Homeಮುಖಪುಟಬ್ಯಾಂಕ್‌ ವಂಚನೆ ಪ್ರಕರಣ: ಮೆಹುಲ್ ಚೋಕ್ಸಿ ವಿರುದ್ಧ ಮೂರು ಹೊಸ ಎಫ್‌ಐಆರ್‌ ದಾಖಲಿಸಿದ ಸಿಬಿಐ

ಬ್ಯಾಂಕ್‌ ವಂಚನೆ ಪ್ರಕರಣ: ಮೆಹುಲ್ ಚೋಕ್ಸಿ ವಿರುದ್ಧ ಮೂರು ಹೊಸ ಎಫ್‌ಐಆರ್‌ ದಾಖಲಿಸಿದ ಸಿಬಿಐ

ಬ್ಯಾಂಕ್‌ಗಳಲ್ಲಿ ಉಂಟಾಗಿರುವ ಹೆಚ್ಚುವರಿ 6,746 ಕೋಟಿ ರೂಪಾಯಿ ನಷ್ಟವನ್ನು ಈ ಎಫ್‌ಐಆರ್‌ಗಳು ಉಲ್ಲೇಖಿಸಿವೆ

- Advertisement -
- Advertisement -

ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ವಿರುದ್ಧ ಪಂಜಾಬ್ ನ್ಯಾಷನಲ್ ಬ್ಯಾಂಕಿನ ದೂರಿನ ಆಧಾರದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮೂರು ಹೊಸ ಎಫ್‌ಐಆ‌ರ್‌‌ಗಳನ್ನು ದಾಖಲಿಸಿದೆ. ಪಂಜಾಬ್‌ ಬ್ಯಾಂಕ್‌ ಮತ್ತು ಇತರ ಒಕ್ಕೂಟದ ಬ್ಯಾಂಕ್‌ಗಳಲ್ಲಿ ಉಂಟಾಗಿರುವ ಹೆಚ್ಚುವರಿ 6,746 ಕೋಟಿ ರೂಪಾಯಿ ನಷ್ಟವನ್ನು ಈ ಎಫ್‌ಐಆರ್‌ಗಳು ಉಲ್ಲೇಖಿಸಿವೆ.

13,000 ಕೋಟಿ ರೂಪಾಯಿಗಳನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚೋಕ್ಸಿಯವರು ಕೇಂದ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯಕ್ಕೆ ಬೇಕಾಗಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ನೀರವ್ ಮೋದಿ ಸದ್ಯ ಯುನೈಟೆಡ್ ಕಿಂಗ್‌ಡಂನ ಜೈಲಿನಲ್ಲಿದ್ದಾನೆ.

ಚೋಕ್ಸಿ 2017ರಲ್ಲಿ ಆಂಟಿಗುವಾ ಮತ್ತು ಬಾರ್ಬುಡಾಗೆ ಪಲಾಯನ ಮಾಡಿದರು. ಕೇಂದ್ರೀಯ ತನಿಖಾ ದಳವು 2018ರಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದೆ.

ಮಾರ್ಚ್ 21ರಂದು ಬ್ಯಾಂಕ್ ಹೆಚ್ಚುವರಿ ಆರೋಪಗಳನ್ನು ಸಲ್ಲಿಸಿದ್ದು, ಚೋಕ್ಸಿಯ ಗೀತಾಂಜಲಿ ಜೆಮ್ಸ್ ಲಿಮಿಟೆಡ್, ನಕ್ಷತ್ರ ಬ್ರಾಂಡ್ಸ್ ಲಿಮಿಟೆಡ್ ಮತ್ತು ಗಿಲಿ ಇಂಡಿಯಾ ಲಿಮಿಟೆಡ್‌ನಿಂದ ಉಂಟಾದ ನಷ್ಟವನ್ನು ಪ್ರಸ್ತಾಪಿಸಿದೆ.

ಚೋಕ್ಸಿಯ ವಕೀಲ ವಿಜಯ್ ಅಗರ್ವಾಲ್ ಅವರು ಹೊಸ ಎಫ್‌ಐಆರ್‌ಗಳನ್ನು ಟೀಕಿಸಿದ್ದಾರೆ. “ಒಂದು ಎಫ್‌ಐಆರ್ ದಾಖಲಾದಾಗ ಮತ್ತು ಬ್ಯಾಂಕ್‌ಗಳಿಗೆ ಆದ ಒಟ್ಟು ನಷ್ಟಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್ ಸಲ್ಲಿಸಿದಾಗ, ಪ್ರತಿ ಸಣ್ಣ ವ್ಯವಹಾರಕ್ಕೂ ಈಗ ಪ್ರತ್ಯೇಕ ಎಫ್‌ಐಆರ್ ಹೇಗೆ ಸಲ್ಲಿಸಲು ಸಾಧ್ಯ? ಆ ತರ್ಕದೊಂದಿಗೆ ಹೇಳುವುದಾದರೆ- ಒಟ್ಟು 13,000 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹೇಳಿಕೊಂಡರೆ ಅವರು ಪ್ರತಿ ರೂಪಾಯಿಗೆ ತಲಾ ಒಂದು ಎಫ್‌ಐಆರ್ ದಾಖಲಿಸಬೇಕು” ಎಂದಿದ್ದಾರೆ.

“ಒಕ್ಕೂಟವು ಕೇವಲ ಒಂದು ಪ್ರಥಮ ಮಾಹಿತಿ ವರದಿಯನ್ನು ಮಾತ್ರ ಸಲ್ಲಿಸಬಹುದು ಎಂದು ವಿಜಿಲೆನ್ಸ್ ಕೈಪಿಡಿ ಸುತ್ತೋಲೆ ಇದೆ” ಎಂದು ಅಗರ್ವಾಲ್ ವಾದಿಸಿದ್ದಾರೆ.

ಗೀತಾಂಜಲಿ ಜೆಮ್ಸ್ ಲಿಮಿಟೆಡ್ ಮತ್ತು ಅದರ ಹಿರಿಯ ಅಧಿಕಾರಿಗಳು ಐಸಿಐಸಿಐ ನೇತೃತ್ವದ 28 ಬ್ಯಾಂಕ್‌ಗಳ ಒಕ್ಕೂಟದಲ್ಲಿ 2010 ಮತ್ತು 2018 ರ ನಡುವೆ 5,564.54 ಕೋಟಿ ರೂಪಾಯಿಗಳ ವಂಚನೆ ಮಾಡಿರುವಾಗಿ ಚೋಕ್ಸಿ ವಿರುದ್ಧದ ಎಫ್‌ಐಆರ್‌ ಆರೋಪಿಸಿದೆ. ವಜ್ರದ ವ್ಯಾಪಾರಿ ಮತ್ತು ಅವರ ಸಂಸ್ಥೆಗಳು 5564.54 ಕೋಟಿ ರೂಪಾಯಿಗಳನ್ನು ಬ್ಯಾಂಕ್‌ಗಳ ಒಕ್ಕೂಟಕ್ಕೆ ವಂಚಿಸಿದ್ದಾರೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ದೂರಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇತೃತ್ವದ ಒಂಬತ್ತು ಬ್ಯಾಂಕ್‌ಗಳ ಒಕ್ಕೂಟಕ್ಕೆ ಚೋಕ್ಸಿ, ಅವರ ಸಂಸ್ಥೆ ನಕ್ಷತ್ರ ಬ್ರಾಂಡ್ಸ್ ಲಿಮಿಟೆಡ್ ಮತ್ತು ಇತರರು 807 ಕೋಟಿ ರೂ. ವಂಚಿಸಿರುವುದಾಗಿ ಎರಡನೇ ಎಫ್‌ಐಆರ್‌‌ ತಿಳಿಸಿದೆ.

ಮೂರನೇ ಎಫ್‌ಐಆರ್‌, ಇದೇ ಅವಧಿಯಲ್ಲಿ ಪಿಎನ್‌ಬಿಯಲ್ಲಿ ಚೋಕ್ಸಿ ಮತ್ತು ಗಿಲಿ ಇಂಡಿಯಾ ಲಿಮಿಟೆಡ್ ಮಾಡಿರುವ 375 ಕೋಟಿ ರೂಪಾಯಿಗಳ ವಂಚನೆಗೆ ಸಂಬಂಧಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

0
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಪೊಲೀಸರು ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ವರದಿಯಲ್ಲಿ ರೋಹಿತ್‌ ವೇಮುಲಾ 'ದಲಿತ ಅಲ್ಲ', ತನ್ನ “ನಿಜವಾದ ಜಾತಿಯ ಗುರುತು”...