Homeಮುಖಪುಟಪಟ್ಟು ಬಿಡದೇ ಸಂಸತ್ತಿಗೆ ಜ್ಞಾಪಕ ಪತ್ರ ರವಾನಿಸಿದ ಜೆಎನ್‌ಯು ವಿದ್ಯಾರ್ಥಿಗಳು..

ಪಟ್ಟು ಬಿಡದೇ ಸಂಸತ್ತಿಗೆ ಜ್ಞಾಪಕ ಪತ್ರ ರವಾನಿಸಿದ ಜೆಎನ್‌ಯು ವಿದ್ಯಾರ್ಥಿಗಳು..

- Advertisement -
- Advertisement -

ಹಾಸ್ಟೆಲ್ ಶುಲ್ಕ ಹೆಚ್ಚಳವನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ನಡುವಿನ ತಿಕ್ಕಾಟ ತಾರಕಕ್ಕೇರಿದೆ.

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ (ಜೆಎನ್‌ಯುಎಸ್‌ಯು) ಸೋಮವಾರ ರಾತ್ರಿ ವಿದ್ಯಾರ್ಥಿಗಳ ಮನವಿಯಂತೆ, ಸಂಸತ್ತಿನಲ್ಲಿ ಕಾನೂನು ತಯಾರಕರಿಗೆ ಸಲ್ಲಿಸಬೇಕಿದ್ದ ಜ್ಞಾಪಕ ಪತ್ರವನ್ನು ಹಂಚಿಕೊಂಡಿದೆ. ಹೆಚ್ಚಳ ಮಾಡಲು ಬಯಸಿರುವ ಹಾಸ್ಟೆಲ್ ಶುಲ್ಕದ ಪ್ರಸ್ತುತ ರಚನೆ ಬಡ ವಿದ್ಯಾರ್ಥಿಗಳಿಗೆ ಮಾರಕವಾಗಿದೆ. ಇಷ್ಟೊಂದು ಶುಲ್ಕ ಭರಿಸಲು ಸಾಧ್ಯವಿಲ್ಲ. ನಮ್ಮ ಬೇಡಿಕೆಗಳನ್ನು ಅನುಮೋದಿಸುವಂತೆ ನಿಮ್ಮನ್ನು ಒತ್ತಾಯಿಸುತ್ತೇವೆ ಎಂದು ಜೆಎನ್‌ಯುಎಸ್‌ಯು ಜ್ಞಾಪಕ ಪತ್ರದಲ್ಲಿ ಮನವಿ ಮಾಡಿದೆ.

ಇಂಟರ್-ಹಾಲ್ ಅಡ್ಮಿನಿಸ್ಟ್ರೇಷನ್ (ಐಎಚ್‌ಎ) ಸಭೆಯನ್ನು ಮತ್ತೊಮ್ಮೆ ಆಯೋಜಿಸಬೇಕು. ಜೆಎನ್‌ಯುಎಸ್‌ಯು ವಿದ್ಯಾರ್ಥಿಗಳಿಗೂ ಸಭೆಯಲ್ಲಿ ಭಾಗವಹಿಸಲು ಅನುಮತಿ ನೀಡಬೇಕು. ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ, ಹೊಸ ಹಾಸ್ಟೆಲ್ ಡ್ರಾಫ್ಟ್ ಕೈಪಿಡಿ ಸಿದ್ಧಪಡಿಸಬೇಕು. ಹೆಚ್ಚಳ ಮಾಡಿರುವ ಶುಲ್ಕವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಜ್ಞಾಪಕ ಪತ್ರದಲ್ಲಿ ಉಲ್ಲೇಖಿಸಿ, ಆಗ್ರಹಿಸಿದ್ದಾರೆ. ವಾಸ್ತವದಲ್ಲಿ ಶುಲ್ಕ ಹೆಚ್ಚಳದಿಂದ ವಿದ್ಯಾರ್ಥಿಗಳ ಮಾಸಿಕ ಹಾಸ್ಟೆಲ್ ವೆಚ್ಚ 2,700 ರೂಪಾಯಿಯಿಂದ ತಿಂಗಳಿಗೆ 5,500 ರೂ.ಗೆ ಏರಿಕೆಯಾಗಲಿದೆ ಅಂತಾ ಜೆಎನ್‌ಯುಎಸ್‌ಯು ತಮ್ಮ ಜ್ಞಾಪಕ ಪತ್ರದಲ್ಲಿ ವಾದಿಸಿದೆ.

ಬಿಪಿಎಲ್ ವಿದ್ಯಾರ್ಥಿಗಳಿಗೆ 2,700 ರೂ.ಗಳಿಂದ 4,100 ರೂ.ಗೆ ಏರಿಕೆಯಾಗಿದೆ. ವಾರ್ಷಿಕ 27,000 ರೂ.ಗಳ ಆದಾಯವಿದ್ದು, ತಿಂಗಳು 4100 ರೂಪಾಯಿ ಭರಿಸುವುದು ತುಂಬಾ ಕಷ್ಟಕರವಾಗಿದೆ. ಇನ್ನು ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಪದೇ ಪದೆ ಪೊಲೀಸರು ಬಂಧಿಸುತ್ತಿದ್ದಾರೆ. ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸದೇ, ಸಭೆ ನಡೆಸದೇ ಪೊಲೀಸರನ್ನು ಮಧ್ಯಕ್ಕೆ ಬಿಡುತ್ತಿದೆ ಅನ್ನೋದು ವಿದ್ಯಾರ್ಥಿಗಳ ಆರೋಪ.

ಇನ್ನು ಸೋಮವಾರ ಬೆಳಗ್ಗೆ ಜೆಎನ್‌ಯು ಕ್ಯಾಂಪಸ್‌ನಿಂದ ಸಂಸತ್ತಿಗೆ ಮೆರವಣಿಗೆ ನಡೆಸಿದ್ದ ಜೆಎನ್‌ಯುಎಸ್‌ಯು, ಸಂಸದರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಲು ಯೋಜನೆ ರೂಪಿಸಿತ್ತು. ಆದರೆ ದೆಹಲಿ ಪೊಲೀಸರು ವಿದ್ಯಾರ್ಥಿಗಳನ್ನು ಮಧ್ಯದಲ್ಲೇ ತಡೆದು ಬಂಧಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...