Homeಮುಖಪುಟಹರಿಯಾಣ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ: 40ಕ್ಕೂ ಹೆಚ್ಚು ನಾಯಕರಿಂದ ರಾಜೀನಾಮೆ

ಹರಿಯಾಣ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ: 40ಕ್ಕೂ ಹೆಚ್ಚು ನಾಯಕರಿಂದ ರಾಜೀನಾಮೆ

- Advertisement -
- Advertisement -

ಹರಿಯಾಣದ ಬಿಜೆಪಿಯಲ್ಲಿ ಭಿನ್ನಮತದ ಅಲೆ ಎದ್ದಿದ್ದು, 40ಕ್ಕೂ ಹೆಚ್ಚು ನಾಯಕರ ರಾಜೀನಾಮೆ ನೀಡಿದ್ದಾರೆ. 9ನೇ ಶತಮಾನದ ಆಡಳಿತಗಾರ ಸಾಮ್ರಾಟ್ ಮಿಹಿರ್ ಭೋಜ್ ಅವರ ಪ್ರತಿಮೆಯ ಅನಾವರಣ ಸಮಾರಂಭದಲ್ಲಿ ನಡೆದ ಗಲಾಟೆಯಿಂದ ಈ ಬೆಳವಣಿಗೆ ನಡೆದಿದೆ.

ಒಂದೆಡೆ ನಾಯಕರು ಪಕ್ಷ ತೊರೆಯುತ್ತಿದ್ದರೆ, ಮತ್ತೊಂಡೆದೆ ಹಲವಾರು ಗ್ರಾಮಗಳಲ್ಲಿ ಬಿಜೆಪಿ ನಾಯಕರ ಪ್ರವೇಶವನ್ನು ನಿಷೇಧಿಸಲಾಗುತ್ತಿದೆ. ನಾಲ್ಕು ದಿನಗಳ ಹಿಂದೆ ಬಿಜೆಪಿ ಕೈತಾಲ್ ಶಾಸಕಿ ಲೀಲಾ ರಾಮ್ ಗುರ್ಜರ್ ಮತ್ತು ಗುರ್ಜರ್ ಸಮುದಾಯದ ಇತರ ನಾಯಕರು ಬಿಗಿ ಭದ್ರತೆಯ ನಡುವೆ ಜುಲೈ 20ರಂದು ಪ್ರತಿಮೆಯನ್ನು ಅನಾವರಣಗೊಳಿಸಿದರು. ಅಂದಿನಿಂದ, ರಾಜ್ಯದಲ್ಲಿ ಸುಮಾರು 40 ಪದಾಧಿಕಾರಿಗಳು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಜುಲೈ 20 ರಂದು, ಬಿಜೆಪಿಯು ಸಾಮ್ರಾಟ್ ಮಿಹಿರ್ ಭೋಜ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿತು. ಈ ಸಮಾರಂಭದಿಂದ ರಾಜ್ಯದ ಎರಡು ಸಮುದಾಯಗಳ ಗಲಾಟೆಗೆ ಕಾರಣವಾಯಿತು. ಈ ಸಮಾರಂಭದ ಬಳಿಕ ‘ಗುರ್ಜರ್‌ಗಳು’ ಮತ್ತು ‘ರಜಪೂತರು’ ಜಗಳವಾಡಿದರು. ಅನಾವರಣ ಸಮಾರಂಭದ ಮೊದಲು, ರಜಪೂತ ಸಮುದಾಯದ ಸದಸ್ಯರು ಪ್ರತಿಮೆಯ ಮೇಲೆ ಕೆತ್ತಲಾದ ‘ಗುಜ್ಜರ್’ ಪದವನ್ನು ತೆಗೆದುಹಾಕಲು ಒತ್ತಾಯಿಸಿದರು. ಅದಕ್ಕಾಗಿ ಸಮಾಜದ ಮುಖಂಡರು ಪ್ರತಿಭಟನೆ ಆರಂಭಿಸಿದರು. ಪ್ರತಿಮೆಯ ಮೇಲೆ ‘ಹಿಂದೂ ಸಾಮ್ರಾಟ್’ ಎಂಬ ವಿಶೇಷಣವನ್ನು ಸೇರಿಸಬೇಕೆಂದು ಅವರು ಒತ್ತಾಯಿಸಿದರು. ಕೂಡಲೇ ಪ್ರತಿಭಟನೆಗಾಗಿ ಅವರ ಮೇಲೆ ಲಾಠಿ ಚಾರ್ಜ್ ಮಾಡಲಾಯಿತು.

ಈ ಘಟನೆ ನಡೆದಾಗಿನಿಂದ ರಜಪೂತ ಸಮುದಾಯದ ಮುಖಂಡರು ಬಿಜೆಪಿ ವಿರುದ್ಧ ತಿರುಗಿಬಿದ್ದಿದ್ದಾರೆ. ಇತ್ತೀಚೆಗೆ, ರಜಪೂತ ಸಮುದಾಯದ ಪ್ರಾಬಲ್ಯವಿರುವ ಹರಿಯಾಣದ ಹಲವು ಗ್ರಾಮಗಳು ಬಿಜೆಪಿ ನಾಯಕರ ಪ್ರವೇಶಕ್ಕೆ ನಿಷೇಧ ಹೇರಿವೆ ಎಂದು ದಿ ಹಿಂದೂ ವರದಿ ಮಾಡಿದೆ.

ಈ ಬಗ್ಗೆ ಎಎನ್‌ಐ ಜೊತೆ ಮಾತನಾಡಿರುವ ಬಿಜೆಪಿಯ ಕಿಸಾನ್ ಮೋರ್ಚಾದ ಜಿಲ್ಲಾ ಮುಖ್ಯಸ್ಥ ಸಂಜೀವ್ ರಾಣಾ ಅವರು, ”ನಮ್ಮ ಮಹಾನ್ ನಾಯಕ ಮಿಹಿರ್ ಭೋಜ್ ಅವರ ಪ್ರತಿಮೆಯನ್ನು ‘ಹಿಂದೂ ಸಾಮ್ರಾಟ್’ ಎಂದು ಕೆತ್ತಿಸಬೇಕೆಂದು ನಾವು ಒತ್ತಾಯಿಸುತ್ತಿದ್ದೆವು. ನಾವು ಅದರ ಮೇಲೆ ‘ರಜಪೂತ್’ ಅಥವಾ ‘ಗುಜ್ಜರ್’ ಎಂದು ಬರೆಯಿರಿ ಎಂದೂ ಹೇಳಿಲ್ಲ” ಎಂದು ಹೇಳಿದ್ದಾರೆ.

”ನಮ್ಮ ಸಮುದಾಯದ ಸದಸ್ಯರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು ಆದರೆ ಪೊಲೀಸರು ನಮ್ಮ ಮೇಲೆ ಲಾಠಿ ಬೀಸಿದರು” ಎಂದು ಅವರು ಆರೋಪ ಮಾಡಿದ್ದಾರೆ.

ಪ್ರತಿಮೆಯ ಅನಾವರಣ ಸಮಾರಂಭ ಮತ್ತು ಲಾಠಿ ಚಾರ್ಜ್ ಘಟನೆಯ ನಂತರ, ಸರ್ಕಾರವು ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಕಾರ್ಯಕ್ರಮವನ್ನು ಆಯೋಜಿಸಿತು. ಈ ಕ್ರಮವು ರಜಪೂತ ಸಮುದಾಯದ ಬಿಜೆಪಿ ನಾಯಕರನ್ನು ಮತ್ತಷ್ಟು ಕೆರಳಿಸಿತು.

”ನಾವು ಕ್ರಿಮಿನಲ್‌ಗಳಾಗಿದ್ದೇವೆಯೇ? ಸರ್ಕಾರದ ಆಜ್ಞೆಯ ಮೇರೆಗೆ ಪೊಲೀಸರು ನಮ್ಮ ಮೇಲೆ ಲಾಠಿ ಚಾರ್ಜ್ ಮತ್ತು ಅಶ್ರುವಾಯು ಶೆಲ್‌ಗಳ ದಾಳಿ ಮಾಡಿದರು. ಘಟನೆಯ ಒಂದು ದಿನದ ನಂತರ, ಸರ್ಕಾರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಕಾರ್ಯಕ್ರಮವನ್ನು ಆಯೋಜಿಸಿತು. ಇದು ಬಿಜೆಪಿಗೆ ರಜಪೂತರ ಅಗತ್ಯವಿಲ್ಲ ಎಂದು ತೋರಿಸುತ್ತದೆ” ಎಂದು ಸಂಜೀವ್ ರಾಣಾ ಆಕ್ರೋಶ ಹೊರಹಾಕಿದರು.

ಸರ್ಕಾರದ ನಡೆಯ ವಿರೋಧದ ಕ್ರಮವಾಗಿ ಬಿಜೆಪಿಯ ಎಲ್ಲಾ ರಜಪೂತ ನಾಯಕರು ತಮ್ಮ ರಾಜೀನಾಮೆಯನ್ನು ಹರಿಯಾಣ ರಾಜ್ಯ ಅಧ್ಯಕ್ಷ ಓಂ ಪ್ರಕಾಶ್ ಧನಾರ್ ಅವರಿಗೆ ಸಲ್ಲಿಸಿದ್ದಾರೆ.

ಸಾಮೂಹಿಕ ರಾಜೀನಾಮೆ ನೀಡಿದ ಬಿಜೆಪಿ ಮುಖಂಡರಲ್ಲಿ ಮಹಿಪಾಲ್ ರಾಣಾ, ವಿಭಾಗೀಯ ಅಧ್ಯಕ್ಷ ಕಲಾಯತ್, ಸಂಜೀವ್ ರಾಣಾ, ಕಿಸಾನ್ ಮೋರ್ಚಾದ ಜಿಲ್ಲಾ ಮುಖಂಡ ಜೈದೀಪ್ ರಾಣಾ, ಕಿಸಾನ್ ಮೋರ್ಚಾ ಉಪಾಧ್ಯಕ್ಷ ಕೈತಾಲ್ ಸಂದೀಪ್ ರಾಣಾ, ಜಿಲ್ಲಾ ಸಂಚಾಲಕ ರಾಹುಲ್ ರಾಣಾ, ವಿಭಾಗೀಯ ಪ್ರಧಾನ ಕಾರ್ಯದರ್ಶಿ ಕಲಾಯತ್, ಮತ್ತು ಮಂಡಲ ಅಧ್ಯಕ್ಷ ಅಮಿತ್ ರಾಣಾ ಇತರರು ಇದ್ದರು.

ಈ ಕುರಿತು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಸ್ಪಷ್ಟನೆ ಹಾಗೂ ಪೊಲೀಸ್ ಕ್ರಮದ ಬಗ್ಗೆ ಪ್ರತಿಕ್ರಿಯೆಗೆ ರಜಪೂತ ಮುಖಂಡರು ಆಗ್ರಹಿಸಿದ್ದಾರೆ. ಸಿಎಂ ಖಟ್ಟರ್ ನಮ್ಮೊಂದಿಗೆ ಚರ್ಚಿಸುವವರೆಗೂ ನಾವು ಬಿಜೆಪಿಯಿಂದ ಹೊರಗುಳಿಯುತ್ತೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಕುಸ್ತಿಪಟುಗಳ ಪ್ರತಿಭಟನೆ: ಕೇಂದ್ರ ಸರ್ಕಾರದ ನಡೆಯಿಂದ ಹರಿಯಾಣ ಬಿಜೆಪಿ ಘಟಕದಲ್ಲಿ ಅಸಮಾಧಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...