Homeಅಂತರಾಷ್ಟ್ರೀಯಆಫ್ಘನ್‌ ಮಹಿಳೆಯರಿಗೆ ವಿಶ್ವವಿದ್ಯಾಲಯ ಶಿಕ್ಷಣ ನಿಷೇಧಿಸಿದ ತಾಲಿಬಾನ್: ಭುಗಿಲೆದ್ದ ಪ್ರತಿಭಟನೆಗಳು

ಆಫ್ಘನ್‌ ಮಹಿಳೆಯರಿಗೆ ವಿಶ್ವವಿದ್ಯಾಲಯ ಶಿಕ್ಷಣ ನಿಷೇಧಿಸಿದ ತಾಲಿಬಾನ್: ಭುಗಿಲೆದ್ದ ಪ್ರತಿಭಟನೆಗಳು

- Advertisement -
- Advertisement -

ಆಫ್ಘನ್‌ ಮಹಿಳೆಯರಿಗೆ ವಿಶ್ವವಿದ್ಯಾಲಯ ಶಿಕ್ಷಣ ನಿಷೇಧಿಸಿರುವುದಾಗಿ ತಾಲಿಬಾನ್ ಸರ್ಕಾರದ ಉನ್ನತ ಶಿಕ್ಷಣ ಸಚಿವ ಘೋಷಿಸಿದ್ದು, ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಆದೇಶಿಸಿದ್ದಾರೆ. ಈ ನಿರ್ಧಾರದ ವಿರುದ್ಧ ಆಫ್ಘನ್‌ನ ಪುರುಷರು ಮತ್ತು ಮಹಿಳೆಯರು ಬೀದಿಗಿಳಿಸಿ ಪ್ರತಿಭಟನೆ ನಡೆಸಿದ್ದಾರೆ.

ಈ ಮೊದಲು ಸಹ ಪ್ರೌಢಶಿಕ್ಷಣಕ್ಕಾಗಿ ಹೆಣ್ಣು ಮಕ್ಕಳ ಶಾಲೆ ತೆಗೆಯುವುದಾಗಿ ಘೋಷಿಸಿ ಹಿಂದೆ ಸರಿದಿತ್ತು. ಈಗ ಉನ್ನತ ಶಿಕ್ಷಣದಿಂದ ಮಹಿಳೆಯರನ್ನು ಹೊರಗಿಡಲು ಮುಂದಾಗಿದೆ. ಈ ಕ್ರಮಗಳ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ಕೇಳಿಬಂದಿವೆ.

ರಾಜಧಾನಿ ಕಾಬೂಲ್ ವಿಶ್ವವಿದ್ಯಾಲಯಗಳಿಂದ ಹೆಣ್ಣು ಮಕ್ಕಳನ್ನು ಹೊರಹಾಕುತ್ತಿರುವ, ವಿದ್ಯಾರ್ಥಿನಿಯರು ಅಳುತ್ತಿರುವ ದೃಶ್ಯಗಳುಳ್ಳ ವಿಡಿಯೋಗಳನ್ನು ಪಮಿರ್ ನ್ಯೂಸ್ ಟ್ವೀಟ್ ಮಾಡಿದೆ. ಅಲ್ಲದೆ ವಿದ್ಯಾರ್ಥಿನಿಯರ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಪುರುಷ ವಿದ್ಯಾರ್ಥಿಗಳು ಸಹ ಕಾಲೇಜು ತೊರೆದು ಪ್ರತಿಭಟಿಸಿದ್ದಾರೆ.

ಹಲವಾರು ಪುರುಷ ವಿದ್ಯಾರ್ಥಿಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿ ಪರೀಕ್ಷೆ ಬಹಿಷ್ಕರಿಸಿದ್ದಾರೆ. ಕೆಲವು ಪುರುಷ ಪ್ರಾಧ್ಯಾಪಕರು ಸಹ ರಾಜೀನಾಮೆ ನಿಡಿದ್ದಾರೆ ಎಂದು ಪಮೀರ್ ನ್ಯೂಸ್ ವರದಿ ಮಾಡಿದೆ. ಜಲಾಲ್‌ಬಾದ್ ಮತ್ತು ಕಂದಹಾರ್ ವಿವಿಯಲ್ಲಿಯೂ ಸಹ ಪ್ರತಿಭಟನೆಗಳು ಭುಗಿಲೆದ್ದಿವೆ.

ಇಂದು ನಾವು ಮಹಿಳೆಯರ ವಿಶ್ವವಿದ್ಯಾನಿಲಯಗಳನ್ನು ಮುಚ್ಚುವುದರ ವಿರುದ್ಧ ಧ್ವನಿ ಎತ್ತಲು ಕಾಬೂಲ್‌ನ ಬೀದಿಗಳಿಗೆ ಇಳಿಯುತ್ತೇವೆ ಎಂದು ಅಫ್ಘಾನಿಸ್ತಾನ ವುಮೆನ್ಸ್ ಯೂನಿಟಿ ಅಂಡ್ ಸಾಲಿಡಾರಿಟಿ ಗುಂಪಿನ ಪ್ರತಿಭಟನಾಕಾರರು ತಿಳಿಸಿದ್ದಾರೆ. ಆದರೆ ಎಲ್ಲಾ ಪ್ರತಿಭಟನೆಗಳು ತಾಲಿಬಾನ್ ಸರ್ಕಾರ ಹತ್ತಿಕ್ಕುತ್ತಿದೆ ಎಂದು ಬಿಬಿಸಿ ನ್ಯೂಸ್ ವರದಿ ಮಾಡಿದೆ.

ವಿಶ್ವಸಂಸ್ಥೆ ಸೇರಿದಂತೆ ಹಲವಾರು ದೇಶಗಳು ತಾಲಿಬಾನ್‌ನ ಈ ಆದೇಶವನ್ನು ಖಂಡಿಸಿವೆ, ಇದು ಮಹಿಳೆಯರು ಔಪಚಾರಿಕ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದ ತಾಲಿಬಾನ್ ಆಳ್ವಿಕೆಯ ಮೊದಲ ಅವಧಿಗೆ ಅಫ್ಘಾನಿಸ್ತಾನವನ್ನು ಹಿಂತಿರುಗಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅಫ್ಘಾನಿಸ್ತಾನಕ್ಕೆ ಯುಎನ್‌ನ ವಿಶೇಷ ವರದಿಗಾರ “ಇದು ಸಮಾನ ಶಿಕ್ಷಣದ ಹಕ್ಕನ್ನು ಮತ್ತಷ್ಟು ಉಲ್ಲಂಘಿಸುವ ಕೃತ್ಯವಾಗಿದ್ದು, ಅಫ್ಘಾನ್ ಸಮಾಜದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಅಳಿಸುವಿಕೆಯನ್ನು ಆಳಗೊಳಿಸುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ತಾಲಿಬಾನ್ ಆಳ್ವಿಕೆಯ ಅಫ್ಘಾನ್‌‌‌‌: ಬೀದಿ ಬದಿ ಆಹಾರ ಮಾರುತ್ತಿರುವ ಟಿವಿ ಪತ್ರಕರ್ತ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...