊತ್ತ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಎಂಬ ಅಪಖ್ಯಾತಿಗೆ ಟ್ರಂಪ್ ಒಳಗಾಗಿದ್ದಾರೆ. ಇದರೊಂದಿಗೆ ಟ್ರಂಪ್‌ಗೆ ಬಂಧನ ಭೀತಿ ಎದುರಾಗಿದೆ.

ಈ ಕುರಿತಂತೆ ನೀಲಿ ಚಿತ್ರ ತಾರೆ ಸ್ಟಾರ್ಮಿ ಡ್ಯಾನಿಯಲ್ಸ್ ಪ್ರತಿಕ್ರಿಯಿಸಿದ್ದು, ”ಈ ಹೋರಾಟದಲ್ಲಿ ಬೆಂಬಲಿಸಿದ ಮತ್ತು ಪ್ರೀತಿ ಕೊಟ್ಟ ಎಲ್ಲರಿಗೂ ಧನ್ಯವಾದಗಳು. ನಾನು ಪ್ರತಿಕ್ರಿಯಿಸಲು ಸಾಧ್ಯವಾಗದಷ್ಟು ಸಂದೇಶಗಳು ಬರುತ್ತಿವೆ. ಅಲ್ಲದೆ, ಆ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ” ಎಂದು ಹೇಳಿದ್ದಾರೆ.

ಸ್ಟಾರ್ಮಿ ಪರ ವಕೀಲ ಕ್ಲಾರ್ಕ್ ಬ್ರೀವ್‌ಸ್ಟರ್ ಟ್ವೀಟ್ ಮಾಡಿದ್ದು, ”ಸಂತೋಷಕ್ಕೆ ಯಾವುದೇ ಕಾರಣವಿಲ್ಲ, ಗ್ರ್ಯಾಂಡ್ ಜ್ಯೂರಿಗಳ ಕಠಿಣ ಪರಿಶ್ರಮ ಮತ್ತು ಆತ್ಮಸಾಕ್ಷಿಯನ್ನು ಗೌರವಿಸಬೇಕು. ಈಗ ಸತ್ಯ ಮತ್ತು ನ್ಯಾಯಕ್ಕೆ ಜಯವಾಗಲಿ. ಯಾರೂ ಕಾನೂನಿಗಿಂತ ದೊಡ್ಡವರಲ್ಲ” ಎಂದು ಹೇಳಿದ್ದಾರೆ.

ಕ್ಲಾರ್ಕ್ ಬ್ರೀವ್‌ಸ್ಟರ್ ಅವರ ಟ್ವೀಟ್ ಅನ್ನೂ ರೀಟ್ವೀಟ್ ಮಾಡಿರುವ ಸ್ಟಾರ್ಮಿ ಡ್ಯಾನಿಯಲ್ಸ್ ಅವರು, ವಕೀಲರಿಗೆ ಧನ್ಯವಾದ ತಿಳಿಸಿದ್ದಾರೆ.

ನೀಲಿ ಚಿತ್ರ ತಾರೆ ಸ್ಟಾರ್ಮಿ ಡ್ಯಾನಿಯಲ್ಸ್ ಅವರು, ಹಲವು ವರ್ಷಗಳಿಂದ ಟ್ರಂಪ್ ಜೊತೆಗಿನ ಸಂಬಂಧ ಕುರಿತಾದ ವಿವಾದದಲ್ಲಿ ಸಿಲುಕಿದ್ದಾರೆ. 2006ರ ಬೇಸಿಗೆಯಲ್ಲಿ ನಾವಿಬ್ಬರೂ ಲೈಂಗಿಕ ಸಂಬಂಧ ಹೊಂದಿದ್ದೆವು ಎಂದು 2018ರಲ್ಲಿ ಸ್ಟಾರ್ಮಿ ಆರೋಪಿಸಿದ್ದರು. ಆ ನಂತರ ಟ್ರಂಪ್ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರಂಪ್ ಬೆಂಬಲಿಗರು, ಸ್ಟಾರ್ಮಿ ಅವರನ್ನು ತೀವ್ರವಾಗಿ ಅವಮಾನಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...