Homeಅಂತರಾಷ್ಟ್ರೀಯಸೋವಿಯತ್ ಒಕ್ಕೂಟದ ಅಂತಿಮ ನಾಯಕ ಮಿಖಾಯಿಲ್ ಗೋರ್ಬಚೇವ್(91) ನಿಧನ

ಸೋವಿಯತ್ ಒಕ್ಕೂಟದ ಅಂತಿಮ ನಾಯಕ ಮಿಖಾಯಿಲ್ ಗೋರ್ಬಚೇವ್(91) ನಿಧನ

- Advertisement -
- Advertisement -

ಸೋವಿಯತ್ ಒಕ್ಕೂಟದ ಕೊನೆಯ ನಾಯಕ ಮಿಖಾಯಿಲ್ ಗೋರ್ಬಚೇವ್ ಅವರು ರಷ್ಯಾದ ಮಾಸ್ಕೋದಲ್ಲಿ ತನ್ನ 91 ನೇ ವಯಸ್ಸಿನಲ್ಲಿ ನಿಧನರಾದರು. “ಗಂಭೀರ ಮತ್ತು ದೀರ್ಘಕಾಲದ ಅನಾರೋಗ್ಯದಲ್ಲಿದ್ದ ಮಿಖಾಯಿಲ್ ಸೆರ್ಗೆವಿಚ್ ಗೋರ್ಬಚೇವ್ ಇಂದು ಸಂಜೆ ನಿಧನರಾದರು ಎಂದು ಸೆಂಟ್ರಲ್ ಕ್ಲಿನಿಕಲ್ ಹಾಸ್ಪಿಟಲ್ (ಸಿಸಿಎಚ್) ಮಂಗಳವಾರ ತಡವಾಗಿ ಘೋಷಿಸಿದೆ ಎಂದು” ಐಎಎನ್ಎಸ್ ವರದಿ ಮಾಡಿದೆ.

ರಷ್ಯಾದ ಪ್ರಸಿದ್ಧ ರಾಜಕಾರಣಿಗಳು ಮತ್ತು ಬರಹಗಾರರ ಸಮಾಧಿ ಇರುವ ಮಾಸ್ಕೋದ ನೊವೊಡೆವಿಚಿ ಸ್ಮಶಾನದಲ್ಲಿ ಅವರ ಹೆಂಡತಿಯ ಸಮಾಧಿ ಪಕ್ಕದಲ್ಲಿ ಗೋರ್ಬಚೇವ್‌ ಅವರನ್ನೂ ಸಮಾಧಿ ಮಾಡಲಾಗುವುದು ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ದೇಶದ ಮಾಜಿ ನಾಯಕನಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸಂತಾಪ ಸೂಚಿಸಿದ್ದಾರೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಮಂಗಳವಾರ ಸಂಜೆ ಹೇಳಿದ್ದಾರೆ. ‘ನೊವಾಯಾ ಗೆಜೆಟಾ’ ಪತ್ರಿಕೆಯ ಸಹ-ಸ್ಥಾಪಕರಾದ ಗೋರ್ಬಚೇವ್‌ ಅವರು ಕ್ರೆಮ್ಲಿನ್ ಅನ್ನು ಟೀಕಿಸಿ, ರಷ್ಯಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಅನೇಕ ಬಾರಿ ಬಹಿರಂಗಪಡಿಸಿದ್ದರು.

ಪರಮಾಣು ನಿಶ್ಯಸ್ತ್ರೀಕರಣ ಮತ್ತು ಶಸ್ತ್ರಾಸ್ತ್ರ ನಿಯಂತ್ರಣಕ್ಕಾಗಿ 1980 ರ ದಶಕದಲ್ಲಿ ಅಮೆರಿಕಾದೊಂದು ಒಪ್ಪಂದಗಳನ್ನು ಮಾಡಿಕೊಳ್ಳುವ ಪ್ರಯತ್ನಗಳನ್ನು ಮಾಡಿದ್ದರು. ಅವರು 1990 ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದರು.

ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದ ಗಣೇಶ ಉತ್ಸವಕ್ಕೆ ತಡೆ ಇಲ್ಲ: ತಡರಾತ್ರಿ ವಿಚಾರಣೆಯಲ್ಲಿ ಹೈಕೋರ್ಟ್ ಹೇಳಿದ್ದೇನು?

1991 ರಲ್ಲಿ ಸೋವಿಯತ್ ಒಕ್ಕೂಟ ವಿಭಜನೆಯಾಗಿ ಗೋರ್ಬಚೇವ್ ಅವರ ರಾಜಕೀಯ ಅವನತಿಗೆ ಕಾರಣವಾಯಿತು. ಇದರ ನಂತರ ಗೋರ್ಬಚೇವ್‌ ಸೋವಿಯತ್ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಮ್ಯುನಿಷ್ಟ್‌‌ ರಷ್ಯಾ 15 ಸ್ವತಂತ್ರ ದೇಶಗಳಾಗಿ ವಿಸರ್ಜಿಸಲ್ಪಟ್ಟಿತು.

ಗೋರ್ಬಚೇವ್‌‌ ನಿಧನಕ್ಕೆ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್, ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್, ಬ್ರಿಟನ್‌ನ ನಿರ್ಗಮಿತ ಪ್ರಧಾನಿ ಬೋರಿಸ್ ಜಾನ್ಸನ್ ಸೇರಿದಂತೆ ಹಲವಾರು ಪ್ರಮುಖ ವ್ಯಕ್ತಿಗಳು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಕ್ಫ್ ಕಾಯಿದೆ ರದ್ದುಗೊಳಿಸಲು ಖಾಸಗಿ ಸದಸ್ಯ ಮಸೂದೆ ರಾಜ್ಯಸಭೆಯಲ್ಲಿ ಮಂಡನೆ

0
ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆ ವಕ್ಫ್ ಕಾಯಿದೆ 1995ನ್ನು ಹಿಂತೆಗೆದುಕೊಳ್ಳುವ/ ರದ್ದುಗೊಳಿಸುವ ಖಾಸಗಿ ಸದಸ್ಯ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ. ಬಿಜೆಪಿ ಸಂಸದ ಹರನಾಥ್‌ ಸಿಂಗ್‌ ಯಾದವ್‌ ವಕ್ಫ್‌ ಕಾಯಿದೆ ರದ್ದುಗೊಳಿಸುವ ಮಸೂದೆ 2022ನ್ನು...