Homeಮುಖಪುಟಬಿಜೆಪಿಯ ಜನಾಕ್ರೋಶ ಯಾತ್ರೆಗೆ ಜನ ಸೇರಿಸಲು ಡ್ಯಾನ್ಸರ್ ಬಳಕೆ: ವಿಡಿಯೋ ವೈರಲ್

ಬಿಜೆಪಿಯ ಜನಾಕ್ರೋಶ ಯಾತ್ರೆಗೆ ಜನ ಸೇರಿಸಲು ಡ್ಯಾನ್ಸರ್ ಬಳಕೆ: ವಿಡಿಯೋ ವೈರಲ್

- Advertisement -
- Advertisement -

ಮುಂದಿನ ವರ್ಷ ರಾಜಸ್ಥಾನದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಅಲ್ಲಿನ ಪ್ರತಿಪಕ್ಷ ಬಿಜೆಪಿಯು ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಸಂಘಟಿಸಿದೆ. ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ ಅವರು ಡಿಸೆಂಬರ್ 1 ರಂದು ಈ ಯಾತ್ರೆಗೆ ಚಾಲನೆ ನೀಡಿದ್ದರು. ಆದರೆ ಯಾತ್ರೆಗೆ ಜನ ಸೇರಿಸಲು ಬಿಜೆಪಿ  ಡ್ಯಾನ್ಸರ್‌ಗಳ ಮೊರೆ ಹೋಗಿದೆ ಎಂಬ ಟೀಕೆ ವ್ಯಕ್ತವಾಗಿದೆ. ಜನಾಕ್ರೋಶ ಯಾತ್ರೆಯ ವೇದಿಕೆಗಳಲ್ಲಿ ಹೆಣ್ಣು ಮಕ್ಕಳು ನೃತ್ಯ ಮಾಡುವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಮಂಗಳವಾರ ಸಂಜೆ ಅಲ್ವಾರ್ ಜಿಲ್ಲೆಯ ಖೇಡ್ಲಿಯಲ್ಲಿ ಜನಕ್ರೋಷ್ ಮಹಾಸಭಾ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೂ ಮುಂಚೆ ಜನರನ್ನು ಆಕರ್ಷಿಸಲು ಡ್ಯಾನ್ಸರ್ ಕರೆಸಿ ನೃತ್ಯ ಮಾಡಿಸಲಾಗಿದೆ ಎಂದು ಹಲವರು ದೂರಿದ್ದಾರೆ. ಡ್ಯಾನ್ಸರ್ ಅಶ್ಲೀಲವಾಗಿ ನೃತ್ಯ ಮಾಡಿದ್ದಾರೆ. ಈ ಯಾತ್ರೆಗೆ ಜನರ ಆಕ್ರೋಶ ಎಂದು ಹೆಸರಿಡಲಾಗಿದೆ. ಆದರೆ ಹೆಣ್ಣು ಮಕ್ಕಳ ನೃತ್ಯ ನೋಡಿ ಆನಂದಿಸುವವರಿಗೆ ಯಾವ ಆಕ್ರೋಶ ಬರುತ್ತದೆ ಎಂದು ಹಲವರು ವ್ಯಂಗ್ಯವಾಡಿದ್ದಾರೆ.

‘ಹಿಂಭಾಗದಲ್ಲಿ ಮೋದಿ ಮತ್ತು ಜೆಪಿ ನಡ್ಡಾ ಅವರ ಫೋಟೋವನ್ನು ಅಂಟಿಸಲಾಗಿದೆ. ಮತ್ತು ಮುಂದೆ ಹುಡುಗಿ ವೇದಿಕೆಯಲ್ಲಿ ನೃತ್ಯ ಮಾಡುತ್ತಿದ್ದಾಳೆ, ಇದು ಬಿಜೆಪಿಯ ಜನ ಆಕ್ರೋಷ್ ಯಾತ್ರೆ. ರಾಜಸ್ಥಾನದಲ್ಲಿ ಬಿಜೆಪಿ ಜನ ಆಕ್ರೋಶ ಯಾತ್ರೆ ಹೆಸರಿನಲ್ಲಿ ಮಜಾ ಮಾಡುತ್ತಿದೆ’ ಎಂದು ಟ್ವಿಟರ್ ಬಳಕೆದಾರರು ಆರೋಪಿಸಿದ್ದಾರೆ.

ರಾಜಸ್ಥಾನ ಬಿಜೆಪಿಯು ತನ್ನ Jan Aakrosh Yatra ಎಂಬ ಫ್ಲಾಪ್ ಶೋನಲ್ಲಿ ಜನರನ್ನು ಆಕರ್ಷಿಸಲು ಮತ್ತು ಖಾಲಿ ಕುರ್ಚಿಗಳನ್ನು ತುಂಬಲು ಡ್ಯಾನ್ಸರ್‌ಗಳನ್ನು ಕರೆತರುತ್ತದೆ. ಪ್ರತಿ ದಿನವೂ ಬಿಜೆಪಿಯ ಡರ್ಟಿ ಪಾಲಿಟಿಕ್ಸ್ ಹೊಸ ಪಾತಾಳಕ್ಕೆ ಸೇರುತ್ತಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ.

ಈ ವಿಚಾರವಾಗಿ ಅಲ್ವಾರ್ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ನಾರುಕ ಪ್ರತಿಕ್ರಿಯಿಸಿ, “ನಾವು ಜನ ಆಕ್ರೋಶ್ ಯಾತ್ರೆಗೆ ಯಾವುದೇ ನರ್ತಕಿಯನ್ನು ಕರೆಸಿಲ್ಲ. ಕಾರ್ಯಕ್ರಮ ಮುಗಿಯುವವರೆಗೂ ಯಾವುದೇ ನೃತ್ಯ ನಡೆಯಲಿಲ್ಲ. ನಾಯಕರೆಲ್ಲ ಹೋದ ಮೇಲೆ ಯಾರೋ ಷಡ್ಯಂತ್ರ ಮಾಡಿ ಈ ರೀತಿ ಮಾಡಿರಬೇಕು. ಸಭೆಯು ಈಗಾಗಲೇ ಯಶಸ್ವಿಯಾಗಿದೆ” ಎಂದಿದ್ದಾರೆ.

ಇದನ್ನೂ ಓದಿ; ಕರ್ನಾಟಕದಲ್ಲಿ ಯಾವ ಯಾವ ಕೆಟಗರಿಯಲ್ಲಿ ಎಷ್ಟೆಷ್ಟು ಜಾತಿಗಳಿವೆ? ಮೀಸಲಾತಿಯ ಪಾಲೆಷ್ಟಿದೆ? – ಪೂರ್ಣ ವಿವರ ಇಲ್ಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...