Homeಮುಖಪುಟಇರಾನ್ ಕಂಪನಿಗಳನ್ನು ಗುರಿಯಾಗಿಸಿ ಇಸ್ರೇಲ್‌ನಿಂದ ಸೈಬರ್‌ ದಾಳಿ: ವರದಿ

ಇರಾನ್ ಕಂಪನಿಗಳನ್ನು ಗುರಿಯಾಗಿಸಿ ಇಸ್ರೇಲ್‌ನಿಂದ ಸೈಬರ್‌ ದಾಳಿ: ವರದಿ

- Advertisement -
- Advertisement -

ಇಸ್ರೇಲ್‌ನ ಹ್ಯಾಕಿಂಗ್ ಗುಂಪೊಂದು ಇರಾನ್‌ನ ಬಹುತೇಕ ಇಂಧನ ಕಂಪನಿಗಳ ಮೇಲೆ ಸೈಬರ್ ದಾಳಿ ನಡೆಸಿದ್ದು, ಅಲ್ಲಿನ ಸಾಫ್ಟವೇರ್‌ಗಳನ್ನು ನಿಷ್ಕ್ರಿಯಗೊಳಿಸಿದೆ ಎಂದು ವರದಿಯಾಗಿದೆ.

ಟೈಮ್ಸ್ ಆಫ್ ಇಸ್ರೇಲ್ ವರದಿ ಪ್ರಕಾರ, ‘ಗೊಂಜೆಶ್ಕೆ ದರಾಂಡೆ’ ಅಥವಾ ‘ಪರಭಕ್ಷಕ ಗುಬ್ಬಚ್ಚಿ’ ಎಂಬ ಗುಂಪಿನ ಹೆಸರಿನ ಹ್ಯಾಕರ್‌ಗಳ ಗುಂಪು ಇರಾನ್‌ನಾದ್ಯಂತ ಇಂಧನ ಕಂಪನಿಗಳ ಕಾರ್ಯ ಚಟುವಟಿಕೆಗಳನ್ನು ನಿಷ್ಕ್ರಿಯಗೊಳಿಸಿದೆ.

ಸುಮಾರು 70 ಶೇ. ಇಂಧನ ಕಂಪನಿಗಳು ಸೈಬರ್ ದಾಳಿಯಿಂದ ಕೆಲಸ ಸ್ಥಗಿತಗೊಳಿಸಿವೆ ಎಂದು ಸೋಮವಾರ ಇರಾನ್ ರಾಜ್ಯ ಟಿವಿ ವರದಿ ಮಾಡಿದೆ.

ಸೈಬರ್ ದಾಳಿಯಿಂದ ಇಂಧನ ಕಂಪನಿಗಳ ಸಾಫ್ಟವೇರ್‌ಗಳು ನಿಷ್ಕ್ರಿಯಗೊಂಡಿವೆ. ಕೆಲವೊಂದು ಇಂಧನ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಅಲ್ಲಿಗೆ ಜನರು ಯಾರೂ ಬರಬೇಡಿ ಎಂದು ಮನವಿ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

2022 ರಲ್ಲಿ, ಗೊಂಜೆಶ್ಕೆ ದರಾಂಡೆ ಗುಂಪು ದೇಶದ ಇರಾನ್‌ನ ನೈಋತ್ಯದಲ್ಲಿರುವ ಪ್ರಮುಖ ಉಕ್ಕಿನ ಕಂಪನಿಯ ಮೇಲೆ ಸೈಬರ್ ದಾಳಿ ಮಾಡಿತ್ತು. ಅದಕ್ಕೂ ಮುನ್ನ 2021 ರಲ್ಲಿ ಇರಾನ್‌ನ ಇಂಧನ ವಿತರಣಾ ವ್ಯವಸ್ಥೆಯ ಮೇಲೆ ನಡೆದ ಸೈಬರ್ ದಾಳಿ ದೇಶಾದ್ಯಂತ ಇಂಧನ ಕಂಪನಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು.

ಪ್ರಮುಖ ತೈಲ ಮತ್ತು ಇಂಧನ ರಾಷ್ಟ್ರವಾದ ಇರಾನ್ ಮೇಲೆ ಹಲವು ರಾಷ್ಟ್ರಗಳಿಗೆ ಕಣ್ಣಿದೆ. ಇರಾನ್‌ ಇಂಧನ ಕಂಪನಿಗಳು ಆ ದೇಶ ಪ್ರಮುಖ ಆಸ್ತಿ. ಹಾಗಾಗಿ ಶತ್ರು ದೇಶಗಳು ಅವುಗಳನ್ನು ಗುರಿಯಾಗಿಸುತ್ತಿವೆ.

ಹಮಾಸ್-ಇಸ್ರೇಲ್ ಸಂಘರ್ಷದಲ್ಲಿ ಇರಾನ್ ಹಮಾಸ್ ಅಥವಾ ಪ್ಯಾಲೇಸ್ತೀನ್ ಪರ ನಿಂತಿದೆ. ಇರಾನ್ ಇಸ್ರೇಲ್‌ನ ಪ್ರಮುಖ ಶತ್ರು ರಾಷ್ಟ್ರ ಎಂದು ಪರಿಗಣಿಸಲಾಗಿದೆ. ಇಸ್ರೇಲ್ ಬೆಂಬಲಿಸುವ ಯುಎಸ್ ಕೂಡ ಇರಾನ್‌ನ ಪ್ರಮುಖ ಶತ್ರು ರಾಷ್ಟ್ರವಾಗಿದೆ.

ಇದನ್ನೂ ಓದಿ: ಆಧಾರ್ ಭದ್ರತೆ ಕುರಿತು ಕೇಂದ್ರ ಸರ್ಕಾರದಿಂದ ತಪ್ಪು ಮಾಹಿತಿ: ಟಿಎಂಸಿ ಸಂಸದ ಸಾಕೇತ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಿಎಎ ಅಡಿ ಪೌರತ್ವ ನೀಡಿದ ಕೇಂದ್ರ ಸರ್ಕಾರ: ಸುಪ್ರೀಂ ಮೆಟ್ಟಿಲೇರಲು ನಿರ್ಧರಿಸಿದ ಮುಸ್ಲಿಂ ಲೀಗ್

0
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವ ಪ್ರಕ್ರಿಯೆಯನ್ನು ಕೇಂದ್ರ ಗೃಹ ಇಲಾಖೆ ಪ್ರಾರಂಭಿಸಿದೆ. ಈಗಾಗಲೇ ಮೊದಲ ಹಂತದಲ್ಲಿ ಅರ್ಜಿ ಸಲ್ಲಿಸಿದ 300ಕ್ಕೂ ಅಧಿಕ...