Homeದಲಿತ್ ಫೈಲ್ಸ್ಮಧ್ಯಪ್ರದೇಶದಲ್ಲಿ ದಲಿತ ವ್ಯಕ್ತಿಯ ಶವಸಂಸ್ಕಾರ ತಡೆದ ಸವರ್ಣೀಯರು - ರಸ್ತೆಯಲ್ಲಿ ಶವ ಇಟ್ಟು 5 ಗಂಟೆ...

ಮಧ್ಯಪ್ರದೇಶದಲ್ಲಿ ದಲಿತ ವ್ಯಕ್ತಿಯ ಶವಸಂಸ್ಕಾರ ತಡೆದ ಸವರ್ಣೀಯರು – ರಸ್ತೆಯಲ್ಲಿ ಶವ ಇಟ್ಟು 5 ಗಂಟೆ ಕಾದ ದಲಿತರು

- Advertisement -
- Advertisement -

ಮತ್ತೊಂದು ಜಾತಿ ದೌರ್ಜನ್ಯದ ಅಮಾನವೀಯ ಘಟನೆ ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಮಹಾರಾಜಪುರ ಬಳಿಯ ಉರ್ದ್ಮೌ ಗ್ರಾಮದಲ್ಲಿ ವರದಿಯಾಗಿದೆ. ಸಾವನಪ್ಪಿದ ದಲಿತ ವ್ಯಕ್ತಿಯ ಶವಸಂಸ್ಕಾರಕ್ಕೆ ಸವರ್ಣೀಯರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಶವ ಇಟ್ಟುಕೊಂಡು ದಲಿತರು ಸುಮಾರು 5 ಗಂಟೆಗಳ ಕಾದಿರುವ ಅಮಾನುಷ ಘಟನೆ ಜರುಗಿದೆ.

ಗ್ರಾಮದಲ್ಲಿ ಸ್ಮಶಾನಕ್ಕಾಗಿ ಕಾಯ್ದಿರಿಸಿದ ಸರ್ಕಾರಿ ಜಮೀನಿನಲ್ಲಿ ಶವ ಸಂಸ್ಕಾರ ಮಾಡಲು ದಲಿತರು ಹೊರಟಾಗ ಸವರ್ಣೀಯರು ತಡೆದಿದ್ದಾರೆ. ಈ ಕುರಿತು ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ ದಲಿತರು ರಸ್ತೆಯಲ್ಲಿಯೇ ಶವ ಇಟ್ಟುಕೊಂಡು ಕಾದಿದ್ದಾರೆ. ಕೊನೆಗೆ ಸ್ಥಳೀಯ ಆಡಳಿತ ಮಧ್ಯಪ್ರವೇಶಿಸಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕರೆಸಿದ ನಂತರ ಮೃತದೇಹವನ್ನು ದಲಿತ ಕುಟುಂಬದವರು ಅಂತ್ಯಸಂಸ್ಕಾರ ಮಾಡಿದ್ದಾರೆ.

ಹಿರಿಯ ದಲಿತ ವ್ಯಕ್ತಿ ಸಾವನಪ್ಪಿದಾಗ ಶವಸಂಸ್ಕಾರಕ್ಕೆ ಅಡ್ಡಿಪಡಿಸಿದ ನಂತರ ದಲಿತರು ದಾರಿಯಲ್ಲಿಯೇ ಶವ ಇಟ್ಟು ಕಾಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ. ಸ್ಥಳೀಯ ಕಾಂಗ್ರೆಸ್ ಶಾಸಕರ ವಿರುದ್ಧವೂ ಅಸಮಾಧಾನ ಭುಗಿಲೆದ್ದಿದೆ.

ಗ್ರಾಮದ ಸ್ಮಶಾನದಲ್ಲಿ ದಲಿತರು ಅಂತ್ಯಕ್ರಿಯೆ ನಡೆಸಲು ದಾರಿ ಬಿಡುವುದಿಲ್ಲ ಎಂದು ಸವರ್ಣೀಯರು ಅಡ್ಡಿಪಡಿಸಿದ್ದರು. ಆದರೆ ಆ ದಾರಿಯ ವಿಷಯವು ಈ ಹಿಂದೆಯೆ ನ್ಯಾಯಾಲಯದಲ್ಲಿ ಬಗೆಹರಿದಿದೆ. ವಿಷಯ ತಿಳಿದ ನಂತರ ಸ್ಥಳೀಯ ಆಡಳಿತ ಸ್ಥಳಕ್ಕೆ ಧಾವಿಸಿ ಪೊಲೀಸ್ ಬಲದ ನೆರವಿನೊಂದಿಗೆ ಅಂತ್ಯಕ್ರಿಯೆ ಮಾಡಲು ಸಾಧ್ಯವಾಗಿದೆ ಮತ್ತು ಆ ದಲಿತ ಕುಟುಂಬಕ್ಕೆ ರಕ್ಷಣೆ ನೀಡಿದ್ದೇವೆ ಎಂದು ಸ್ಥಳೀಯ ವಿಜಯ್ ಸೆನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಆಫ್ಘನ್‌ ಮಹಿಳೆಯರಿಗೆ ವಿಶ್ವವಿದ್ಯಾಲಯ ಶಿಕ್ಷಣ ನಿಷೇಧಿಸಿದ ತಾಲಿಬಾನ್: ಭುಗಿಲೆದ್ದ ಪ್ರತಿಭಟನೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಭಾರತದಲ್ಲಿ ಈ ಜಾತಿ ಕುಲಗಳು ಕಳೆದುಹೋಗುವವರೆಗೂ ಇಂತಹ ಪರಿಸ್ಥಿತಿಗಳು ಮರುಕಳಿಸುತ್ತಲೇ ಇರುತ್ತವೆ, ಯಾರಾದರೂ ಸರಿಯೇ ಈ ಜಾತಿಗಳ ನಿರ್ಮೂಲನಕ್ಕೆ ಮುಂದೆ ಬನ್ನಿ, ಈ ಜಾತಿಗಳ ನಿರ್ಮೂಲವಾದ ದಿನ ನಮ್ಮ ಭಾರತಕ್ಕಿಂತಲೂ ಶಕ್ತಿಯುತವಾದ ದೇಶ ಯಾವುದು ಇರುವುದಿಲ್ಲ, ಆದರೆ ರಾಜಕಾರಣಿಗಳಿಗೆ ಈ ಜಾತಿ ಭೇದ ಬಿಟ್ಟರೆ ಬೇರೆ ಮಾರ್ಗವೇ ಇಲ್ಲ 🙏

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...