Homeಅಂಕಣಗಳುಮೋದಿ ಸರ್ವಾಧಿಕಾರ ಇಂದಿರಾಗಾಂಧಿ ಸರ್ವಾಧಿಕಾರ ಒಂದೇನಾ?..: ಪ್ರಭಾತ್ ಪಟ್ನಾಯಕ್

ಮೋದಿ ಸರ್ವಾಧಿಕಾರ ಇಂದಿರಾಗಾಂಧಿ ಸರ್ವಾಧಿಕಾರ ಒಂದೇನಾ?..: ಪ್ರಭಾತ್ ಪಟ್ನಾಯಕ್

ಮೋದಿಯವರು ಮತ್ತು ಇಂದಿರಾಗಾಂಧಿಯವರ ನಡುವೆ ಇರುವ ವ್ಯತ್ಯಾಸಗಳು

- Advertisement -
ಮೂಲ : ಪ್ರಬಾತ್ ಪಟ್ನಾಯಕ್
ಅನು : ಬಿ. ಶ್ರೀಪಾದ ಭಟ್
ಓದುಗರಿಗೆ ಸೂಚನೆ:
ಈ ಲೇಖನದ ನಿರೂಪಣೆ ಡಿ.ಎನ್.ಶಂಕರಬಟ್ ಅವರ ಬಾಶಾ ಪ್ರಯೋಗಕ್ಕೆ ಒಳಪಟ್ಟಿದೆ. ಮಹಾಪ್ರಾಣದ ಬಳಕೆ, ಷ-ಶ ಬಳಕೆ ಸೇರಿದಂತೆ ಕೆಲವು ಹೊಸ ಸಂಗತಿಗಳನ್ನು ಅವರು ಬಲವಾಗಿ ಪ್ರತಿಪಾದಿಸುತ್ತಿದ್ದು, ಕೆಲವು ಲೇಕಕರು ಅದನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಈ ಲೇಕನದಲ್ಲಿನ ಬಾಶೆಯ ಬಳಕೆಯಲ್ಲಿ ನಿಮಗೆ ಕಂಡುಬರುವ ವ್ಯತ್ಯಾಸವನ್ನು, ಪ್ರೂಫ್ ವ್ಯತ್ಯಾಸ ಎಂದು ಬಗೆಯಬಾರದೆಂದು ಕೋರುತ್ತೇವೆ.
ಮಾನವ ಹಕ್ಕುಗಳ ಮೇಲೆ ಹಲ್ಲೆ, ಅದಿಕಾರದ ಕೇಂದ್ರೀಕರಣ ಮತ್ತು ಭಯವನ್ನ ಸೃಶ್ಟಿಸುವ ವಾತವರಣ ಈ ಕಾರಣಗಳಿಗೆ ನರೇಂದ್ರ ಮೋದಿಯನ್ನ ಇಂದಿರಾ ಗಾಂದಿಯವರ ತುರ್ತುಪರಿಸ್ಥಿತಿಯ ದಿನಗಳಿಗೆ ಹೋಲಿಸಬಹುದು. ಆದರೆ ಈ ಹೋಲಿಕೆ ಇಲ್ಲಿಗೆ ನಿಲ್ಲುತ್ತದೆ. ವಾಸ್ತವದಲ್ಲಿ ಅನೇಕ ವಿಶಯಗಳಲ್ಲಿ ಇವರಿಬ್ಬರೂ ತುಂಬಾ ಬಿನ್ನವಾಗಿದ್ದಾರೆ. ಮೊದಲನೆಯದಾಗಿ ತುರ್ತುಪರಿಸ್ಥಿತಿಯ ಸಂದರ್ಬದಲ್ಲಿ ದೊಂಬಿ ಹತ್ಯೆಗಳು (lynch mobs) ನಡೆಯುತ್ತಿರಲಿಲ್ಲ, ಮತಾಂದರು ಬೀದಿಯಲ್ಲಿ ನಿಂತು ಜನರನ್ನ ಹೆದರಿಸುತ್ತ ‘ರಾಶ್ಟ್ರೀಯತೆ’ಯ ಪಾಠ ಹೇಳಿಕೊಡುತ್ತಿರಲಿಲ್ಲ. ಈಗ ಸರಕಾರದ ವೈಫಲ್ಯವನ್ನ ಟೀಕೆ ಮಾಡುವವರ ಮೇಲೆ ಹಿಂದುತ್ವದ ಮತೀಯವಾದಿಗಳು ಹಲ್ಲೆ ಮಾಡಿ ತಪ್ಪು ಒಪ್ಪಿಕೊಳ್ಳುವಂತೆ ದೌರ್ಜನ್ಯ ನಡೆಸುತ್ತಿದ್ದಾರೆ. ಮತ್ತು ಈ ಪ್ರಜ್ಞಾವಂತರ ನೆತ್ತಿಯ ಮೇಲೆ ಸದಾ ಬಂದನದ ಬೀತಿಯ ಕತ್ತಿ ತೂಗುತ್ತಲೆ ಇರುತ್ತದೆ. ಫೇಸ್‍ಬುಕ್‍ನಲ್ಲಿ   ಸರಕಾರವನ್ನ ಟೀಕಿಸಿದ ಪ್ರಾದ್ಯಾಪಕರನ್ನ ಮಂಡಿಯೂರಿ ಕ್ಷಮಾಪಣೆ ಕೇಳುವಂತೆ ಮಾಡಿದ ಇತ್ತೀಚಿನ ಘಟನೆಯನ್ನ ಮರೆಯಲು ಸಾದ್ಯವಿಲ್ಲ.
ಹೊಸ ರಾಶ್ಟ್ರೀಯತೆ
ಎರಡನೆಯದಾಗಿ ಈಗಿನ ದಬ್ಬಾಳಿಕೆಯು ಹಿಂದುತ್ವವೆಂದರೆ ಅದು ‘ರಾಶ್ಟ್ರೀಯತೆ’ಯ ಸಿದ್ದಾಂತವೆಂದು ಹುಯಿಲಿಡುತ್ತಿದೆ. ಆದರೆ ಯಾವುದೆ ಸಾಮ್ಯತೆ ಇಲ್ಲದ ಸ್ವಾತಂತ್ರ್ಯ ಸಂದರ್ಬದ ಕಲೋನಿಯಲ್ ವಿರೋದಿ ರಾಶ್ಟ್ರೀಯತೆಯ ಹೆಸರನ್ನ ಬಳಸಿಕೊಂಡು ಲಾಬ ಪಡೆದುಕೊಳ್ಳುತ್ತಿದೆ. ತುರ್ತುಪರಿಸ್ಥಿತಿಯ ಕಾಲದ ದಬ್ಬಾಳಿಕೆಯಲ್ಲಿ ಇಂದಿರಾಗಾಂದಿಯವರ ಟೀಕಾಕಾರರನ್ನ ಗೌರವಾನ್ವಿತರು ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗಿನ ದಬ್ಬಾಳಿಕೆಯು ಟೀಕಾಕಾರರನ್ನ ತುಚ್ಚವಾಗಿ ಪರಿಗಣಿಸುತ್ತಿದೆ  ಮತ್ತು ಅವರನ್ನ ‘ಜನವಿರೋದಿ’ ಎಂದು ಕರೆಯಲಾಗುತ್ತಿದೆ. ವಿರೋದಪಕ್ಷಗಳನ್ನ ಬ್ರಶ್ಟರು ಎಂದು ದಾಳಿ ಮಾಡಲಾಗುತ್ತಿದೆ. ಜನರ ಮುಂದೆ ಅವರ ನೈತಿಕತೆಯನ್ನ ನಾಶ ಮಾಡುವ ಉದ್ದೇಶದಿಂದ ಈ ದಬ್ಬಾಳಿಕೆ ಮಾಡಲಾಗುತ್ತಿದೆ.
ಮೂರನೆಯ ವ್ಯತ್ಯಾಸವೆಂದರೆ ಸರಕಾರವು ಮಾದ್ಯಮವನ್ನ ಕಬ್ಜಾ ಮಾಡಿಕೊಂಡಿರುವುದು. ತುರ್ತುಪರಿಸ್ಥಿತಿಯ ಸಂದರ್ಬದಲ್ಲಿ ಮುದ್ರಣ ಮಾದ್ಯಮವನ್ನ ಸೆನ್ಸಾರ್‍ಶಿಪ್ ಮಾಡಲಾಗಿತ್ತು. ಇದನ್ನ ವಿರೋದಿಸಿ ಖಾಲಿ ಪುಟಗಳಲ್ಲಿ ಪತ್ರಿಕೆಯನ್ನ ಮುದ್ರಿಸಲಾಗುತ್ತಿತ್ತು. ಈಗ (ಕೆಲವನ್ನ ಹೊರತುಪಡಿಸಿ) ಬಹುಪಾಲು ಮಾದ್ಯಮಗಳು ಹಿಂದುತ್ವದ ಅಂಗಣದಲ್ಲಿವೆ. ಈ ಮಾದ್ಯಮಗಳನ್ನ ಬಳಿಸಿಕೊಂಡು ವಿರೋದ ಪಕ್ಷಗಳನ್ನ ಬಗ್ಗುಬಡಿಯಲಾಗುತ್ತಿದೆ
ಮಾದ್ಯಮಗಳ ಬದಲಾದ ಪಾತ್ರವು ತುರ್ತುಪರಿಸ್ಥಿತಿ ಮತ್ತು ಈಗಿನ ಪರಿಸ್ಥಿತಿಯ ನಡುವಿನ ನಾಲ್ಕನೆ ಮುಖ್ಯ ವ್ಯತ್ಯಾಸ. ಬಂಡವಾಳಶಾಹಿಗಳ ಹಿತಾಸಕ್ತಿಯೊಂದಿಗೆ ಸಂಪೂರ್ಣವಾಗಿ  ಅಡವಿಟ್ಟಿರುವ ಮೋದಿ ಸರಕಾರಕ್ಕೆ ಹೋಲಿಸಿದರೆ ಇಂದಿರಾಗಾಂದಿ ಸರಕಾರವು ಬಂಡವಾಳಶಾಹಿಗಳೊಂದಿಗೆ ಅಂತರವನ್ನ ಕಾಯ್ದುಕೊಂಡಿತ್ತು  ಮತ್ತು ಬಂಡವಾಳಶಾಹಿ ವಿರೋದಿ ಮುಂಗಡಪತ್ರ ಮಂಡಿಸಿತ್ತು. ಸ್ವಾತಂತ್ರೋತ್ತರ ನಂತರ ಯಾವುದೆ ಸರಕಾರವು ಮೋದಿ ಸರಕಾರದಶ್ಟು ಬಂಡವಾಳಶಾಹಿಗಳ ಜೊತೆ ಅನೋನ್ಯತೆಯಿಂದ ಇರಲಿಲ್ಲ. ಇದು ಅಡಾನಿಯ ಖಾಸಗಿ ವಿಮಾನಗಳಲ್ಲಿ ಮೋದಿ ಸುತ್ತಾಡುವಶ್ಟರ ಮಟ್ಟಿಗೆ ಗೆಳೆತನ ಹೊಂದಿದೆ. (ತಮ್ಮ ಪತ್ನಿ ಕಮಲಾ ನೆಹರೂ ಅವರು ಸ್ವಿಸ್ ದೇಶದ ಆರೋಗ್ಯದಾಮದಲ್ಲಿ ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾಗ ಹಿಂದುತ್ವವಾದಿಗಳು ಸದಾ ಹೀಗೆಳೆಯುವ ನೆಹರೂ ಅವರಿಗೆ ವಿದೇಶಕ್ಕೆ ತೆರಳಲು ಅವಶ್ಯಕವಾದ ಹಣವಿರಲಿಲ್ಲ. ಜಿ.ಡಿ.ಬಿರ್ಲಾ ಹಣಕಾಸು ನೆರವು ಒದಗಿಸಲು ಮುಂದಾದಾಗ ನೆಹರೂ ಆ ನೆರವನ್ನ ತಿರಸ್ಕರಿಸಿದರು. ಬದಲಿಗೆ ತಾವೆ ಹಣದ ವ್ಯವಸ್ಥೆ  ಮಾಡಿಕೊಂಡರು)
ಅಲ್ಪಸಂಖ್ಯಾತ ವಿರೋದಿ
ಅಲ್ಪಸಂಖ್ಯಾತರ ವಿರುದ್ದ ಅದರಲ್ಲೂ ಮುಸ್ಲಿಂರ ವಿರುದ್ದ ಮೋದಿ ಸರಕಾರದ ದೌರ್ಜನ್ಯ ಐದನೆ ವ್ಯತ್ಯಾಸ. ಇಂದಿರಾಗಾಂದಿಯವರ ದಬ್ಬಾಳಿಕೆಯು ಯಾವುದೆ ಜಾತಿ, ದರ್ಮ, ಜನಾಂಗದ ವಿರುದ್ದವಿರಲಿಲ್ಲ. ಇದು ತುಂಬಾ ಸರಳವಾಗಿ ತನ್ನ ರಾಜಕೀಯ ವಿರೋದಿಗಳ ವಿರುದ್ದ ಅದರಲ್ಲೂ ಮೋಸದ ಚಟುವಟಿಕೆ ಮಾಡುತ್ತಿದ್ದ ಅವರ ಮಗ ಸಂಜಯ ಗಾಂದಿಯವರ ವಿರೋದಿಗಳ ವಿರುದ್ದವಾಗಿತ್ತು. ಜೊತೆಗೆ ಇತಿಹಾಸವನ್ನ ತಿರುಚಿ ಸತ್ಯವನ್ನ ಮರೆಮಾಚಿ ಮಕ್ಕಳ ತಲೆಯೊಳಗೆ ಸುಳ್ಳುಗಳನ್ನ ತುರುಕಿ ತಮ್ಮದೆ ದೇಶದ ಪ್ರಜೆಗಳ ವಿರುದ್ದ ದ್ವೇಶ ಹುಟ್ಟಿಸುವಂತಹ ಕೆಲಸವನ್ನ ಇಂದಿರಾಗಾಂದಿ ಎಂದಿಗೂ ಮಾಡಲಿಲ್ಲ.
ವೈಜ್ಞಾನಿಕ ಮನೋದರ್ಮವನ್ನ ತಿರಸ್ಕರಿಸಿ ಅವೈಜ್ಞಾನಿಕವಾದ, ಕಟ್ಟು ಕತೆಗಳ ಸಿದ್ದಾಂತವನ್ನ ವಿಜ್ಞಾನವೆಂದು ಪ್ರತಿಪಾದಿಸುವ ಪ್ರಮಾಣಿಸಿ ನೋಡುವ ಮನೋದರ್ಮವನ್ನ ಗೇಲಿ ಮಾಡುವ ಈಗಿನ ಮೋದಿ ಸರಕಾರದ ಮನಸ್ಥಿತಿ ಆರನೆ ವ್ಯತ್ಯಾಸವಾಗಿದೆ. ಕಳೆದ ಅನೇಕ ದಶಕಗಳಿಂದ ಆರೆಸ್ಸಸ್ ಈ ತರಹದ ಮತಿಹೀನ ಸಿದ್ದಾಂತಗಳನ್ನ ಪ್ರಚಾರ ಮಾಡುತ್ತಿತ್ತು ಇಂದು ಇದು ಸರಕಾರದ ಇಲಾಖೆಗಳಲ್ಲಿ ವ್ಯಾಪಿಸಿಕೊಂಡಿದೆ. ಬಾರತೀಯ ವಿಜ್ಞಾನ ಕಾಂಗ್ರೆಸ್ ಸಹ ಇದರಿಂದ ಹೊರತಾಗಿಲ್ಲ.
ಮೋದಿ ಸರಕಾರವು ಸಾರ್ವಜನಿಕ ಸಂಸ್ಥೆಗಳನ್ನ ಅದರಲ್ಲೂ ಕೇಂದ್ರೀಯ ವಿಶ್ವವಿದ್ಯಾಲಯಗಳು, ರಾಜ್ಯ ವಿವಿಗಳನ್ನ ನೈತಿಕವಾಗಿ ನಾಶ ಮಾಡಿದ್ದು ಏಳನೆ ವ್ಯತ್ಯಾಸವಾಗಿದೆ. ವಿಮರ್ಶಾತ್ಮಕ ಚಿಂತನೆಗಳನ್ನ ಹತ್ತಿಕ್ಕುವುದರ ಮೂಲಕ ಬೌದ್ದಿಕವಾಗಿ ಅವುಗಳನ್ನ ಸಾಯಿಸಲಾಗುತ್ತಿದೆ. ಒಂದುವೇಳೆ ವಿಮರ್ಶಾತ್ಮಕ ಚಿಂತನೆ, ಬೋದನೆಗಳಿಗೆ ಒತ್ತಾಯಿಸಿದರೆ  ಆ ಸಾರ್ವಜನಿಕ ಸಂಸ್ಥೆಗಳಿಗೆ ಅನುದಾನವನ್ನ ನಿರಾಕರಿಸಲಾಗುತ್ತದೆ ಮತ್ತು ಜೆಎನ್‍ಯುನಲ್ಲಿ ನಡೆದಂತೆ “ರಾಶ್ಟ್ರವಿರೋದಿ”ಗಳಿಗೆ ಆಶ್ರಯ ನೀಡಲಾಗುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತದೆ. ಈ ದೇಶದ ಅತ್ಯುತ್ತಮ ವಿಶ್ವವಿದ್ಯಾಲಯಗಳಾದ ಜೆಎನ್‍ಯು, ಹೈದರಬಾದ್ ವಿವಿ, ಪುಣೆಯ ಫಿಲ್ಮ ಇನ್ಸಟ್ಯೂಟ್, ಟಾಟಾ ಇನ್ಸಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಇತ್ಯಾದಿಗಳು ಇಂದು ಉಸಿರಾಡಲು ಕಶ್ಟಪಡುತ್ತಿರುವುದನ್ನ ಕಂಡಾಗ ಇದು ಈ ಕಾಲದ ದುರಂತವನ್ನ ಹೇಳುತ್ತದೆ. ಈ ಮುಂಚೆ ಈ ರೀತಿ ಎಂದಿಗೂ ನಡೆದಿರಲಿಲ್ಲ ಯಾವುದೆ ಸರಕಾರವು ಸ್ವತಂತ್ರ ಚಿಂತನೆಗೆ ಇಂತಹ ಅಸಡ್ಡೆ, ತಿರಸ್ಕರಾರ ತೋರಿರಲಿಲ್ಲ
ದಬ್ಬಾಳಿಕೆ
ತುರ್ತುಪರಿಸ್ಥಿತಿಯ ದಿನಗಳಿಗೂ ಮೋದಿಯ ವರ್ಶಗಳಿಗೂ ಇರುವ ಮೇಲಿನ ಈ ವ್ಯತ್ಯಾಸಗಳನ್ನ ಸಂಕ್ಷಿಪ್ತವಾಗಿ ಈ ರೀತಿ ಮಂಡಿಸಬಹುದು
ತುರ್ತುಪರಿಸ್ಥಿತಿಯು ಪ್ರಬುತ್ವದಿಂದ ಹೇರಲ್ಪಟ್ಟ ನಿರಂಕುಶ ಅದಿಕಾರವಾಗಿತ್ತು. ಸಂಪೂರ್ಣ ಕೇಂದ್ರೀಕರಣಗೊಂಡಿತ್ತು. ಅದು ಪ್ರಜಾಪ್ರಬುತ್ವದ ಸಮಾಜ ವ್ಯವಸ್ಥೆ ಮತ್ತು ಬಂಡವಾಳಶಾಹಿ ಅಬಿವೃದ್ದಿಯ ನಡುವಿನ ವೈರುಧ್ಯಗಳ ಕಾರಣದಿಂದ ಉಂಟಾಗಿತ್ತು. ಆದರೆ ಆಗ ಬಂಡವಾಳಶಾಹಿ ನೇರವಾಗಿ ಆಡಳಿತದ ಪ್ರತಿನಿದಿ ಆಗಿರಲಿಲ್ಲ. ಮೋದಿಯವರ ಈ ವರ್ಶಗಳು ಸಮಾಜದ ಮೇಲೆ ಪ್ರಬುತ್ವದ ನಿರಂಕುಶ ಅದಿಕಾರದ ದಬ್ಬಾಳಿಕೆಯ ಜೊತೆಗೆ ಅತಿಯಾಗಿ ಕೇಂದ್ರೀಕರಣಗೊಂಡಿತ್ತು. ದ್ವೇಶ ಸಾದಿಸುವ ಭಕ್ತರ ಒಂದು ಪಡೆಯನ್ನ ಪ್ರೋತ್ಸಾಹಿಸುತ್ತಿರುವ ಮೋದಿಯವರ ಆಡಳಿತ ಒಬ್ಬರನ್ನ ಮತ್ತೊಬ್ಬರ ವಿರುದ್ದ ಎತ್ತಿಕಟ್ಟುತ್ತಿದೆ. ಮತ್ತು ಬಂಡವಾಳಶಾಹಿಗಳ ಹಿತಾಸಕ್ತಿಯ ಪರವಾಗಿ ಕೆಲಸ ಮಾಡುತ್ತಿದೆ.
ಮುಂದಿನ ಕಂತು ಓದಲು ಇಲ್ಲಿ ಕ್ಲಿಕ್ಕಿಸಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಾವರ್ಕರ್ ಪ್ರಶಸ್ತಿ ಬಗ್ಗೆ ನನಗೆ ಗೊತ್ತೂ ಇಲ್ಲ, ಸ್ವೀಕರಿಸುವುದೂ ಇಲ್ಲ : ಶಶಿ ತರೂರ್

ಹಿಂದುತ್ವವಾದಿ ವಿ.ಡಿ ಸಾವರ್ಕರ್ ಹೆಸರಿನಲ್ಲಿ ಪ್ರಶಸ್ತಿ ಘೋಷಣೆಯಾದ ಬಗ್ಗೆ ನನಗೆ ಗೊತ್ತೂ ಇಲ್ಲ, ಅಂತಹ ಪ್ರಶಸ್ತಿ ಸ್ವೀಕರಿಸುವುದೂ ಇಲ್ಲ ಎಂದು ಕಾಂಗ್ರೆಸ್ ನಾಯಕ ಹಾಗೂ ತಿರುವನಂತಪುರಂ ಸಂಸದ ಶಶಿ ತರೂರ್ ಬುಧವಾರ (ಡಿಸೆಂಬರ್...

ಮಧ್ಯಪ್ರದೇಶ| ಯುವಕನನ್ನು ಅಪಹರಿಸಿ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿಸಿದ ಪೊಲೀಸರು

18 ವರ್ಷದ ಯುವಕನನ್ನು ಬಸ್ಸಿನಿಂದ ಅಪಹರಿಸಿ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಸುಳ್ಳು ಆರೋಪ ಹೊರಿಸಿದ ಆರೋಪದ ಮೇಲೆ ಮಧ್ಯಪ್ರದೇಶದ ಆರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ತನಿಖೆಯ ಸಮಗ್ರತೆ ಮತ್ತು ಕಾನೂನುಬದ್ಧತೆಯನ್ನು ಪ್ರಶ್ನಿಸಿದ ಇಂದೋರ್...

ಮುಟ್ಟಿನ ರಜೆ ನೀತಿ ಬಲವಾಗಿ ಸಮರ್ಥಿಸಿಕೊಂಡ ಸರ್ಕಾರ : ಅಧಿಸೂಚನೆ ತಡೆ ತೆರವುಗೊಳಿಸಿದ ಹೈಕೋರ್ಟ್

ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ನೀಡುವ ಸಂಬಂಧ ಹೊರಡಿಸಿದ್ದ ತನ್ನ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿದೆ. ಸರ್ಕಾರದ ವಾದ ಆಲಿಸಿದ ಹೈಕೋರ್ಟ್, ಅಧಿಸೂಚನೆಗೆ...

ದೆಹಲಿ ಗಲಭೆ ಪ್ರಕರಣ : ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಮತ್ತಿತರರ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ದೆಹಲಿ ಗಲಭೆ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್, ಮೊಹಮ್ಮದ್ ಸಲೀಮ್ ಖಾನ್ ಮತ್ತು ಶಾದಾಬ್ ಅಹ್ಮದ್ ಸಲ್ಲಿಸಿದ್ದ ಅರ್ಜಿಗಳ...

ಪಕ್ಷಪಾತ ಆರೋಪದಿಂದ ದೀಪಸ್ತಂಭದವರೆಗೆ..ಕಟಕಟೆಯಲ್ಲಿರುವ ನ್ಯಾಯಮೂರ್ತಿ ಸ್ವಾಮಿನಾಥನ್ ಯಾರು?

ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ಪದಚ್ಯುತಿ ಕೋರಿ ಮಂಗಳವಾರ (ಡಿಸೆಂಬರ್ 9) ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ನೋಟಿಸ್ ಸಲ್ಲಿಸಲಾಗಿದೆ. ತಮಿಳುನಾಡಿನ ಡಿಎಂಕೆ ಸೇರಿದಂತೆ ವಿವಿಧ...

ಗುಜರಾತ್‌| 6 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಗಂಭೀರವಾಗಿ ಹಲ್ಲೆ ನಡೆಸಿದವನ ಬಂಧನ

ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ನಂತರ ಆಕೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ. ಈ ಪ್ರಕರಣ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, 35 ವರ್ಷದ...

‘ಮತಗಳ್ಳತನ ಅತ್ಯಂತ ಗಂಭೀರ ರಾಷ್ಟ್ರವಿರೋಧಿ ಕೃತ್ಯ’: ‘ಬಿಜೆಪಿ-ಇಸಿ ಒಪ್ಪಂದ’ವನ್ನು ನೇರವಾಗಿ ಟೀಕಿಸಿದ ರಾಹುಲ್ ಗಾಂಧಿ

ನವದೆಹಲಿ: "ಮತಗಳ್ಳತನ"(ವೋಟ್ ಚೋರಿ) ಒಂದು "ಅತ್ಯಂತ ಗಂಭೀರ ರಾಷ್ಟ್ರವಿರೋಧಿ ಕೃತ್ಯ”,  ಬಿಜೆಪಿ ಮತ್ತು ಚುನಾವಣಾ ಆಯೋಗವು ಭಾರತದ ಪ್ರಜಾಪ್ರಭುತ್ವವನ್ನು ನಾಶಮಾಡಲು ಮತ್ತು "ಜನರ ಧ್ವನಿಯನ್ನು ಕಸಿದುಕೊಳ್ಳಲು" ಪಿತೂರಿ ನಡೆಸುತ್ತಿವೆ ಎಂದು ಕಾಂಗ್ರೆಸ್ ನಾಯಕ...

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧಿಸಿದ ಆಸ್ಟ್ರೇಲಿಯಾ ಸರ್ಕಾರ

16 ವರ್ಷದೊಳಗಿನ ಎಲ್ಲರಿಗೂ ಸಾಮಾಜಿಕ ಮಾಧ್ಯಮ ಪ್ರವೇಶವನ್ನು ದೇಶಾದ್ಯಂತ ನಿಷೇಧಿಸಿದ ಮೊದಲ ದೇಶ ಆಸ್ಟ್ರೇಲಿಯಾ. ಈ ಕಾನೂನು ಬುಧವಾರ ಜಾರಿಗೆ ಬಂದಿದ್ದು, ಟಿಕ್‌ಟಾಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್, ಫೇಸ್‌ಬುಕ್, ಸ್ನ್ಯಾಪ್‌ಚಾಟ್, ರೆಡ್ಡಿಟ್, ಎಕ್ಸ್, ಥ್ರೆಡ್ಸ್,...

ಎಸ್.ನಿಜಲಿಂಗಪ್ಪನವರು ಕರ್ನಾಟಕ ಕಂಡ ಅಪರೂಪದ ರಾಜಕಾರಣಿ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಎಸ್. ನಿಜಲಿಂಗಪ್ಪನವರು ಒಬ್ಬ ದಕ್ಷ, ಪ್ರಾಮಾಣಿಕ ವ್ಯಕ್ತಿ. ಕರ್ನಾಟಕ ಕಂಡ ಅಪರೂಪದ ರಾಜಕಾರಣಿಯಾಗಿದ್ದು ಕೊನೆಯವರೆಗೂ ಪ್ರಾಮಾಣಿಕವಾಗಿ ಇದ್ದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ಡಿಸೆಂಬರ್ 10ರಂದು, ಮಾಜಿ ಮುಖ್ಯಮಂತ್ರಿ ದಿ| ಎಸ್. ನಿಜಲಿಂಗಪ್ಪರವರ...

ನಕಲಿ ತುಪ್ಪ ವಿವಾದದ ಬಳಿಕ ಮತ್ತೊಂದು ಹಗರಣ; ತಿರುಮಲ ದೇವಸ್ಥಾನಕ್ಕೆ ರೇಷ್ಮೆ ಹೆಸರಿನಲ್ಲಿ ‘ಪಾಲಿಯೆಸ್ಟರ್‌’ ದುಪಟ್ಟಾ ಪೂರೈಕೆ

ಲಡ್ಡು ಪ್ರಸಾದಕ್ಕೆ ನಕಲಿ ತುಪ್ಪ ಪೂರೈಕೆ ವಿವಾದದ ಬಳಿಕ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಹೊಸ ಹಗರಣವೊಂದು ಬೆಳಕಿಗೆ ಬಂದಿದೆ. 2015 ರಿಂದ 2025 ರವರೆಗಿನ ಹತ್ತು ವರ್ಷಗಳ ಅವಧಿಯಲ್ಲಿ ರೇಷ್ಮೆ ದುಪಟ್ಟಾಗಳ ಖರೀದಿಯಲ್ಲಿ...