Homeಕರ್ನಾಟಕಸ್ಪೀಕರ್‌ ಖಾದರ್‌ ವಿರುದ್ಧ ಅವಹೇಳನಕಾರಿ ಪೋಸ್ಟ್‌; ಪ್ರಕರಣ ದಾಖಲು

ಸ್ಪೀಕರ್‌ ಖಾದರ್‌ ವಿರುದ್ಧ ಅವಹೇಳನಕಾರಿ ಪೋಸ್ಟ್‌; ಪ್ರಕರಣ ದಾಖಲು

- Advertisement -
- Advertisement -

ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಕೋಮುದ್ವೇಷಪೂರಿತ ಅವಹೇಳನಕಾರಿ ಪೋಸ್ಟ್ ಹಾಕಿದ ಶ್ರೀರಾಮಸೇನೆ ಮುಖಂಡನ ವಿರುದ್ಧ ಚಿಕ್ಕಮಗಳೂರು ನಗರ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀರಾಮಸೇನೆ ಮುಖಂಡ ಪ್ರೀತೇಶ್ ಅವಹೇಳನಕಾರಿಯಾಗಿ ಪೋಸ್ಟ್‌ ಮಾಡಿದ್ದರು. ನಂತರ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

“ಸ್ಪೀಕರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೋಮುದ್ವೇಷ ಹಾಗೂ ಒಂದು ಸಮುದಾಯದವರ ಭಾವನೆಗಳಿಗೆ ಧಕ್ಕೆಯಾಗುವಂತಹ ಪೋಸ್ಟ್ ಹಾಕಿದ್ದಾನೆ. ಆದ್ದರಿಂದ ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು ಚಿಕ್ಕಮಗಳೂರು ಕಾಂಗ್ರೆಸ್ ಐಟಿ ಸೆಲ್ ಜಿಲ್ಲಾ ಕಾರ್ಯದರ್ಶಿ ಎಂ.ಎಲ್.ಎ. ಮಂಜು ಅವರು ನಗರದಲ್ಲಿರುವ ಸೈಬರ್ ಕ್ರೈಮ್ ಠಾಣೆಗೆ ಶುಕ್ರವಾರ ರಾತ್ರಿ ದೂರು ನೀಡಿದ್ದಾರೆ.

May be an image of text that says "1of1 ಗಳೂರು ಜಿಲ್ಲಾ ಕಾಂಗ್ರೇಸ್ ಸಮಿತಿ ಸಾಮಾಜಕ ಜಾಲತಾಣ ಘಟಕ ಗೆ. ಪೋಲೀಸ್ ನಿರೀಕ್ಷಕರು, ಸೈಬರ್ ಕ್ರೈಮ್ ವಿಭಾಗ, ಚಿಕ್ಕಮಗಳೂರು. ಇಂದಾ. MLA ಮಂಜು, ಜಿಲ್ಲಾ ಕಾರ್ಯದರ್ಶಿ, ಸಾಮಾಜಿಕ ಜಾಲತಾಣ, ಚಿಕ್ಕಮಗಳೂರು ಜಿಲ್ಲೆ. ಮಾನ್ಯರೇ. ವಿಷಯ:- ಅವಹೇಳನಕಾರಿ ಹೇಳಿಕೆ ನೀಡಿರುವ ಕುರಿತು ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಪ್ರೀತೇಶ್. ಚಿಕ್ಕಮಗಳೂರು ಎಂಬುವವರು ಅವರ ಫೇಸ್ ಬಂಕ್ ಖಾತೆಯಲ್ಲಿ ಸಂವಿಧಾನಿಕ ಹುದ್ದೆಯಲ್ಲಿರುವ ಕರ್ನಾಟಕ ಸರ್ಕಾರದ ವಿಧಾನಸಭಾ ಸಭಾಧ್ಯಕ್ಷರ ಕುರಿತು ಅವಹೇಳನ ಹೇಳಿಕೆಯ ಪೋಸ್ಟ್ ಮಾಡಿದ್ದು ಮತ್ತು ಇದು ಒಂದು ಜನಾಂಗಕ್ಕೆ ನೋವನ್ನು ಉಂಟುಮಾಡುವ ಮತ್ತು ಕೋಮು ದ್ೇಷ ಪ್ರಚೋದನೆಯ ಹೇಳಿಕೆ ರೀತಿ ಇದ್ದು ದಯಮಾಡಿ ತಾವುಗಳು ಇದನ್ನು ಪರಿಶೀಲಿಸಿ ಕಾನೂನು ಕ್ರಮ ಜರುಗಿಸಬೇಕಾಗಿ ತಮ್ಮಲ್ಲಿ ಕೋರಿಕೊಳ್ಳುತ್ತೇನೆ ಹಾಗೂ ಈ ಕೆಳಗೆ ಫೇಸ್ ಬುಕ್ ಪೇಜ್ ಲಿಂಗ್ಕನ್ನು ಸಹ ನಮೂದಿಸಿರುತ್ತೇನೆ Û 3 919&mibextid=qC1gEa ವಂದನೆಗಳೊಂದಿಗೆ ಇತಿ ತಮ್ಮ MLA ಮಂಜು,"

“ಸಂವಿಧಾನಿಕ ಹುದ್ದೆಯಲ್ಲಿರುವ ಕರ್ನಾಟಕ ಸರ್ಕಾರದ ವಿಧಾನಸಭಾ ಸಭಾಧ್ಯಕ್ಷರ ಕುರಿತು ಪ್ರೀತೇಶ್‌ ಚಿಕ್ಕಮಗಳೂರು ಎಂಬುವವರು ತಮ್ಮ ಫೇಸ್ ಬುಕ್‌ ಖಾತೆಯಲ್ಲಿ ಅವಹೇಳನಕಾರಿ ಹೇಳಿಕೆಯ ಪೋಸ್ಟ್ ಮಾಡಿದ್ದು, ಇದು ಒಂದು ಜನಾಂಗಕ್ಕೆ ನೋವನ್ನು ಉಂಟುಮಾಡುವ ಮತ್ತು ಕೋಮು ದ್ವೇಷ ಪ್ರಚೋದನೆಯ ಹೇಳಿಕೆ ರೀತಿ ಇದೆ. ದಯಮಾಡಿ ತಾವುಗಳು ಇದನ್ನು ಪರಿಶೀಲಿಸಿ ಕಾನೂನು ಕ್ರಮ ಜರುಗಿಸಬೇಕು” ಎಂದು ದೂರಿನಲ್ಲಿ ಮಂಜು ಕೋರಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...