Homeಕರ್ನಾಟಕಸಂಕುಚಿತ ಕೋಮು ಹಿತಾಸಕ್ತಿಯ ಅಜೆಂಡಾ ಕೈಬಿಡಿ: ಕರ್ನಾಟಕದ ಮುಖ್ಯಮಂತ್ರಿ ಮತ್ತು ಶಾಸಕರಿಗೆ ಬಹಿರಂಗ ಪತ್ರ  

ಸಂಕುಚಿತ ಕೋಮು ಹಿತಾಸಕ್ತಿಯ ಅಜೆಂಡಾ ಕೈಬಿಡಿ: ಕರ್ನಾಟಕದ ಮುಖ್ಯಮಂತ್ರಿ ಮತ್ತು ಶಾಸಕರಿಗೆ ಬಹಿರಂಗ ಪತ್ರ  

- Advertisement -
- Advertisement -

ಕರ್ನಾಟಕದಲ್ಲಿ ದ್ವೇ‍ಷ ಭಾಷಣಗಳು ಹೆಚ್ಚುತ್ತಿವೆ. ಧಾರ್ಮಿಕ ಅಲ್ಪಸಂಖ್ಯಾತರ ಆರಾಧನಾ ಸ್ಥಳಗಳ ಮೇಲೆ ಸಾರ್ವಜನಿಕ ಬೆದರಿಕೆ ಮತ್ತು ದಾಳಿಗಳು ನಡೆದಿವೆ. ಮಾನಗೇಡಿ ಹತ್ಯೆಗಳು, ಅನೈತಿಕ ಪೋಲೀಸ್‌ ಗಿರಿ,  ಮಹಿಳೆಯರ ಮೇಲೆ ಶಾಸಕರೇ ಅವಮಾನಕಾರಿ ಹೇಳಿಕೆ ನೀಡುವಂಥಹ ವಿದ್ಯಾಮಾನಗಳು ನಡೆದಿವೆ. ಇದಕ್ಕೆ ಕೆಲ ಶಾಸಕರ ಸಂವಿಧಾನ ಬಾಹಿರ ಹೇಳಿಕೆ ಮತ್ತು ರಾಜ್ಯ ಸರ್ಕಾರಿ ಯಂತ್ರಾಂಗದ ನಿಷ್ಕ್ರಿಯತೆಯೇ ಕಾರಣವೆಂದು ಆರೋಪಿಸಿರುವ ಹಿರಿಯ ವಿಜ್ಞಾನಿಗಳು, ಬರಹಗಾರರು ಮತ್ತು ಕಲಾವಿದರು ಸಂಕುಚಿತ ಕೋಮು ಹಿತಾಸಕ್ತಿಯ ಅಜೆಂಡಾ ಕೈಬಿಡಿ ಎಂದು ಒತ್ತಾಯಿಸಿ ಕರ್ನಾಟಕದ ಮುಖ್ಯಮಂತ್ರಿ ಮತ್ತು ಶಾಸಕರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಭೂ-ಭೌತಶಾಸ್ತ್ರಜ್ಞ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮಾಜಿ ಕಾರ್ಯದರ್ಶಿ ಪ್ರೊ. ವಿನೋದ್ ಗೌರ್, ವಕೀಲರು ಮತ್ತು ಲೇಖಕರಾದ ಫ್ಲಾವಿಯಾ ಆಗ್ನೆಸ್, ಇತಿಹಾಸಕಾರರಾದ ಪ್ರೊ. ಜಾನಕಿ ನಾಯರ್, ಇತಿಹಾಸಕಾರ ಡಾ. ರಾಮಚಂದ್ರ ಗುಹಾ, ಪರಸರವಾದಿ ನಾಗೇಶ್ ಹೆಗಡೆ ಮುಂತಾದವರು ಬಿಡುಗಡೆಗೊಳಿಸಿರುವ ಪತ್ರಕ್ಕೆ ಸಹಿ ಹಾಕಿದ್ದಾರೆ.

ಈ ರೀತಿಯ ಘಟನಾವಳಿಗಳು ಪ್ರಗತಿಪರ ರಾಜ್ಯವೆಂಬ ಕರ್ನಾಟಕದ ಸುದೀರ್ಘ ಚರಿತ್ರೆಗೇ ಕಳಂಕವಾಗಿದೆ.  ಕರ್ನಾಟಕವು ಬಹುತ್ವದ ಸಮಾಜವೊಂದರ ಸೌಹಾರ್ದಯುತ ಬಾಳ್ವೆಗೆ ನೀರೆರೆದ ರಾಜ್ಯ. ಎಲ್ಲಾ ವರ್ಗಗಳ ಅಭ್ಯುದಯಕ್ಕೆ  ಮಾದರಿ ಕಲ್ಯಾಣ ಕಾರ್ಯಕ್ರಮಗಳನ್ನೂ ಆರಂಭಿಸಿದ ರಾಜ್ಯ. ಬಸವಣ್ಣ, ಅಕ್ಕಮಹಾದೇವಿ, ಕನಕದಾಸ, ಪುರಂದರದಾಸ, ಶೀಶುನಾಳ ಶರೀಫ ಮುಂತಾದವರೇ ನಮ್ಮ ನಾಯಕರು. ಬೇಂದ್ರೆ, ಕುವೆಂಪು ಸಹಿತ ನಮ್ಮ ಸಾಹಿತಿಗಳು ಬಹು ಸಂಸ್ಕೃತಿಯ ಚಹರೆಗಳನ್ನೇ ಆಧಾರವಾಗಿಟ್ಟುಕೊಂಡ ಕರ್ನಾಟಕತ್ವವನ್ನು ಸಂಭ್ರಮಿಸಿದವರು. ಈ  ಸಹಿಷ್ಣುತೆ ಮತ್ತು ಹಂಚಿಕೊಂಡ ಸಹಬಾಳ್ವೆಯ ಪರಂಪರೆ ಈಗ ಛಿದ್ರವಾಗುತ್ತಿದೆ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಆರ್ಥಿಕ, ಆಡಳಿತಾತ್ಮಕ ಮತ್ತು ರಾಜಕೀಯ ಆಯಾಮಗಳಲ್ಲಿ ಕರ್ನಾಟಕವು ತನ್ನ ಒಕ್ಕೂಟ ಭಾಗಿದಾರಿಯ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಇತ್ತೀಚೆಗಿನ ದಮನಕಾರಿ ಗೋ ಸಂರಕ್ಷಣಾ ಕಾಯಿದೆ ಮತ್ತು ಮತಾಂತರ ನಿಷೇಧ ಕಾಯಿದೆಗಳು ಧಾರ್ಮಿಕ ಅಲ್ಪಸಂಖ್ಯಾತರ ಆರ್ಥಿಕ ಮತ್ತು ಧಾರ್ಮಿಕ ಹಕ್ಕುಗಳನ್ನು  ದಮನಿಸುವ ಕಾಯಿದೆಗಳಾಗಿವೆ. ಈ ಸಮಸ್ಯೆಗಳನ್ನು ಪರಿಹರಿಸದಿದ್ದರೆ, ಹೂಡಿಕೆ, ಮತ್ತು ಉದ್ಯಮಗಳ ತಾಣವಾಗಿ ಕರ್ನಾಟಕಕ್ಕಿರುವ ಖ್ಯಾತಿಯೂ ಕೆಡುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಸಂಕುಚಿತ ಕೋಮು ಹಿತಾಸಕ್ತಿಯ  ಅಜೆಂಡಾಗಳನ್ನು, ಯಾರಿಂದಲೋ ಪಡೆದ ಸಲಹೆಗಳನ್ನು ಅನುಷ್ಠಾನಗೊಳಿಸುವುದು ರಾಜ್ಯದ ಮತ್ತು ರಾಜ್ಯದ ಪ್ರಜೆಗಳ ಹಿತಾಸಕ್ತಿಗೆ ಮಾರಕ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಮಾನವ ಹಕ್ಕುಗಳ ಕಾರ್ಯಕರ್ತ ಬೆಜವಾಡ ವಿಲ್ಸನ್, ಲೇಖಕರಾದ ಪುರುಷೋತ್ತಮ ಬಿಳಿಮಲೆ, ಸಮಾಜಶಾಸ್ತ್ರಜ್ಞೆ ಪ್ರೊ. ಎ.ಆರ್.ವಾಸವಿ, ಡಾ. ಯಲ್ಲಪ್ಪ ರೆಡ್ಡಿ, ವಿವೇಕ್ ಶಾನಭಾಗ್ ಸೇರಿ 30ಕ್ಕೂ ಹೆಚ್ಚು ಜನರು ಪತ್ರಕ್ಕೆ ಸಹಿ ಹಾಕಿದವರಲ್ಲಿ ಸೇರಿದ್ದಾರೆ.


ಇದನ್ನೂ ಓದಿ: ಕೇಂದ್ರದಿಂದ ಐಎಎಸ್‌ಗಳು ದೂರ ಉಳಿಯಲು ಕೇಂದ್ರದ ಕಿರುಕುಳವೇ ಕಾರಣ: ಸಸಿಕಾಂತ್‌ ಸೆಂಥಿಲ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. What bull shit. Where were these people when some Muslim leaders like Owaisi and SDFI were giving provoking speeches. Even now, the Hijab controversy in Udupi and the namaz controversy of Kolar refuse to die down. During my 55 years I have never heard muslim girl students wearing Hijab in schools and colleges. And there was no uniform dress at that time. And namaz is not allowed in any educational institution. Why are these people silent on these issues. It shows that these people would like to be citizens of a muslim State and support it. Shame on you.

LEAVE A REPLY

Please enter your comment!
Please enter your name here

- Advertisment -

Must Read

ಹಿಂಸೆಯೊಳಗಣ ಕಾರುಣ್ಯ: ಪ.ರಂಜಿತ್‌ ನಿರ್ದೇಶನದ ‘ಧಮ್ಮಮ್‌’ ತೆರೆದಿಟ್ಟ ತಾತ್ವಿಕತೆ

ಸೋನಿ ಲೈವ್‌ ಒಟಿಟಿಯಲ್ಲಿ ಬಿಡುಗಡೆಯಾಗಿರುವ ‘ವಿಕ್ಟಿಮ್’ ಎಂಬ ಆಂಥಾಲಜಿಯ ಮೊದಲ ಚಾಪ್ಟರ್‌ ‘ಧಮ್ಮಮ್‌’- ವಿಮರ್ಶಕರ ಮನಗೆದ್ದಿದೆ. ದಲಿತ ಪ್ರತಿರೋಧದ ಕಥನಗಳನ್ನು ತಮಿಳು ನೆಲದಲ್ಲಿ ಕಟ್ಟಿಕೊಡುತ್ತಿರುವ ಪ.ರಂಜಿತ್‌, ‘ಧಮ್ಮಮ್‌’ ನಿರ್ದೇಶಕರೆಂಬುದು ಮತ್ತೊಂದು ಗಮನಾರ್ಹ ಸಂಗತಿ. ಅರ್ಧ...