Homeಮುಖಪುಟಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ನೇತೃತ್ವದಲ್ಲಿ ಮಹತ್ವದ ಸಭೆ; NSUI ರಾಷ್ಟ್ರೀಯ ಉಸ್ತುವಾರಿ ರುಚಿಗುಪ್ತ ರಾಜಿನಾಮೆ

ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ನೇತೃತ್ವದಲ್ಲಿ ಮಹತ್ವದ ಸಭೆ; NSUI ರಾಷ್ಟ್ರೀಯ ಉಸ್ತುವಾರಿ ರುಚಿಗುಪ್ತ ರಾಜಿನಾಮೆ

ಪಕ್ಷದ ಪ್ರಮುಖ ನಾಯಕರು ಕಾಂಗ್ರೆಸ್ ನಾಯಕತ್ವದ ಬಗ್ಗೆ ಅಸಮಾಧಾನ ಹೊರಹಾಕಿ ಪತ್ರ ಬರೆದು ಬಹಿರಂಗವಾಗಿ ಟೀಕೆಗಳನ್ನು ವ್ಯಕ್ತಪಡಿಸಿದ ನಂತರ ಮೊದಲ ಬಾರಿಗೆ ಪಕ್ಷ ಉನ್ನತ ಮಟ್ಟದ ನಾಯಕರೊಂದಿಗೆ ಸೋನಿಯ ಮಹತ್ವದ ಸಭೆ ನಡೆಸುತ್ತಿದ್ದಾರೆ.

- Advertisement -
- Advertisement -

ರಾಷ್ಟ್ರೀಯ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ದೆಹಲಿಯಲ್ಲಿ ಪಕ್ಷದ ಉನ್ನತ ಮಟ್ಟದ ನಾಯಕರೊಂದಿಗೆ ನಿರ್ಣಾಯಕ ಸಭೆ ಆರಂಭಿಸುತ್ತಿದ್ದಂತೆಯೇ ಇತ್ತ ವಿದ್ಯಾರ್ಥಿ ಸಂಘಟನೆ ಎನ್ಎಸ್‌ಯುಐನ ರಾಷ್ಟ್ರೀಯ ಉಸ್ತುವಾರಿ ರುಚಿಗುಪ್ತ ರಾಜಿನಾಮೆ ನೀಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಪಕ್ಷದ ಪ್ರಮುಖ ನಾಯಕರು ಕಾಂಗ್ರೆಸ್ ನಾಯಕತ್ವದ ಬಗ್ಗೆ ಅಸಮಾಧಾನ ಹೊರಹಾಕಿ ಪತ್ರ ಬರೆದು ಬಹಿರಂಗ ವಾಗಿ ಟೀಕೆಗಳನ್ನು ವ್ಯಕ್ತಪಡಿಸಿದ ನಂತರ ಮೊದಲ ಬಾರಿಗೆ ಪಕ್ಷ ಉನ್ನತ ಮಟ್ಟದ ನಾಯಕರೊಂದಿಗೆ ಸೋನಿಯ ಮಹತ್ವದ ಸಭೆ ನಡೆಸುತ್ತಿದ್ದಾರೆ.

ಸಭೆ ಬೆನ್ನಲ್ಲೇ ಎನ್ಎಸ್‌‌ಯುಐನ ರಾಷ್ಟ್ರೀಯ ಉಸ್ತುವಾರಿ ಮತ್ತು ರಾಹುಲ್ ಗಾಂಧಿ ಬಳಗದಲ್ಲಿ ಗುರುತಿಸಿ ಕೊಂಡಿದ್ದ ರುಚಿಗುಪ್ತ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು ಎಐಸಿಸಿ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಕರ್ನಾಟಕದಿಂದ ಗೋಮಾಂಸ ಆಮದು ಮಾಡಿಕೊಳ್ಳುವುದಾಗಿ ಗೋವಾ ಸಿಎಂ ಹೇಳಿಕೆ: ಕಾಂಗ್ರೆಸ್ ಟೀಕೆ

ಕೆ.ಸಿ.ವೇಣುಗೋಪಾಲ್ ರಾಜ್ಯ ಘಟಕಗಳನ್ನು ಮರುಸಂಘಟಿಸುವ ಪ್ರಯತ್ನಕ್ಕೆ ಅಡ್ಡಿಪಡಿಸುತ್ತಿದ್ದಾರೆ…ಸಂಘಟನೆಯಲ್ಲಿ ಹೊಸ ನಾಯಕತ್ವವನ್ನು ತರಲು ಯತ್ನಿಸಿದರೆ ಅದಕ್ಕೆ ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ವರದಿಯಾಗಿದೆ.

ಎನ್ಎಸ್‌ಯುಐ ಪದಾಧಿಕಾರಿಗಳುಳ್ಳ ವಾಟ್ಸಪ್ ಗುಂಪಿನೊಂದಿಗೆ ಮಾಹಿತಿ ಹಂಚಿಕೊಂಡಿರುವ ರುಚಿಗುಪ್ತ, “ನಾನು ರಾಜೀನಾಮೆ ನೀಡಿದ್ದೇನೆ ಎಂದು ಘೋಷಿಸಲು ಬರೆಯುತ್ತಿದ್ದೇನೆ. ನಿಮಗೆ ತಿಳಿದಿರುವಂತೆ ಪ್ರಮುಖ ಸಾಂಸ್ಥಿಕ ಬದಲಾವಣೆಗಳು ಬಹಳ ಕಾಲದಿಂದಲೂ ಬಾಕಿ ಉಳಿದಿವೆ. ರಾಷ್ಟ್ರೀಯ ಸಮಿತಿ ಒಂದು ವರ್ಷ ಮತ್ತು ಮೂರು ತಿಂಗಳು ತೆಗೆದುಕೊಂಡಿತು. ರಾಜ್ಯ ಅಧ್ಯಕ್ಷರ ಆದೇಶಗಳು ತಿಂಗಳುಗಳಿಂದ ಬಾಕಿ ಉಳಿದಿವೆ. ಹೊಸ ಕಾರ್ಯಕರ್ತರಿಗೆ ಸ್ಥಳಾವಕಾಶ ಕಲ್ಪಿಸಲು ಮರುಸಂಘಟನೆಗಾಗಿ ಇನ್ನೂ ಅನೇಕ ರಾಜ್ಯ ಘಟಕಗಳು ಕಾಯುತ್ತಿವೆ. ಈ ನಿರಂತರ ವಿಳಂಬಗಳು ಸಂಸ್ಥೆಯನ್ನು ಹಾನಿಗೊಳಿಸುತ್ತಿವೆ ಆದರೆ ಪ್ರಸ್ತುತ ಸಂದರ್ಭಗಳಲ್ಲಿ ಕಾಂಗ್ರೆಸ್ ಅಧ್ಯಕ್ಷರಿಗೆ ಪದೇ ಪದೇ ಹೇಳಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿ ಒಪ್ಪಲಾಗದು” ಎಂದು ಅವರು ಬರೆದಿದ್ದಾರೆ.

ಈ ವಾಟ್ಸಪ್ ಗುಂಪಿನ ಬಹುತೇಕ ನಾಯಕರು ಸೋನಿಯಾ ಗಾಂಧಿಗೆ ಹತ್ತಿರದವರೆಂದು ಪರಿಗಣಿಸಲ್ಪಟ್ಟಿರುವ ವೇಣುಗೋಪಾಲ್ ಅವರೊಂದಿಗೆ ಅಸಮಾಧಾನ ಹೊಂದಿದ್ದರು. ವೇಣುಗೋಪಾಲ್ ಎನ್‌ಎಸ್‌ಯುಐಗೆ ಸಂಬಂಧಿಸಿದ ಸಾಂಸ್ಥಿಕ ನೇಮಕಾತಿಗಳನ್ನು ದೀರ್ಘಕಾಲದಿಂದ ತಡೆಹಿಡಿದಿದ್ದಾರೆ ಎಂದು ಎನ್‌ಎಸ್‌ಯುಐ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಪತನದಲ್ಲಿ ಮೋದಿ ಪಾತ್ರವಿತ್ತು: ಬಿಜೆಪಿ ನಾಯಕನ ಹೇಳಿಕೆ ವೈರಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ...

0
"ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ"...