Homeಮುಖಪುಟಮೂರನೆ ದಿನಕ್ಕೆ ಕಾಲಿಟ್ಟ 'ದೆಹಲಿ ಚಲೋ' ರೈತರ ಮೆರವಣಿಗೆ; ಇಂದು ಮತ್ತೊಂದು ಸುತ್ತಿನ ಸಭೆ

ಮೂರನೆ ದಿನಕ್ಕೆ ಕಾಲಿಟ್ಟ ‘ದೆಹಲಿ ಚಲೋ’ ರೈತರ ಮೆರವಣಿಗೆ; ಇಂದು ಮತ್ತೊಂದು ಸುತ್ತಿನ ಸಭೆ

- Advertisement -
- Advertisement -

ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರತಿಭಟನಾ ನಿರತ ರೈತರು ಮತ್ತು ಭದ್ರತಾ ಸಿಬ್ಬಂದಿ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆಯೇ ಮೂವರು ಕೇಂದ್ರ ಸಚಿವರ ಸಮಿತಿ ಇಂದು ಚಂಡೀಗಢದಲ್ಲಿ ರೈತ ಮುಖಂಡರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದೆ. ಕೃಷಿ ಸಚಿವ ಅರ್ಜುನ್ ಮುಂಡಾ, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ರೈತರ ವಿವಿಧ ಬೇಡಿಕೆಗಳನ್ನು ಪರಿಹರಿಸಲು ಸಂಜೆ 5 ಗಂಟೆಗೆ ಸಭೆ ನಡೆಸಲಿದ್ದಾರೆ, ಪ್ರಮುಖವಾಗಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸುವ ಕಾನೂನು ಜಾರಿ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.

ಫೆಬ್ರವರಿ 8 ಮತ್ತು 12 ರಂದು ನಡೆದ ಹಿಂದಿನ ಸುತ್ತಿನ ಮಾತುಕತೆಗಳು ಅನಿರ್ದಿಷ್ಟವಾಗಿ ಉಳಿದಿರುವ ಕಾರಣ ಇದು ಉಭಯ ಪಕ್ಷಗಳ ನಡುವಿನ ಮಾತುಕತೆಯ ಮೂರನೇ ಪ್ರಯತ್ನ ಇದಾಗಿದೆ. ಪಂಜಾಬ್ ಮತ್ತು ಹರಿಯಾಣದ ಶಂಭು, ಖಾನೌರಿ ಗಡಿಯಲ್ಲಿ ಮೊಕ್ಕಾಂ ಹೂಡಿರುವ ಪಂಜಾಬ್‌ನ ರೈತರು ತಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಕೇಂದ್ರಕ್ಕೆ ಮನವರಿಕೆ ಮಾಡಲು ದೆಹಲಿಯತ್ತ ಪಾದಯಾತ್ರೆ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಹರಿಯಾಣದ ಜಿಂದ್ ಜಿಲ್ಲೆಯ ಸಮೀಪವಿರುವ ಡಾಟಾ ಸಿಂಘ್ವಾಲಾ-ಖನೌರಿ ಗಡಿಯಲ್ಲಿ ಇದೇ ರೀತಿಯ ಬಿಕ್ಕಟ್ಟು ಮುಂದುವರಿದಿದೆ.

ಪಂಜಾಬ್‌ನಾದ್ಯಂತ ರೈಲ್ ರೋಕೋ:

ಸಭೆ ನಡೆಯುವವರೆಗೆ ರಾಷ್ಟ್ರ ರಾಜಧಾನಿ ಕಡೆಗೆ ತೆರಳುವ ಯಾವುದೇ ಹೊಸ ಪ್ರಯತ್ನಗಳನ್ನು ಮಾಡದಂತೆ ರೈತ ಮುಖಂಡರು ಒತ್ತಾಯಿಸಿದ್ದಾರೆ. ಕೇಂದ್ರದ ಪ್ರಸ್ತಾವನೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಭಾರತಿ ಕಿಸಾನ್ ಯೂನಿಯನ್ (ಏಕ್ತಾ ಉಗ್ರನ್) ಮತ್ತು ಬಿಕೆಯು ದಕೌಂಡಾ (ಧನೇರ್) ಇಂದು ಪಂಜಾಬ್‌ನಲ್ಲಿ ‘ರೈಲ್ ರೋಕೋ’ (ರೈಲು ದಿಗ್ಬಂಧನ) ಘೋಷಿಸಿದ್ದಾರೆ. ಶಂಭು ಮತ್ತು ಖಾನೌರಿ ಗಡಿಯಲ್ಲಿ ಹರಿಯಾಣ ಭದ್ರತಾ ಸಿಬ್ಬಂದಿ ಅಶ್ರುವಾಯು ಶೆಲ್‌ಗಳು ಮತ್ತು ಜಲ ಫಿರಂಗಿಗಳನ್ನು ಬಳಸುವುದನ್ನು ವಿರೋಧಿಸಿ ರೈತರು ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ಏಳು ಸ್ಥಳಗಳಲ್ಲಿ ರೈಲು ಹಳಿಗಳ ಮೇಲೆ ಧರಣಿ ನಡೆಸಲು ಯೋಜಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ನಿಯೋಜಿಸಿದ್ದು, ರೈತರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ಅಶ್ರುವಾಯು ಪ್ರಭಾವವನ್ನು ಕಡಿಮೆ ಮಾಡಲು ರೈತರು ನೀರಿನ ಬಾಟಲಿಗಳು, ಒದ್ದೆಯಾದ ಬಟ್ಟೆಗಳು ಮತ್ತು ರಕ್ಷಣಾತ್ಮಕ ಸಾಧನಗಳೊಂದಿಗೆ ತಮ್ಮನ್ನು ತಾವು ಸಜ್ಜುಗೊಳಿಸಿಕೊಂಡರು.

ಅದೇ ಸಮಯದಲ್ಲಿ, ಸಂಯುಕ್ತ ಕಿಸಾನ್ ಮೋರ್ಚಾ ಟೋಲ್ ಪ್ಲಾಜಾಗಳಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ರೈತರು ತಮ್ಮ ಟ್ರ್ಯಾಕ್ಟರ್-ಟ್ರಾಲಿಗಳಲ್ಲಿ ದೆಹಲಿಗೆ ಪ್ರಯಾಣಿಸುವುದನ್ನು ತಡೆಯುವ ಮೂಲಕ ಪೊಲೀಸರು ಗಡಿಯನ್ನು ಬ್ಯಾರಿಕೇಡ್‌ಗಳಿಂದ ಮುಚ್ಚಿದ್ದಾರೆ.

ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಟ್ರಾಫಿಕ್ ಮೇಲೆ ಪರಿಣಾಮ ಬೀರುವ ಪ್ರತಿಭಟನೆಗಳೊಂದಿಗೆ, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಕಳೆದ ರಾತ್ರಿ ವಿದ್ಯಾರ್ಥಿಗಳಿಗೆ ತಮ್ಮ ಪ್ರಯಾಣವನ್ನು ಮೊದಲೇ ಯೋಜಿಸುವಂತೆ ಒತ್ತಾಯಿಸಿ ಸಲಹೆಯನ್ನು ನೀಡಿತು; ಮಂಡಳಿಯು ಜನರಿಗೆ ಮೆಟ್ರೋ ಬಳಸಲು ಶಿಫಾರಸು ಮಾಡಿದೆ.

ಇದನ್ನೂ ಓದಿ; ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್; ಕರ್ನಾಟಕದಿಂದ ಮಾಕೇನ್‌ಗೆ ಟಿಕೆಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್ ವಿರುದ್ಧ ಒಂದಾದ ದಲಿತ, ರೈತ, ಕಾರ್ಮಿಕ, ಮಹಿಳಾ ಸಂಘಟನೆಗಳು: ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ರಾಷ್ಟ್ರಧ್ವಜದೊಂದಿಗೆ ಜಾಥಾ

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯ; ಬೆಂಗಳೂರಿನಲ್ಲಿ ದಲಿತ, ರೈತ, ಕಾರ್ಮಿಕ, ವಿದ್ಯಾರ್ಥಿ, ಮಹಿಳಾ ಮತ್ತು ಅಲ್ಪಸಂಖ್ಯಾತ ಸಂಘಟನೆಗಳ ಒಗ್ಗಟ್ಟಿನ ಹೋರಾಟ ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ರದ್ದುಗೊಳಿಸಬೇಕು, ಮುಖ್ಯ ಚುನಾವಣಾ...

ಎಸ್‌ಐಆರ್ ವಿರುದ್ಧ ದೆಹಲಿಯಲ್ಲಿ ಭುಗಿಲೆದ್ದ ಪ್ರತಿಭಟನೆ: ಚುನಾವಣಾ ಆಯೋಗದತ್ತ ಮೆರವಣಿಗೆ, ಹಲವರನ್ನು ವಶಕ್ಕೆ ಪಡೆದ ಪೊಲೀಸರು 

ನವದೆಹಲಿ: ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಅಳಿಸಲಾಗುತ್ತಿದೆ ಎಂದು ಆರೋಪಿಸಿ, ದೆಹಲಿಯಲ್ಲಿ ಶುಕ್ರವಾರ ನಡೆದ ‘ಪೀಪಲ್ ಅಗೇನ್ಸ್ಟ್ ಎಸ್‌ಐಆರ್’ ಪ್ರತಿಭಟನಾ...

“ಭಿನ್ನಾಭಿಪ್ರಾಯ ಅಪರಾಧವಲ್ಲ”: ಬಾಬರಿ ಮಸೀದಿ ತೀರ್ಪಿನ ವಿರುದ್ಧ ಪೋಸ್ಟರ್ ಹಾಕಿದ್ದ 13 ಜನರ ಮೇಲಿನ ದೇಶದ್ರೋಹ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ಮಂಗಳೂರು: ಸುಪ್ರೀಂ ಕೋರ್ಟ್‌ನ ಬಾಬರಿ ಮಸೀದಿ ತೀರ್ಪಿನ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಪೋಸ್ಟರ್‌ಗಳನ್ನು ಹಾಕಿದ್ದ ಆರೋಪದ ಮೇಲೆ 13 ಜನರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಸರ್ಕಾರದ ಅಥವಾ ನ್ಯಾಯಾಲಯದ...

ಯುಪಿ ಎಂಎಲ್‌ಸಿ ಚುನಾವಣೆ: ‘ಕಳ್ಳಮತದಾನ’ ಹಾಗೂ ‘ಬೂತ್ ಕ್ಯಾಪ್ಚರಿಂಗ್’ ರಂಪಾಟ; ಬಿಜೆಪಿ ನಾಯಕರು ಹಾಗೂ ಅಧಿಕಾರಿಗಳ ವಿರುದ್ಧ ಎಸ್‌ಪಿ ಗಂಭೀರ ಆರೋಪ!

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಎಂಎಲ್‌ಸಿ (ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ) ಚುನಾವಣೆಯ ಮತದಾನದ ವೇಳೆ ಆಡಳಿತಾರೂಢ ಬಿಜೆಪಿ ನಾಯಕರು ಮತ್ತು ಸರ್ಕಾರಿ ಅಧಿಕಾರಿಗಳು ಸಾಲು ಸಾಲು ಚುನಾವಣಾ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂಬ...

ತಮಿಳುನಾಡು| ದಲಿತ ವಿದ್ಯಾರ್ಥಿ ಸಾವು; ಶಾಲೆಯಲ್ಲಿ ಜಾತಿ ತಾರತಮ್ಯ ಎಂದು ಆರೋಪಿಸಿದ ಪೋಷಕರು

ತಮಿಳುನಾಡಿನ ಕೊಯಮತ್ತೂರಿನಲ್ಲಿ 11ನೇ ತರಗತಿಯ ದಲಿತ ವಿದ್ಯಾರ್ಥಿಯೊಬ್ಬ ಶಾಲೆಯ ಪೂಜಾ ರಜೆ ಮುಗಿಸಿ ಮರಳಿ ಶಾಲೆಗೆ ತೆರಳಿದ ದಿನವೇ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಶಾಲೆಯಲ್ಲಿ ತನ್ನ ಮಗ ಜಾತಿ ಆಧಾರಿತ ತಾರತಮ್ಯವನ್ನು ಎದುರಿಸುತ್ತಿದ್ದ...

ಅರುಣಾಚಲ ಪ್ರದೇಶದಲ್ಲಿ ಚೀನಾ ಜೊತೆ ಮುಂದುವರಿದ ಮುಖಾಮುಖಿ: ಮೋದಿ ಸರ್ಕಾರದ ‘ಕಿವುಡಗೊಳಿಸುವ ಮೌನ’ವನ್ನು ಟೀಕಿಸಿದ ಕಾಂಗ್ರೆಸ್

ನವದೆಹಲಿ: ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾದ ಸೈನಿಕರೊಂದಿಗೆ ಹಲವು ಸ್ಥಳಗಳಲ್ಲಿ ಮುಖಾಮುಖಿ ಮುಂದುವರಿದಿದೆ ಎಂಬ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮಹಾನಿರ್ದೇಶಕ ಶತ್ರುಜೀತ್ ಕಪೂರ್ ಅವರ ಹೇಳಿಕೆಯ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ...

ಅರುಣಾಚಲದಲ್ಲಿ ಚೀನಾ ಒಳನುಗ್ಗುವಿಕೆ ದೃಢ: ಬ್ರಿಕ್ಸ್ ಸಮಯದಲ್ಲೂ ಮುಂದುವರಿದಿತ್ತು ಗಡಿ ಬಿಕ್ಕಟ್ಟು; ಐಟಿಬಿಪಿ ಡಿಜಿ ಹೇಳಿಕೆಯಿಂದ ಕೇಂದ್ರ ಸರ್ಕಾರದ ಮೌನ ಬಟಾಬಯಲು!

ಭಾರತ ಮತ್ತು ಚೀನಾ ಗಡಿಯ ನೈಜ ಪರಿಸ್ಥಿತಿಯ ಕುರಿತು ಕೇಂದ್ರ ಸರ್ಕಾರವು ಬಿಂಬಿಸುತ್ತಾ ಬಂದಿರುವ ಸಮಾಧಾನಕರ ಚಿತ್ರಣದ ರಾಜತಾಂತ್ರಿಕ ಧೋರಣೆಯ ವಿರುದ್ಧ ಗಂಭೀರ ಪ್ರಶ್ನೆಗಳು ಎದ್ದಿವೆ. ಅರುಣಾಚಲ ಪ್ರದೇಶದ ಗಡಿ ಭಾಗಗಳಲ್ಲಿ ಚೀನಾ...

ಚುನಾವಣಾ ಆಯೋಗದಲ್ಲಿ ಆಡಳಿತಾತ್ಮಕ ಭಿನ್ನಮತ: ಆರ್‌ಟಿಐ ದಾಖಲೆಗಳಿಂದ ಬಯಲಾಯ್ತು ಆಂತರಿಕ ಸಂಘರ್ಷ!

ಭಾರತೀಯ ಚುನಾವಣಾ ಆಯೋಗದ ಉನ್ನತ ಆಡಳಿತಾತ್ಮಕ ಮಟ್ಟದಲ್ಲಿ ಮೂಡಿದ್ದ ಆಂತರಿಕ ಭಿನ್ನಾಭಿಪ್ರಾಯಗಳು ಹಾಗೂ ಕಚೇರಿಯ ಅಧಿಕಾರ ಹಂಚಿಕೆ ಕುರಿತಾದ ಸಂಘರ್ಷಗಳು ಈಗ ಆರ್‌ಟಿಐ ದಾಖಲೆಗಳ ಮೂಲಕ ಅಧಿಕೃತವಾಗಿ ಬಹಿರಂಗಗೊಂಡಿವೆ. ಆಯೋಗದ ಹಿರಿಯ ಅಧಿಕಾರಿಯೊಬ್ಬರು...

‘ಪ್ರತಿ ಗಲ್ಲಿಯೂ ಜಂತರ್ ಮಂತರ್..’; ಎಸ್‌ಐಆರ್‌ ವಿರುದ್ಧ ಅ.23ರಂದು ದೇಶಾದ್ಯಂತ ಪ್ರತಿಭಟನೆ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್‌ ಕುಮಾರ್‌ ಅವರನ್ನು ಸಂಸತ್ತಿನ ಮೂಲಕ ಪದಚ್ಯುತಗೊಳಿಸಬೇಕು ಹಾಗೂ "ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಬೇಕು" ಎಂದು ಆಗ್ರಹಿಸಿ "ಪೀಪಲ್‌...

SIR ಅಂತಿಮ ಪಟ್ಟಿಯಲ್ಲಿದ್ದ 13 ಸಾವಿರಕ್ಕೂ ಹೆಚ್ಚು ಮತದಾರರ ಹೆಸರುಗಳಲ್ಲಿ ಬದಲಾವಣೆ : ಯುಪಿಯಲ್ಲಿ ಮತಗಳ್ಳತನದ ಹೊಸ ಸಂಚು ಬೆಳಕಿಗೆ; ಇಬ್ಬರು ಚುನಾವಣಾ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ

ಉತ್ತರ ಪ್ರದೇಶದ ಪಿಲಿಭಿತ್ ವಿಧಾನಸಭಾ ಕ್ಷೇತ್ರದ ಇಬ್ಬರು ಚುನಾವಣಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬುಧವಾರ (ಅಕ್ಟೋಬರ್ 21) ರಾಜ್ಯ ಮುಖ್ಯ ಚುನಾವಣಾಧಿಕಾರಿ (ಸಿಇಒ) ಸೂಚಿಸಿದ್ದಾರೆ. ಆಂತರಿಕ ತನಿಖೆಯಲ್ಲಿ ಮತದಾರರ ಗುರುತಿನ...