Homeಮುಖಪುಟಮಧ್ಯಪ್ರದೇಶ: ಶಿವರಾಜ್ ಚೌಹಾಣ್‌ ಕ್ಯಾಬಿನೆಟ್ ವಿಸ್ತರಣೆಗೆ ಉಮಾ ಭಾರತಿ ಬೇಸರ

ಮಧ್ಯಪ್ರದೇಶ: ಶಿವರಾಜ್ ಚೌಹಾಣ್‌ ಕ್ಯಾಬಿನೆಟ್ ವಿಸ್ತರಣೆಗೆ ಉಮಾ ಭಾರತಿ ಬೇಸರ

ಬಿಜೆಪಿಗೆ ಸೇರ್ಪಡೆಯಾದ 22 ಕಾಂಗ್ರೆಸ್ ಶಾಸಕರಲ್ಲಿ 14 ಜನರನ್ನು ಮಂತ್ರಿಗಳಾಗಿ ಸೇರಿಸಿಕೊಳ್ಳಲಾಗಿದೆ. ಅವರಲ್ಲಿ 11 ಮಂದಿ ಜ್ಯೋತಿರಾದಿತ್ಯ ಸಿಂಧಿಯಾರವರ ಆಪ್ತರಾಗಿದ್ದಾರೆ.

- Advertisement -
- Advertisement -

ಮಧ್ರಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅಂತೂ ಇಂತೂ ತಮ್ಮ ಸಚಿವ ಸಂಪುಟ ವಿಸ್ತರಣೆ ಮುಗಿಸಿದ್ದಾರೆ. ಹೊಸ ಸರ್ಕಾರ ರಚನೆಗೆ ಕಾರಣರಾದ ಜ್ಯೋತಿರಾದಿತ್ಯ ಸಿಂಧಿಯಾ ಶಿಬಿರಕ್ಕೆ 14 ಸಚಿವ ಸ್ಥಾನಗಳು ಸಿಕ್ಕಿವೆ. ಇದರಿಂದ ಮಧ್ಯಪ್ರದೇಶದ ಬಿಜೆಪಿಯೊಳಗೆ ಮೊದಲ ಬಿರುಕುಗಳು ಕಾಣಿಸಿಕೊಂಡಿವೆ.

ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಹಲವಾರು ಶಾಸಕರಿಗೆ ಸಚಿವ ಸ್ಥಾನ ಸಿಗದಿದ್ದುದ್ದಕ್ಕೆ ಬೇಸರಗೊಂಡಿದ್ದಾರೆ. ಅವರ ಬೆಂಬಲಿಗರು ಸಚಿವ ಸ್ಥಾನಕ್ಕೆ ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದಾರೆ.

ಪಕ್ಷದ ಹಿರಿಯ ನಾಯಕಿ ಉಮಾ ಭಾರತಿಯವರು ಪಕ್ಷದ ರಾಜ್ಯ ಅಧ್ಯಕ್ಷ ವಿ.ಡಿ.ಶರ್ಮಾ ಅವರಿಗೆ ಪತ್ರ ಬರೆದಿದ್ದು, ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರ ಸಲಹೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ದೂರಿದ್ದಾರೆ.

ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿದ್ದ ಉಮಾ ಭಾರತಿಗೆ ಪಕ್ಷದ ಕಾರ್ಯದರ್ಶಿ ಸುಹಾಸ್ ಭಗತ್ ಮತ್ತು ರಾಜ್ಯ ಘಟಕದ ಬಿಜೆಪಿ ಸಂಸದೀಯ ಉಸ್ತುವಾರಿ ವಿನಯ್ ಸಹಸ್ರಬುಧೆ ಅವರಿಗೆ ಪತ್ರ ಬರೆದಿದ್ದಾರೆ. ಈ ಸಂಪುಟ ವಿಸ್ತರಣೆಯು ಜಾತಿ ಮತ್ತು ಪ್ರಾದೇಶಿಕ ಸಮಗ್ರತೆಯಿಂದ ಕೂಡಿಲ್ಲವಾದ್ದರಿಮದ ಪಟ್ಟಿಯನ್ನು ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.

33 ಸದಸ್ಯರ ಕ್ಯಾಬಿನೆಟ್‌ನಲ್ಲಿ ಎಂಟು ಠಾಕೂರ್‌ಗಳು, ಮೂವರು ಬ್ರಾಹ್ಮಣರು, ಒಬ್ಬ ಕಾಯಸ್ಥ, ಒಬ್ಬ ಸಿಖ್, ಪರಿಶಿಷ್ಟ ಪಂಗಡದ ನಾಲ್ವರು ಮತ್ತು ನಾಲ್ವರು ಪರಿಶಿಷ್ಟ ಜಾತಿಯ ಮಂತ್ರಿಗಳು ಸೇರಿದ್ದಾರೆ.

ಮ್ಯಾಂಡ್‌ಸೋರ್ ಸ್ಥಳೀಯ ಬಿಜೆಪಿ ಶಾಸಕ ಯಶ್ಪಾಲ್ ಸಿಂಗ್ ಸಿಸೋಡಿಯಾ ಅವರ ಬೆಂಬಲಿಗರು ತಮ್ಮ ನಾಯಕನನ್ನು ಸಚಿವಾಲಯದಲ್ಲಿ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸಿ ಧರಣಿ ನಡೆಸಿದ್ದಾರೆ.

ರಮೇಶ್ ಮೆಂಡೋಲಾ ಅವರನ್ನು ಸಂಪುಟದಿಂದ ಹೊರಗಿಡುವುದು ಕೈಲಾಶ್ ವಿಜಯವರ್ಗಿಯಾಗೆ ರಾಜಕೀಯ ಸೋಲು ಎಂದು ಪರಿಗಣಿಸಲಾಗಿದೆ. ಅವರು ಈ ಮೊದಲು ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್‌ನಲ್ಲಿದ್ದಾಗ ಅವರ ಪ್ರಬಲ ಎದುರಾಳಿ ಎಂದು ಪರಿಗಣಿಸಲ್ಪಟ್ಟಿದ್ದರು. ಅವರ ಬೆಂಬಲಿಗರು ಕೂಡ ಪ್ರತಿಭಟನೆ ನಡೆಸಿದ್ದಾರೆ.

ಅದೇ ರೀತಿ ದಿವಾಸ್‌ನಲ್ಲಿ ಗಾಯತ್ರಿ ರಾಜೇ ಪವಾರ್ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.

ಬಿಜೆಪಿಗೆ ಸೇರ್ಪಡೆಯಾದ 22 ಕಾಂಗ್ರೆಸ್ ಶಾಸಕರಲ್ಲಿ 14 ಜನರನ್ನು ಮಂತ್ರಿಗಳಾಗಿ ಸೇರಿಸಿಕೊಳ್ಳಲಾಗಿದೆ. ಅವರಲ್ಲಿ 11 ಮಂದಿ ಜ್ಯೋತಿರಾದಿತ್ಯ ಸಿಂಧಿಯಾರವರ ಆಪ್ತರಾಗಿದ್ದಾರೆ. 14 ರಲ್ಲಿ 10 ಮಂದಿ ಕ್ಯಾಬಿನೆಟ್ ಮಂತ್ರಿಗಳು ಮತ್ತು ನಾಲ್ವರು ರಾಜ್ಯ ಸಚಿವ ಸ್ಥಾನ ಪಡೆದಿದ್ದಾರೆ.

ಸಂಪುಟ ವಿಸ್ತರಣೆಯಲ್ಲಿ ಹೈಕಮಾಂಡ್‌ ತೀರ್ಮಾನ ಸ್ಪಷ್ಟವಾಗಿ ಗೋಚರಿಸಿದೆ. ತಮ್ಮ ಆಪ್ತರನ್ನೇ ಸಂಪುಟದಲ್ಲಿ ಸೇರಿಸಿಕೊಳ್ಳಲಾಗದಿದ್ದುದ್ದಕ್ಕೆ ಮುಖ್ಯಮಂತ್ರಿ ಬೇಸರ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...