Homeಅಂಕಣಗಳುಈ ಒಂದು ಸಂದೇಶ ಹೋಗಬೇಕಿತ್ತು... ಇನ್ನೂ ಬಲವಾಗಿ

ಈ ಒಂದು ಸಂದೇಶ ಹೋಗಬೇಕಿತ್ತು… ಇನ್ನೂ ಬಲವಾಗಿ

- Advertisement -
- Advertisement -

ಅಂದು ಹಿಂದುಳಿದ ವರ್ಗಗಳ ಹರಿಕಾರನೆಂದು ಕೊಂಡಾಡಲ್ಪಡುತ್ತಿರುವ ದೇವರಾಜ ಅರಸರನ್ನು ಅವಮಾನಕಾರಿಯಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗಿತ್ತು. 1978ರಲ್ಲಿ ದೇವರಾಜ ಅರಸರ ನೇತೃತ್ವದಲ್ಲೇ ಗೆದ್ದಿದ್ದ ಕಾಂಗ್ರೆಸ್ ಪಕ್ಷವು 1983ರ ವಿಧಾನಸಭಾ ಚುನಾವಣೆಯಲ್ಲಿ ಸೋತು, ಕರ್ನಾಟಕದಲ್ಲಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರವು ಅಧಿಕಾರಕ್ಕೆ ಬಂದಿತ್ತು. ಆಗ ಅಧಿಕಾರಕ್ಕೇರಿದ್ದ ಜನತಾಪಕ್ಷವು ವಾಸ್ತವದಲ್ಲಿ ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯಗಳ ಒಂದು ಮಟ್ಟಿಗಿನ ಧ್ರುವೀಕರಣದ ಫಲವಾಗಿ ಕಾಂಗ್ರೆಸ್ಸನ್ನು ಸೋಲಿಸಿತ್ತು. ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದರು. ‘ಜನತಾರಂಗ’ ಮೈತ್ರಿಕೂಟದ ರಂಗ – ಕ್ರಾಂತಿರಂಗವು ಸ್ವತಃ ದೇವರಾಜ ಅರಸರು ಸ್ಥಾಪಿಸಿದ್ದ ಮತ್ತು ಹಿಂದುಳಿದ ವರ್ಗಗಳ ನಾಯಕ ಎಸ್.ಬಂಗಾರಪ್ಪನವರ ನೇತೃತ್ವದಲ್ಲಿ ಅವರ ಜೊತೆಗೂಡಿತ್ತು. ಆದರೆ, ಬಂಗಾರಪ್ಪನವರು ಹೊಸ ಸರ್ಕಾರದಲ್ಲಿ ಮಂತ್ರಿಯೂ ಆಗಲಿಲ್ಲ. ಅವರೂ ಸೇರಿದಂತೆ ಕ್ರಾಂತಿರಂಗದ ಕೆಲವು ನಾಯಕರುಗಳು ಬೇರೆ ಬೇರೆ ಕಾಲಘಟ್ಟದಲ್ಲಿ ಕಾಂಗ್ರೆಸ್ಸನ್ನು ಸೇರಿಕೊಂಡರು. ಒಟ್ಟಾರೆ ನೋಡುವುದಾದರೆ ಜನತಾ ಪರಿವಾರವೆಂಬುದು ಮೇಲ್ಜಾತಿ ನಾಯಕತ್ವದ ಮತ್ತು ಮೇಲ್ಜಾತಿ ಸಮೂಹ ನೆಲೆಯ ಪಕ್ಷವಾಗಿ ಉಳಿದುಕೊಂಡಿತು. ಆ ನಂತರ 1989 ಮತ್ತು 1999ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತಾದರೂ, ಆಗ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದದ್ದು ಕ್ರಮವಾಗಿ ಲಿಂಗಾಯಿತ ಹಾಗೂ ಒಕ್ಕಲಿಗ ನಾಯಕರುಗಳು.
ಈ ರಾಜ್ಯದಲ್ಲಿ ಶೋಷಿತ ಸಮುದಾಯಗಳು ಒಂದಾಗಿ ರಾಜಕೀಯ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂಬ ವಾದಕ್ಕೆ ಪುರಾವೆಗಳನ್ನಾಗಿ ಈ ಮೇಲಿನ ವಿಶ್ಲೇಷಣೆಯನ್ನು ಕೆಲವರು ಮುಂದಿಡುತ್ತಿದ್ದಾರೆ. 2018ರ ಚುನಾವಣೆಯು ಮತ್ತೆ ಅದೇ ಸಂದೇಶವನ್ನು ಕೊಟ್ಟಿದೆ ಎಂಬ ಅನಿಸಿಕೆಯ ಹಿನ್ನೆಲೆಯಲ್ಲಿ ಈಗ ಮತ್ತೆ ಇತಿಹಾಸವನ್ನು ಕೆದಕಬೇಕಾಗಿ ಬಂದಿದೆ. ಮೇಲೆ ಹೇಳಲಾದ ಅಂಶಗಳು ವಾಸ್ತವವೇ. ಇವಿಷ್ಟನ್ನೇ ನೋಡಿದರೆ, ಹೌದಲ್ಲವೇ ಎನಿಸದಿರದು. ಈ ವಾದವನ್ನು ಪುಷ್ಟೀಕರಿಸುವ ಇನ್ನಷ್ಟು ಮಾತುಗಳನ್ನೂ ಜೋಡಿಸಬಹುದು.
ಆದರೆ, ಇವಿಷ್ಟೇ ವಾಸ್ತವವಲ್ಲ. ಅಂದು ಅವಮಾನಕಾರಿಯಾಗಿ ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿದ ಮತ್ತು ಸಾಯುವ ಹೊತ್ತಿಗೆ ಬಹುತೇಕ ಎಲ್ಲಾ ಅನುಯಾಯಿಗಳು ದೂರ ಮಾಡಿದ್ದ ಅರಸರನ್ನು ಇಂದು ಇಡೀ ನಾಡು ಹಿಂದುಳಿದ ವರ್ಗಗಳಿಗೆ ದನಿ ಕೊಟ್ಟ ನಾಯಕನೆಂದು ಬಣ್ಣಿಸುತ್ತಿದ್ದಾರೆ. ಆ ಕಾಲದ – ಅಂದರೆ, ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದ ‘70ರ ದಶಕದ – ಬೆಳವಣಿಗೆಗಳ ಕಾರಣದಿಂದ, ವಿವಿಧ ಶೋಷಿತ ಸಮುದಾಯಗಳು ಎಚ್ಚೆತ್ತುಕೊಂಡಿವೆ. ಹಾಗಾಗಿಯೇ ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಜಾರಿಗೆ ಬಂದ ಮೂರು ಸ್ತರಗಳ ಪಂಚಾಯತ್‍ರಾಜ್ ವ್ಯವಸ್ಥೆಯಲ್ಲಿ ಎಲ್ಲಾ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಬೇಕಾಯಿತು. ದೇಶ ಮಟ್ಟದಲ್ಲಿ ಮಂಡಲ್ ಆಯೋಗವು ವಿವಿಧ ಕ್ಷೇತ್ರಗಳಲ್ಲಿ ಇದನ್ನೇ ಮಾಡಿತು.
ಕಾಂಗ್ರೆಸ್ ಪಕ್ಷದಿಂದ ವೀರೇಂದ್ರ ಪಾಟೀಲರ ನಂತರದಲ್ಲಿ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬೇಕಾಗಿ ಬಂದಾಗ ಅತೀ ಹಿಂದುಳಿದ ಜಾತಿಗಳ ಎಸ್.ಬಂಗಾರಪ್ಪ ಮತ್ತು ವೀರಪ್ಪ ಮೊಯಿಲಿಯವರನ್ನು ಆರಿಸುವುದು ಅನಿವಾರ್ಯತೆಯಾಯ್ತು. 1996ರಲ್ಲಿ ದೇವೇಗೌಡರು ಪ್ರಧಾನಿಗಳಾಗಿ ದೆಹಲಿಗೆ ಹೋದಾಗ, ಲಿಂಗಾಯಿತ ಪಟೇಲರ ಜೊತೆಗೆ ಹಿಂದುಳಿದ ಸಮುದಾಯಗಳ ಸಿದ್ದರಾಮಯ್ಯನವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಾಯಿತು. ಅಂದಿನಿಂದಲೂ ವಿವಿಧ ಹಿಂದುಳಿದ ವರ್ಗಗಳನ್ನು ಕಡೆಗಣಿಸಲಾಗದು ಎಂಬ ಕಟುಸತ್ಯವನ್ನು ಈ ರಾಜ್ಯದ ಸಾಮಾಜಿಕ ಮತ್ತು ರಾಜಕೀಯ ವಾಸ್ತವವು ಎಲ್ಲಾ ರಾಜಕೀಯ ಪಕ್ಷಗಳಿಗೂ ಮನದಟ್ಟು ಮಾಡಿಸಿವೆ. ಬಿಜೆಪಿಯಲ್ಲೂ, ಜಗದೀಶ್ ಶೆಟ್ಟರ್ ಕ್ಯಾಬಿನೆಟ್‍ನಲ್ಲಿ, ಸದಾನಂದ ಗೌಡರನ್ನು ಇಳಿಸಿದ ಕಾರಣಕ್ಕೆ ಒಕ್ಕಲಿಗರನ್ನು ಸಮಾಧಾನಪಡಿಸಲು ಆರ್.ಅಶೋಕ್‍ರನ್ನು ಮಾತ್ರ ಉಪಮುಖ್ಯಮಂತ್ರಿ ಮಾಡಲಿಲ್ಲ; ಕೆ.ಎಸ್.ಈಶ್ವರಪ್ಪನವರನ್ನೂ ಡಿಸಿಎಂ ಮಾಡಬೇಕಾಯಿತು.
ಇವೆಲ್ಲವೂ ರಾಜ್ಯದಲ್ಲಿ ಹಿಂದುಳಿದ ವರ್ಗಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸಿವೆ. ಅದನ್ನೂ ದಾಟಿ ದಲಿತ ಸಮುದಾಯವನ್ನು ‘ಹೇಗೂ ನಮ್ಮ ಹಿಂದೆ ಬರುವವರು’ ಎಂದು ಕಾಂಗ್ರೆಸ್ ಪಕ್ಷವೂ ಭಾವಿಸಲು ಸಾಧ್ಯವಿಲ್ಲ, ಉಳಿದ ಪಕ್ಷಗಳೂ ದಲಿತರನ್ನು ಒಡೆಯಲೋ ಅಥವಾ ಓಲೈಕೆ ಮಾಡಲೋ ಏನಾದರೂ ಮಾಡುತ್ತಲೇ ಬಂದಿವೆ. ಸಿದ್ದರಾಮಯ್ಯನವರು ಮುಂದಿಡಲು ಪ್ರಯತ್ನಿಸಿದ ಅಹಿಂದ ಧ್ರುವೀಕರಣದ ಸಮೀಕರಣಕ್ಕೆ ಈ ಚುನಾವಣೆಯಲ್ಲಿ ಕ್ಷೇತ್ರವಾರು ಫಲಿತಾಂಶದಲ್ಲಿ ಸೋಲುಂಟಾಗಿದ್ದು ವಾಸ್ತವ. ಹೀಗಿದ್ದರೂ ಎಲ್ಲರಿಗಿಂತ ಹೆಚ್ಚು ಮತ ಗಳಿಸಿದ್ದು ಮಾತ್ರವಲ್ಲದೇ, ಹಿಂದಿನೆರಡು ಚುನಾವಣೆಗಳಿಗಿಂತ ಕಾಂಗ್ರೆಸ್ ಮತ ಪ್ರಮಾಣ ಹೆಚ್ಚಾಗಲೂ ಈ ಧ್ರುವೀಕರಣ ನೆರವಾಗಿದೆ ಎಂಬ ವಾಸ್ತವವನ್ನೂ ಮರೆಯಲಾಗದು.
ಹೀಗಾಗಿ ಚುನಾವಣೆಯ ಫಲಿತಾಂಶದ ಹೊತ್ತಿನ ಸಣ್ಣ ಶಾಕ್‍ನಿಂದ ಅಹಿಂದ ಸಮುದಾಯವು ಚೇತರಿಸಿಕೊಂಡು, ತನ್ನ ಅಸ್ತಿತ್ವವನ್ನು ಮುನ್ನೆಲೆಗೆ ತರುವ ಪ್ರಯತ್ನವನ್ನು ಆರಂಭಿಸಿದೆ. ಸತೀಶ್ ಜಾರಕಿಹೊಳಿಯವರಿಗೂ, ಇತರ ಶೋಷಿತ ಸಮುದಾಯಗಳ ಹಿನ್ನೆಲೆಯ ನಾಯಕರಿಗೂ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣವನ್ನೂ ಇಟ್ಟುಕೊಂಡು ಜೂನ್ 19ರಂದು ನಡೆದ ಮಾನವ ಬಂಧುತ್ವ ವೇದಿಕೆಯ ಜನಾಗ್ರಹ ಸಮಾವೇಶವನ್ನು ಈ ಹಿನ್ನೆಲೆಯಲ್ಲಿ ನೋಡಬಹುದು. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಅತ್ಯಂತ ಅಗತ್ಯವಾಗಿ ನಡೆಯಬೇಕಿದ್ದ ಕಾರ್ಯಕ್ರಮ ಅದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಸಮುದಾಯಗಳಿಗೂ ಅವಕಾಶ ಇರಬೇಕು. ಶೋಷಿತ ಸಮುದಾಯಗಳಿಗೆ ಹೆಚ್ಚಿನ ಅವಕಾಶ ಇರಬೇಕು. ಆದರೆ, ಅದು ತಿರುವುಮುರುವಾಗುತ್ತಿದೆ ಎನಿಸಿದಾಗ, ದನಿಯೆತ್ತದೇ ಇದ್ದರೆ, ಅಂತಹ ಸಮುದಾಯಗಳಿನ್ನೂ ದನಿಯನ್ನು ಪಡೆದುಕೊಂಡಿಲ್ಲ ಎಂದಾಗುತ್ತದೆ. ಅದರರ್ಥ ಯಾವ ದೇವರಾಜ ಅರಸರನ್ನು ಅಥವಾ ಸಿದ್ದರಾಮಯ್ಯನವರನ್ನು ಕೊಂಡಾಡಲಾಗುತ್ತಿದೆಯೋ, ಅವರ ಪ್ರಯತ್ನಗಳೇ ವಿಫಲವಾದವು ಎನಿಸಿಬಿಡುತ್ತದೆ. ಕಾರ್ಯಕ್ರಮದ ಆಯೋಜಕರು ಜಾರಕಿಹೊಳಿಯವರ ದೊಡ್ಡ ಫೋಟೋವನ್ನು ಬ್ಯಾನರ್‍ನಲ್ಲಿ ಹಾಕಿ ಸಂದೇಶದ ವೈಶಾಲ್ಯತೆಯನ್ನು ಕುಗ್ಗಿಸಿದರು ಎಂಬುದನ್ನು ಬಿಟ್ಟರೆ, ಅವರುಗಳ ಮಾತುಗಳು ಸಾಮಾಜಿಕ ನ್ಯಾಯದ ಕುರಿತಂತೆಯೇ ಇದ್ದವು.
ಆದರೆ, ಹಿಂದುಳಿದ ವರ್ಗಗಳ ರಾಜಕಾರಣವು ಈಚಿನ ದಿನಗಳಲ್ಲಿ ಎದುರಿಸುತ್ತಿರುವ ಕೊರತೆ ಈ ಪ್ರಯತ್ನದಲ್ಲೂ ಎದ್ದು ಕಂಡಿತು. ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳನ್ನು ಶಕ್ತಿ ಪ್ರದರ್ಶನವನ್ನಾಗಿ ನೋಡಲಾಗುತ್ತದೆ. ಮಾಧ್ಯಮಗಳು ಇದನ್ನೂ ಹಾಗೆ ಬಿಂಬಿಸಲು ಪ್ರಯತ್ನಿಸಿದ್ದವು, ಅದರಲ್ಲೂ ಜಾರಕಿಹೊಳಿಯವರ ಪರವಾಗಿ, ಅವರೇ ಸಂಘಟಿಸುತ್ತಿರುವ ಕಾರ್ಯಕ್ರಮವೆಂಬಂತೆ ಬಿಂಬಿಸಲು ಹೊರಟಿದ್ದವು. ಅದು ಸತ್ಯವಾಗಿರಲಿಲ್ಲ. ಆದರೆ, ಕಾರ್ಯಕ್ರಮ ಕೊಡಬಯಸಿದ ಸಂದೇಶವನ್ನು ಪರಿಣಾಮಕಾರಿಯಾಗಿ ಮುಟ್ಟಿಸಲು ಆಯೋಜಕರು ಹೆಚ್ಚಿನ ಯೋಜನೆ ಮತ್ತು ಸಿದ್ಧತೆ ಮಾಡಿಕೊಳ್ಳುವ ಅಗತ್ಯವಿತ್ತು.
ಈಗಾಗಲೇ ರಾಜಕೀಯ ಎಚ್ಚರವನ್ನು ಪಡೆದುಕೊಂಡಿರುವ ಸಮುದಾಯಗಳು ಗುಟುರು ಹಾಕುವುದಾದರೆ, ಅದನ್ನು ಬಲವಾಗಿಯೇ ಮಾಡಬೇಕು. ಇಲ್ಲವಾದರೆ, ಅದು ‘ಪರ್ಯಾಯ ರಾಜಕಾರಣ’ದ ಅರೆಬೆಂದ ಪ್ರಯತ್ನಗಳನ್ನು ಮಾಡಿದ ಹಲವರ ‘ಸದುದ್ದೇಶದ ಆದರೆ, ಅತ್ಯಂತ ದುರ್ಬಲ’ ನಗೆಪಾಟಲಿನ ಕಾರ್ಯಕ್ರಮಗಳಾಗಿ ಕೊನೆಗೊಳ್ಳುವ ಸಾಧ್ಯತೆ ಇರುತ್ತದೆ.
ಶಕ್ತಿ ಪ್ರದರ್ಶನದ ಉದ್ದೇಶ ಇಲ್ಲದಿದ್ದಾಗ, ಇಡೀ ಶೋಷಿತ ಸಮುದಾಯಗಳ ಇಶ್ಯೂವನ್ನು ಸಮರ್ಥವಾಗಿ ಮುಂದಿಡುವ ಪ್ರಯತ್ನವಾದರೂ ಬೇಕಾಗುತ್ತದೆ. ಉದಾಹರಣೆಗೆ ಎರಡೂ ಪಕ್ಷಗಳು ಸೇರಿ ರೂಪಿಸಲು ಪ್ರಯತ್ನಿಸುತ್ತಿರುವ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ದಲ್ಲಿ ಅಹಿಂದ ಸಮುದಾಯದ ಕಾರ್ಯಸೂಚಿ ಹೇಗೆ ಬರಬೇಕೆಂದು ಮುಂದಿಡುವ ಪ್ರಯತ್ನ ಮಾಡಬಹುದಿತ್ತು. ಸಿದ್ದರಾಮಯ್ಯನವರ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಜನಸಂಖ್ಯೆಗನುಗುಣವಾಗಿ ಬಜೆಟ್ ಮೀಸಲಿರಿಸಿ ತಂದ ಕಾಯ್ದೆ ಹಾಗೂ ನಿಯಮಗಳನ್ನು ನಿಜಕ್ಕೂ ಅನುಷ್ಠಾನಗೊಳಿಸುವ ‘ಕ್ರಿಯಾಯೋಜನೆ’ (ಂಛಿಣioಟಿ ಠಿಟಚಿಟಿ) ತಯಾರಾಗಿಯೇ ಇಲ್ಲ. ಅಂಥದ್ದನ್ನು ವಿಶೇಷ ಪ್ರತಿನಿಧಿಗಳುಳ್ಳ ಸಮಾವೇಶದಲ್ಲಿ ಮಂಡನೆ ಮಾಡುವುದು ಮಾತ್ರವಲ್ಲದೇ, ಅದನ್ನು ಅನುಷ್ಠಾನಕ್ಕೆ ತರದೇ ಇರಲು ಸಾಧ್ಯವೇ ಇಲ್ಲ ಎಂಬ ವಾತಾವರಣ ಸೃಷ್ಟಿ ಮಾಡಲು ಬೇಕಾದ ಆಂದೋಲನ ಹಾಗೂ ಲಾಬಿ ಎರಡೂ ಇಂದಿನ ತುರ್ತಾಗಿದೆ.
ಯಾರೇ ಅಧಿಕಾರಕ್ಕೆ ಬಂದರೂ, ದಮನಿತ ಸಮುದಾಯಗಳನ್ನು ನಿರ್ಲಕ್ಷಿಸಲಾಗದಂತೆ ಆಂದೋಲನ ರೂಪಿಸುವ ಕೌಶಲವನ್ನು ದುರ್ಬಲರು ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಕೆಲವು ನಾಯಕರುಗಳಷ್ಟೇ ಬಲಿಷ್ಠರಾಗುವ ಬದಲು ಇಡೀ ಸಮುದಾಯ ಪ್ರಬಲವಾಗಬೇಕು. ದಲಿತ ಚಳವಳಿಯು ಇದನ್ನು ಮೊದಲ ದಶಕದಲ್ಲಿ ಸಮರ್ಥವಾಗಿ ಮಾಡಿತು. ನಂತರದಲ್ಲಿ ಇಡೀ ಚಳವಳಿಯ ಲಾಭವನ್ನು, ತಾವು ಸಚಿವರಾಗಲು ರಾಜಕಾರಣಿಗಳು ಬಳಸಿಕೊಂಡರು. ಭವಿಷ್ಯದಲ್ಲಿ ಹಾಗಾಗದಂತೆ, ಸಮುದಾಯಗಳ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣವನ್ನು ಸಾಧಿಸುವಂತಹ ಚಳವಳಿಗಳು ಮುನ್ನೆಲೆಗೆ ಬರಬೇಕು. ಇವೇ ರಾಜಕೀಯವಾಗಿ ಸಂಘಟಿತಗೊಳ್ಳಬೇಕಾದ ಅರಿವನ್ನೂ ರೂಪಿಸಬಲ್ಲವು. ಈ ಸಮಾವೇಶವನ್ನು ಒಂದು ಮುನ್ನುಡಿಯೆಂದಷ್ಟೇ ಭಾವಿಸಿ, ದೂರಗಾಮಿ ಮುನ್ನೋಟದೊಂದಿಗೆ ‘ಆಂದೋಲನದ ಕ್ರಿಯಾಯೋಜನೆ’ ರೂಪಿಸಬೇಕಾದದ್ದು ಇಂದಿನ ತುರ್ತು.

– ಸಂಪಾದಕ ಮಂಡಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...