Homeಮುಖಪುಟದತ್ತು ಪಡೆದ ಬಳಿಕ ಅತ್ಯಾಚಾರ ಸಂತ್ರಸ್ತೆಯ ಮಗುವಿನ ಡಿಎನ್‌ಎ ಪರೀಕ್ಷೆ ಸರಿಯಲ್ಲ: ಬಾಂಬೆ ಹೈಕೋರ್ಟ್‌

ದತ್ತು ಪಡೆದ ಬಳಿಕ ಅತ್ಯಾಚಾರ ಸಂತ್ರಸ್ತೆಯ ಮಗುವಿನ ಡಿಎನ್‌ಎ ಪರೀಕ್ಷೆ ಸರಿಯಲ್ಲ: ಬಾಂಬೆ ಹೈಕೋರ್ಟ್‌

- Advertisement -
- Advertisement -

ಅತ್ಯಾಚಾರ ಸಂತ್ರಸ್ತೆಯ ಮಗುವನ್ನು ದತ್ತು ಪಡೆದ ಬಳಿಕ ಅದಕ್ಕೆ ಡಿಎನ್‌ಎ ಪರೀಕ್ಷೆ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ. ದತ್ತು ಪಡೆದ ನಂತರ ಅತ್ಯಾಚಾರ ಸಂತ್ರಸ್ತೆಯ ಮಗುವನ್ನು ಡಿಎನ್ಎ ಪರೀಕ್ಷೆ ನಡೆಸುವುದು ಮಗುವಿನ ಹಿತದೃಷ್ಟಿಯಿಂದ ಆಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

ಜಸ್ಟಿಸ್‌ ಜಿ ಎ ಸನಪ್‌ ಅವರ ಏಕಸದಸ್ಯ ಪೀಠವು,  17ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಆರೋಪಿಗೆ ಜಾಮೀನು ನೀಡಿದೆ. ಬಾಲಕಿ ಗರ್ಭಿಣಿಯಾಗಿದ್ದರು. ಬಾಲಕಿ ಮಗುವಿಗೆ ಜನ್ಮ ನೀಡಿದ ಬಳಿಕ ಮಗುವನ್ನು ದತ್ತು ನೀಡಲಾಗಿತ್ತು.

ಸಂತ್ರಸ್ತೆಗೆ ಜನಿಸಿದ ಮಗುವಿನ ಡಿಎನ್‌ಎ ಪರೀಕ್ಷೆಯನ್ನು ನಡೆಸಿದ್ದೀರಾ ಎಂದು ಈ ಹಿಂದೆ ಪೀಠವು ಪೊಲೀಸರಿಗೆ ಕೇಳಿದೆ. ಆದರೆ ಸಂತ್ರಸ್ತೆ ಹೆರಿಗೆಯಾದ ಬಳಿಕ ಮಗುವನ್ನು ದತ್ತು ಸ್ವೀಕಾರಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಮಗುವನ್ನು ಈಗಾಗಲೇ ದತ್ತು ತೆಗೆದುಕೊಳ್ಳಲಾಗಿದ್ದು, ದತ್ತು ಪಡೆದ ಪೋಷಕರ ಗುರುತನ್ನು ಸಂಬಂಧಪಟ್ಟ ಸಂಸ್ಥೆಯು ಬಹಿರಂಗಪಡಿಸುತ್ತಿಲ್ಲ ಎಂದು ಅವರು ಹೇಳಿದರು. ಇದು ಸರಿಯಾಗಿದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಮಗುವನ್ನು ದತ್ತು ಸ್ವೀಕರಿಸಿದ ಬಳಿಕ ವಾಸ್ತವಿಕ ಪರಿಸ್ಥಿತಿಯಲ್ಲಿ, ಮಗುವಿನ ಡಿಎನ್ಎ ಪರೀಕ್ಷೆಯು ಮಗುವಿನ ಹಿತಾಸಕ್ತಿ ಮತ್ತು ಮಗುವಿನ ಭವಿಷ್ಯದ ಹಿತದೃಷ್ಟಿಯಿಂದ ಆಗದಿರಬಹುದು ಎಂಬುದನ್ನು ಗಮನಿಸುವುದು ಸೂಕ್ತವಾಗಿದೆ ಎಂದು ಹೈಕೋರ್ಟ್ ಹೇಳಿದೆ.

ಸಂತ್ರಸ್ತೆಗೆ 17 ವರ್ಷ ವಯಸ್ಸಾಗಿದ್ದರೂ ಅವರ ಸಂಬಂಧವು ಒಮ್ಮತದಿಂದ ಕೂಡಿತ್ತು ಮತ್ತು ಆಕೆಗೆ ಸಂಬಂಧದ ಬಗ್ಗೆ ತಿಳುವಳಿಕೆ ಇದೆ ಎಂದು ಆರೋಪಿ ತನ್ನ ಜಾಮೀನು ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ. ಆರೋಪಿ ಸಂತ್ರಸ್ತೆಯೊಂದಿಗೆ ಬಲವಂತವಾಗಿ ದೈಹಿಕ ಸಂಬಂಧ ಬೆಳೆಸಿದ್ದ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಆರೋಪಿಯನ್ನು 2020ರಲ್ಲಿ ಉಪನಗರ ಓಶಿವಾರಾ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಪೋಕ್ಸೊ ಕಾಯ್ದೆ ಸೇರಿದಂತೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಸನ್‌ಗಳಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು.

ಸಂತ್ರಸ್ತೆ ಈ ಸಂಬಂಧಕ್ಕೆ ಸಮ್ಮತಿಸಿದ್ದಾಳೆ ಎಂದು ಆರೋಪಿ ಮಾಡಿದ ವಾದವನ್ನು ಈ ಹಂತದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದ ವೇಳೆ ಹೇಳಿದೆ. ಆದರೆ ಆರೋಪಿ 2020ರ ಬಂಧನದ ದಿನದಿಂದ ಈವರೆಗೆ ಜೈಲಿನಲ್ಲಿರುವುದರಿಂದ ಜಾಮೀನು ನೀಡಬೇಕು ಎಂದು ಹೇಳಿದೆ.

ಆರೋಪಿ 2 ವರ್ಷ 10 ತಿಂಗಳಿನಿಂದ ಜೈಲಿನಲ್ಲಿದ್ದಾನೆ. ನನ್ನ ದೃಷ್ಟಿಯಲ್ಲಿ ಆರೋಪಿಯನ್ನು ಮತ್ತಷ್ಟು ಜೈಲಿನಲ್ಲಿ ಇರಿಸುವುದು ಸಮಂಜಸವಲ್ಲ ಎಂದು ನ್ಯಾಯಾಧೀಶರು ಜಾಮೀನು ನೀಡುವ ವೇಳೆ ಹೇಳಿದ್ದಾರೆ.

ಇದನ್ನು ಓದಿ: ಮಣಿಪುರ: 3 ಜಿಲ್ಲೆಗಳಲ್ಲಿ ‘ಸ್ವಯಂ ಆಡಳಿತ’ ಘೋಷಿಸಿದ ಬುಡಕಟ್ಟು ಸಮುದಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಟಿಪ್ಪು ಸುಲ್ತಾನ್’ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸಲಿದ್ದಾರೆ ಎಂಬುವುದು ಸುಳ್ಳು

0
"ಜಿಹಾದಿ ಶಾರುಖ್ ಖಾನ್‌ನ ಭಾರೀ ಬಜೆಟ್‌ನಿಂದ ತಯಾರಾದ ದೇಶದ್ರೋಹಿ, ಮತಾಂಧ ತಿಪ್ಪೆ ಸುಲ್ತಾನನ ನಕಲಿ ಚರಿತ್ರೆ ಬರುತ್ತಿದೆ. ಇಂತಹ ದೇಶದ್ರೋಹಿಯ ಸಿನಿಮಾವನ್ನು ಬಹಿಷ್ಕರಿಸಲು ಶೇರ್ ಮಾಡಿ" ಎಂದು ಪೋಸ್ಟರ್ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ...