Homeಅಂತರಾಷ್ಟ್ರೀಯತನ್ನ ಸೋಲನ್ನು ತಿರುಚುವಂತೆ ಚುನಾವಣಾ ಅಧಿಕಾರಿಗೆ ಕರೆ ಮಾಡಿ ಒತ್ತಡ ಹೇರಿದ ಟ್ರಂಪ್!

ತನ್ನ ಸೋಲನ್ನು ತಿರುಚುವಂತೆ ಚುನಾವಣಾ ಅಧಿಕಾರಿಗೆ ಕರೆ ಮಾಡಿ ಒತ್ತಡ ಹೇರಿದ ಟ್ರಂಪ್!

- Advertisement -
- Advertisement -

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸೋಲನುಭವಿಸಿದ್ದಾರೆ. ಜಾರ್ಜಿಯಾದಲ್ಲಿ ಜೋ ಬೈಡೆನ್ ಅವರ ಗೆಲುವನ್ನು ತಿರುಚಲು ಅಲ್ಲಿನ ಚುನಾವಣಾ ಮುಖ್ಯಸ್ಥರಿಗೆ ಡೊನಾಲ್ಡ್‌ ಟ್ರಂಪ್‌ ಕರೆ ಮಾಡಿದ್ದು ಇದೀಗ ಭಾರಿ ವಿವಾದ ಎಬ್ಬಿಸಿದೆ.

ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಬಂದಾಗಿಂನಿಂದಲೂ ಡೊನಾಲ್ಡ್‌ ಟ್ರಂಪ್ ತನ್ನ ಸೋಲನ್ನು ನಿರಾಕರಿಸುತ್ತಲೇ ಬಂದಿದ್ದಾರೆ. ಅಲ್ಲದೆ ಫಲಿತಾಂಶಗಳ ವಿರುದ್ದ ಅವರ ಪ್ರಚಾರ ಅಭಿಯಾನ ಸಮಿತಿಯು ಸುಪ್ರೀಂಕೋರ್ಟ್‌ ಕದ ತಟ್ಟಿತ್ತು. ಆದರೆ ನ್ಯಾಯಾಲಯವು ಅವರ ಅರ್ಜಿಯನ್ನು ತಿರಸ್ಕರಿಸಿತ್ತು.

ಡೊನಾಲ್ಡ್ ಟ್ರಂಪ್‌ ಚುನಾವಣೆಯಲ್ಲಿ ತನಗಾದ ಸೋಲನ್ನು ಗೆಲುವಾಗಿ ಪರಿವರ್ತಿಸಲು ಬೇಕಾಗಿರುವ ಅಗತ್ಯ ಮತಗಳನ್ನು ಹುಡುಕಲು ಆಗ್ರಹಿಸಿ ಕರೆ ಮಾಡಿರುವುದನ್ನು, ಅಮೆರಿಕದ ಮಾಧ್ಯಮ ವಾಷಿಂಗ್ಟನ್‌ ಪೋಸ್ಟ್ ಶನಿವಾರ ವರದಿ ಮಾಡಿದೆ. ಅಮೆರಿಕದ ಕಾನೂನು ತಜ್ಞರು ಇದು ಅಧಿಕಾರದ ದುರ್ಬಳಕೆ ಹಾಗೂ ಸಂಭಾವ್ಯ ಅಪರಾಧ ಕೃತ್ಯ ಎಂದು ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ:  ಚುನಾವಣಾ ಫಲಿತಾಂಶ ವಿರೋಧಿಸಿ ಬೃಹತ್‌ ರ್‍ಯಾಲಿ ನಡೆಸಲಿರುವ ಟ್ರಂಪ್‌‌ ಬೆಂಬಲಿಗರು

ಡೊನಾಲ್ಡ್‌ ಟ್ರಂಪ್ ಜಾರ್ಜಿಯಾದಲ್ಲಿ 11,779 ಮತಗಳಿಂದ ಸೋತಿದ್ದರು, ಅವರು ತನ್ನ ಕರೆಯಲ್ಲಿ, “ಜಾರ್ಜಿಯಾ ಜನರು ಹಾಗೂ ದೇಶದ ಜನರು ಆಕ್ರೋಶದಲ್ಲಿದ್ದಾರೆ. ಮತಗಳನ್ನು ಮತ್ತೆ ಎಣಿಕೆ ಮಾಡಿದ್ದೀರಿ ಎಂದು ಹೇಳುವುದರಲ್ಲಿ ಯಾವುದೇ ತಪ್ಪು ಇಲ್ಲ. 11,780 ಮತಗಳನ್ನು ಹುಡುಕಿ, ನನಗೆ ಬೇಕಾಗಿರುವುದು ಇಷ್ಟೇ. ಯಾಕೆಂದರೆ ನಾವು ಜಾರ್ಜಿಯಾವನ್ನು ಗೆದ್ದಿದ್ದೇವೆ” ಎಂದು ಹೇಳಿದ್ದಾರೆ ಎಂದು ವಾಷಿಂಗ್ಟನ್‌ ಪೋಸ್ಟ್‌ ತನ್ನ ವರದಿಯಲ್ಲಿ ಹೇಳಿದೆ.

ಚುನಾವಣಾ ಸಂಸ್ಥೆಯ ಕಚೇರಿಯು ಟ್ರಂಪ್‌ ಜೊತೆಗಿನ ಕರೆಯಲ್ಲಿ ಟ್ರಂಪ್ ಪ್ರತಿಪಾದನೆಯನ್ನು ನಿರಾಕರಿಸಿದ್ದು, ಜಾರ್ಜಿಯಾದಲ್ಲಿ ಟ್ರಂಪ್ ಸೋತಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಅಧಿಕಾರಿಯು, “ನಿಮ್ಮಲ್ಲಿರುವ ಅಂಕಿ ಅಂಶಗಳು ಸರಿಯಾಗಿಲ್ಲ” ಎಂದು ಟ್ರಂಪ್‌ಗೆ ತಿಳಿಸಿದರೂ, “ಜಾರ್ಜಿಯಾದಲ್ಲಿ ತಾನು ಸೋಲಲು ಸಾಧ್ಯವೇ ಇಲ್ಲ” ಎಂದು ಟ್ರಂಪ್‌ ಮತ್ತೆ ಹೇಳಿದ್ದಾರೆ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಉಲ್ಲೇಖಿಸಿದೆ.

ಚುನಾವಣಾ ಅಧಿಕಾರಿಗೆ ಕರೆ ಮಾಡಿ ಒತ್ತಡ ಹೇರಿರುವುದನ್ನು ಅಲ್ಲಿನ ವಿಪಕ್ಷದ ನಾಯಕರು ಟೀಕಿಸಿದ್ದು, ಒತ್ತಡಕ್ಕೆ ಮಣಿಯದ ಚುನಾವಣಾ ಅಧಿಕಾರಿಯನ್ನು ಅಭಿನಂದಿಸಿದ್ದಾರೆ.

ಇದನ್ನೂ ಓದಿ: ವೀಸಾ ನಿರ್ಬಂಧಗಳನ್ನು ಮಾರ್ಚ್‌ವರೆಗೆ ವಿಸ್ತರಿಸಿದ ಟ್ರಂಪ್: ಜೋ ಬೈಡನ್ ವಿರೋಧ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...