Homeಮುಖಪುಟಡಿಎಂಕೆ ಶಾಸಕನ ಪುತ್ರನ ನಿವಾಸದಲ್ಲಿ ಸಿಗರೇಟಿನಿಂದ ಸುಟ್ಟು ದೌರ್ಜನ್ಯ: ದಲಿತ ಬಾಲಕಿ ಆರೋಪ

ಡಿಎಂಕೆ ಶಾಸಕನ ಪುತ್ರನ ನಿವಾಸದಲ್ಲಿ ಸಿಗರೇಟಿನಿಂದ ಸುಟ್ಟು ದೌರ್ಜನ್ಯ: ದಲಿತ ಬಾಲಕಿ ಆರೋಪ

- Advertisement -
- Advertisement -

ತಮಿಳುನಾಡಿನ ಡಿಎಂಕೆ ಶಾಸಕ ಐ ಕರುಣಾನಿತಿ ಪುತ್ರ ಮತ್ತು ಸೋಸೆ, ದಲಿತ ಯುವತಿಗೆ ದೌರ್ಜನ್ಯ ನಡೆಸಿದ್ದಾರೆ. ಯುವತಿ ಉಲುಂದೂರ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾದಾಗ ಪ್ರಕರಣ ಬಯಲಿಗೆ ಬಂದಿದ್ದು, ಯುವತಿಯ ಮೈಮೇಲೆ ಸಿಗರೇಟ್‌ನಿಂದ ಸುಟ್ಟ ಗಾಯಗಳು ಕಂಡುಬಂದಿದೆ.

ಪಲ್ಲವರಂ ಕ್ಷೇತ್ರದ ಡಿಎಂಕೆ ಶಾಸಕ ಐ ಕರುಣಾನಿತಿ ಅವರ ಮಗ ಆಂಟೊ ಮನೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಯುವತಿ ಕೆಲಸ ಮಾಡುತ್ತಿದ್ದಳು. ಬಾಲಕಿಯ ಮುಖ ಮತ್ತು ದೇಹದ ಮೇಲೆ ಸಿಗರೇಟ್‌ನಿಂದ ಸುಟ್ಟಗಾಯಗಳಿದ್ದು,  ಶಾಸಕರ ಮಗ ಮತ್ತು ಸೊಸೆ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.

ಪೊಂಗಲ್ ಹಬ್ಬಕ್ಕೆ ತಾಯಿಯ ಮನೆಗೆ ಯುವತಿ ತೆರಳಿದಾಗ ಮಗಳ ಮೇಲೆ ಗಾಯವಾಗಿರುವುದನ್ನು ತಾಯಿ ಗಮನಿಸಿದ್ದಾರೆ. ಯುವತಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಯುವತಿಯಿಂದ ದೂರು ಸ್ವೀಕರಿಸಬೇಕಿದೆ. ಈ ಬಗ್ಗೆ ಉಲುಂದೂರ್‌ಪೇಟೆ ಪೊಲೀಸರಿಂದ ಮಾಹಿತಿ ಪಡೆದಿದ್ದೇವೆ. ಅದರ ಆಧಾರದಲ್ಲಿ ಹೆಚ್ಚಿನ ತನಿಖೆಯನ್ನು ನಡೆಸಲಾಗುವುದು ಎಂದು ನೀಲಂಕರೈ ಸಹಾಯಕ ಪೊಲೀಸ್‌ ಆಯುಕ್ತರ ಕಚೇರಿ ತಿಳಿಸಿದೆ.

ಕರುಣಾನಿತಿ ಅವರ ಮಗ ಆಂಟೊ ಹಾಗೂ ಸೊಸೆ ಮೆರ್ಲಿನಾ ಅವರು ಚೆನ್ನೈನ ತಿರುವನ್ಮಿಯೂರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಥಳಿಸಿದ್ದಾರೆ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾರೆ. ಕಲ್ಲಾಕುರಿಚಿ ಜಿಲ್ಲೆಯ ಉಲುಂದೂರುಪೇಟೆ ಮೂಲದ ಅನು(ಹೆಸರು ಬದಲಿಸಲಾಗಿದೆ) ಅವರು ಎಂಟು ತಿಂಗಳ ಹಿಂದೆ ಅಂದರೆ 12ನೇ ತರಗತಿ ಪರೀಕ್ಷೆಯನ್ನು ಪೂರ್ಣಗೊಳಿಸಿದ ನಂತರ ಆಂಟೊ ಅವರ ನಿವಾಸದಲ್ಲಿ ಮನೆ ಕೆಲಸಕ್ಕೆ ಸೇರಿಕೊಂಡಿದ್ದರು.

ಸಂತ್ರಸ್ತೆ ಅನು(ಹೆಸರು ಬದಲಿಸಲಾಗಿದೆ) ಅವರ ತಾಯಿ ಚೆನ್ನೈನ ಕೋಲಪಾಕ್ಕಂನಲ್ಲಿ ಮನೆ ಕೆಲಸ ಮಾಡುತ್ತಿದ್ದಾರೆ. ಹಣಕಾಸಿನ ಸಮಸ್ಯೆಯಿಂದ ಆಂಟೊ ಅವರ ನಿವಾಸದಲ್ಲಿ ಮನೆ ಸಹಾಯಕರಾಗಿ ಕೆಲಸ ಮಾಡಲು ತಾಯಿ ಅನು ಅವರನ್ನು ಕಳುಹಿಸಿದ್ದರು. ಕಳೆದ ಎಂಟು ತಿಂಗಳಲ್ಲಿ ಮೆರ್ಲಿನಾ ಆಕೆಯನ್ನು ಥಳಿಸಿದ್ದಾಳೆ, ಸಿಗರೇಟ್‌ನಿಂದ ಚರ್ಮವನ್ನು ಸುಟ್ಟುಹಾಕಿದ್ದಾಳೆ ಮತ್ತು ಅವಳ ಕೂದಲನ್ನು ಚಿಕ್ಕದಾಗಿ ಕತ್ತರಿಸಿದ್ದಾಳೆ. ಇದಲ್ಲದೆ ದೌರ್ಜನ್ಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಉಲುಂದೂರುಪೇಟೆ ಆಸ್ಪತ್ರೆಯ ದಾಖಲಾತಿಯಲ್ಲಿ ಅನು ಅವರ ಮೇಲೆ ಕೋಲು ಮತ್ತು ಹೇರ್ ಸ್ಟ್ರೈಟ್ನರ್ ಬಳಸಿ ಹಲ್ಲೆ ನಡೆಸಲಾಗಿದೆ ಎಂದು ದಾಖಲಿಸಲಾಗಿದೆ. ಆಸ್ಪತ್ರೆಯ ಅಧಿಕಾರಿಗಳಿಗೆ ನೀಡಿದ ಹೇಳಿಕೆಯ ಪ್ರಕಾರ, ಆಕೆಯ ಉದ್ಯೋಗ ಸ್ಥಳದಲ್ಲಿ ಆಕೆಯ ಮೇಲೆ ಒದೆಯಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಹಣೆ, ಗಲ್ಲದ ಮೇಲೆ ಗಾಯ ಮತ್ತು ಎರಡೂ ಮುಂಗೈಗಳಲ್ಲಿ ಸುಟ್ಟ ಗಾಯಗಳಿರುವುದು ಕಂಡುಬಂದಿದೆ. ಆಕೆಯ ದೇಹದಲ್ಲಿ ಹಲವು ಗಾಯಗಳು ಕಂಡು ಬಂದಿರುವುದರಿಂದ ಆಸ್ಪತ್ರೆಯ ಆಡಳಿತವು ಪೊಲೀಸರಿಗೆ ಮಾಹಿತಿ ನೀಡಿದೆ. ಚೆನ್ನೈನಲ್ಲಿ ಘಟನೆಗಳು ನಡೆದಿದ್ದರಿಂದ ಉಲುಂದೂರ್‌ಪೇಟೆ ಪೊಲೀಸರು ತಿರುವನ್ಮಿಯೂರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಅವರು ನನ್ನ ಫೋನ್‌ನ್ನು ಕಸಿದುಕೊಂಡರು, ಆದ್ದರಿಂದ ನಾನು ನನ್ನ ತಾಯಿಯೊಂದಿಗೆ ಮಾತನಾಡಲು ನಡೆಸಲು ಸಾಧ್ಯವಾಗಲಿಲ್ಲ. ಅವರು ಮೇ 2023ರಲ್ಲಿ ಆರು ತಿಂಗಳ ಕಾಲ ಇಲ್ಲಿ ಕೆಲಸ ಮಾಡಲು ನನ್ನ ತಾಯಿಯ ಸಮ್ಮುಖದಲ್ಲಿ ಬಾಂಡ್ ಪೇಪರ್‌ಗೆ ಸಹಿ ಹಾಕುವಂತೆ ಒತ್ತಾಯಿಸಿದರು. ಆ ಸಮಯದಲ್ಲಿ ಮೆರ್ಲಿನಾ ನನ್ನ ಫೋನ್‌ನ್ನು ನನ್ನ ತಾಯಿಗೆ ಹಸ್ತಾಂತರಿಸಿದ್ದಾರೆ. 12ನೇ ತರಗತಿ ಪರೀಕ್ಷೆಯಲ್ಲಿ 433 ಅಂಕ ಪಡೆದಿರುವ ನಾನು ಮೆಡಿಕಲ್ ಓದಲು ಬಯಸಿದ್ದೆ. NEET ಕೋಚಿಂಗ್‌ಗಾಗಿ ಹಣಕ್ಕೆ ಕೆಲಸಕ್ಕೆ ಸೇರ್ಪಡೆಯಾಗಿದ್ದೆ. ನಾನು ಓದಲು ಹಣ ಸಂಪಾದಿಸಲು ಇಲ್ಲಿದ್ದೇನೆ ಎಂದು ನಾನು ಅವರಿಗೆ ಹೇಳಿದೆ ಮತ್ತು ಅವರು ನನ್ನನ್ನು ಆರ್ಥಿಕವಾಗಿ ಬೆಂಬಲಿಸುತ್ತಾರೆ ಎಂದು ಹೇಳಿದ್ದರು. ಆಗಸ್ಟ್ 2023ರಲ್ಲಿ ನಾನು ನನ್ನ ವರ್ಗಾವಣೆ ಪ್ರಮಾಣಪತ್ರವನ್ನು ಪಡೆಯಲು ಹೋಗುವಾಗ ಮೆರ್ಲಿನಾ ನನ್ನೊಂದಿಗೆ ಶಾಲೆಗೆ ಬಂದಿದ್ದರು. ಕೆಲವು ದಿನಗಳ ನಂತರ ಅವರು ನನ್ನನ್ನು ಆನ್‌ಲೈನ್ ಶಿಕ್ಷಣವನ್ನು ಪಡೆಯುವ ಸಂಸ್ಥೆಗೆ ಸೇರಿಸುವುದಾಗಿ ಹೇಳಿದ್ದರು. ಅವಳು ಕೋರ್ಸ್‌ಗೆ 2 ಲಕ್ಷ ರೂ.ಕೊಟ್ಟಿರುವುದಾಗಿ ಹೇಳಿದ್ದಾರೆ. ಆದರೆ ನಾನು ಆನ್‌ಲೈನ್‌ನಲ್ಲಿ ಯಾವುದೇ ತರಗತಿಗಳಿಗೆ ಹಾಜರಾಗಲಿಲ್ಲ.  ಮೆರ್ಲಿನಾಗೆ ಮನೆಗೆ ಮರಳಲು ಅವಕಾಶ ನೀಡುವಂತೆ ಹಲವಾರು ಬಾರಿ ವಿನಂತಿಸಿದ್ದೆ. ಅವರು 10 ಮತ್ತು 12ನೇ ತರಗತಿಯ ಅಂಕಪಟ್ಟಿಗಳನ್ನು ವರ್ಗಾವಣೆ ಪ್ರಮಾಣಪತ್ರದೊಂದಿಗೆ ಇಟ್ಟುಕೊಂಡಿದ್ದರು. ಅವಳು  ಕೆಲಸಕ್ಕೆ ಸಂಬಳ ನೀಡಲಿಲ್ಲ. ಒಪ್ಪಂದದಂತೆ ತಿಂಗಳಿಗೆ 16,000 ರೂ.ಗಳನ್ನು ನೀಡಬೇಕಿತ್ತು. ಆದರೆ ಕೇವಲ 5,000 ರೂ.ನೀಡಲಾಗಿದೆ ಎಂದು ಸಂತ್ರಸ್ತ ಬಾಲಕಿ ಆರೋಪಿಸಿದ್ದಾಳೆ.

ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಐ ಕರುಣಾನಿತಿ, ಮಗ ಮತ್ತು ಸೊಸೆ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಮಗನ ಮನೆಯಲ್ಲಿ ಏನಾಯಿತು ಎಂಬುದು ತನಗೆ ತಿಳಿದಿಲ್ಲ, ಆದರೆ ಮನೆಮಂದಿ ಯಾವತ್ತೂ ತಮ್ಮ ಉದ್ಯೋಗಿಗಳನ್ನು ಈ ರೀತಿ ನಡೆಸಿಕೊಂಡಿಲ್ಲ. ಅವರು ಅವಳ 18ನೇ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ದೂರಿನ ಹಿಂದೆ ವೈಯಕ್ತಿಕ ಪ್ರೇರಣೆ ಇರಬಹುದು. ನಾವು ಅವಳನ್ನು ನಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಂಡೆವು ಮತ್ತು ಶಿಕ್ಷಣ ಪಡೆಯಲು ಅವಳನ್ನು ಬೆಂಬಲಿಸಿದೆವು. ಇವು ಸುಳ್ಳು ಆರೋಪಗಳು ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿ: ಮಣಿಪುರದಲ್ಲಿ ಮತ್ತೆ ಉದ್ವಿಗ್ನ: ಪೊಲೀಸ್ ಪ್ರಧಾನ ಕಚೇರಿ ಮೇಲೆ ದಾಳಿ, ಮನೆಗಳ ಧ್ವಂಸ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...