Homeಮುಖಪುಟನಿಮುನಲ್ಲಿ ನಮ್ಮ ಕೆಚ್ಚೆದೆಯ ಸಶಸ್ತ್ರ ಪಡೆಗಳೊಂದಿಗೆ ಸಂವಹನ ನಡೆಸುತ್ತಿದ್ದೇನೆ: ಮೋದಿ

ನಿಮುನಲ್ಲಿ ನಮ್ಮ ಕೆಚ್ಚೆದೆಯ ಸಶಸ್ತ್ರ ಪಡೆಗಳೊಂದಿಗೆ ಸಂವಹನ ನಡೆಸುತ್ತಿದ್ದೇನೆ: ಮೋದಿ

ಸಂವಾದದಲ್ಲಿ ಸೈನ್ಯ, ವಾಯುಪಡೆ ಮತ್ತು ಐಟಿಬಿಪಿಯ ಸಿಬ್ಬಂದಿ ಉಪಸ್ಥಿತರಿದ್ದು, ನಂತರ ಜೂನ್ 15ರ ಘರ್ಷಣೆಯಲ್ಲಿ ಗಾಯಗೊಂಡ ಹಲವಾರು ಸೈನಿಕರನ್ನು ಭೇಟಿ ಮಾಡಲು ಆಸ್ಪತ್ರೆಗೆ ಪಿಎಂ ಮೋದಿ ಭೇಟಿ ನೀಡಲಿದ್ದಾರೆ.

- Advertisement -
- Advertisement -

“ನಿಮುನಲ್ಲಿ ನಮ್ಮ ಕೆಚ್ಚೆದೆಯ ಸಶಸ್ತ್ರ ಪಡೆಗಳ ಸಿಬ್ಬಂದಿಯೊಂದಿಗೆ ಸಂವಹನ ನಡೆಸುತ್ತಿದ್ದೇನೆ” ಎಂದು ಪ್ರಧಾನಿ ಮೋದಿಯವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.

ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಹಿಂಸಾತ್ಮಕ ಘಟನೆ ನಡೆದ ಎರಡು ವಾರಗಳ ನಂತರ, ವಾಸ್ತವಿಕ ಪರಿಸ್ಥಿತಿ ಪರಿಶೀಲಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಲಡಾಖ್‌ಗೆ ಭೇಟಿ ನೀಡಿದ್ದಾರೆ.

ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ಕೂಡ ಪ್ರಧಾನಿ ಜೊತೆಗಿದ್ದಾರೆ.

ಪ್ರಧಾನಿ ಪ್ರಸ್ತುತ ನಿಮುವಿನಲ್ಲಿದ್ದಾರೆ. ಅಲ್ಲಿ ಅವರು ಸೇನೆ, ವಾಯುಪಡೆ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿಗಳೊಂದಿಗೆ ಸಂವಹನ ನಡೆಸುತ್ತಿದ್ದಾರೆ. ಈ ಸ್ಥಳ ಸಮುದ್ರ ಮಟ್ಟದಿಂದ 11,000 ಅಡಿ ಎತ್ತರದಲ್ಲಿದ್ದು ಜನ್ಸ್ಕರ್ ಶ್ರೇಣಿಯಿಂದ ಆವೃತವಾಗಿ ಸಿಂಧೂ ತೀರದಲ್ಲಿದೆ.

ಪರಸ್ಪರ ದೂರದಲ್ಲಿ ಕುಳಿತಿರುವ ಸೈನಿಕರೊಂದಿಗೆ ಮಾತನಾಡುತ್ತಿರುವ ಮೋದಿಯವರ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ರಧಾನಿ ಕಚೇರಿಯ ಪ್ರಕಾರ, ಅವರು ನಿಮುನಲ್ಲಿ ಫಾರ್ವರ್ಡ್ ಲೊಕೇಶನ್‌ನಲ್ಲಿದ್ದರು. ಅವರು ಲೇಹ್‌ನಿಂದ ಹೆಲಿಕ್ಯಾಪ್ಟರ್‌ ಮೂಲಕ ಮುಂಜಾನೆ ಅಲ್ಲಿಗೆ ತಲುಪಿದರು ಎನ್ನಲಾಗಿದೆ.

ಸಂವಾದದಲ್ಲಿ ಸೈನ್ಯ, ವಾಯುಪಡೆ ಮತ್ತು ಐಟಿಬಿಪಿಯ ಸಿಬ್ಬಂದಿ ಉಪಸ್ಥಿತರಿದ್ದು, ನಂತರ ಜೂನ್ 15ರ ಘರ್ಷಣೆಯಲ್ಲಿ ಗಾಯಗೊಂಡ ಹಲವಾರು ಸೈನಿಕರನ್ನು ಭೇಟಿ ಮಾಡಲು ಆಸ್ಪತ್ರೆಗೆ ಪಿಎಂ ಮೋದಿ ಭೇಟಿ ನೀಡಲಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನಿನ್ನೆ ಲೇಹ್‌ಗೆ ಪ್ರಯಾಣಿಸಬೇಕಿತ್ತು ಆದರೆ ಅವರ ಪ್ರವಾಸವನ್ನು ರದ್ದುಪಡಿಸಲಾಗಿದೆ.


ಇದನ್ನೂ ಓದಿ : ಬಿಜೆಪಿ ನಿಕಟವರ್ತಿ ಸಂಸ್ಥೆಗಳ ಚೀನಾ ಹಣಕಾಸು ನಂಟು!: ವಿದೇಶಾಂಗ ಸಚಿವ, ರಕ್ಷಣಾ ಸಲಹೆಗಾರರ ಸಂಬಂಧಿತ ಸಂಸ್ಥೆಗಳಿಗೆ ಚೀನಾದ ಹಣ

ಚೀನಾ ತನ್ನ ನಿಜ ಸ್ವರೂಪವನ್ನು ದೃಢಪಡಿಸುತ್ತಿದೆ; ಅಮೆರಿಕಾ ತೀಕ್ಷ್ಣ ಪ್ರತಿಕ್ರಿಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರದಲ್ಲಿ ಜೆಡಿಯು ಮುಖಂಡನ ಗುಂಡಿಟ್ಟು ಹತ್ಯೆ: ಭುಗಿಲೆದ್ದ ಪ್ರತಿಭಟನೆ

0
ಜೆಡಿಯು ಯುವ ಮುಖಂಡನನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ  ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದ್ದಾರೆ. ಸೌರಭ್ ಕುಮಾರ್ ಹತ್ಯೆಗೀಡಾದ ಜೆಡಿಯು ಯುವ ಮುಖಂಡ....