Homeಅಂಕಣಗಳುಮಾತು ಮರೆತ ಭಾರತ-31; ಲಾಕ್‌ಡೌನ್ ಫೈಲ್ಸ್ : ಅಂಬೇಡ್ಕರ್ ಟಿ-ಶರ್ಟ್ ಜಾತಿ ಹೇಳಿತು

ಮಾತು ಮರೆತ ಭಾರತ-31; ಲಾಕ್‌ಡೌನ್ ಫೈಲ್ಸ್ : ಅಂಬೇಡ್ಕರ್ ಟಿ-ಶರ್ಟ್ ಜಾತಿ ಹೇಳಿತು

- Advertisement -
- Advertisement -

(ಭಾರತದ Dalit Human Rights Defenders Nertwork ಎಂಬ ಸಂಸ್ಥೆಯು ‘No lockdown on Caste Atrocities’ ಎಂಬ ಪುಸ್ತಕದಲ್ಲಿ ಕೆಲವು ನೈಜ ಘಟನೆಗಳನ್ನು ವರದಿ ಮಾಡಿದೆ. ಇದರಲ್ಲಿ ಭಾರತದ ಏಳು ರಾಜ್ಯಗಳಲ್ಲಿ ’ಕೋವಿಡ್ ಲಾಕ್‌ಡೌನ್’ ಸಮಯದಲ್ಲಿ ನಡೆದ ದಲಿತರ ಮೇಲಿನ 60 ದೌರ್ಜನ್ಯಗಳನ್ನು ಪಟ್ಟಿ ಮಾಡಿದೆ. ಒಂದೊಂದೂ ಭೀಕರ ಮತ್ತು ಹಿಂದೂ ಮೇಲ್ಜಾತಿ ವ್ಯಕ್ತಿಗಳು ದಲಿತರ ಮೇಲೆ ನಡೆಸಿರುವ ಕ್ರೂರ ಕೃತ್ಯಗಳನ್ನು ಬಯಲುಗೊಳಿಸುತ್ತದೆ. ಇದನ್ನು ವರದಿ ಮಾಡುವ ಉದ್ದೇಶ ಖಂಡಿತವಾಗಿಯೂ ಹಿಂದೂ ಮೇಲ್ಜಾತಿಗಳ ಮನ ಪರಿವರ್ತಿಸುವುದಲ್ಲ. ಬದಲಾಗಿ ’ಹಿಂದೂ ನಾವೆಲ್ಲ ಒಂದು’ ಎನ್ನುತ್ತಿರುವ ದಲಿತರ ಅಂಧಕಾರವನ್ನು ಕಳಚುವುದಾಗಿದೆ.)

ಡಾ.ಬಿ.ಆರ್. ಅಂಬೇಡ್ಕರ್ ಅವರು ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಅವರು ಭಾರತ ದೇಶಕ್ಕೆ ನೀಡಿದ ಸಂವಿಧಾನವೇ ಅದಕ್ಕೆ ಸಾಕ್ಷಿ. ಕಾರ್ಮಿಕ ಮಂತ್ರಿಗಳಾಗಿದ್ದಾಗ ಕೈಗೊಂಡ ಕಲ್ಯಾಣ ಕಾರ್ಯಗಳೇ ಅದಕ್ಕೆ ಸಾಕ್ಷಿ. ಹೀಗಿದ್ದರೂ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ, ಅಂಬೇಡ್ಕರ್‌ರನ್ನು ದಲಿತ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸಿ ನೋಡಲಾಗುತ್ತಿರುವ ವಿದ್ಯಮಾನ ಇನ್ನೂ ನಿಂತಿಲ್ಲ. ಸ್ವತಃ ಅಂಬೇಡ್ಕರ್‌ರೇ ಮೇಲ್ಜಾತಿ ಹಿಂದೂಗಳ ಇಂತಹ ನಡೆಗೆ ಬೇಸರಗೊಂಡಿದ್ದರು.

ದಕ್ಷಿಣ ಭಾರತದ ದ್ರಾವಿಡ ಚಳವಳಿಯ ಹಿರಿಮೆಯನ್ನು ಹೊತ್ತು ನಿಂತಿರುವ ತಮಿಳುನಾಡು ಸಹ ಇದಕ್ಕೆ ಅಪವಾದವಲ್ಲ. ಇಡೀ ದಕ್ಷಿಣ ಭಾರತದಲ್ಲಿಯೇ ಅತಿಹೆಚ್ಚು ದಲಿತರ ಮೇಲೆ ದೌರ್ಜನ್ಯ ನಡೆಯುವುದು ತಮಿಳುನಾಡಿನಲ್ಲಿ ಎಂದರೆ ಕೆಲವರಿಗೆ ಆಶ್ಚರ್ಯವೂ ಆಗಬಹುದು. ಆದರೆ, ಇಂದಿಗೂ ಅದೊಂದು ಜಾತಿಗ್ರಸ್ತರ ನಾಡಾಗಿಯೇ ಗುರುತಿಸಿಕೊಂಡಿದೆ. ಆಗಾಗ ಅಲ್ಲಲ್ಲಿ ಮೂಡುವ ಹೊಂಬೆಳಕು ರಾಜ್ಯದಲ್ಲಿ ಇಡಿಯಾಗಿ ಯಾವಾಗ ವ್ಯಾಪಿಸುತ್ತದೆಯೋ ತಿಳಿಯದಾಗಿದೆ.

ಇದಿಷ್ಟು ಹೇಳಲು ಕಾರಣವಿದೆ. ಲಾಕ್‌ಡೌನ್ ಸಮಯದಲ್ಲಿ ತಮಿಳುನಾಡಿನ ಚೆಂಗಮ್‌ನಲ್ಲಿ ನಡೆದ ಭೀಕರ ಕೃತ್ಯವೊಂದು ಇಡೀ ರಾಜ್ಯ ತಲೆತಗ್ಗಿಸುವಂತೆ ಮಾಡಿದೆ.

ಗೌತಮಪ್ರಿಯನ್ 20 ವರ್ಷದ ಯುವಕ. ಊರು ತೊಕ್ಕವಾಡಿ. ಪರಯ್ಯ ಸಮುದಾಯಕ್ಕೆ ಸೇರಿದವನು. ಅಂಬೇಡ್ಕರರನ್ನು ಓದಿಕೊಳ್ಳಲು ಆರಂಭಿಸಿದ್ದ ಯುವಕ. ಈತನ ತಂದೆ ಆರುಮುಗಮ್ ಸರ್ಕಾರಿ ಶಿಕ್ಷಕರು. ಹಾಗಾಗಿ ತಮ್ಮ ಮಗನಿಗೆ ಅತ್ಯುತ್ತಮ ಶಿಕ್ಷಣ ಕೊಡಿಸುತ್ತಿದ್ದರು. ಜೊತೆಗೆ ಸ್ವಾಭಿಮಾನದ ಪಾಠವನ್ನೂ ಕಲಿಸಿದ್ದರು.

ಇದನ್ನೂ ಓದಿ: ಮಾತು ಮರೆತ ಭಾರತ-29; ಲಾಕ್‌ಡೌನ್ ಫೈಲ್ಸ್: ಕ್ವಾರಂಟೈನ್ ಅಲ್ಲೂ ದಲಿತರಿಗೆ ಇಲ್ಲದಾದ ರಕ್ಷಣೆ

ಮಾರ್ಚ್ 31, 2020ರಂದು ಅಪರಾಹ್ನ 4 ಗಂಟೆಯ ಸಮಯದಲ್ಲಿ ಗೌತಮಪ್ರಿಯನ್ ತನ್ನ ತಂಗಿಯನ್ನು ಅವರ ಚಿಕ್ಕಪ್ಪನ ಮನೆಯ ಬಳಿ ಮೋಟಾರ್ ಬೈಕಿನಲ್ಲಿ ಬಿಟ್ಟು ಹಿಂದಿರುಗುತ್ತಿದ್ದಾಗ ಅಚಾನಕ್ಕಾಗಿ ತನ್ನ ಕಾಲೇಜು ಸ್ನೇಹಿತೆ ರಮ್ಯಾಳನ್ನು ಕಂಡನು. ದಾರಿಯಲ್ಲಿಯೇ ಬೈಕ್ ನಿಲ್ಲಿಸಿ ರಮ್ಯಾಳೊಂದಿಗೆ ಮಾತಿಗಿಳಿದಿದ್ದಾನೆ. ಇಬ್ಬರೂ ಖುಷಿಯಿಂದ ಮಾತನಾಡಿಕೊಳ್ಳುತ್ತಿದ್ದಾಗ ಅದೆಲ್ಲಿಂದಲೋ ಬಂದ ದಢೂತಿ ವ್ಯಕ್ತಿಯೊಬ್ಬ ಗೌತಮಪ್ರಿಯನ್‌ನನ್ನು ಉದ್ದೇಶಿಸಿ ರಮ್ಯಾ ಜೊತೆ ಮಾತನಾಡುತ್ತಿರುವುದಕ್ಕೆ ಆಕ್ಷೇಪಿಸಿದ್ದಾನೆ. ಆ ವ್ಯಕ್ತಿಯ ಹೆಸರು ಈಶ್ವರನ್. ಈತ ಸ್ಥಳೀಯ ಪೊಲೀಸ್ ಸ್ಟೇಷನ್ನಿನಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಮೇಲಾಗಿ ಆತನು ರಮ್ಯಾಳ ಜಾತಿಗೇ ಸೇರಿದ ವ್ಯಕ್ತಿಯಾಗಿದ್ದ. ಈಶ್ವರನ್ ಪೊಲೀಸ್ ಶೈಲಿಯಲ್ಲಿ ಗೌತಮಪ್ರಿಯನ್‌ಅನ್ನು ವಿಚಾರಿಸಲು ಆರಂಭಿಸಿದ. ಇದೆಲ್ಲವೂ ಇರಿಸುಮುರುಸು ಉಂಟುಮಾಡಿತಾದರೂ ಸಹಿಸಿಕೊಂಡು ಎಲ್ಲದಕ್ಕೂ ಗೌತಮ್ ಉತ್ತರ ನೀಡಿದ್ದಾನೆ. ’ನಮ್ಮ ಜಾತಿಯ ಹುಡುಗಿಯನ್ನು ಮಾತನಾಡಿಸಲು ನೀನ್ಯಾರು?’ ಎಂಬ ಪ್ರಶ್ನೆ ತೂರಿಬಂದಾಗ ಗೌತಮಪ್ರಿಯನ್‌ಗೆ ಎಲ್ಲವೂ ಅರ್ಥವಾಗಿ ಹೋಗಿತ್ತು. ಶಾಂತನಾಗಿಯೇ ’ತಾನು ತೊಕ್ಕವಾಡಿಯ ಹುಡಗ’ ಎಂದು ಉತ್ತರಿಸಿದನು. ಇದನ್ನು ಕೇಳುತ್ತಲೇ ಕೆರಳಿದ ಈಶ್ವರನ್ ’ಲೇ ಪರಯ್ಯ ನಿನಗೆಷ್ಟೋ ಧೈರ್ಯ ನಮ್ಮ ಜಾತಿ ಹುಡುಗಿಯನ್ನು ಮಾತನಾಡಿಸೋಕೆ’ ಎಂದು ಅಸಲಿ ವಿಷಯಕ್ಕೆ ಬಂದಿದ್ದಾನೆ. ಇದೆಲ್ಲವನ್ನೂ ನಿರೀಕ್ಷಿಸಿದ್ದ ಗೌತಮಪ್ರಿಯನ್ ಈಶ್ವರನ್‌ನನ್ನು ಸಮಾಧಾನಪಡಿಸಲು ಮುಂದಾದಾಗ ಮೇಲೆರಗಿದ ಈಶ್ವರನ್ ಕಾಲಿನಿಂದ ಗೌತಮ್‌ನನ್ನು ಒದ್ದು ನೆಲಕ್ಕೆ ತಳ್ಳಿದನು. ಅಲ್ಲಿ ಸಾರ್ವಜನಿಕರು ಬಂದು ಜಮಾಯಿಸಿದರು. ಕೋಪಗೊಂಡಿದ್ದ ಈಶ್ವರನ್ ಎಂಬ ಪಿಶಾಚಿ ಅಲ್ಲಿಯೇ ಇದ್ದ ಕೇಬಲ್ ವೈರನ್ನು ಕೈಗೆತ್ತಿಕೊಂಡು ಗೌತಮನ ಮೇಲೆ ಹರಿಬಿಟ್ಟನು. ಸುತ್ತ ಸುಮಾರು 80 ಮಂದಿ ಇದ್ದರೂ ಎಲ್ಲರೂ ಕೈಕಟ್ಟಿ ಬಾಯ್ಮುಚ್ಚಿ ನಿಂತರು. ಅಲ್ಲಿಯೇ ನಿಂತಿದ್ದ 7ನೇ ತರಗತಿಯ ಹುಡುಗ ಮಾತ್ರ ತನ್ನ ಕೈಲಿದ್ದ ಮೊಬೈಲ್ ಫೋನಿನಿಂದ ಇದೆಲ್ಲವನ್ನೂ ರೆಕಾರ್ಡ್ ಮಾಡಿಕೊಳ್ಳುತ್ತಿದ್ದನು.

ಗೌತಮ್ ಈಶ್ವರನ್‌ನನ್ನು ಕೈಮುಗಿದು ಅಂಗಲಾಚಿದರೂ ಬಿಡಲಿಲ್ಲ. ಈಶ್ವರನ್ ಒಳಗಿದ್ದ ಜಾತಿ ಭೂತ ಎದ್ದೆದ್ದು ಕುಣಿಯುತ್ತಿತ್ತು. ಅವನೊಳಗಿನ ಮೇಲ್ಜಾತಿ ಹೇಸಿಗೆ ಹೊರಬಂದು ಹರಿಯುತ್ತಿತ್ತು. ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವಿದೆ. ಬಹಳ ದೂರದಿಂದಲೇ ಗೌತಮಪ್ರಿಯನ್‌ನನ್ನು ದಲಿತ ಎಂದು ಈಶ್ವರನ್ ಗುರುತಿಸಿದ್ದನು. ಅದನ್ನು ಖಚಿತಪಡಿಸಿಕೊಂಡೇ ಬಂದಿದ್ದನು. ಹಾಗೆ ಖಚಿತಪಡಿಸಿಕೊಳ್ಳಲು ಕಾರಣ ಅಂದು ಗೌತಮಪ್ರಿಯನ್ ಅಂಬೇಡ್ಕರರ ಭಾವಚಿತ್ರವಿದ್ದ ಟಿ-ಶರ್ಟ್ ಹಾಕಿದ್ದು! ಗೌತಮಪ್ರಿಯನ್‌ನನ್ನು ಥಳಿಸುವಾಗ ಅಂಬೇಡ್ಕರರ ಮೇಲಿರುವ ಕೋಪವೂ ಮಿಶ್ರಣಗೊಂಡಿತ್ತು.

ಇದನ್ನೂ ಓದಿ: ಮಾತು ಮರೆತ ಭಾರತ-28; ಲಾಕ್‌ಡೌನ್ ಫೈಲ್ಸ್ : ದಲಿತರ ಪಾಲಿನ ಕಗ್ಗತ್ತಲ ದೀಪಾವಳಿ

ಈ ಪ್ರಕರಣದಲ್ಲಿ ಎದ್ದು ಕಾಣುವ ಅಂಶವೆಂದರೆ, ಒಬ್ಬ ಪೊಲೀಸ್ ಪೇದೆಗೇ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ದಲಿತ ಜಾತಿಯವರಾಗಿ ಕಂಡರೆ ಇನ್ನೂ ಸಾಮಾನ್ಯ ಜನರಿಗೆ ಹೇಗೆ ಕಾಣಬೇಕು? ಒಬ್ಬ ದಲಿತ ಯುವಕ ಮೇಲ್ಜಾತಿ ಯುವತಿಯ ಜೊತೆಗೆ ಮಾತನಾಡಲೂ ಸಹ ಸಾಧ್ಯವಿಲ್ಲವೇ? ಇಂತಹ ತಲೆಕೆಟ್ಟ ಪೊಲೀಸ್‌ಗಳು ಈ ದೇಶಕ್ಕೆ ಅಗತ್ಯವಿದ್ದಾರೆಯೇ? ನಮ್ಮ ಮತ ಬ್ಯಾಂಕ್ ರಾಜಕೀಯ ವ್ಯವಸ್ಥೆ ಇಂತಹ ಪೊಲೀಸ್ ಪೇದೆಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆಯೇ? ಉತ್ತರ ಅಸ್ಪಷ್ಟ. ಆದರೆ ಒಂದಂತೂ ಸ್ಪಷ್ಟ; ದಲಿತರು ಈ ಮೇಲ್ಜಾತಿ ಜಾತಿವಾದಿ ಮೃಗಗಳಿಗೆ ಅಷ್ಟು ಸುಲಭವಾಗಿ ಅರ್ಥವಾಗಲಾರರು. ಅವರಂತೆಯೇ ದಲಿತರೂ ಸಹ ಹಿಂಸಾವಾದವನ್ನು ಒಪ್ಪಿಕೊಂಡರೆ ಗಲ್ಲಿಗಲ್ಲಿಗಳಲ್ಲಿ ರಕ್ತದೋಕುಳಿ ಹರಿಯುತ್ತದೆ ಎಂಬ ಸತ್ಯವನ್ನು ಆದಷ್ಟು ಬೇಗ ಅವರು ಅರಿತುಕೊಳ್ಳಬೇಕು. ಅಂಬೇಡ್ಕರ್ ಹಾಕಿಕೊಟ್ಟ ಸಂವಿಧಾನ ಮಾರ್ಗವನ್ನೇ ದಲಿತರು ಇಂದಿಗೂ ಅನುಸರಿಸುವುದನ್ನು ಅಸಹಾಯಕತೆಯೆಂದು ತಿಳಿದುಕೊಳ್ಳುವುದನ್ನು ಬಿಡಬೇಕಿದೆ.

ಈಶ್ವರನ್ ಈಗ ಜೈಲಿನಲ್ಲಿದ್ದಾನೆ. ಪದೇಪದೇ ಜಾಮೀನಿಗಾಗಿ ಅರ್ಜಿ ಸಲ್ಲಿಸುತ್ತಿದ್ದಾನೆ. ಆದರೆ ನ್ಯಾಯಾಲಯ ಜಾಮೀನು ನೀಡಿಲ್ಲ. ಗೌತಮಪ್ರಿಯನ್ ತನಗಾದ ಅಘಾತವನ್ನು ಮರೆಯುವ ಸ್ಥಿತಿಗೆ ಇನ್ನೂ ತಲುಪಿಲ್ಲ. ಆತ ಮರೆಯುವಂತಹ ಬೆಳವಣಿಗೆಯೂ ಸಹ ಭಾರತದಲ್ಲೇನು ನಡೆಯುವುದಿಲ್ಲ. ಬೇಕಾದರೆ ಅದನ್ನು ನೆನಪಿಸುವ ಲಕ್ಷಾಂತರ ಘಟನೆಗಳು ನ್ಯೂಸ್ ಪೇಪರ್‌ನ ಮುಖಪುಟದಲ್ಲಿ ರಾರಾಜಿಸುತ್ತವೆ. ಕಳೆದ ತಿಂಗಳು ಕೋಲಾರದಲ್ಲಿ ಬೈಕ್‌ನಲ್ಲಿ ಒವರ್ ಟೇಕ್ ಮಾಡಿದ್ದಕ್ಕಾಗಿ ದಲಿತ ಯುವಕನನ್ನು ಮೇಲ್ಜಾತಿ ಪಿಶಾಚಿಗಳು ಥಳಿಸಿದ್ದರು. ಆ ನೋವಿಗೆ ಯುವಕ ಆತ್ಮಹತ್ಯೆ ಮಾಡಿಕೊಂಡುಬಿಟ್ಟ. ಆ ಯುವಕನಿಗೆ ಹೇಡಿತನದ ಪಾಠ ಮಾಡಿದ ನಮ್ಮಂತವರಿಗೆಲ್ಲ ಧಿಕ್ಕಾರವಿರಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...