ದೆಹಲಿಯಲ್ಲಿ 12 ಗಂಟೆಗೆ ಪ್ರಾರಂಭವಾಗಬೇಕಿದ್ದ ಟ್ರಾಕ್ಟರ್ ರ್‍ಯಾಲಿಯ ದಾರಿಯಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ ಪರಿಣಾಮ, ರೈತರು ಬ್ಯಾರಿಕೇಡನ್ನು ಮುರಿದು ತಮ್ಮ ರ್‍ಯಾಲಿಯನ್ನು ಮುಂಜಾನೆ 8 ಗಂಟೆಗೆ ಪ್ರಾರಂಭಿಸಿದ್ದಾರೆ. ರಾಜ್ಯದಲ್ಲೂ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಈಗಾಗಲೇ ಪ್ರತಿಭಟನೆ ಪ್ರಾರಂಭವಾಗಿವೆ. ಬೆಂಗಳೂರಿನಲ್ಲಿ ಬೃಹತ್ ಟ್ರಾಕ್ಟರ್ ರ್‍ಯಾಲಿ ನಡೆಯಲಿದ್ದು ತಯಾರಿಗಳು ಪ್ರಾರಂಭವಾಗಿದೆ.
ಬೆಂಗಳೂರಿನ ರ್‍ಯಾಲಿಗೆ ಟ್ರಾಕ್ಟರ್‌ಗಳನ್ನು ಅನುಮತಿಸುವುದಿಲ್ಲ ಎಂದು ಸೋಮವಾರವೆ ಪೊಲೀಸರು ತಿಳಿಸಿದ್ದರು. ಆದರೆ ರೈತ ಮುಖಂಡರು ರ್‍ಯಾಲಿಯಲ್ಲಿ ಟ್ರಾಕ್ಟರ್‌ಗಳು ಖಂಡಿತಾ ಭಾಗವಹಿಸಲಿದೆ. ತಡೆದರೆ ಅದರ ಪರಿಣಾಮವನ್ನು ಪೊಲೀಸರೇ ಎದುರಿಸಬೇಕು ಎಂದು ಎಚ್ಚರಿಸಿದ್ದರು. ಅದಾಗ್ಯೂ ಪೊಲೀಸರು ರಾಜ್ಯದೆಲ್ಲೆಡೆ ಸಾವಿರಾರು ಟ್ರಾಕ್ಟರ್‌ಗಳನ್ನು ತಡೆದಿದ್ದಾರೆ.
ರೈತರ ಗಣರಾಜ್ಯೋತ್ಸವ- ದೆಹಲಿಯ ಸಿಂಘು ಗಡಿಯಿಂದ ನಾನುಗೌರಿ.ಕಾಮ್ ಲೈವ್ ನೋಡಿ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ರೈತರ ಟ್ರಾಕ್ಟರ್‌ಗಳನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಅಲ್ಲದೆ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರತಿ ಹಳ್ಳಿಗಳನ್ನು ಕಾವಲು ಕಾಯುತ್ತಿದ್ದಾರೆ. ಈ ಮೂಲಕ ಚಳುವಳಿಯನ್ನು ಹತ್ತಿಕ್ಕುವ ಪ್ರಯತ್ನವನ್ನು ನೇರವಾಗಿ ಮಾಡುತ್ತಿದ್ದಾರೆ. ಆದರೆ ಇದನ್ನೂ ಮೀರಿ ರೈತರು ಬೆಂಗಳೂರಿನ ಐದು ಕೇಂದ್ರಗಳಲ್ಲಿ ಸಭೆನಡೆಯುತ್ತಿದ್ದು, ಸಾವಿರಾರು ಟ್ರಾಕ್ಟರ್‌ಗಳು ನರೆದಿವೆ.
ಭಾನುವಾರ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಪೊಲೀಸರ ಕ್ರಮವನ್ನು ವಿರೋಧಿಸಿದ್ದು, “ರಾಜ್ಯದಲ್ಲಿ ರೈತರು, ಕಾರ್ಮಿಕರು ದಲಿತರು ಸೇರಿ ಬೆಂಗಳೂರಲ್ಲಿ ಟ್ರಾಕ್ಟರ್ ಪೆರೇಡ್ ಮೂಲಕ ಗಣರಾಜ್ಯೋತ್ಸವ ಆಚರಣೆ ಮಾಡಲು ತೀರ್ಮಾನ ಮಾಡಿದ್ದೇವೆ. ಟ್ರಾಕ್ಟರ್ ರೈತರ ಸಂಕೇತ. ಈ ಕಾರ್ಯಕ್ರಮ ಟ್ರಾಕ್ಟರ್ ವರ್ಸರ್ಸ್ ಟ್ಯಾಂಕರ್ ಆಗಿದೆ. ಟ್ರಾಕ್ಟರ್‌ಗಳಿಗೆ ಅಡ್ಡಿಪಡಿಸಬೇಡಿ, ನಮ್ಮನ್ನು ಗೌರವಯುತವಾಗಿ ಬೆಂಗಳೂರಿಗೆ ಬರ ಮಾಡಿಕೊಂಡು ಅಷ್ಟೇ ಗೌರವವಾಗಿ ಬಿಳ್ಕೊಡಿ” ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬೊಮ್ಮಯಿ ಅವರಿಗೆ ವಿನಂತಿ ಮಾಡಿದ್ದರು.
ಬೆಂಗಳೂರು ರೈತ ಗಣರಾಜ್ಯೋತ್ಸವ ನಾನುಗೌರಿ.ಕಾಮ್ ಲೈವ್ ನೋಡಿ
