Homeಮುಖಪುಟದೆಹಲಿ ಸಚಿವೆ ಅತಿಶಿಗೆ ಮಾನನಷ್ಟ ನೋಟಿಸ್‌ ಕಳುಹಿಸಿದ ಬಿಜೆಪಿ

ದೆಹಲಿ ಸಚಿವೆ ಅತಿಶಿಗೆ ಮಾನನಷ್ಟ ನೋಟಿಸ್‌ ಕಳುಹಿಸಿದ ಬಿಜೆಪಿ

- Advertisement -
- Advertisement -

ಬಿಜೆಪಿ ಪಕ್ಷವು  ತನ್ನ ರಾಜಕೀಯ ಬದುಕನ್ನು ಉಳಿಸಿಕೊಳ್ಳಲು ಕೇಸರಿ ಪಕ್ಷಕ್ಕೆ ಸೇರಿ ಅಥವಾ ಬಂಧನಕ್ಕೆ ಸಿದ್ಧರಾಗಿ ಎಂದು ತನ್ನ ಆಪ್ತರ ಮೂಲಕ ತನ್ನನ್ನು ಸಂಪರ್ಕಿಸಿದೆ ಎಂದು ದೆಹಲಿ ಸಚಿವೆ ಅತಿಶಿ ನಿನ್ನೆ ಆರೋಪಿಸಿದ್ದರು. ಇದರ ಬೆನ್ನಲ್ಲಿ ಬಿಜೆಪಿಯ ದೆಹಲಿ ಘಟಕವು ಎಎಪಿ ಹಿರಿಯ ನಾಯಕಿ ಅತಿಶಿ ಅವರಿಗೆ ಮಾನನಷ್ಟ ನೋಟಿಸ್ ಕಳುಹಿಸಿದ್ದು, ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ, ಅತಿಶಿಗೆ ಮಾನನಷ್ಟ ನೋಟಿಸ್ ಕಳುಹಿಸಿದ್ದು, ಆಕೆಯ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ. ಅತಿಶಿ ತನ್ನನ್ನು ಯಾರು, ಹೇಗೆ ಮತ್ತು ಯಾವಾಗ ಸಂಪರ್ಕಿಸಿದರು ಎಂಬುವುದಕ್ಕೆ ಪುರಾವೆಗಳನ್ನು ಒದಗಿಸಲು ವಿಫಲರಾಗಿದ್ದಾರೆ. ದೆಹಲಿಯಲ್ಲಿ ಎಎಪಿ ಬಿಕ್ಕಟ್ಟಿಗೆ ಒಳಗಾಗಿದೆ, ಅದಕ್ಕಾಗಿಯೇ ಅವರು ಹತಾಶೆಯಿಂದ ಇಂತಹ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ನಾವು ಅವರನ್ನು ಈ ಪ್ರಕರಣದಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಅತಿಶಿ ತನ್ನ ಆರೋಪವನ್ನು ಸಾಬೀತುಪಡಿಸಲು ತನ್ನ ಫೋನ್‌ನ್ನು ತನಿಖಾ ಸಂಸ್ಥೆಗೆ ಸಲ್ಲಿಸುವಂತೆ ಕೇಳಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿಯ ಪರ ವಕೀಲರು, ಅತಿಶಿ ಅವರ ಹೇಳಿಕೆಯನ್ನು ಹಿಂಪಡೆಯಲು ಪಕ್ಷವು ಮಾನನಷ್ಟ ನೋಟಿಸ್ ಕಳುಹಿಸಿದೆ, ಅವರು ಸುಳ್ಳು, ಮಾನಹಾನಿಕರ ಮಾಡುವ ಸಂಚು  ಮತ್ತು ದುರುದ್ದೇಶದಿಂದ ಈ ಆರೋಪವನ್ನು ಮಾಡಿದ್ದಾರೆ. ಅವರು ತಮ್ಮ ಆರೋಪವನ್ನು ಸಾಬೀತುಪಡಿಸಲು ವಿಫಲವಾದರೆ ಹೆಚ್ಚಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸಚಿವೆ ಅತಿಶಿ ಹೇಳಿಕೆಯಲ್ಲೇನಿತ್ತು?

ಬಿಜೆಪಿ ಪಕ್ಷವು  ತನ್ನ ರಾಜಕೀಯ ಬದುಕನ್ನು ಉಳಿಸಿಕೊಳ್ಳಲು ಕೇಸರಿ ಪಕ್ಷಕ್ಕೆ ಸೇರಿ ಅಥವಾ ಬಂಧನಕ್ಕೆ ಸಿದ್ಧರಾಗಿ ಎಂದು ತನ್ನ ಆಪ್ತರ ಮೂಲಕ ತನ್ನನ್ನು ಸಂಪರ್ಕಿಸಿದೆ ಎಂದು ದೆಹಲಿ ಸಚಿವೆ ಅತಿಶಿ ನಿನ್ನೆ ಆರೋಪಿಸಿದ್ದರು.

ಈ ಕುರಿತು ನಿನ್ನೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅತಿಶಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಎಎಪಿಯನ್ನು ನಾಶಮಾಡಲು ಬಯಸಿದೆ ಮತ್ತು ಇನ್ನೆರಡು ತಿಂಗಳಲ್ಲಿ ನನ್ನನ್ನು, ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್ ಮತ್ತು ರಾಘವ್ ಚಡ್ಡಾ ಅವರನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ. ನನ್ನ ರಾಜಕೀಯ ಬದುಕನ್ನು ಉಳಿಸಲು ಬಿಜೆಪಿ ಪಕ್ಷಕ್ಕೆ ಸೇರಲು ನನ್ನ ಆಪ್ತ ವ್ಯಕ್ತಿಯ ಮೂಲಕ ನನ್ನನ್ನು ಸಂಪರ್ಕಿಸಲಾಗಿದೆ. ನಾನು ಸೇರದಿದ್ದರೆ, ಜಾರಿ ನಿರ್ದೇಶನಾಲಯ ಒಂದು ತಿಂಗಳಲ್ಲಿ ನನ್ನನ್ನು ಬಂಧಿಸಲಾಗುವುದು ಎಂದು ಹೇಳಲಾಗಿದೆ ಎಂದು ಅವರು ಹೇಳಿದ್ದರು.

ತನ್ನ ಪ್ರಮುಖ ನಾಲ್ಕು ನಾಯಕರಾದ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಮತ್ತು ಸಂಜಯ್ ಸಿಂಗ್ ಅವರನ್ನು ಬಂಧಿಸಿದ ನಂತರ ಎಎಪಿ ವಿಭಜನೆಯಾಗುತ್ತದೆ ಎಂದು ಬಿಜೆಪಿ ನಿರೀಕ್ಷಿಸುತ್ತಿದೆ. ಲೋಕಸಭೆ ಚುನಾವಣೆಯ ಇನ್ನೆರಡು ತಿಂಗಳಲ್ಲಿ ಇನ್ನೂ ನಾಲ್ವರು ನಾಯಕರನ್ನು ಬಂಧಿಸಲಾಗುವುದು, ಹಿರಿಯ ನಾಲ್ಕು ನಾಯಕರನ್ನು ಬಂಧಿಸಿದ ನಂತರ ಎಎಪಿ ಕುಸಿಯುತ್ತದೆ, ನೈತಿಕತೆ ಕುಸಿಯುತ್ತದೆ ಎಂದು ಅವರು ಭಾವಿಸಿದ್ದರು ಎಂದು ಅತಿಶಿ ಹೇಳಿದ್ದಾರೆ.

ಭಾನುವಾರ ರಾಮಲೀಲಾ ಮೈದಾನದಲ್ಲಿ ನಡೆದ ರ್ಯಾಲಿ ಮತ್ತು ಕಳೆದ 10 ದಿನಗಳಲ್ಲಿ ಎಎಪಿ ನಡೆಸಿದ ಬೀದಿ ಪ್ರತಿಭಟನೆಯು ಕೇವಲ ನಾಲ್ವರು ನಾಯಕರ ಬಂಧನವು ಅವರಿಗೆ ಸಹಾಯ ಮಾಡುವುದಿಲ್ಲ ಎಂದು ಮನವರಿಕೆ ಮಾಡಿದೆ. ಇಡಿ ನನ್ನ ಖಾಸಗಿ ನಿವಾಸದ ಮೇಲೆ ಮಾತ್ರವಲ್ಲದೆ ತನ್ನ ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆಸಲಿದೆ, ನಂತರ ಇಡಿ ಸಮನ್ಸ್ ಜಾರಿ ಮಾಡಿ ಅವರನ್ನು ಬಂಧಿಸಲಿದೆ ಎಂದು ನನಗೆ ಬೆದರಿಸಲಾಗಿದೆ. ಅವರ ಬೆದರಿಕೆಗಳಿಗೆ ನಾವು ಮಣಿಯುವುದಿಲ್ಲ ಎಂಬುವುದನ್ನು ಬಿಜೆಪಿಯವರು ತಿಳಿದುಕೊಳ್ಳಬೇಕು. ನಾವು ಕೇಜ್ರಿವಾಲ್ ಅವರ ಸಿಪಾಹಿಗಳು, ಭಗತ್ ಸಿಂಗ್ ಅವರ ಅನುಯಾಯಿಗಳು. ನಮ್ಮ ಕೊನೆಯ ಉಸಿರು ಇರುವವರೆಗೂ ನಾವು ಕೇಜ್ರಿವಾಲ್ ನೇತೃತ್ವದಲ್ಲಿ ಸಂವಿಧಾನವನ್ನು ಉಳಿಸಲು ಹೋರಾಡುತ್ತೇವೆ ಎಂದು ಹೇಳಿದ್ದರು.

ಇದನ್ನು ಓದಿ: ಕೇಜ್ರಿವಾಲ್‌ನ್ನು ಜೈಲಿನಲ್ಲಿರಿಸಿ ಅವರ ಆರೋಗ್ಯವನ್ನು ಬಿಜೆಪಿ ಅಪಾಯಕ್ಕೆ ಸಿಲುಕಿಸಿದೆ: ಸಚಿವೆ ಅತಿಶಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...