Homeಮುಖಪುಟಧರ್ಮಾಧಾರಿತ ಪೌರತ್ವವನ್ನು ಸಂವಿಧಾನ ಸಭೆ ತಿರಸ್ಕರಿಸಿದ ಇತಿಹಾಸ ; ಡಾ. ಅಂಬೇಡ್ಕರ್ ಗೆದ್ದಿದ್ದು ಹೀಗೆ...

ಧರ್ಮಾಧಾರಿತ ಪೌರತ್ವವನ್ನು ಸಂವಿಧಾನ ಸಭೆ ತಿರಸ್ಕರಿಸಿದ ಇತಿಹಾಸ ; ಡಾ. ಅಂಬೇಡ್ಕರ್ ಗೆದ್ದಿದ್ದು ಹೀಗೆ…

ಸರಕಾರವು ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯಿದೆಯು (CAA) ಧರ್ಮಾಧರಿತ ಪೌರತ್ವ ನೀಡಲು ಬಯಸಿದೆ. ಆದರೆ, ಭಾರತದ ಸಂವಿಧಾನ ಸಭೆಯು 1949ರಲ್ಲಿಯೇ ಈ ಕುರಿತು ವಿವರವಾಗಿ ಚರ್ಚಿಸಿ ಅದನ್ನು ತಿರಸ್ಕರಿಸಿತ್ತು. ಈ ಕುರಿತ ಕುತೂಹಲಕಾರಿ ವಿವರಗಳು ಇಲ್ಲಿವೆ.

- Advertisement -
- Advertisement -
  • ಆದಿತ್ಯ ಚಟರ್ಜಿ

ಅನುವಾದ: ನಿಖಿಲ್ ಕೋಲ್ಪೆ

ನಿಜವಾದ ಭಾರತೀಯರು ಯಾರು ಎಂಬ ಬಗ್ಗೆ ಕಾವೇರಿದ ಚರ್ಚೆಯು ಸಂವಿಧಾನ ಸಭೆಯಲ್ಲಿ ವಿಧಿ 5ರ ಪರವಾಗಿ ಮತದಾನ ನಡೆಯುವುದರ ಮೂಲಕ ಯಾವುದೇ ಧಾರ್ಮಿಕ ಉಲ್ಲೇಖಗಳಿಲ್ಲದೆ ಕೊನೆಗೊಂಡಿತ್ತು. ಪೌರತ್ವದ ಮಾನದಂಡಗಳ ಕುರಿತು ಕರಡು ರಚನಾ ಸಮಿತಿಯ ನಿಲುವು ಸದಸ್ಯ ಪಿ.ಎಸ್. ದೇಶ್‌ಮುಖ್ ಅವರಿಗೆ ನಿರಾಸೆ ಉಂಟುಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಅದು 1949ನೇ ಇಸವಿ.

ಡಾ. ಬಿ.ಆರ್.  ಅಂಬೇಡ್ಕರ್ ಅವರ ಪೌರತ್ವ ಕುರಿತ ವ್ಯಾಖ್ಯಾನವು  ಭಾರತೀಯ ಪೌರತ್ವವನ್ನು “ವಿಶ್ವದಲ್ಲಿಯೇ ಅತ್ಯಂತ ಅಗ್ಗದ ಪೌರತ್ವ”ವನ್ನಾಗಿ ಮಾಡುವುದೆಂದು ದೇಶ್‌ಮುಖ್ ಅವರು ಭಾವಿಸಿದ್ದರು. ಹುಟ್ಟಿನಿಂದ ಪೌರತ್ವ ನೀಡುವ ಕುರಿತು ಅವರಿಗೆ ಅಸಮಾಧಾನವಿತ್ತು. ಕರಡು ವಿಧಿಯನ್ನು ಸ್ವೀಕರಿಸಿದರೆ ಮುಂಬಯಿ ಬಂದರಿನ ಮೂಲಕ ಪ್ರಯಾಣಿಸುವ ಮಹಿಳೆಯೊಬ್ಬಳು ಹೆತ್ತ ಮಗುವಿಗೂ ಪೌರತ್ವ ನೀಡಬೇಕಾಗುತ್ತದೆ ಎಂದು ಅವರು ವಾದಿಸಿದ್ದರು.

ದೇಶ್‌ಮುಖ್ ಅವರು ಕನಿಷ್ಟ ಎರಡು ತಿದ್ದುಪಡಿಗಳಿಗೆ ಬೇಡಿಕೆ ಇಟ್ಟಿದ್ದರು. ಮೊದಲನೆಯದು ಕೇವಲ ಭಾರತದಲ್ಲಿ ಹುಟ್ಟುವುದು ಸಾಕಾಗದು; ಮಗು ಭಾರತೀಯ ಹೆತ್ತವರಿಗೆ ಹುಟ್ಟಿರಬೇಕು ಎಂಬುದು. ಎರಡನೆಯದೆಂದರೆ, ಹಿಂದೂಗಳು ಮತ್ತು ಸಿಕ್ಖರು ಪ್ರಪಂಚದ ಯಾವುದೇ ಕಡೆಯಲ್ಲಿ ವಾಸಿಸುತ್ತಿದ್ದರೂ ಭಾರತೀಯ ಪೌರತ್ವಕ್ಕೆ ಅರ್ಹರಾಗಿರಬೇಕು ಎಂಬುದು. ಆಗಿನ ಚರ್ಚೆ ಹೀಗಿತ್ತು:

ಶಿಬ್ಬನ್ ಲಾಲ್ ಸಕ್ಸೇನ: “ನೀವು ಹೇಳುತ್ತೀರಿ ‘ಭಾರತೀಯ ಹೆತ್ತವರಿಗೆ ಹುಟ್ಟಿದವರು’ ಎಂದು. ಭಾರತೀಯ ಹೆತ್ತವರನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ?”

ಪಿ.ಎಸ್. ದೇಶ್‌ಮುಖ್: “ಅದು ಭಾರತದಲ್ಲಿ ವಾಸಿಸುತ್ತಿರುವ ಎಲ್ಲರಿಗೂ ಅನ್ವಯಿಸಬೇಕೆಂದು ನನ್ನ ಯೋಚನೆ. ಅದನ್ನು ವ್ಯಾಖ್ಯಾನಿಸುವುದು ಸುಲಭ..”

ಶಿಬ್ಬನ್ ಲಾಲ್ ಸಕ್ಸೇನ: “ಹಾಗಾದರೆ ವ್ಯಾಖ್ಯಾನ ಕೊಡಿ?”

ಪಿ.ಎಸ್. ದೇಶ್‌ಮುಖ್: “…ಒಬ್ಬ ಭಾರತೀಯ ಸುಲಭದಲ್ಲಿ ಗುರುತಿಸಬಹುದಾದ ಮನುಷ್ಯ. (ಅದರಲ್ಲೂ ವಾಸಸ್ಥಾನದ ಜೊತೆಗೆ ಸೇರಿಸಿಕೊಂಡಾಗ). ಆದರೆ, ಒಬ್ಬ ಭಾರತೀಯನನ್ನು.ಗುರುತಿಸಲಾಗದು; ಮತ್ತು ಆತನ ಬಣ್ಣ, ಚಹರೆ ಇತ್ಯಾದಿಯಾಗಿ ಯಾರು ಭಾರತೀಯ ಎಂದು ನಿರ್ಧರಿಸುವುದು ಅಗತ್ಯ ಎಂದು (ಸಕ್ಸೇನ) ಭಾವಿಸುವುದಾದಲ್ಲಿ, ಅವರೇ ಒಂದು ಸೂಕ್ತ ವ್ಯಾಖ್ಯಾನ ಸೂಚಿಸಲು ನಾನು ಬಿಟ್ಟುಬಿಡುತ್ತೇನೆ.’

ಪೋಲೆಂಡ್‌ನ ಸಂವಿಧಾನವು ಪೋಲಿಷ್ ಹೆತ್ತವರಿಗೆ ಹುಟ್ಟಿದ ಯಾರಿಗೂ ಪೌರತ್ವ ನೀಡುತ್ತದೆ ಎಂದು ದೇಶ್‌ಮುಖ್ ಅವರಿಗೆ ಗೊತ್ತಿತ್ತು. ಅವರ ವಾದವೆಂದರೆ, ಯಾರು ಪೋಲಿಷ್ ಜನರು ಎಂದು ಪೋಲರಿಗೆ ಗೊತ್ತಿದೆ ಎಂದಾದರೆ ಯಾರು ಭಾರತೀಯರು ಎಂದು ಗೊತ್ತುಮಾಡಲು ಭಾರತೀಯರಿಗೆ ಏನು ಅಡ್ಡಿ ಎಂದಾಗಿತ್ತು. ಎಲ್ಲಾ ಹಿಂದೂಗಳಿಗೆ ಮತ್ತು ಸಿಕ್ಖರಿಗೆ ಭಾರತೀಯ ಪೌರತ್ವ ನೀಡಬೇಕೆಂದು ಅವರ ಪ್ರಸ್ತಾಪವಾಗಿದ್ದು, ಸದಸ್ಯರು ಜಾತ್ಯತೀತತೆಯ ವಾದವನ್ನು ತನ್ನ ಮುಂದೆ ಇಡುತ್ತಾರೆ ಎಂದು ಅವರು ನಿರೀಕ್ಷಿಸಿದ್ದರು. ಸಂವಿಧಾನ ಸಭೆಯು “ಜಾತ್ಯತೀತತೆಯ ಈ ವ್ಯವಹಾರದಲ್ಲಿ” ಮಿತಿ ಮೀರಿ ಹೋಗುತ್ತಿದೆ ಎಂದು ಭಾವಿಸಿದ್ದವರಲ್ಲಿ ಅವರು ಒಬ್ಬರಾಗಿದ್ದರು.

ತನ್ನ ಭಾಷಣದಲ್ಲಿ ಅವರು ಹೀಗೆ ಹೇಳಿದ್ದಾರೆ:

“ನಮ್ಮದೇ ಜನರನ್ನು ತೊಡೆದು ಹಾಕಬೇಕೆಂದು ಅದರ ಅರ್ಥವೆ…ನಮ್ಮ ಜಾತ್ಯತೀತತೆಯನ್ನು ಸಾಬೀತುಪಡಿಸಲು ನಮ್ಮದೇ ಜನರನ್ನು ತೊಡೆದುಹಾಕಬೇಕೆ…ಜಾತ್ಯತೀತತೆಯ ಹೆಸರಿನಲ್ಲಿ ಹಿಂದೂಗಳು ಮತ್ತು ಸಿಕ್ಖರನ್ನು ನಾವು ತೊಡೆದುಹಾಕಬೇಕೆ…ನಾವು ಜಾತ್ಯತೀತರು ಎಂಬುದನ್ನು ಸಾಬೀತುಪಡಿಸಲು ಭಾರತೀಯರಿಗೆ ಪವಿತ್ರ ಮತ್ತು ಪ್ರಿಯವಾದ ಎಲ್ಲವನ್ನೂ ಕಡೆಗಣಿಸಬೇಕೇ?…”

ಅವರಿಗೆ ದಾಸ್ ಭಾರ್ಗವ ಅವರಿಂದ ಬಲವಾದ ಬೆಂಬಲ ಸಿಕ್ಕಿತ್ತು. ಭಾರ್ಗವ ಹೀಗೆ ಹೇಳಿದ್ದರು:

“ಹಿಂದೂಗಳು ಮತ್ತು ಸಿಕ್ಖರಿಗೆ ಭಾರತ ಬಿಟ್ಟು ಬೇರೆ ಮನೆಯಿಲ್ಲ… ಜಾತ್ಯತೀತ ಎಂಬ ಪದವು ಯಾವುದು ವಾಸ್ತವವಾಗಿದೆಯೋ, ಅದನ್ನು ಹೇಳುವುದರಿಂದ ನಮ್ಮನ್ನು ಬೆದರಿಸಬಾರದು ಮತ್ತು.. . ವಾಸ್ತವವನ್ನು ಎದುರಿಸಬೇಕು…”

ಸಿಕ್ಖ್ ನಿರಾಶ್ರಿತರ ಪರವಾಗಿ ಮಾತನಾಡಿದ್ದ ಸರ್ದಾರ್ ಭೂಪಿಂದರ್ ಸಿಂಗ್ ಮತ್ತು ಅಸ್ಸಾಮಿನ ಹಿಂದೂಗಳ ಬಗೆಗೆ ಆತಂಕಹೊಂದಿದ್ದ ರೋಹಿಣಿ ಕುಮಾರ್ ಚೌಧರಿಯವರು ಕೂಡಾ ದೇಶ್‌ಮುಖ್ ಅವರನ್ನು ಬೆಂಬಲಿಸಿದ್ದರು.

ಆದರೆ, ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದರ ವಿರುದ್ಧ ಮಹಬೂಬ್ ಆಲಿ ಸಾಹಿಬ್ ಬಹದ್ದೂರ್ ಅವರು ಬಲವಾಗಿ ಮಾತನಾಡಿದ್ದರು. ಅವರು ಎಲ್ಲಾ ಧರ್ಮಗಳು ಒಂದೇ ಎಂಬ ಮಹಾತ್ಮಾ ಗಾಂಧಿಯವರ ಬೋಧನೆಯನ್ನು ನೆನಪಿಸಿಕೊಳ್ಳುವಂತೆ ಸಂವಿಧಾನ ಸಭೆಯನ್ನು ಕೋರಿದ್ದರು.

ವಿದೇಶಗಳಲ್ಲಿರುವ ಹಿಂದೂಗಳು ಮತ್ತು ಸಿಖ್ಖರಿಗೆ ಪೌರತ್ವ ನೀಡುವುದಾದಲ್ಲಿ ಇರಾನ್‌ನಲ್ಲಿ ವಾಸಿಸುತ್ತಿರುವ ಪಾರ್ಸಿಗಳನ್ನೂ ಪರಿಗಣಿಸಬೇಕು ಎಂದು ಆರ್.ಕೆ. ಸಿಡ್ವಾ ಹೇಳಿದ್ದರು. ಸಂವಿಧಾನದಲ್ಲಿ ಯಾವುದೇ ಒಂದು ನಿರ್ದಿಷ್ಟ ಸಮುದಾಯವನ್ನು ಪೌರತ್ವಕ್ಕಾಗಿ ಉಲ್ಲೇಖಿಸುವುದರಿಂದ “ಅದು ಉಳಿದ ಸಮುದಾಯಗಳನ್ನು ನಾವು ಕಡೆಗಣಿಸುತ್ತಿದ್ದೇವೆ ಎಂಬಂತೆ ಕಾಣುತ್ತದೆ” ಎಂದು ಆ ಸಮಯದಲ್ಲಿ ಅವರು ಹೇಳಿದ್ದರು.

ಈ ಹೊತ್ತಿನಲ್ಲಿ ಜವಾಹರಲಾಲ್ ನೆಹರೂ ಅವರು ಎದ್ದು ನಿಂತು, “ಈ ಜಾತ್ಯತೀತ ರಾಷ್ಟ್ರದ ವಿಷಯವನ್ನು ಎಳೆದಾಡುತ್ತಿರುವ” ಕುರಿತು ತನಗೆ ಅಸಂತೋಷವಾಗಿದೆ ಎಂದು ಹೇಳಿದ್ದರು. ಜಾತ್ಯತೀತತೆಯಿಂದ ನಾವು ಏನೋ ಭಾರೀ ಉದಾರವಾದುದನ್ನು ಅಥವಾ ತ್ಯಾಗವನ್ನು ಮಾಡುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಸಂವಿಧಾನ ಸಭೆ ಇರಬಾರದು ಎಂದು ಹೇಳಿದ್ದರು. “ಕೆಲವೇ ಹಾದಿ ತಪ್ಪಿದ ಮತ್ತು ಹಿಂದುಳಿದ ರಾಷ್ಟ್ರಗಳನ್ನು ಹೊರತುಪಡಿಸಿ, ಪ್ರತಿಯೊಂದು ರಾಷ್ಟ್ರವು ಮಾಡುವುದನಷ್ಟೇ ನಾವು ಮಾಡುತ್ತಿದ್ದೇವೆ” ಎಂದವರು ಹೇಳಿದ್ದರು.

ಅಲ್ಲಾಡಿ ಕೃಷ್ಣಸ್ವಾಮಿ ಐಯ್ಯರ್ ಅವರು ನೆಹರೂ ಅವರ ಭಾವನೆಗಳನ್ನು ಬೆಂಬಲಿಸಿದ್ದರು. “ಇನ್ನೊಂದು ದೇಶವನ್ನು ಆಯ್ಕೆ ಮಾಡಿರುವ ಜನರು ಮತ್ತು ಈ ದೇಶದೊಂದಿಗೆ ಸಂಬಂಧವನ್ನು ಉಳಿಸಿಕೊಳ್ಳಲು ಬಯಸಿರುವ ಜನರ ನಡುವೆ ನಾವು ವ್ಯತ್ಯಾಸವನ್ನು ಮಾಡಬಹುದು. ಆದರೆ, ಅದನ್ನು ಯಾವುದೇ ಜನಾಂಗೀಯ ಅಥವಾ ಧಾರ್ಮಿಕ ನೆಲೆಯಲ್ಲಿ ಮಾಡುವಂತಿಲ್ಲ” ಎಂದವರು ಹೇಳಿದ್ದರು.

ಡಾ. ಅಂಬೇಡ್ಕರ್ ಅವರು ಅನಗತ್ಯವಾಗಿ ಉದಾರತೆ ತೋರುತ್ತಿದ್ದಾರೆ ಎಂದು ದೇಶ್‌ಮುಖ್ ಭಾವಿಸಿದ್ದರೆ, ಬೃಜೇಶ್ವರ್ ಪ್ರಸಾದ್ ಅವರು ಬಾಬಾಸಾಹೇಬರನ್ನು ಬಲವಾಗಿ ಬೆಂಬಲಿಸಿದ್ದರು. ಅವರು ಹೀಗೆ ಹೇಳಿದ್ದರು: “ಪಾಕಿಸ್ತಾನದಲ್ಲಿರುವ ಎಲ್ಲಾ ಜನರನ್ನು ಈ ದೇಶಕ್ಕೆ ಬಂದು ನೆಲೆಸುವಂತೆ ಆಹ್ವಾನಿಸಬೇಕೆಂದು ನಾನು ಬಯಸುತ್ತೇನೆ. ಹಿಂದೂಗಳು ಮತ್ತು ಮುಸ್ಲಿಮರು ರಕ್ತಸಂಬಂಧಿಗಳು. ವಿಭಜನೆಯ ಕಿಡಿಗೇಡಿತನವನ್ನು ಕಾನೂನಿನ ವಾಸ್ತವಕ್ಕಿಂತ ಆಚೆಗೆ ಹರಡಲು ಬಿಡಬಾರದು”. ಎಲ್ಲಾ ಏಷ್ಯನರಿಗೆ ಸಮಾನ ಪೌರತ್ವದ ಪ್ರಸ್ತಾಪವನ್ನೂ ಮಾಡಿದ್ದ ಅವರು, ಆರಂಭಿಕ ಹೆಜ್ಜೆಯಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸಮಾನ ಪೌರತ್ವದ ಪ್ರಸ್ತಾಪ ಎತ್ತಿದ್ದರು.

ಇದಕ್ಕೆ ಮೊದಲಿನ ಚರ್ಚೆಯಲ್ಲಿ ಜಸ್ಪತ್ ರಾಯ್ ಕಪೂರ್ ಅವರು ಬೃಜೇಶ್ವರ್ ಪ್ರಸಾದ್ ಅವರ ವಿರುದ್ಧ ಕಟು ಮಾತುಗಳನ್ನು ಎಸೆದು, ಸಂವಿಧಾನ ಆರಂಭಕ್ಕೆ ಮೊದಲು ಮುಸ್ಲಿಮರಿಗೆ ಪೌರತ್ವ ನೀಡುವುದರ ಆರ್ಥಿಕ ಪರಿಣಾಮಗಳನ್ನು ಪರಿಗಣಿಸಬೇಕೆಂದು ಹೇಳಿದ್ದರು.

ತನ್ನ ಸರದಿ ಬಂದಾಗ ಬೃಜೇಶ್ವರ್ ಪ್ರಸಾದ್ ಅವರು ಈ ರೀತಿ ಉತ್ತರಿಸಿದ್ದರು: “ಸಂವಿಧಾನದ ಆರಂಭಕ್ಕೆ ಮೊದಲು ಈ ದೇಶದ ಪ್ರಜೆಯಾಗಿರುವ ಮುಸ್ಲಿಮನೊಬ್ಬನನ್ನು ಪೌರತ್ವದಿಂದ ವಂಚಿತಗೊಳಿಸುವುದಕ್ಕೆ ಯಾವ ಕಾರಣವೂ ನನಗೆ ಕಾಣುತ್ತಿಲ್ಲ- ಅದೂ ಕೂಡಾ ಪಾಕಿಸ್ತಾನದಿಂದ ಬಂದಿರುವ ಹಿಂದೂಗಳಿಗೆ ಭಾರತದ ಪೌರರಾಗುವಂತೆ ನಾವು ಆಹ್ವಾನಿಸುತ್ತಿರುವಾಗ. ಯಾವತ್ತೂ ಭಾರತದಲ್ಲಿ ಇಲ್ಲದ, ಸದಾ ಪಂಜಾಬ್ ಮತ್ತು ಗಡಿನಾಡಿನಲ್ಲಿಯೇ ವಾಸಿಸುತ್ತಿದ್ದವರು ಇಲ್ಲಿಗೆ ಬಂದು ಪೌರತ್ವ ಪಡೆಯುತ್ತಿರುವಾಗ, ನಾವು ಒಂದೇ ಎಂದು ಹೇಳುತ್ತಾ ಬಂದಿರುವ ಮತ್ತು ಇಲ್ಲಿಗೆ ಬಂದು ವಾಸಿಸಬಯಸುವ ಮಹಮ್ಮದೀಯರೂ ಹಾಗೇಕೆ ಮಾಡಬಾರದು?”

ಡಾ. ಅಂಬೇಡ್ಕರ್ ಅವರು ಸಮಾಪನಾ ಭಾಷಣ ಮಾಡಿ, ಮುದಿನ ಸಂಸತ್ತುಗಳಿಗೆ ಈ ಕುರಿತು ಮಾತನಾಡುವ ಅವಕಾಶ ಇರಬೇಕು. ಸಂವಿಧಾನ ಸಭೆಯು ಸಂವಿಧಾನದ ಮೂಲಕ ಬದಲಾವಣೆಯನ್ನು ಮಾತ್ರ ಸಾಧ್ಯ ಮಾಡಬೇಕು ಎಂದಿದ್ದರು.

ಪೌರತ್ವದ ನಿಯಮಾವಳಿಗಳನ್ನು ರೂಪಿಸುವುದು ಕರಡು ರಚನಕಾರರಿಗೆ ಅತ್ಯಂತ ಕಠಿಣ ಕಾರ್ಯವಾಗಿತ್ತು. ಹಿಂದಿನ ಎರಡು ಸಂದರ್ಭಗಳಲ್ಲಿ ಕರಡನ್ನು ಹಿಂದೆ ಕಳಿಸಲಾಗಿತ್ತು. ಕಾವೇರಿದ ಚರ್ಚೆಗಳು ನಡೆದಿದ್ದು, ಮೂರು ದಿನಗಳ ಕಾಲ ನಿರಂತರ ಒಂಭತ್ತು ಗಂಟೆಗಳ ಚರ್ಚೆ ಮುಂದುವರಿದಿತ್ತು.

ರಾಜೇಂದ್ರ ಪ್ರಸಾದ್ ಅವರು ಪೌರತ್ವ ನಿಯಮಗಳನ್ನು ಮತಕ್ಕೆ ಹಾಕಲು ಬಯಸಿದ್ದರು. ಕರಡು ಮತಕ್ಕೆ ಹಾಕಲು ಸಿದ್ಧವಾಗಿದೆಯೇ ಎಂದು ನಿರ್ಧರಿಸಲು ಇನ್ನೊಂದು ಮತದಾನ ನಡೆದಿತ್ತು. ಹೌದು ಎಂದು 59 ಮತಗಳು ಮತ್ತು ಇಲ್ಲ ಎಂದು 35 ಮತಗಳು ಬಿದ್ದಿದ್ದವು.

ನಂತರ ಈ ಮಾತುಕತೆ ನಡೆಯಿತು.

ರಾಜೇಂದ್ರ ಪ್ರಸಾದ್: “ಈಗ ನಾನು ತಿದ್ದುಪಡಿಗಳನ್ನು ಮತಕ್ಕೆ ಹಾಕಬೇಕು… ” (130 ತಿದ್ದುಪಡಿಗಳಿದ್ದುದರಿಂದ ಅವುಗಳನ್ನು ಯಾವ ಕ್ರಮದಲ್ಲಿ ಮತಕ್ಕೆ ಹಾಕುವುದು ಎಂದು ಅವರಿಗೆ ಸ್ಪಷ್ಟವಾಗಿರಲಿಲ್ಲ.)

ಡಾ. ಅಂಬೇಡ್ಕರ್: “ಎಲ್ಲಾ ತಿದ್ದುಪಡಿಗಳನ್ನು ಹಿಂತಗೆದುಕೊಳ್ಳೊಣ.”

ಆದರೆ, ದೇಶ್‌ಮುಖ್ ಅವರು ಮೊದಲ ಎರಡು ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳಲಿಲ್ಲ. ಅವುಗಳನ್ನು ಮತಕ್ಕೆ ಹಾಕಿದಾಗ ಅವು ತಿರಸ್ಕೃತವಾದವು. ನಂತರ ರಾಜೇಂದ್ರ ಪ್ರಸಾದ್ ಅವರು ಡಾ. ಅಂಬೇಡ್ಕರ್ ಅವರು ಮಂಡಿಸಿದ ಕರಡು ವಿಧಿಯನ್ನು ಮತಕ್ಕೆ ಹಾಕಿದಾಗ ಗೊತ್ತುವಳಿಯು ಅಂಗೀಕೃತವಾಯಿತು. ಭಾರತೀಯ ಸಂವಿಧಾನದ ವಿಧಿ 5 ಅಸ್ತಿತ್ವಕ್ಕೆ ಬಂತು. ಅದು ಧರ್ಮಾಧರಿತ ಪೌರತ್ವಕ್ಕೆ ಮಾನ್ಯತೆ ನೀಡಲಿಲ್ಲ.

(ಲೇಖಕ ಆದಿತ್ಯ ಚಟರ್ಜಿಯವರು ಸುಪ್ರೀಂಕೋರ್ಟ್ ಮತ್ತು ದಿಲ್ಲಿ ಹೈಕೋರ್ಟ್‌ನಲ್ಲಿ ವಾದಿಸುತ್ತಿರುವ ವಕೀಲರು.)

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿದ್ಯುತ್ ಖಾಸಗೀಕರಣ ವಿರುದ್ದದ ಹೋರಾಟಕ್ಕೆ ಗೆಲುವು: ಅರ್ಜಿ ಹಿಂಪಡೆದ ಟಾಟಾ ಪವರ್ ಕಂಪನಿ

ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣದ ಹೆಜ್ಜೆ ಇಡಲು ಮುಂದಾಗಿದ್ದ ಟಾಟಾ ಪವರ್ ಕಂಪನಿಗೆ ಭಾರಿ ಹಿನ್ನಡೆಯಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತಾನು...

SIR: ಮತದಾರರ ಮನೆಗೆ ಹೋಗದೆ ಕಚೇರಿಯಲ್ಲೇ ಕುಳಿತು ಫಾರ್ಮ್ ವಿತರಣೆ ಆರೋಪ, BLO ಗಳಿಗೆ ಎಚ್ಚರಿಕೆ ನೀಡಿದ ಆಯೋಗ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ಮನೆ-ಮನೆಗೆ ಭೇಟಿ...

ಅಳುವ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಕೂಡಿಹಾಕ್ತಿದ್ದ ಇಬ್ಬರು ಕೇರ್‌ಟೇಕರ್ ಅರೆಸ್ಟ್

ಸಿಲಿಕಾನ್ ಸಿಟಿಯ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್‌ರೂಮ್ ಹಾಗೂ ವಾಷಿಂಗ್ ಮೆಷಿನ್‌ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ...

“ನಾಗರಿಕರು ಸರ್ಕಾರದ ಗುಲಾಮರಲ್ಲ”: ಸಿಎಎ, ಜ್ಞಾನವಾಪಿ ವಿರೋಧಿ ಪ್ರತಿಭಟನೆ ಸಂಬಂಧ ಎಸ್‌ಡಿಪಿಐ ನಾಯಕನ ಗಡಿಪಾರು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

“ದೇಶದ ನಾಗರಿಕರು ಸರ್ಕಾರದ ಗುಲಾಮರಲ್ಲ. ಕೇವಲ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವುದು ಅಥವಾ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುವುದು ಒಬ್ಬ ನಾಗರಿಕನನ್ನು ಗಡಿಪಾರು ಮಾಡಲು ಕಾನೂನಾತ್ಮಕ ಕಾರಣವಾಗಲಾರದು,” ಎಂದು ಬಾಂಬೆ ಹೈಕೋರ್ಟ್‌ ಐತಿಹಾಸಿಕ...

ಗೌರಿಯಕ್ಕ, ಸುರೇಶ್ ಭಟ್ರ ಬಗ್ಗೆ ತಿಳಿಯಲು ಎಕ್ಸ್ ಆರೆಸ್ಸೆಸ್‌ನವರ ಪ್ರಮಾಣ ಪತ್ರ ಬೇಕಿಲ್ಲ

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಲ್ಲಿ ನಮ್ಮ ಒಡನಾಡಿಯಾಗಿದ್ದ ಎ‌ಐಸಿಸಿ ಕಾರ್ಯದರ್ಶಿಯೂ ಆಗಿರುವ ಪಿ.ವಿ.ಮೋಹನ್‌ರಿಗೆ ವಿಧಾನ ಪರಿಷತ್ ಸದಸ್ಯತ್ವ ಸಿಕ್ಕಿದ್ದು ಸಹಜವಾಗಿಯೇ ನಮಗೆ ಖುಷಿಯಾಗಿತ್ತು. ಈ ನಿಟ್ಟಿನಲ್ಲಿ ಮಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲಲ್ಲಿ ಕೋಮು ಸೌಹಾರ್ದ...

ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ: ‘ಆಪರೇಷನ್ RISE’ ಮತ್ತು ‘ಬೇಡ BRO’ ಅಭಿಯಾನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕರೆ

ಬೆಂಗಳೂರು: ಮಾದಕ ದ್ರವ್ಯ ಮುಕ್ತ ಕರ್ನಾಟಕವನ್ನು ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಮಾದಕ ವ್ಯಸನದ ವಿರುದ್ಧ ಯುವಜನತೆ ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ...

ಬೆಂಗಳೂರಿನ 3 ಪ್ರಮುಖ ಮಾರ್ಗಗಳಲ್ಲಿ ಟೋಲ್ ದರ ಭಾರಿ ಹೆಚ್ಚಳ: ಇಂದಿನಿಂದಲೇ ಜಾರಿ 

ಬೆಂಗಳೂರು: ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಜುಲೈ ಒಂದರಿಂದಲೇ ಅನ್ವಯವಾಗುವಂತೆ ಬೆಲೆ ಏರಿಕೆಯ ಭಾರಿ ಬಿಸಿ ತಟ್ಟಿದೆ. ಬೆಂಗಳೂರಿನ ಪ್ರಮುಖ ಸಂಪರ್ಕ ರಸ್ತೆಗಳಾದ ನೈಸ್ ರಸ್ತೆ (NICE Road), ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್...

ಕೊಪ್ಪಳದ ಬೋಚನಹಳ್ಳಿಯಲ್ಲಿ ದಲಿತರ ಮೇಲೆ ಹಲ್ಲೆ: ದೂರು-ಪ್ರತಿದೂರು; ಹೋರಾಟಕ್ಕೆ ಸಂಘಟನೆಗಳ ನಿರ್ಧಾರ

ಮೊಹರಂ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ದಲಿತರ ಮನೆಗಳಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕೊಪ್ಪಳ ತಾಲೂಕಿನ ಅಳವಂಡಿ ಬಳಿಯ ಬೋಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜೂನ್ 25ರಂದು ಗ್ರಾಮದಲ್ಲಿ ಮೊಹರಂ ಮೆರವಣಿಗೆ...

ಎನ್ಯೂಮರೇಷನ್ ಫಾರಂ ಭರ್ತಿ ಮಾಡುವ ಮೂಲಕ SIR ಗೆ ಚಾಲನೆ ನೀಡಿದ ಸಿಎಂ ಡಿ.ಕೆ ಶಿವಕುಮಾರ್

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು (ಜೂನ್ 30) ಮಂಗಳವಾರ ತಮ್ಮ ಸದಾಶಿವನಗರ ನಿವಾಸದಲ್ಲಿ ದಾಖಲಾತಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಅಭಿಯಾನಕ್ಕೆ ಅಧಿಕೃತವಾಗಿ...

‘ಆಪರೇಷನ್ ಸಿಂಧೂರ್‌’ ಕುರಿತು ಸಂಸತ್ತಿಗೆ ಸುಳ್ಳು ಮಾಹಿತಿ: ರಾಜನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್‌ನಿಂದ ಹಕ್ಕುಚ್ಯುತಿ ನೋಟಿಸ್

ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಹಕ್ಕುಚ್ಯುತಿ ನೋಟಿಸ್ ನೀಡಿದೆ. ಕಾಂಗ್ರೆಸ್ ಸಂಸದ ಕೆ. ಸಿ. ವೇಣುಗೋಪಾಲ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಈ ಕುರಿತು ಪತ್ರ ಬರೆದಿದ್ದು,...