Homeಅಂತರಾಷ್ಟ್ರೀಯಡಬ್ಲಿನ್ ನಗರದಲ್ಲಿ ಚೂರಿ ಇರಿತದ ಬಳಿಕ ಭುಗಿಲೆದ್ದ ಹಿಂಸಾಚಾರ

ಡಬ್ಲಿನ್ ನಗರದಲ್ಲಿ ಚೂರಿ ಇರಿತದ ಬಳಿಕ ಭುಗಿಲೆದ್ದ ಹಿಂಸಾಚಾರ

- Advertisement -
- Advertisement -

ಐರ್ಲ್ಯಾಂಡ್ ರಾಜಧಾನಿ ಡಬ್ಲಿನ್ ನಗರದಲ್ಲಿ ಮಹಿಳೆ ಮತ್ತು ಚಿಕ್ಕ ಮಕ್ಕಳಿಗೆ ಚೂರಿಯಿಂದ ಇರಿದ ಬಳಿಕ ಭೀಕರ ಹಿಂಸಾಚಾರ ಭುಗಿಲೆದ್ದಿದ್ದು, ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಹಾಗೂ ಗಲಭೆ ನಿಗ್ರಹಕ್ಕೆ ಪ್ರಯತ್ನಿಸುತ್ತಿದ್ದ ಪೊಲೀಸರ ಮೇಲೆ ಕೂಡ ದಾಳಿ ನಡೆಸಲಾಗಿದೆ.

ಡಬ್ಲಿನ್ ನಗರದ ಓ ಕಾನ್ನೆಲ್ ಸ್ಟ್ರೀಟ್‌ನ ಮುಖ್ಯ ರಸ್ತೆಯ ಬಳಿ 5 ವರ್ಷದ ಬಾಲಕಿ, ಓರ್ವ ಮಹಿಳೆ ಹಾಗೂ ಇನ್ನಿಬ್ಬರು ಸಣ್ಣ ಮಕ್ಕಳ ಮೇಲೆ ದುಷ್ಕರ್ಮಿಯೋರ್ವ ಚಾಕುವಿನಿಂದ ದಾಳಿ ನಡೆಸಿದ ಬಳಿಕ ಹಿಂಸಾಚಾರ ಭುಗಿಲೆದ್ದಿದೆ. ಗಲಭೆಗೆ ಬಲಪಂಥೀಯ ಪ್ರತಿಭಟನಾಕಾರರು ಕಾರಣ ಎಂದು ಆರೋಪಿಸಲಾಗಿದೆ. ವಲಸೆ ನೀತಿ ವಿರೋಧಿಸಿ ಸಣ್ಣ ಗುಂಪೊಂದು ಪ್ರತಿಭಟನೆ ನಡೆಸಿದೆ. ಈ ಸಂದರ್ಭದಲ್ಲಿ ಇರಿತವಾಗಿದೆ. ಆಗ ಪೊಲೀಸರು ಮತ್ತು ಪ್ರತಿಭಟನಾ ಗುಂಪಿನ ನಡುವೆ ಘರ್ಷಣೆಯೂ ನಡೆದಿದೆ.

ಸುಮಾರು 200ರಿಂದ 300 ಜನರಿದ್ದ ಗುಂಪು ಡಬ್ಬಲ್ ಡೆಕ್ಕರ್ ಬಸ್, ಪೊಲೀಸ್ ಕಾರು, ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಘಟನೆಯಿಂದ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ತಬ್ಧಗೊಂಡಿತ್ತು. ಗಲಭೆಕೋರರು ಅಂಗಡಿಯ ಕಿಟಕಿಗಳನ್ನು ಒಡೆದು ಹಾಕಿದ್ದು ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದೆ. ಹಾಲಿಡೇ ಇನ್‌ ಹೋಟೆಲ್ ಮೇಲೆ ಕೂಡ ಉದ್ರಿಕ್ತ ಗುಂಪು ದಾಳಿ ನಡೆಸಿದೆ.

ಮುಖ್ಯ ಅಧೀಕ್ಷಕ ಪ್ಯಾಟ್ರಿಕ್ ಮ್ಯಾಕ್‌ಮೆನಾಮಿನ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಇದು ಅನಪೇಕ್ಷವಾಗಿ ನಿರ್ಮಿಸಿದ ಉದ್ರೀಕ್ತ ಪರಿಸ್ಥಿತಿ. ಶಾಂತಿಯನ್ನು ಪುನಃಸ್ಥಾಪಿಸಲಾಗಿದೆ. ಘಟನೆಯಲ್ಲಿ ನಮ್ಮ ಕೆಲ ಸಿಬ್ಬಂದಿಗಳಿಗೆ ಕೂಡ ಗಾಯಗಳಾಗಿದೆ ಆದರೆ ಯಾರಿಗೂ ಗಂಭೀರ ಪರಿಣಾಮದ ಗಾಯಗಳಾಗಿಲ್ಲ ಎಂದು ಹೇಳಿದ್ದಾರೆ.

ಮೂವರು ಚಿಕ್ಕ ಮಕ್ಕಳನ್ನು ಬೀದಿಯಲ್ಲಿ ಇರಿದಿದ್ದರಿಂದ ಉಂಟಾದ ಗಲಭೆಗೆ ಸಂಬಂಧಿಸಿ  34 ಜನರನ್ನು ಬಂಧಿಸಲಾಗಿದೆ ಮತ್ತು ಆ ಪ್ರದೇಶದಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಹಿನ್ನೆಲೆ ಸೆಂಟ್ರಲ್ ಡಬ್ಲಿನ್‌ನ ಬೀದಿಗಳಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಚೂರಿ ಇರಿತಕ್ಕೆ ಸಂಬಂಧಿಸಿದಂತೆ 40 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಯಾವ ರಾಷ್ಟ್ರಕ್ಕೆ ಸೇರಿದವನು ಎಂಬುದು ಪತ್ತೆಯಾಗಿಲ್ಲ. ಸಾರ್ವಜನಿಕರ ಹಲ್ಲೆಯಿಂದ ಆತನಿಗೂ ಗಂಭೀರ ಗಾಯಗಳಾಗಿದೆ. ಈತನ ರಾಷ್ಟ್ರೀಯತೆಯ ಬಗ್ಗೆ ವದಂತಿ ಹರಡಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿತ್ತು. ಇರಿತದ ಕೃತ್ಯ ನಡೆಸಿದ ಆರೋಪಿಗೆ ಭಯೋತ್ಪಾದಕ ಗುಂಪಿನ ನಂಟಿರುವ ಸಾಧ್ಯತೆಯ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ.

ಶಂಕಿತ ಆರೋಪಿಯು ಡಬ್ಲಿನ್‌ನ ಪಾರ್ನೆಲ್ ಸ್ಕ್ವಾರ್ ಈಸ್ಟ್ ಪ್ರದೇಶದಲ್ಲಿ ಹಲವಾರು ಮಂದಿಯನ್ನು ಇರಿದಿದ್ದಾನೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸ್ ಅಧೀಕ್ಷಕ ಲಿಯಾಮ್ ಗೆರಾಗ್ಟಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಘಟನೆಯನ್ನು ಐರ್ಲ್ಯಾಂಡ್ ಪ್ರಧಾನಿ ಲಿಯೊ ವರಾಡ್ಕರ್ ಕೂಡ ಖಂಡಿಸಿದ್ದಾರೆ.

ಇದನ್ನು ಓದಿ: ಹುತಾತ್ಮ ಯೋಧ ಪ್ರಾಂಜಲ್ ಕುಟುಂಬಕ್ಕೆ 50ಲಕ್ಷ ರೂ. ಪರಿಹಾರ ಘೋಷಿಸಿದ ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...