Homeನಿಜವೋ ಸುಳ್ಳೋನೀವು ನಂಬಿಯೇ ಬಿಟ್ಟಿದ್ದ ಈ ವಾರದ ಫೇಕ್‌ನ್ಯೂಸ್‌ಗಳು ಯಾವುವು ಗೊತ್ತೆ?

ನೀವು ನಂಬಿಯೇ ಬಿಟ್ಟಿದ್ದ ಈ ವಾರದ ಫೇಕ್‌ನ್ಯೂಸ್‌ಗಳು ಯಾವುವು ಗೊತ್ತೆ?

- Advertisement -
- Advertisement -

ಸುಳ್ಳು 1: ವಿಶ್ವದ 35 ದೇಶಗಳಿಗೆ ಮೋದಿ ಜೀವದಾನಿ: ಭಾರತವನ್ನು ಹಾಡಿಹೊಗಳಿದ 35 ವಿಶ್ವನಾಯಕರು

ಈ ರೀತಿಯಾಗಿ ಕನ್ನಡಪ್ರಭ ಪ್ರತ್ರಿಕೆ ವರದಿ ಪ್ರಕಟಿಸಿದೆ. ಇದಕ್ಕೆ ಪತ್ರಿಕೆ ಕೊಟ್ಟಿರುವ ಕಾರಣ ಕೊರೊನಾಗೆ ಸದ್ಯ ಬಳಸುತ್ತಿರುವ ಮಲೆರಿಯಾ ನಿರೋಧಕ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಮೋದಿ 35 ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ ಎಂಬುದಾಗಿದೆ.

ಸತ್ಯ: ಭಾರತ ಏಪ್ರಿಲ್ 6ರವರೆಗೆ ಈ ಮಾತ್ರೆಗಳನ್ನು ರಫ್ತು ಮಾಡುವುದನ್ನು ನಿಷೇಧಿಸಿತ್ತು. ಭಾರತಕ್ಕೆ ಹೆಚ್ಚು ಈ ಮಾತ್ರೆಗಳ ಅಗತ್ಯವಿದೆಯೆಂಬುದು ಅದಕ್ಕೆ ಕಾರಣವಾಗಿತ್ತು. ಆದರೆ ಏಪ್ರಿಲ್ 7 ರಂದು ಅಮೆರಿಕಾದ ಅಧ್ಯಕ್ಷ ಟ್ರಂಪ್ ಆ ಮಾತ್ರೆಗಳನ್ನು ಅಮೆರಿಕಾಕೆ ರಫ್ತು ಮಾಡದಿದ್ದರೆ ಭಾರತದ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಬೇಕಾಗುತ್ತದೆ ಎಂದು ಬೆದರಿಕೆ ಹಾಕಿದರು. ಅಂದು ಮಧ್ಯಾಹ್ನದಿಂದಲೇ ಭಾರತ ರಫ್ತು ನಿಷೇಧವನ್ನು ತೆರವುಗೊಳಿಸಿತು.

ಭಾರತವೊಂದೇ ಪ್ರಪಂಚದ ಶೇ.70 ರಷ್ಟು ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಉತ್ಪಾದಿಸುತ್ತಿದೆ. ಇದಕ್ಕೆ ಕಾರಣ ನಮ್ಮ ದೇಶವಿನ್ನು ಮಲೇರಿಯಾ, ಡೆಂಗ್ಯುನಂತರ ಮಾರಕ ಕಾಯಿಲೆಗಳಿಂದ ಬಳಲುತ್ತಿದೆ ಎಂಬುದೇ ಆಗಿದೆ. ಬೇರೆ ದೇಶಗಳು ಈ ವಿಷಯಲ್ಲಿ ಸುಧಾರಿಸಿರುವುದರಿಂದ ಅವು ಉತ್ಪಾದನೆಯನ್ನು ನಿಲ್ಲಿಸಿವೆ.

ಭಾರತವು ಹೈಡ್ರಾಕ್ಸಿಕ್ಲೋರೋಕ್ವಿನ್ ಉತ್ಪಾದಿಸಲು ಬೇಕಾಗುವ ಮಿಶ್ರಣಾಂಶ ಎಪಿಐ ಅನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ. ಚೀನಾ ನೀಡದಿದ್ದರೆ ನಮ್ಮ ಉತ್ಪಾದನೆ ಕಷ್ಟ.

ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳು ಕಡಿಮೆ ಬೆಲೆಗೆ ಸಿಗಲು ಕಾರಣ ಹಿಂದಿನ ನೆಹರೂ ಕಾಲದ ಭಾರತದ ಪೆಟೇಂಟ್ ನೀತಿ ಕಾರಣ.

ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳು ಹೆಚ್ಚು ಉತ್ಪಾದನೆಯಾಗಲು 2014ರ ನಂತ ಬಂದ ಮೋದಿ ಸರ್ಕಾರ ಕಾರಣವಲ್ಲ. ಅದಕ್ಕೂ ಮುಂಚೆ ಇದ್ದ ಸರ್ಕಾರಗಳ ದೂರದೃಷ್ಟಿಯೇ ಕಾರಣ.

ಮೋದಿ ಅಮೆರಿಕಾದ ಬೆದರಿಕೆಗೆ ಮಣಿದು ಮಾತ್ರೆಗಳನ್ನು ರಫ್ತು ಮಾಡುತ್ತಿರುವುದರಿಂದ ಮುಂದೊಂದು ದಿನ ಕೊರೊನಾ ಉಲ್ಭಣಿಸಿದರೆ ಭಾರತಕ್ಕೆ ಕೊರತೆಯುಂಟಾಗುವ ಅಪಾಯವಿದೆ.

ಸುಳ್ಳು 2: ಅಮೆರಿಕಾದಲ್ಲಿ ಕೊರೊನಾ ಚಿಕಿತ್ಸೆಗೆ 55 ಲಕ್ಷ ರೂ (73 ಸಾವಿರ ಡಾಲರ್) ಖರ್ಚು. ಭಾರತದಲ್ಲಿ ಫ್ರಿ?

ಇದು ಪೋಸ್ಟ್‌ಕಾರ್ಡ್‌ನ ಮತ್ತೊಂದು ಸುಳ್ಳು ಸುದ್ದಿಯಾಗಿದೆ. ಭಾರತವನ್ನು ಹೊಗಳುವ ಭರದಲ್ಲಿ ಬಾಯಿಗೆ ಬಂದಷ್ಟು ವೆಚ್ಚವನ್ನು ಅಮೆರಿಕಾದಲ್ಲಿ ಮಾಡಲಾಗುತ್ತಿದೆ ಎಂದು ಬರೆದುಕೊಂಡಿದೆ. ಇದಕ್ಕೆ ಯಾವುದೇ ಮೂಲವನ್ನು ಅದು ಉಲ್ಲೇಖಿಸಿಲ್ಲ.

ಸತ್ಯ: ಚಿಕಿತ್ಸೆಯಲ್ಲಿ ಕೆಲವು ವ್ಯಕ್ತಿಗಳಿಗೆ ಅವರ ಪರಿಸ್ಥಿತಿ ನೋಡಿ ತೀರ್ಮಾನವಾಗುತ್ತದೆಯೇ ಹೊರತು ಎಲ್ಲರಿಗೂ 55 ಲಕ್ಷ ಅಥವಾ 73 ಸಾವಿರ ಡಾಲರ್ ಮಾಡಲು ಸಾಧ್ಯವಿಲ್ಲ.

ಈ ಕುರಿತು ಅಮೆರಿಕಾ ಪ್ರಮುಖ ಪತ್ರಿಕೆಗಳಾದ ಟೈಮ್, ದಿ ನ್ಯೂಯಾರ್ಕ್ ಟೈಮ್ಸ್ ಮತ್ತು ವಾಲ್‌ಸ್ಟ್ರೀಟ್ ಜರ್ನಲ್ ಲೇಖನಗಳನ್ನು ಪರಿಶೀಲಿಸಿದಾಗ ಆರೋಗ್ಯ ವಿಮೆ ಇದ್ದವರಿಗೆ 9 ಸಾವಿರ ಡಾಲರ್ ಮತ್ತು ಇಲ್ಲದವರಿಗೆ 23 ಸಾವಿರ ಡಾಲರ್‌ವರೆಗೆ ಹಣ ಖರ್ಚಾದ ಉಲ್ಲೇಖವಿದೆ ಅಷ್ಟೇ. 73 ಸಾವಿರ ಎಂಬುದು ಕೇವಲ ವದಂತಿ ಅಷ್ಟೇ.

ಸುಳ್ಳು 3: ಲಾಕ್‌ಡೌನ್ ಉಲ್ಲಂಘಿಸಿದವರಿಗೆ ಕೆರೆ ಸ್ವಚ್ಛಗೊಳಿಸುವ ಶಿಕ್ಷೆ ಕೊಟ್ಟ ಕರ್ನಾಟಕ ಪೊಲೀಸರು

ಈ ಟೈಟಲ್‌ನಲ್ಲಿ Awesome things in India ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಕೆರೆ ಸ್ವಚ್ಛ ಮಾಡುವ ಫೋಟೊವೊಂದು ಪ್ರಕಟಿಸಿದ್ದು ಅದು ವೈರಲ್ ಆಗಿದೆ.

ಸತ್ಯ: ಈ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದಾಗ ಇದು ಸುಳ್ಳೆಂದು ಸಾಬೀತಾಗಿದೆ. ಜುಲೈ 3, 2017ರಂದೇ ಬೆಂಗಳೂರು ಮಿರರ್ ಪತ್ರಿಕೆ ಕೆಲವು ಟೆಕ್ಕಿಗಳು ಕೆರೆ ಸ್ವಚ್ಚಗೊಳಿಸುತ್ತಿರುವುದು ಎಂದು ಈ ಫೋಟೊವನ್ನು ಪ್ರಕಟಿಸಿದೆ.

ಸುಳ್ಳು 4: ಕೊರೊನಾ ತಗುಲಿ ಒಂದೇ ದಿನ ಇಟಲಿಯಲ್ಲಿ 200 ವೈದ್ಯರು, ದಾದಿಯರ ಸಾವು.

Bem vindo ಎಂಬ ಫೇಸ್‌ಬುಕ್ ಬಳಕೆದಾರ ಚಿತ್ರವೊಂದನ್ನು ಪ್ರಕಟಿಸಿ ಏಪ್ರಿಲ್ 13ರ ಒಂದೇ ದಿನ ಇಟಲಿಯಲ್ಲಿ 200 ವೈದ್ಯರು, ದಾದಿಯರ ಸಾವು ಎಂಬ ಸುದ್ದಿ ಹರಡಿದ್ದಾರೆ.

ಸತ್ಯ: ಫೋಟೊವನ್ನು ರಿವರ್ಸ್ ಸರ್ಚ್ ಮಾಡಿದಾಗ ಅದು ಅಮೆರಿಕಾದ ಟಿವಿ ಧಾರವಾಹಿ “Grey’s Anatomy” ಯ ಫೋಟೊ ಎಂದು ತಿಳಿದುಬಂದಿದೆ. ‘Wishin’ and Hopin’ ಎಪಿಸೋಡ್‌ನಲ್ಲಿ ಬರುವ ಚಿತ್ರವನ್ನು ನಿಜವೆಂದು ಹರಡಲಾಗಿದೆ ಅಷ್ಟೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. This looks like kannada version of fake news peddler the print.
    1. It doesn’t say the deal to export HCQ to US was taken before banning it, it also doesn’t say additional negotiation deals that Modi did with US before agreeing to export HCQ. Btw it doesn’t highlight why India has been kept filthy by INC (ruled over 60 years) which increase chances of maleria
    2. So there is a discrepancy of amount being charged, but it doesn’t highlight that it’s still charging patients whereas it’s free in India

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...