Homeಮುಖಪುಟಗಾಝಾದಲ್ಲಿ ಇಸ್ರೇಲ್‌ ಮಾರಣಹೋಮ: ಯೇಸುಕ್ರಿಸ್ತನ ಜನ್ಮಸ್ಥಳದಲ್ಲಿ ಕ್ರಿಸ್ಮಸ್‌ ಸಂಭ್ರಮಾಚರಣೆ ರದ್ದು

ಗಾಝಾದಲ್ಲಿ ಇಸ್ರೇಲ್‌ ಮಾರಣಹೋಮ: ಯೇಸುಕ್ರಿಸ್ತನ ಜನ್ಮಸ್ಥಳದಲ್ಲಿ ಕ್ರಿಸ್ಮಸ್‌ ಸಂಭ್ರಮಾಚರಣೆ ರದ್ದು

- Advertisement -
- Advertisement -

ಗಾಝಾ ನಾಗರಿಕರ ಮಾರಣಹೋಮ ಮತ್ತು ಆಕ್ರಮಿತ ಪಶ್ಚಿಮ ದಂಡೆ (West Bank)ಯಲ್ಲಿ ಇಸ್ರೇಲ್ ನಡೆಸುತ್ತಿರುವ ಆಕ್ರಮಣ ಖಂಡಿಸಿ ಯೇಸುಕ್ರಿಸ್ತನ ಜನ್ಮಸ್ಥಳ ಬೆಥ್ಲೆಹೆಮ್‌ನಲ್ಲಿ ಈ ವರ್ಷ ಸಾಂಪ್ರಾದಾಯಿಕ ಕ್ರಿಸ್ಮಸ್‌ ಆಚರಣೆ ರದ್ದುಗೊಳಿಸಲಾಗಿದೆ.

ಪ್ರತಿ ವರ್ಷ ಕ್ರಿಸ್ಮಸ್‌ಗೆ ತಿಂಗಳ ಮೊದಲೇ ಬೆಥ್ಲೆಹೆಮ್ ಸಜ್ಜಾಗುತ್ತಿತ್ತು. ಅಲ್ಲಿನ ಮ್ಯಾಂಗರ್ ಸ್ಕ್ವೇರ್‌ನಲ್ಲಿನ ಎತ್ತರದ ಕ್ರಿಸ್ಮಸ್‌ ಮರದ ಫೋಟೋ ಸೆರೆ ಹಿಡಿಯಲು ಜಗತ್ತಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಜನರು ಕ್ಯಾಮರಾ ಹಿಡಿದು ನಿಲ್ಲುತ್ತಿದ್ದರು. ಮಧ್ಯರಾತ್ರಿಯ ಪ್ರಾರ್ಥನೆಗೆ ಭಾರೀ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಆದರೆ, ಈ ಬಾರಿ ಮೆರವಣಿಗೆಯಿಲ್ಲ, ಬ್ಯಾಂಡ್‌, ಸಂಗೀತವಿಲ್ಲ. ದೀಪಾಲಂಕಾರ, ಮಾರುಕಟ್ಟೆಗಳಿಲ್ಲ. ಮಕ್ಕಳಿಗೆ ಸಿಹಿ ಹಂಚುವ ಸಂತಸವೇ ಇಲ್ಲ ಎಂದು ವಾಶಿಂಗ್ಟನ್‌ ಪೋಸ್ಟ್ ವರದಿ ತಿಳಿಸಿದೆ.

ಈ ಬಾರಿ ಬೆಥ್ಲೆಹೆಮ್‌ನಲ್ಲಿ ಸಾಂಕೇತಿಕವಾಗಿ ಮೂಲ ಚರ್ಚೊಂದಕ್ಕೆ ಮಾತ್ರ ಸರಳವಾದ ಅಲಂಕಾರ ಮಾಡಲಾಗಿದೆ. ಗಾಝಾದ ಧ್ವಂಸಗೊಂಡ ಕಟ್ಟಡಗಳು ಮತ್ತು ಇಸ್ರೇಲ್ ದಾಳಿಗೆ ಬಲಿಯಾದ ಪುಟ್ಟ ಕಂದಮ್ಮಗಳನ್ನು ಸ್ಮರಿಸಿ ಕಟ್ಟದ ಅವೇಶಗಳ ಮೇಲೆ ಬಾಲ ಏಸುವನ್ನು ಸ್ವಾಗತಿಸಲಾಗಿದೆ.

ಸಾಂಪ್ರದಾಯಿಕವಾಗಿ ಬೆಥ್ಲೆಹೆಮ್‌ ನಗರಕ್ಕೆ ಲ್ಯಾಟಿನ್ ಪ್ಯಾಟ್ರಿಯಾರ್ಕ್‌ ಮೆರವಣಿಗೆಯೊಂದಿಗೆ 28 ಸ್ಕೌಟ್‌ ತಂಡಗಳು ಬರುವುದನ್ನು 1 ತಂಡಕ್ಕೆ ಸೀಮಿತಗೊಳಿಸಲಾಗಿದೆ. ಬಾಲಕರು ಬೈಬಲ್‌ನ ಶಾಂತಿಯ ವಾಕ್ಯಗಳನ್ನು ಓದಿ, ಪದ್ಯಗಳನ್ನು ಹಾಡಲಿದ್ದಾರೆ. ಅವರು ಯುದ್ಧಕ್ಕೆ ಬಲಿಯಾದ ಗಾಝಾದ ಮಕ್ಕಳ ಫೋಟೋಗಳನ್ನು ಹಿಡಿದು ಕದನ ವಿರಾಮದ ಸಂದೇಶ ಸಾರಲಿದ್ದಾರೆ ವಾಶಿಂಗ್ಟನ್‌ ಪೋಸ್ಟ್ ಹೇಳಿದೆ.

ಬೆಥ್ಲೆಹೆಮ್‌ ನೇಟಿವಿಟಿ ಚರ್ಚ್ ನ ಫಾದರ್ ಈಸಾ ಥಲ್ಜಿಯಾ ಅವರು ಕ್ರಿಸ್ಮಸ್‌ ಸಂದೇಶ ತಿಳಿಸುವ ವೇಳೆ ಗಾಝಾದ ಕ್ರಿಸ್ಮಸ್ ಆಚರಣೆಯ ರದ್ದತಿ ಕುರಿತು ಮಾತನಾಡಿದ್ದು, ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲೂ ಈ ರೀತಿಯ ಕ್ರಿಸ್ಮಸ್ ಆಚರಿಸಿಲ್ಲ. ಗಾಝಾದಲ್ಲಿವವರು ನಮ್ಮ ಸೋದರರು ಮತ್ತು ಸೋದರಿಯರು. ಅವರು ಸಂಕಷ್ಟದಲ್ಲಿರುವಾಗ ನಾವು ಅದ್ದೂರಿ ಕ್ರಿಸ್ಮಸ್ ಆಚರಿಸಲು ಕಷ್ಟವಾಗುತ್ತದೆ. ಆದರೆ, ಪ್ರಾರ್ಥನೆಯಲ್ಲಿ ಒಂದಾಗಿರುವುದು ಒಳ್ಳೆಯದು. ನಾವು ಅವರಿಗಾಗಿ ಪ್ರಾರ್ಥಿಸುತ್ತೇವೆ” ಎಂದು ಹೇಳಿದ್ದಾರೆ.

ಬೆಥ್ಲೆಹೆಮ್‌ ಮಾತ್ರವಲ್ಲದೆ ಜೆರುಸಲೇಂ, ಜೋರ್ಡಾನ್‌ನಲ್ಲಿಯೂ ಕ್ರಿಸ್ಮಸ್ ಸಂಭ್ರಮಾಚರಣೆ ರದ್ದುಗೊಳಿಸಲಾಗಿದೆ ಎಂದು ಕ್ರಿಸ್ತಿಯಾನಿಟಿ ಟುಡೇ ವರದಿ ಮಾಡಿದೆ.

ಅಕ್ಟೋಬರ್‌ 7ರಂದು ಪ್ರಾರಂಭವಾದ ಇಸ್ರೇಲ್‌-ಹಮಾಸ್‌ ಸಂಘರ್ಷದಲ್ಲಿ ಇದುವರೆಗೆ 20 ಸಾವಿರಕ್ಕೂ ಅಧಿಕ ಗಾಝಾ ಅಥವಾ ಪ್ಯಾಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ. ಇಸ್ರೇಲ್‌ನ 1,200ರಷ್ಟು ಜನರು ಸಾವನಪ್ಪಿದ್ದಾರೆ. ಇಸ್ರೇಲ್ ಗಾಝಾ ಮೇಲಿನ ದಾಳಿ ಮುಂದುವರೆಸಿದ್ದು, ಇಂದು(ಡಿ.25) ಕೂಡ ಸುಮಾರು 60 ನಾಗರಿಕರು ಬಲಿಯಾಗಿದ್ದಾರೆ.

ಇದನ್ನೂ ಓದಿ : ಹಿಂದೂ ಮಹಾಸಾಗರದಲ್ಲಿ ಸಂಕಷ್ಟಕ್ಕೆ ಸಿಲುಕಿದ 185 ರೋಹಿಂಗ್ಯಾಗಳು: ರಕ್ಷಣೆಗೆ ವಿಶ್ವಸಂಸ್ಥೆ ಮನವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...