ಡ್ರಗ್ಸ್ ಕೇಸ್: ನಟಿ ಅನನ್ಯ ಪಾಂಡೆಯ ಲ್ಯಾಪ್‌ಟಾಪ್, ಮೊಬೈಲ್ ಎನ್‌ಸಿಬಿ ವಶಕ್ಕೆ
PC: AFP

ಮುಂಬೈ ಡ್ರಗ್ಸ್ ಕೇಸ್‌ಗೆ ಸಂಬಂಧಿಸಿದಂತೆ 22 ವರ್ಷದ ಬಾಲಿವುಡ್ ನಟಿ ಅನನ್ಯ ಪಾಂಡೆಯವರ ಮುಂಬೈ ಮನೆಯ ಮೇಲೆ ಇಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ದಾಳಿ ನಡೆಸಿದೆ. ದಾಳಿಯಲ್ಲಿ ನಟಿಯ ಲ್ಯಾಪ್ ಟಾಪ್ ಮತ್ತು ಮೊಬೈಲ್ ಫೋನ್ ಎನ್‌ಸಿಬಿ ವಶಪಡಿಸಿಕೊಂಡಿದೆ.

ಈ ತಿಂಗಳ ಆರಂಭದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್‌ ಮಗ ಆರ್ಯನ್ ಖಾನ್ ಮತ್ತು ಇತರರನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ಬಂಧಿಸಿದ್ದಾರೆ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನಟಿಗೆ ಸಮನ್ಸ್ ನೀಡಿದ್ದರಿಂದ ಅನನ್ಯ ಪಾಂಡೆ ತನ್ನ ತಂದೆ ನಟ ಚಂಕಿ ಪಾಂಡೆಯೊಂದಿಗೆ ಎನ್‌ಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು.

ಪ್ರಕರಣದಲ್ಲಿ ಬಂಧಿತ ಆರೋಪಿ ಆರ್ಯನ್ ಖಾನ್‌ ಅವರ ವಾಟ್ಯಾಪ್‌ ಚಾಟ್‌ಗಳಲ್ಲಿ ನಟಿಯೊಂದಿಗೆ ಡ್ರಗ್ಸ್ ಕುರಿತ ಚರ್ಚೆ ನಡೆದಿವೆ ಎಂದು ವರದಿಗಳು ಬಂದಿದ್ದವು. ಆದರೆ, ಆರ್ಯನ್ ಆನ್ ಪ್ರಕರಣದಲ್ಲಿ ನಟಿಯ   ಪಾತ್ರವಿದೆಯೇ ಎಂಬ ಬಗ್ಗೆ NCB ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: ಡ್ರಗ್ಸ್ ಪ್ರಕರಣ: ಜೈಲಿನಲ್ಲಿ ಮಗ ಆರ್ಯನ್ ಖಾನ್‌ರನ್ನು ಭೇಟಿಯಾದ ನಟ ಶಾರುಖ್ ಖಾನ್‌

 

ಎರಡು ಗಂಟೆಗಳ ಕಾಲ ನಟಿ ಅನನ್ಯ ಪಾಂಡೆಯವರನ್ನು ಪ್ರಶ್ನಿಸಿರುವ ಎನ್‌ಸಿಬಿ ಅಧಿಕಾರಿಗಳು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಹೇಳಿಕೆಗಳನ್ನು ದಾಖಲಿಸಬೇಕಿರುವುದರಿಂದ ಶುಕ್ರವಾರ (ಅ.22) ಬೆಳಿಗ್ಗೆ 11 ಗಂಟೆಗೆ ಮತ್ತೆ ಕಚೇರಿಗೆ ಹಾಜರಾಗುವಂತೆ ತಿಳಿಸಿದೆ. ಡ್ರಗ್ಸ್ ಪ್ರಕರಣದಲ್ಲಿ ಆಕೆ ಆರೋಪಿಯಲ್ಲ. ವಿಚಾರಣೆಗಾಗಿ ಮಾತ್ರ ಆಕೆಯನ್ನು ಕರೆಸಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.

ಅನನ್ಯ ಪಾಂಡೆ ಮತ್ತು ಆರ್ಯನ್ ಖಾನ್  ಕಾಮನ್ ಫ್ರೆಂಡ್ಸ್ ಸರ್ಕಲ್‌ ಹೊಂದಿದ್ದಾರೆ. ಅನನ್ಯ ಮತ್ತು ಆರ್ಯನ್ ಸಹೋದರಿ ಸುಹಾನಾ ಉತ್ತಮ ಸ್ನೇಹಿತರಾಗಿದ್ದಾರೆ. ಅನನ್ಯ ಪಾಂಡೆ 2019 ರಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಈಕೆ  ಬಾಲಿವುಡ್ ನಟ ಚುಂಕಿ ಪಾಂಡೆ ಮತ್ತು ಭಾವನಾ ಪಾಂಡೆ ಅವರ ಪುತ್ರಿ.

Aryan Khan- Suhana Khan की करीबी दोस्त हैं Ananya Pandey, ये तस्वीरें हैं सबूत - Bollywood News AajTak

ಅನನ್ಯ ಪಾಂಡೆ 2019ರಲ್ಲಿ ತೆರೆಕಂಡ ‘ಸ್ಟೂಡೆಂಟ್​ ಆಫ್​ ದಿ ಇಯರ್​ 2’ ಚಿತ್ರದ ಮೂಲಕ ಬಾಲಿವುಡ್​ಗೆ ಕಾಲಿಟ್ಟವರಿಗೆ ಮೊದಲ ಸಿನಿಮಾದಲ್ಲೇ ಫಿಲ್ಮ್​ ಫೇರ್​ ಪ್ರಶಸ್ತಿ ದಕ್ಕಿತ್ತು. ನಂತರ ಕಾರ್ತಿಕ್ ಆರ್ಯನ್, ಭೂಮಿ ಪಡ್ನೇಕರ್‌ ಜೊತೆಗೆ ‘ಪತಿ ಪತ್ನಿ ಔರ್​ ವೋ’ ಚಿತ್ರದಲ್ಲಿ ನಟಿಸಿದ್ದರು. ‘ಖಾಲಿ ಪೀಲಿ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಅಕ್ಟೋಬರ್ 2 ರಂದು ಮುಂಬೈನ ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ದಾಳಿ ನಡೆಸಿದ ನಂತರ ಆರ್ಯನ್ ಖಾನ್ ಬಂಧನಕ್ಕೆ ಒಳಗಾಗಿದ್ದರು. ಆರ್ಯನ್ ಖಾನ್ ಮತ್ತು ಇನ್ನಿಬ್ಬರಿಗೆ ಡ್ರಗ್ ಪ್ರಕರಣದಲ್ಲಿ ಜಾಮೀನು ನೀಡಲು ಮುಂಬೈನ ವಿಶೇಷ ನ್ಯಾಯಾಲಯ ಬುಧವಾರ ನಿರಾಕರಿಸಿದೆ. ಜಾಮೀನು ನಿರಾಕರಿಸಿರುವುದರ ವಿರುದ್ಧ ಆರ್ಯನ್ ಖಾನ್‌ ಬಾ೦ಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.


ಇದನ್ನೂ ಓದಿ: ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ: ಪೇಪರ್‌ವರ್ಕ್‌ಗಾಗಿ ನಟ ಶಾರುಖ್ ಖಾನ್ ಮನೆಗೆ ಎನ್‌ಸಿಬಿ

LEAVE A REPLY

Please enter your comment!
Please enter your name here