Homeಅಂತರಾಷ್ಟ್ರೀಯಕೊರೊನಾ ಹಿನ್ನೆಲೆ: ಜನವರಿ 31 ರವರೆಗೆ ಲಾಕ್‌ಡೌನ್ ವಿಸ್ತರಿಸಿದ ಜರ್ಮನ್!

ಕೊರೊನಾ ಹಿನ್ನೆಲೆ: ಜನವರಿ 31 ರವರೆಗೆ ಲಾಕ್‌ಡೌನ್ ವಿಸ್ತರಿಸಿದ ಜರ್ಮನ್!

- Advertisement -
- Advertisement -

ಕೊರೊನಾ ವೈರಸ್ ಉಲ್ಬಣಗೊಂಡ ಹಿನ್ನೆಲೆಯಲ್ಲಿ, ಜರ್ಮನ್ ಸರ್ಕಾರವು 16 ಒಕ್ಕೂಟ ರಾಜ್ಯಗಳಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್‌ ಅನ್ನು ಜನವರಿ 31 ರವರೆಗೆ ವಿಸ್ತರಿಸಲು ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಜರ್ಮನಿಯು ಮೊದಲ ಅಲೆಯ ಕೊರೊನಾ ಸಾಂಕ್ರಾಮಿಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವಲ್ಲಿ ಇತರೆ ಯುರೋಪಿಯನ್ ರಾಷ್ಟ್ರಗಳಿಗಿಂತ ಹೆಚ್ಚು ಯಶಸ್ವಿಯಾಗಿತ್ತು. ಆದರೆ ಅದು ಎರಡನೇ ಅಲೆಯಲ್ಲಿ ನಿಯಂತ್ರಣ ಕಳೆದುಕೊಂಡಿತು.

ಹಾಗಾಗಿ ಡಿಸೆಂಬರ್ 16 ರಂದು ಎರಡನೇ ಕಠಿಣ ಲಾಕ್‌ಡೌನ್ ಅನ್ನು ವಿಧಿಸಿತ್ತು ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಇದನ್ನೂ ಓದಿ: ರೈತ ಹೋರಾಟ: 7 ನೇ ಸುತ್ತಿನ ಮಾತುಕತೆ ವಿಫಲ – ಜನವರಿ 8 ಕ್ಕೆ…

ಒಂದು ದಿನದಲ್ಲಿ 9,847 ಕೊರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 1,775,513 ಕ್ಕೆ ಏರಿದೆ ಎಂದು ಸಾಂಕ್ರಾಮಿಕ ಕಾಯಿಲೆಗಳಿಗೆ ಸಂಬಂಧಿಸಿದ ರಾಬರ್ಟ್ ಕೋಚ್ ಇನ್ಸ್ಟಿಟ್ಯೂಟ್‌ನ ಅಂಕಿ ಅಂಶಗಳು ತಿಳಿಸಿದೆ.

ಒಂದು ದಿನದಲ್ಲಿ ವರದಿಯಾದ ಸಾವಿನ ಸಂಖ್ಯೆ 302 ಆಗಿದ್ದು, ಒಟ್ಟು ಸಾವಿನ ಸಂಖ್ಯೆ 34,574 ಕ್ಕೆ ಏರಿದೆ.

ಇದನ್ನೂ ಓದಿ: ತನ್ನ ಸೋಲನ್ನು ತಿರುಚುವಂತೆ ಚುನಾವಣಾ ಅಧಿಕಾರಿಗೆ ಕರೆ ಮಾಡಿ ಒತ್ತಡ ಹೇರಿದ ಟ್ರಂಪ್!

ಈ ಕುರಿತು ಚಾನ್ಸೆಲರ್‌ ಏಂಜೆಲಾ ಮಾರ್ಕೆಲ್ ಮತ್ತು ರಾಜ್ಯ ಪ್ರಧಾನ ಸಚಿವರುಗಳು ಸೇರಿ ಜನವರಿ 10 ರ ನಂತರದ ಕ್ರಮಗಳ ವಿಸ್ತರಣೆಯ ಕುರಿತು ಮಂಗಳವಾರ (ಜ.5) ಚರ್ಚಿಸಲಿದ್ದಾರೆ.

“ಎರಡು ಫೆಡರಲ್ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಜನವರಿ 31 ರವರೆಗೆ ಲಾಕ್‌ಡೌನ್‌ಗೆ ಬೆಂಬಲ ನೀಡುತ್ತಿವೆ. ಆದಾಗ್ಯೂ, ಮಂಗಳವಾರ ಔಪಚಾರಿಕ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಇತರ ಯುರೋಪಿಯನ್ ಒಕ್ಕೂಟದ ದೇಶಗಳಂತೆ, ಜರ್ಮನಿಯು ತನ್ನ ಪ್ರಜೆಗಳಿಗೆ ಕೊರೊನಾ ಲಸಿಕೆಯನ್ನು ಡಿಸೆಂಬರ್ 27 ರಿಂದ ನೀಡಲು ಪ್ರಾರಂಭಿಸಿತ್ತು


ಇದನ್ನೂ ಓದಿ: ಸಮುದ್ರದ ಅಲೆ ರಾಜಾಜ್ಞೆಗಾಗಿ ಕಾಯುವುದಿಲ್ಲ – ಅಮಿತ್ ಭಾದುರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಿಖ್ ಪೊಲೀಸ್ ಅಧಿಕಾರಿಗೆ “ಖಲಿಸ್ತಾನಿ” ಹಣೆಪಟ್ಟಿ ಕಟ್ಟಿದ ಬಿಜೆಪಿಗರು; ಸುವೇಂದು ಅಧಿಕಾರಿ ವಿರುದ್ಧ ಭುಗಿಲೆದ್ದ...

0
ಪ.ಬಂಗಾಳದ ಸಿಖ್ ಪೊಲೀಸ್ ಅಧಿಕಾರಿಯೊಬ್ಬರಿಗೆ ಬಿಜೆಪಿ ನಾಯಕ ಸುವೇಂದು ಅಧಿಕಾರಿ "ಖಲಿಸ್ತಾನಿ" ಎಂದು ಕರೆದಿದ್ದು, ತಮ್ಮದೇ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದ ಸಿಖ್‌ ಸಮುದಾಯಕ್ಕೆ ಸೇರಿದ ಐಪಿಎಸ್‌ ಅಧಿಕಾರಿಯನ್ನು ಸಿಖ್‌ ಪ್ರತ್ಯೇಕತಾವಾದಿಗಳಿಗೆ ಹೋಲಿಕೆ ಮಾಡಿದ್ದಾರೆ,...